ಮುಖ್ಯಚರ್ಚೆಗೆ ಪ್ರವೇಶ

ಸಮ್ಮಿಶ್ರ ಸರ್ಕಾರ ಒಂದು ವರ್ಷ ಹೇಳಿದ್ದೇನು ಮಾಡಿದ್ದೇನು? ಕರ್ನಾಟಕ ಸರ್ಕಾರದ ಮುಂದೆ ಸಮಸ್ಯೆ ಗಳ ಸರಮಾಲೆಯೇ ಇದೆ. ಕನ್ನಡಿಗರ ಶಿಕ್ಷಣ-ಆರೋಗ್ಯ ಉದ್ಯೋಗ ಗಳ ಸಮಸ್ಯೆಗಳು ಉಲ್ಬಣಗೊಳ್ಳುತ್ತಲೇ ಇವೆ. ರೈತರ ಗೋಳನ್ನು ಕೇಳುವವರು ಇಲ್ಲವಾಗಿದ್ದಾರೆ. ಕೈಗಾರಿಕೆ-ಉದ್ಯಮಗಳು ಭ್ರಷ್ಟಾಚಾರದ ಭಾರದಲ್ಲಿ ನಲುಗಿಹೋಗಿವೆ. ಸರ್ಕಾರಿ ಆಡಳಿತ ವ್ಯವಸ್ಥೆ ಕುಸಿದು ಹೋಗಿರುವ ಅನುಭವವಾಗುತ್ತಿದೆ. ರಾಜ ಕೀಯ ಪ್ರಾತಿನಿಧಿಕ ಪ್ರಕ್ರಿಯೆ ಪೊಳ್ಳಾಗಿದೆ. ಅಧಿಕಾರಿವರ್ಗ ನಿಷ್ಕ್ರಿಯವಾಗಿದೆ. ರಾಜ್ಯದ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಈ ಸಮಯದಲ್ಲಿ ಈ ಎಲ್ಲಾ ವಿಷಯಗಳನ್ನು ನಾವು ಎತ್ತಲೇ ಬೇಕಾಗಿದೆ. […]

ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ!

ಡಾ.ಎಂ.ಚಂದ್ರ ಪೂಜಾರಿ

ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ!
ಡಾ.ಎಂ.ಚಂದ್ರ ಪೂಜಾರಿ

ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ವಿಮರ್ಶಿಸಲು ಮಾನದಂಡದ ಅಗತ್ಯವಿದೆ. ಮೂಲಸೌಕರ್ಯಗಳನ್ನು, ಜನರು ದುಡಿದು ಗಳಿಸುವ ಪರಿಸರವನ್ನು ಸೃಷ್ಟಿಸುವುದು ಚುನಾಯಿತ ಸರಕಾರದ ಜವಾಬ್ದಾರಿಯೆನ್ನುವ ಒಂದು ಸಾಮಾನ್ಯ ಮಾನದಂಡದಿಂದ ಸರಕಾರದ ಸಾಧನೆಯನ್ನು ಮೌಲ್ಯಮಾಪನ ಮಾಡಲು ಪ್ರಯತ್ನಿಸಿದ್ದೇನೆ. ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮ್ಮಿಶ್ರ ಸರಕಾರವನ್ನು ರಚಿಸಿವೆ. ಈ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ವಿಶೇಷ ಭಿನ್ನತೆ ಇಲ್ಲ. ಈ ಪಕ್ಷಗಳು ಏಕೆ ದೇಶದಲ್ಲಿರುವ ಬಹುತೇಕ ಲಿಬರಲ್ ಪಕ್ಷಗಳ ಅಭಿವೃದ್ಧಿ ಧೋರಣೆಯಲ್ಲಿ ತೊಂಬತ್ತರ ನಂತರ ವಿಶೇಷ ಭಿನ್ನತೆ ನೋಡಲು […]

