Home»Homepage Blog

ಅಪಾಯದ ಏರುಗತಿ!

ಸಂಪಾದಕೀಯ

 ಅಪಾಯದ ಏರುಗತಿ! <p><sub>  ಸಂಪಾದಕೀಯ </sub></p>

ಇತ್ತೀಚೆಗೆ ಕರ್ನಾಟಕದ ರಾಜಕಾರಣದಲ್ಲಿ ನಡೆದ ಬೆಳವಣಿಗೆಗಳು ಹಲವು ಸ್ವಾರಸ್ಯಕರ ‘ಪದಾರ್ಥ’ ಪ್ರಶ್ನೆಗಳನ್ನು ಮುಂದಿಟ್ಟಿವೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಸಿಡಿದ ಕೆಲವು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ‘ಅತೃಪ್ತರು’ ಎಂದು ಗುರುತಿಸಲಾಗಿದೆ. ಈ ಪದವನ್ನು ಎಲ್ಲಾ ಮಾಧ್ಯಮಗಳು, ರಾಜಕಾರಣಿಗಳು, ಜನಸಾಮಾನಾನ್ಯರು ಏಕಕಾಲಕ್ಕೆ ಸಾರ್ವತ್ರಿಕವಾಗಿ ಬಳಸತೊಡಗಿದ್ದು ವಿಶೇಷವೇ ಸರಿ. ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಶಾಸಕರ ಕರ್ತವ್ಯ; ಇದಕ್ಕೆ ಸಮ್ಮಿಶ್ರ ಸರ್ಕಾರ ಸ್ಪಂದಿಸದಿರುವುದೇ ತಮ್ಮ ಅತೃಪ್ತಿಗೆ ಕಾರಣವೆಂದು ಈ ಶಾಸಕರು ಬಹಿರಂಗವಾಗಿ ಪ್ರತಿಪಾದಿಸುತ್ತಾರೆ. ಅವರ ಅಂತರಂಗದ ಅತೃಪ್ತಿಯ […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. […]

ದಿಕ್ಕು ತಪ್ಪಿದ್ದು ನಾಯಕರು, ಚಳವಳಿಯಲ್ಲ!

ಹನುಮೇಶ್ ಗುಂಡೂರು

ಇತ್ತೀಚೆಗೆ ಎಲ್ಲಾ ದಲಿತ ಸಂಘಟನೆಗಳು ಒಂದೇ ಜಾತಿಯ ಕೈಗೆ ಸಿಕ್ಕಿವೆ. ದಲಿತ ಬ್ರಾಂಡ್ ಹೆಸರಿನಲ್ಲಿ ಒಂದು ಸಮುದಾಯ ಎಲ್ಲಾ ದಲಿತ ಸಂಘಟನೆಗಳ ಅಧ್ಯಕ್ಷಗಿರಿ ಕೈಗೆ ತೆಗೆದುಕೊಂಡಿದ್ದು ದಲಿತರು ಎಂದರೆ ತಾವು ಮಾತ್ರ ಎಂದು ಪದೇಪದೇ ಹೇಳುವುದು ಅಲ್ಲಲ್ಲಿ ಕಂಡುಬರುತ್ತದೆ. ದಲಿತರಿಗೆ ಶಾಸನಾತ್ಮಕ ರಕ್ಷಣೆ ದೊರತಿದೆ. ಆದರೆ ಆಚರಣೆಯಲ್ಲಿ ಪಾಲಿಸುತ್ತಿಲ್ಲ ಎನ್ನುವುದಕ್ಕೆ ಅನೇಕ ಘಟನೆಗಳು ಕಣ್ಣು ಎದುರುಇವೆ. ಜಾತಿಯತೆಯನ್ನು ನಂಬಿಕೊಂಡು ಬಂದ ನಾಗರಿಕ ಸಮಾಜ ತನ್ನ ಒಡಲೊಳಗೆ ಅಪಾರ ಅಸಮಾನತೆ ತುಂಬಿಕೊಂಡಿದೆ. ತಲತಲಾಂತರ ಅನಿಷ್ಟ ಪದ್ಧತಿಗಳ ಮೂಲಕ ಶೋಷಣೆ […]

ದಿಕ್ಕು ತಪ್ಪಿದ್ದರ ಹಿಂದಿನ ಪಕ್ಕಾ ಕಾರಣಗಳು

ಹೂಡಿ ವೆಂಕಟೇಶ

ಬಾಬಾಸಾಹೇಬರು ಅಸ್ತಂಗತರಾದ ನಂತರ ಪರಿವರ್ತನಾ ಚಳವಳಿಯ ರಥ ಹೇಗೆ ರಾಷ್ಟ್ರಮಟ್ಟದಲ್ಲಿ ಮುಗ್ಗರಿಸಿತೊ ಹಾಗೆ ಬಿ.ಕೃಷ್ಣಪ್ಪನವರ ಅಗಲಿಕೆಯ ನಂತರ ರಾಜ್ಯದಲ್ಲಿ ದಲಿತ ಚಳವಳಿಯೂ ದಿಕ್ಕೆಟ್ಟುಹೋಯಿತು. ಹಳ್ಳಿಗಾಡಿನಲ್ಲಿ ದಲಿತರ ಮೇಲೆ ನಡೆಯುತ್ತಿದ್ದ ದಮನ, ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧದ ದ್ವನಿಯಾಗಿ 70ರ ದಶಕದಲ್ಲಿ ತಲೆಯೆತ್ತಿದ ಪ್ರೊ.ಬಿ.ಕೃಷ್ಣಪ್ಪರ ನೇತೃತ್ವದ ದಲಿತ ಚಳವಳಿ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್‍ನಿಂದ ಪ್ರಭಾವಕ್ಕೊಳಗಾಗಿ ಪಸರಿಸತೊಡಗಿತು. ಕ್ರಮೇಣ ಭೂ ಆಕ್ರಮಣಾ ಚಳವಳಿಗಳಿಗೆ ಹೆಚ್ಚು ಒತ್ತು ನೀಡುತ್ತ ಹೊಸ ಮನ್ವಂತರವೊಂದು ಘಟಿಸಿತು. 1970-83ರ ತನಕ ಅತ್ಯಂತ ಪರಿಣಾಮಕಾರಿಯಾಗಿ ಬೆಳೆಯತೊಡಗಿದ ಚಳವಳಿಯಲ್ಲಿ ಮೈಸೂರು […]

1 2 3 80