ಕನ್ನಡ ಚಿತ್ರರಂಗದ ಕೊನೆಯ ಸೂಪರ್ ಸ್ಟಾರ್

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ ನನ್ನ ತಮ್ಮಾ… ಮಂಕು ತಿಮ್ಮಾ ತೂಕಡಿಸಿ ತೂಕಡಿಸಿ ಬಿದ್ದರೋ ನನ್ನಜ್ಜ ನಿನ್ನಜ್ಜ ಮುತ್ತಜ್ಜ ಎಂದು ಕನ್ನಡಿಗರನ್ನು ತನ್ನ ಶೈಲಿಯಲ್ಲಿಯೇ ಬಡಿದೇಳಿಸಿದ್ದ ಅಂಬರೀಶ್ ಇದೇ ನವೆಂಬರ್ 24ರಂದು ಚಿರನಿದ್ರೆಗೆ ಜಾರಿದ್ದಾರೆ. ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ತನ್ನ ಅಪಾರ ಅಭಿಮಾನಿಗಳ ಬಳಗವನ್ನು ತೊರೆದು “ಏ ಹೋಗ್ರೊಲೋ ಹೋಗ್ರೋ..” ಎಂದು ಹೇಳುತ್ತಾ ತಾವೇ ಜೀವನದ ಬೆಳ್ಳಿಪರದೆಯಿಂದ ಸರಿದಿದ್ದಾರೆ. ನಾಗರಹಾವಿನ ಜಲೀಲನ ಪಾತ್ರದಿಂದ ಹಿಡಿದು ಇತ್ತೀಚೆಗಿನ ‘ಅಂಬಿ ನಿಂಗೆ ವಯಸ್ಸಾಯ್ತೋ’ವರೆಗೆ ಅಂಬರೀಶ್ ನೂರಾರು ಪಾತ್ರಗಳಲ್ಲಿ ಪ್ರೇಕ್ಷಕರೊಡನೆ […]

ಒಬ್ಬರ ಸಾವು ಇನ್ನೊಬ್ಬರ ಅವಕಾಶ?

-ರಮಾನಂದ ಶರ್ಮಾ

ಇತ್ತೀಚೆಗೆ ಕೇಂದ್ರಮಂತ್ರಿ ಅನಂತಕುಮಾರ್ ನಿಧನರಾದಾಗ, ಅವರ ಪಾರ್ಥಿವ ಶರೀರ ಚಿತೆ ಏರುವ, ಅಂತ್ಯ ಸಂಸ್ಕಾರ ಮುಗಿಯುವ ಮೊದಲೇ ಅವರ ಉತ್ತರಾಧಿಕಾರಿಯ ಬಗೆಗೆ, ಅವರ ಪತ್ನಿ ತೇಜಸ್ವಿನಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿಲ್ಲಿಸುವ ಬಗೆಗೆ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿತ್ತು! ಅಯ್ಯೋ ಪಾಪ ಹೋಗಿಬಿಟ್ರಾ, ಇನ್ನು ಕೆಲಕಾಲ ಬದುಕಬಹುದಿತ್ತು, ಸಾಯುವ ವಯಸ್ಸಲ್ಲ, ಮುಂದೇನು? ಅಂತಿಮ ಸಂಸ್ಕಾರ ಹೇಗೆ? ಅವರ ಕುಟುಂಬಕ್ಕೆ ಆಸರೆ ಏನು? -ಹಿಂದೆ ಯಾರಾದರೂ ನಿಧನರಾದಾಗ ಸಾಮಾನ್ಯವಾಗಿ ಇಂಥ ಪ್ರತಿಕ್ರಿಯೆ ಕೇಳಿಬರುತ್ತಿತ್ತು. ನಿಧನರಾದವರು ಯಾರೇ […]

ಕಲ್ಯಾಣ ಯೋಜನೆಗಳ ಬಗ್ಗೆ ಅಸಹನೆ ಏಕೆ?