ವಿತ್ತೀಯ ಹೊಣೆಗಾರಿಕೆಯಲ್ಲಿ ಹಳಿತಪ್ಪಿದ ಸರ್ಕಾರ

-ಮೋಹನದಾಸ್

ರಾಜ್ಯ ಜಿಡಿಪಿ ಅನುಪಾತದಲ್ಲಿ ಕರ್ನಾಟಕ ಸರ್ಕಾರವು ಸಾಲ ಮಾಡಿ ತನ್ನ ಆಯವ್ಯಯವನ್ನು ಸರಿದೂಗಿಸುವ ಪ್ರಯತ್ನ ದೋಷಪೂರಿತವಾಗಿದೆ. ಬಜೆಟ್‍ನಲ್ಲಿಯ ಅಂಕಿಅಂಶಗಳು ‘ಜೇಬಿನ ಹಣ’ವಾಗಿದ್ದರೆ ಜಿಡಿಪಿಯ ಅಂಕಿಅಂಶಗಳು ‘ಕನ್ನಡಿ ಗಂಟು’ ಆಗಿದೆ. ಈ ಕನ್ನಡಿ ಗಂಟಿನ ಅನುಪಾತದಲ್ಲಿ ಸಾಲ ಮಾಡಿ ಜೇಬಿನ ಖರ್ಚನ್ನು ಸರಿದೂಗಿಸುವ ಹುನ್ನಾರ ರಾಜ್ಯವನ್ನು ಸಾಲದ ಶೂಲಕ್ಕೆ ತಳ್ಳಲಿದೆ. ಸಾಲಮನ್ನಾ ಮತ್ತಿತರ ಅವೈಜ್ಞಾನಿಕ ಬಾಬತ್ತುಗಳಿಗೆ ಹಣ ಮೀಸಲಿಟ್ಟ ಕುಮಾರಸ್ವಾಮಿ ಸರ್ಕಾರವು ಕಳೆದ ಎರಡು ಬಜೆಟ್ ನಿರೂಪಣೆಯಲ್ಲಿ ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. 2018-19ರ ಮತ್ತು 2019-20ರ ಬಜೆಟ್ […]

ಸರ್ಕಾರ ಉಳಿದಿದ್ದೇ ದೊಡ್ಡ ಸಾಧನೆ!

ಹರೀಶ್ ನರಸಪ್ಪ

ಸರ್ಕಾರ ಉಳಿದಿದ್ದೇ ದೊಡ್ಡ ಸಾಧನೆ!
ಹರೀಶ್ ನರಸಪ್ಪ

ಸಾಮಾಜಿಕ ಅಧ್ಯಯನ, ಸಮೀಕ್ಷೆ ಇತ್ಯಾದಿ ಚಟುವಟಿಕೆಗಳ ಮೂಲಕ ದೇಶದಲ್ಲಿ ವಿವಿಧ ಸರಕಾರಗಳು ಉತ್ತಮ ಆಡಳಿತ ನೀಡಲು ಮತ್ತು ಜನತೆಗೆ ಉತ್ತರದಾಯಿಯಾಗಿರುವಂತೆ ಉತ್ತೇಜಿಸುವ ಸ್ವಯಂ ಸೇವಾ ಸಂಸ್ಥೆಯೇ ದಕ್ಷ. ಇದರಲ್ಲಿ ಪ್ರಾಧ್ಯಾಪಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ತೊಡಗಿಕೊಂಡಿದ್ದಾರೆ. 2008ರಲ್ಲಿ ಈ ಸಂಸ್ಥೆ ಸ್ಥಾಪನೆಯಾಯಿತು. ವೃತ್ತಿಯಿಂದ ವಕೀಲರಾಗಿರುವ ದಕ್ಷ ಸಂಘಟನೆಯ ಸಹಸಂಸ್ಥಾಪಕ ಹರೀಶ್ ನರಸಪ್ಪ ಅವರು ಸಮ್ಮಿಶ್ರ ಸರ್ಕಾರ ಕುರಿತು ಹೀಗೆ ಹೇಳುತ್ತಾರೆ. ಲೋಕಸಭೆ ಚುನಾವಣೆ ಮಧ್ಯದಲ್ಲಿ ಕರ್ನಾಟಕ ಕಾಂಗ್ರೆಸ್-ಜೆಡಿ(ಎಸ್) ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆಗಳನ್ನು […]

ಸಣ್ಣ ಕೈಗಾರಿಕೆಗಳಿಗೆ ಪೂರಕ ಸರ್ಕಾರ

ಬಸವರಾಜ ಎಸ್.ಜವಳಿ

ನನ್ನ 25 ವರ್ಷಗಳ ಅನುಭವದಲ್ಲಿ ಸಣ್ಣ ಕೈಗಾರಿಕೆಗಳಿಗೆ ಪೂರಕವಾಗಿರು ವುದು ಮುಖ್ಯವಾಗಿ ಒಂದು ಮಾರುಕಟ್ಟೆ, ಇನ್ನೊಂದು ಹಣಕಾಸು. ಈ ಸರಕಾರ ಅವಧಿ ಸಾಲದ ಮೂಲಕ ಹಣಕಾಸನ್ನು ಸರಳಗೊಳಿಸಿದೆ. ಇನ್ನು ಮಾರುಕಟ್ಟೆ ವಿಚಾರದಲ್ಲಿ ‘ಸಾರ್ಥಕ’ ಎಂಬ ಒಂದು ಒಳ್ಳೆಯ ಯೋಜನೆಯನ್ನು ರೂಪಿಸಿದೆ. ಅದು ಇನ್ನು ಜಾರಿಗೆ ಬಂದಿಲ್ಲ. ಕೃಷಿಯ ನಂತರ ದೇಶದಲ್ಲಿಅತೀ ಹೆಚ್ಚಿನ ಉದ್ಯೋಗ ಸೃಷ್ಟಿಸುವುದೆಂದರೆ ಸಣ್ಣ ಕೈಗಾರಿಕೆಗಳ ಕ್ಷೇತ್ರ. ಸಣ್ಣ ಕೈಗಾರಿಕೆಗಳು ಕಡಿಮೆ ವಿದ್ಯಾಭ್ಯಾಸ ಮಾಡಿದವರನ್ನು ಅಲ್ಲದೇ ಏನೂ ಬರಲಾರದವರನ್ನೂ ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಅಗತ್ಯ ಉದ್ಯೋಗದ […]

ಇದು ಕೆಲಸ ಮಾಡುವ ಸರಕಾರ ಅಲ್ಲ

ಡಾ.ವಾಮನ ಆಚಾರ್ಯ

ಸಂಪುಟಸಭೆ ಎಂದರೆ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಾದ ಯೋಜನೆಗಳು ಮತ್ತು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳುವ ಅಧಿಕಾರ ಕೇಂದ್ರದ ಉನ್ನತ ಸ್ಥಾನ. ಇಂಥ ಮಹತ್ವದ ಸಂಪುಟ ಸಭೆಯಲ್ಲಿ ಈ ಸರಕಾರದ ಸಚಿವರು ತಮಗೆ ಆ ಖಾತೆ ಕೊಟ್ಟಿಲ್ಲ, ಈ ಖಾತೆ ಬೇಕಿತ್ತು, ಆ ಶಾಸಕರಿಗೆ ಅಂಥ ನಿಗಮ-ಮಂಡಳಿ ಕೊಡಬೇಕು, ಇವರಿಗೆ ಇಂಥದು ಕೊಡಬೇಕು ಎಂಬ ಕಚ್ಚಾಟವೇ ಹೆಚ್ಚಾಗಿ ನಡೆದಿದೆ. ಕರ್ನಾಟಕದಲ್ಲಿ ಈಗಿರುವ ಸಮ್ಮಿಶ್ರ ಸರಕಾರ ಒಂದು ಅನಿವಾರ್ಯ ಸ್ಥಿತಿಯಲ್ಲಿ ನಿರ್ಮಾಣವಾದ ಒಪ್ಪಂದದ ಸರಕಾರ. ಜನರು ಕಳೆದ […]

ಕರ್ನಾಟಕ ಎಂದರೆ… ಆ ಮೂರು ಜಿಲ್ಲೆಗಳೇ?

ಡಾ.ರಝಾಕ ಉಸ್ತಾದ

ರಾಜ್ಯದಲ್ಲಿ ನಡೆಯುತ್ತಿರುವ ನೇಮಕಾತಿಗಳಲ್ಲಿ ಕೆಲವೊಂದು ಇಲಾಖೆಗಳು 371ಜೆ ಮೀಸಲಾತಿ ಕೈಬಿಟ್ಟು ಮುಂದುವರೆಯುತ್ತಿರುದರಿಂದ ಈ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಮೂಡುತ್ತಿದೆ. ಈಗಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ರಾಜ್ಯದ ಎಲ್ಲ ನಾಲ್ಕು ವಿಭಾಗಗಳಿಗೆ ಏಕಮುಖವಾದ ಅಭಿವೃದ್ಧಿ ಯೋಜನೆ ಜಾರಿ ಮಾಡುವ ಕುರಿತು ಸಾಕಷ್ಟು ಅನುಮಾನಗಳು ಕೇಳಿಬಂದಿವೆ ಮತ್ತು ಸರಕಾರ ಅದೇ ರೀತಿ ನಡೆದುಕೊಂಡು ಬಂದಿದೆ. ಕಳೆದ ಒಂದು ವರ್ಷದಲ್ಲಿ ಸರಕಾರ ಎರಡು ಬಜೆಟ್ ಮಂಡಿಸಿದೆ, ಎರಡೂ ಬಜೆಟ್‍ಗಳನ್ನು ಕೂಲಂಕಷವಾಗಿ ಪರಿಶೀಲಿಸಿದಲ್ಲಿ […]