- ಕು.ಸ.ಮಧುಸೂದನ

ರಾಜಕೀಯ ಪಕ್ಷಗಳಿಗೆ ಕಲ್ಯಾಣರಾಜ್ಯದ ‘ಉಚಿತ’ಗಳನ್ನು ನೀಡುವಲ್ಲಿ ಇರುವ ಆಸಕ್ತಿ ಆ ಉಚಿತಗಳ ಅಗತ್ಯವೇ ಇರದಂತೆ ಮಾಡಲು ಹಾಕಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಇಲ್ಲವಾಗಿದೆ. ನಾವು ಕಟ್ಟುವ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಜನರಿಗೆ ಸೋಮಾರಿಗಳಾಗುವುದನ್ನು ಸರಕಾರವೇ ಕಲಿಸಿಕೊಡುತ್ತಿದೆ. ಹಸಿದವರಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ಹೊರತು ಸಿದ್ಧಪಡಿಸಿದ ಮೀನೂಟ ನೀಡುವುದಲ್ಲ! ಪ್ರತಿ ವರ್ಷವೂ ಬರದ ಹೆಸರಿನಲ್ಲಿ, ಅತಿವೃಷ್ಟಿಯ ಹೆಸರಿನಲ್ಲಿ ರೈತರ ಸಾಲಮನ್ನಾ ಮಾಡುತ್ತಾ ಹೋದರೆ ಖಾಲಿಯಾಗುವ ಸರಕಾರದ ಬೊಕ್ಕಸ ತುಂಬಲು ನಾವೇಕೆ ತೆರಿಗೆ ನೀಡಬೇಕು? […]

ನೆಹರೂ ರಾಜಕೀಯ ತತ್ವಜ್ಞಾನ

- ರಾಜಾರಾಮ ತೋಳ್ಪಾಡಿ

 ನೆಹರೂ ರಾಜಕೀಯ ತತ್ವಜ್ಞಾನ <p><sub> - ರಾಜಾರಾಮ ತೋಳ್ಪಾಡಿ </sub></p>

   ನಿತ್ಯಾನಂದ ಬಿ. ಶೆಟ್ಟಿ ಪಂಡಿತ್ ಜವಾಹರಲಾಲ್ ನೆಹರೂ ಈ ದೇಶದ ಮಹಾನ್ ನಾಯಕರಲ್ಲೊಬ್ಬರು. ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕತ್ವ, ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರದ ಜೊತೆಗೆ ನೆಹರೂ; ಸ್ವಾತಂತ್ರ್ಯೋತ್ತರ ಭಾರತದ ಮೊದಲ ಪ್ರಧಾನಿಯಾಗಿ ದೇಶವನ್ನು ಆಧುನಿಕತೆ ಮತ್ತು ಅಭಿವೃಧ್ಧಿಯ ಪಥದಲ್ಲಿ ಮುನ್ನಡೆಸಿದ್ದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅವರ ಚಿಂತನೆ ಹಾಗೂ ಕ್ರಿಯಾಚರಣೆಗಳ ವೈಶಿಷ್ಟ್ಯ ಮತ್ತು ಇತಿಮಿತಿಗಳೇನು? ಎನ್ನುವುದರ ಕುರಿತು ವಿದ್ವಾಂಸರ ಸಣ್ಣ ಗುಂಪನ್ನು ಹೊರತುಪಡಿಸಿದರೆ ಉಳಿದವರು ಅಷ್ಟಾಗಿ ಚಿಂತನೆ ನಡೆಸಿದಂತಿಲ್ಲ. ನೆಹರೂರವರ ಕುರಿತು ಕಟ್ಟುಕಥೆದಂತಕಥೆ […]

ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು

- ನಾ ದಿವಾಕರ

 ಚಿಂತನೆಗಳಿಗೆ ಸಂಕೇತವಾಗದ ಪ್ರತಿಮೆಗಳು <p><sub> - ನಾ  ದಿವಾಕರ </sub></p>

ಬಹುತೇಕ ಸಾಂಪ್ರದಾಯಿಕ ಸಮಾಜಗಳಲ್ಲಿ ಪ್ರತಿಮೆಗಳು ಚಿಂತನೆಗಳ ಸಂಕೇತವಾಗುವ ಬದಲು ಆರಾಧನೆಯ ಕೇಂದ್ರಗಳಾಗಿ ರೂಪುಗೊಂಡು ಒಂದು ಹಂತದಲ್ಲಿ ಸಂಸ್ಕೃತಿಕ ಅಧಿಪತ್ಯದ ಸಂಕೇತಗಳಾಗಿಬಿಡುತ್ತವೆ. ಇತ್ತೀಚೆಗೆ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನೂ ಇದೇ ಚೌಕಟ್ಟಿನಲ್ಲಿ ನೋಡಬೇಕಾಗುತ್ತದೆ. ಪ್ರತಿಮೆ ಮತ್ತು ಸ್ಮಾರಕಗಳ ಮೂಲಕ ಗತಕಾಲದ ಮಹನೀಯರನ್ನು ನೆನೆಯುವ ಪರಂಪರೆ ಸಾರ್ವತ್ರಿಕವಾದದ್ದು ಮತ್ತು ಪ್ರಾಚೀನವಾದದ್ದು ಸಹ. ಬಹುಶಃ ಪ್ರಪಂಚದ ಯಾವುದೇ ದೇಶವೂ ಈ ಪರಂಪರೆಯಿಂದ ಹೊರತಾಗಿಲ್ಲ. ಪ್ರತಿಮೆ ಮತ್ತು ಸ್ಮಾರಕಗಳನ್ನು ಎರಡು ಮಜಲುಗಳಲ್ಲಿ ನೋಡಬಹುದು. ಮೊದಲನೆಯದಾಗಿ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥ […]

ರಾಜಕೀಯದಲ್ಲಿ ಉದಾಸೀನ ಪರ್ವ

- ಎ.ನಾರಾಯಣ

 ರಾಜಕೀಯದಲ್ಲಿ ಉದಾಸೀನ ಪರ್ವ <p><sub> - ಎ.ನಾರಾಯಣ </sub></p>

ಮೂರು ಲೋಕಸಭಾ ಸ್ಥಾನಗಳಿಗೆ ಮತ್ತು ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಗಳ ಫಲಿತಾಂಶದ ಆಧಾರದಲ್ಲಿ ಹೇಳುವುದಾದರೆ ರಾಜ್ಯದ ರಾಜಕೀಯ ಪರಿಸ್ಥಿತಿ ವಿಧಾನಸಭಾ ಚುನಾವಣೆಯ ಕಾಲದಲ್ಲಿದ್ದ ಹಾಗೆ ಈಗಲೂ ಇದೆ. ವಿಶೇಷವಾಗಿ ಏನೂ ಬದಲಾದಂತೆ ಕಾಣುತ್ತಿಲ್ಲ. ಬದಲಿಸುವ ಉತ್ಸಾಹ ಮೂರು ಪಕ್ಷಗಳಿಗೂ ಇದ್ದಂತೆ ಕಾಣುವುದಿಲ್ಲ. ಕರ್ನಾಟಕ ರಾಜ್ಯ ರಾಜಕಾರಣ 20018ರ ವಿಧಾನಸಭಾ ಚುನಾವಣೆ ಕಳೆದ ನಂತರ ಒಂದು ವಿಚಿತ್ರವಾದ ಸ್ಥಗಿತ ಸ್ಥಿತಿಯನ್ನು ಪ್ರವೇಶಿಸಿದಂತಿದೆ. ಜೆಡಿ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರಕಾರ ಒಂಥರಾ ತಾತ್ಕಾಲಿಕ ನೌಕರಿ ನಡೆಯುವಂತೆ […]