ರೈತ ಸಮುದಾಯಕ್ಕೆ ಮೋಸ!

ನುಲೇನೂರು ಶಂಕರಪ್ಪ

ರೈತ ಸಮುದಾಯಕ್ಕೆ ಮೋಸ!
ನುಲೇನೂರು ಶಂಕರಪ್ಪ

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರ ಯಾವುದೇ ಚರ್ಚೆ ಇಲ್ಲದೇ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದಿತು. ಸರಕಾರದ ಯೋಜನೆಗಳಿಗೆ ಮಾರ್ಗದರ್ಶಿ ಬೆಲೆಯನ್ನು ಮಾತ್ರ ಕೊಟ್ಟು ರೈತರ ಭೂಮಿಯನ್ನು ಪಡೆಯಬಹುದೆಂದು ಕಾಯ್ದೆಗೆ ತಿದ್ದುಪಡಿ ಮಾಡಿತು. ಇದು ರೈತ ಸಮುದಾಯಕ್ಕೆ ಮಾಡಿದ ಮೋಸವೇ ಆಗಿದೆ. ಹಿಂದಿನ ಎಲ್ಲ ಸರಕಾರಗಳಿಗಿಂತ ಇದು ಅತ್ಯಂತ ನಿರಾಶಾದಾಯಕ ಸರಕಾರ. ಇದೊಂದು ಸಾಂದರ್ಬಿಕವಾಗಿ ರಚನೆಯಾದ ಸರಕಾರ. ಇಲ್ಲೊಂದು ಸರಕಾರ ಇದೆ ಎಂಬ ಬಾವನೆ ನಮಗೆ ಬರುತ್ತಿಲ್ಲ. ಒಂದು ಸರಕಾರ ಇದೆ ಎಂಬ ಬಾsವನೆ ಬರಬೇಕಾದರೆ ಸರಕಾರದಲ್ಲಿನ ಎಲ್ಲ […]

ಇಂದಿನ ವೈದ್ಯಕೀಯ ರಂಗ ಸೇವೆಯೋ? ಸುಲಿಗೆಯೋ?

ಜೂನ್ ಸಂಚಿಕೆಯ ಮುಖ್ಯಚರ್ಚೆ ಪಾರಂಪಾರಿಕವಾಗಿ ವೈದ್ಯಕೀಯ ಸೇವೆಯನ್ನು ಅತ್ಯಂತ ಗೌರವದಿಂದ ನೋಡುತ್ತಾ ವೈದ್ಯರನ್ನು ದೇವರ ದೂತರೆಂದೇ ಕಂಡಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮೆಲ್ಲರ ನಡುವೆ ನಿರಪೇಕ್ಷೆಯಿಂದ ಸೇವೆ ಮಾಡುತ್ತಾ ಬಂದಿರುವ ಹಲವಾರು ನಿಷ್ಕಳಂಕ ವೈದ್ಯರ ಕಥೆಗಳು ಇಂದಿಗೂ ಜನಜನಿತವಾಗಿವೆ. ಇಂತಹ ನೂರಾರು ವೈದ್ಯರು ನಮ್ಮೊಡನಿದ್ದಾರೆ. ಆದರೆ ಅತ್ಯಂತ ವ್ಯಾಪಕವಾಗಿ ವಾಣಿಜ್ಯೀಕರಣಗೊಂಡಿ ರುವ ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಸೇವೆಗೆ ಕಿಮ್ಮತ್ತಿಲ್ಲದಂತೆ, ಕರುಣೆಗೆ ಕವಡೆ ಕಾಸಿಲ್ಲದಂತೆ ಹಾಗೂ ಜೀವಕ್ಕೆ ಎಳ್ಳಷ್ಟೂ ದಯೆಯಿಲ್ಲದಂತೆ ಆಗಿದೆ. ಎಗ್ಗಿಲ್ಲದ ಲಾಭಕೋರತನದಲ್ಲಿ ಅಮಾಯಕ ಜನರನ್ನು ಅಕ್ಷರಶಃ ಸುಲಿಗೆ […]

ಮುಖ್ಯಚರ್ಚೆಗೆ ಪ್ರವೇಶ

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..? ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ ಮತ್ತು ಮುಂದಿನ ಐದು ವರ್ಷಗಳಲ್ಲಿ ನಮಗೆ ಯಾವ ಕೇಂದ್ರ ಸರ್ಕಾರ ಬೇಕೆನ್ನುವ ಚರ್ಚೆಗಿಂತಲೂ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಬೇಡವೋ ಎಂಬುದೇ ಚುನಾವಣೆಯ ವಿಷಯವಸ್ತುವಾಗಿದೆ. 2019ರ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತ ಸ್ಪರ್ಧೆಯಾಗಿ ಮಾಡುವಲ್ಲಿಯೇ ಆಡಳಿತ ಪಕ್ಷ ತನ್ನ ಸಫಲತೆಯನ್ನು ಕಾಣಬಯಸಿದರೆ, ಮೋದಿ ವಿರೋಧಿ ಒಕ್ಕೂಟ ರಚನೆಯಲ್ಲಿ ವಿರೋಧ ಪಕ್ಷಗಳು […]

ಮುಖ್ಯಚರ್ಚೆಗೆ ಪ್ರವೇಶ

ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಚಿತ್ರಣ. ನೀವು ಪತ್ರಿಕೆಗಳಲ್ಲಿ ರಾಜಕಾರಣಿಗಳ, ಮಂತ್ರಿಗಳ, ಹೆಸರಾಂತರ ಅಥವಾ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರ ಜೀವನಚಿತ್ರಣಗಳನ್ನು ಓದುತ್ತೀರಿ. ಚುನಾವಣೆಯ ಸಮಯದಲ್ಲಂತೂ ಅಭ್ಯರ್ಥಿಗಳ ಆಸ್ತಿ, ಋಣ, ವಾಹನಗಳು, ಬ್ಯಾಂಕ್ ಬ್ಯಾಲೆನ್ಸ್ ಇತ್ಯಾದಿ ವಿವರಗಳನ್ನು ಓದುತ್ತೀರಿ. ಕೆಲವು ವಾಹಿನಿಗಳಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಧರಿಸಿದ ಕೂಲಿಂಗ್ ಗ್ಲಾಸ್‍ನಿಂದ ಹಿಡಿದು ಅವರ ಹೆಂಡತಿಯರ ನಡುವಿನ ಜಗಳದ ‘ಪಿನ್ ಟು ಪಿನ್’ ವಿವರಗಳನ್ನೂ ಕೇಳಿಸಿಕೊಂಡಿರುತ್ತೀರಿ. ಆದರೆ ಸಾಮಾನ್ಯ ಕನ್ನಡಿಗನೊಬ್ಬನ ಜೀವನದ ಚಿತ್ರಣವನ್ನು ನಿಮಗೆ ಯಾರೂ ನೀಡಿರಲಿಕ್ಕಿಲ್ಲ. ಅವನ ಕುಟುಂಬದ ಆದಾಯ, […]

ಏನಿದು ಅಸಾಮಾನ್ಯ ಚಿತ್ರಣ..?

-ಮೋಹನದಾಸ್.

ಪ್ರಾತಿನಿಧಿಕ ಮಾದರಿ ಅಧ್ಯಯನದ ರೂಪುರೇಶೆ ಇದೀಗ ಮತ್ತೆ ಚುನಾವಣಾ ಪರ್ವ. ಪಕ್ಷಗಳು ನಮ್ಮ ದೇಶದ ಬಡತನ ಮತ್ತು ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಹೊಸಹೊಸ ಯೋಜನೆಗಳನ್ನು ರೂಪಿಸುವ ಸಮಯ. ಅಭ್ಯರ್ಥಿಗಳು ನಮ್ಮ ಅಗತ್ಯಗಳನ್ನು ನಮಗಿಂತಲೂ ಚೆನ್ನಾಗಿ ಅರಿತು ನಮ್ಮ ‘ಪ್ರಗತಿ-ವಿಕಾಸ-ಅಭಿವೃದ್ಧಿ’ಗೆ ಕಾರ್ಯಕ್ರಮಗಳನ್ನು ಘೋಷಿಸುವ ಸಮಯ. ನಮ್ಮಲ್ಲಿನ ಹಲವು ಅಸಹಾಯಕರಿಗಾಗಿ ‘ಭಾಗ್ಯ-ಭತ್ಯೆ-ಅನುದಾನ-ಕಲ್ಯಾಣ-ಪಿಂಚಣಿ’ ಭರವಸೆಗಳನ್ನು ನೀಡುವ ಸಮಯ. ‘ಸಮಗ್ರ-ಸರ್ವಾಂಗೀಣ’ ಅಭಿವೃದ್ಧಿಗೆ ‘ಆಮೂಲಾಗ್ರ’ವಾಗಿ ಎಲ್ಲ ಜಾತಿ-ವರ್ಗಗಳನ್ನು ಓಲೈಸಲು ಪ್ರಣಾಳಿಕೆಗಳಲ್ಲಿ ಗೊತ್ತು-ಗುರಿ-ಆಶಯ-ಉದ್ದೇಶಗಳನ್ನು ಹೇಳಿಕೊಳ್ಳುವ ಸಮಯ. ಪ್ರಜಾಪ್ರಭುತ್ವದಲ್ಲಿ ಇದೆಲ್ಲವೂ ಸಹಜವೇ. ನಮ್ಮವರೇ ನಮ್ಮನ್ನು ಆಳುವ ಸಂದರ್ಭದಲ್ಲಿ […]

ಇಂದು ಸಂತೃಪ್ತ, ನಾಳೆ ಗೊತ್ತಿಲ್ಲ!

-ಡಾ. ಜಾಜಿ ದೇವೇಂದ್ರಪ್ಪ

ಇಂದು ಸಂತೃಪ್ತ, ನಾಳೆ ಗೊತ್ತಿಲ್ಲ!
-ಡಾ. ಜಾಜಿ ದೇವೇಂದ್ರಪ್ಪ

ಭೋವಿ ರಾಘವೇಂದ್ರ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಜಂಗಮರಹಟ್ಟಿಯವ. ಬದುಕನ್ನು ಅರಸಿಕೊಂಡು ತಂದೆ ರಾಮಾಂಜನೇಯ ತಾಯಿ ಅಂಬಮ್ಮನೊಂದಿಗೆ ಗಂಗಾವತಿಗೆ ಗುಳೆ ಬಂದವನು. ಮಿನಿಲಾರಿಯನ್ನು ಖರೀದಿ ಮಾಡಿ ಅದರಲ್ಲಿ ಒಂದು ಅಚ್ಚುಕಟ್ಟಾದ ಎಗ್‍ ಐಟಂ ಪ್ರಧಾನವಾದ ಫಾಸ್ಟ್ ಫುಡ್ ಸೆಂಟರ್ ಆರಂಭಿಸಿದ್ದಾನೆ. ಗಂಗಾವತಿಯ ಬಸ್‍ನಿಲ್ದಾಣದ ಪಕ್ಕದಲ್ಲಿರುವ ನಗರಸಭೆಯ ಗೋಡೆಗೆ ಹೊಂದಿಕೊಂಡಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಯುವಕನೊಬ್ಬ ಕೈ-ಕಾಲಿಗೆ ಒಂದಿಷ್ಟೂ ಬಿಡುವಿಲ್ಲದೆ ಎಗ್‍ರೈಸ್, ಎಗ್‍ಚಪಾತಿ, ಎಗ್‍ಬಾತ್, ಎಗ್‍ಬಿರಿಯಾನಿ, ಆಮ್ಲೇಟ್ ಹಾಕುತ್ತಿದ್ದರೆ ಘಮಘಮಿಸುವ ಎಗ್ […]

ಮನೆ ಕಟ್ಟುವ ಆಸೆ

-ಎಂ.ಕುಸುಮ

ಹಾಸನದ ಈ ಕುಟುಂಬದ ಯಜಮಾನ 55 ವರ್ಷದ ನಾಗೇಶ್ ಎ.ಟಿ. ಪತ್ನಿ 48 ವರ್ಷದ ನಂಜಮ್ಮ ಹಾಗೂ ಒಬ್ಬ ಮಗ, ಇಬ್ಬರು ಹೆಣ್ಣುಮಕ್ಕಳು ಕುಟುಂಬದ ಇತರ ಸದಸ್ಯರು. ಮಗ 23 ವರ್ಷದ ಸಂಜಯ್ ಎ.ಎನ್. ಹಿರಿಯ ಮಗಳು 22 ವರ್ಷದ ಸಂಗೀತ ಎ.ಎನ್ ಮತ್ತು ಕೊನೆಯ ಮಗಳು 20 ವರ್ಷದ ಸುಷ್ಮ ಎ.ಎನ್. ಹಾಸನದ ಆಡುವಳ್ಳಿ, ಕೆ.ಎಸ್.ಆರ್.ಟಿ.ಸಿ ವಸತಿ ಸಮುಚ್ಚಯದ ಪಕ್ಕದಲ್ಲಿ ಇವರ ವಾಸ. ಇವರ ಮೂಲ ಹಾಸನ ಪಟ್ಟಣವೇ ಆಗಿದ್ದು, ಜಾತಿ ಪರಿಶಿಷ್ಟ ಜಾತಿಗೆ (ಆದಿ […]

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!

-ಪ.ರಾಮಕೃಷ್ಣ ಶಾಸ್ತ್ರಿ

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!
-ಪ.ರಾಮಕೃಷ್ಣ ಶಾಸ್ತ್ರಿ

ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪ ಪೂಜಾರಿಯವರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ. ಇವರು ಜಿನ್ನಪ್ಪ ಪೂಜಾರಿ. ಅರುವತ್ನಾಲ್ಕರ ಹರಯ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗಾಂಧಿನಗರದಲ್ಲಿ ಅವರ ವಾಸ. ಒಂದು ಕಾಲದಲ್ಲಿ ತಾಳೆಮರವೇರಿ ಕಳ್ಳು ಇಳಿಸಿ ಬದುಕುತ್ತಿದ್ದ ಬಿಲ್ಲವ ಜನಾಂಗ ಅವರದು. ಸರಕಾರದ ನೀತಿಯಿಂದಾಗಿ ಈ ಗ್ರಾಮೀಣ ಕಸುಬನ್ನು ಹಲವು ಕಾನೂನು ಕಟ್ಟಳೆಗಳು ಪೀಡಿಸಿದ ಪರಿಣಾಮ ವೃತ್ತಿ ಅಳಿವಿನಂಚು ಸೇರಿತು. ಮುಕ್ತವಾದ ಸೇಂದಿ ಮಾರಾಟಕ್ಕೂ ಕಾಯಿದೆಯ ಕಬಂಧ […]

ಚಿಕ್ಕ ಚೊಕ್ಕ ಕುಟುಂಬ

-ವಿದ್ಯಾ ವೆಂಕಟೇಶ್

ಈ ಕುಟುಂಬ ಯಾವುದೇ ಅಪೇಕ್ಷೆಗಳನ್ನು ಹೊಂದಿಲ್ಲ. ಕುಟುಂಬದವರೆಲ್ಲ ಆರೋಗ್ಯವಂತರಾಗಿರಬೇಕೆಂಬುದು ಇವರ ಆಶಯ. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮದ 54 ವರ್ಷದ ಪ್ರಸಾದ್ ಕುಟುಂಬದ ಯಜಮಾನ. ಹೆಂಡತಿ 40 ವರ್ಷದ ಶಿವಮ್ಮ ಹಾಗೂ ಇಬ್ಬರು ಗಂಡು ಮಕ್ಕಳ ಚಿಕ್ಕ ಕುಟುಂಬ ಇವರದು. ಹಿರಿಯ ಮಗ ಯಶವಂತ 13 ವರ್ಷದವನಾಗಿದ್ದು, 8ನೇ ತರಗತಿಯಲ್ಲಿ ಓದುತ್ತಿದ್ದಾನೆ. ಎರಡನೆಯ ಮಗ ಪ್ರವೀಣ 11 ವರ್ಷದವನಿದ್ದು 6ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇವರಿಗೆ ಯಾರೂ ಅವಲಂಬಿತರಿಲ್ಲ; ಚಿಕ್ಕ-ಚೊಕ್ಕ ಕುಟುಂಬ. ಪ್ರಸಾದ್ ರೂ.2000 ಮನೆ […]

ಡಿಲ್ಲಿಗೆ ಹೋದರೂ ಡೊಳ್ಳಿಗದೇ ಪೆಟ್ಟು!

-ಚಂಸು ಪಾಟೀಲ

ಅಪ್ಪನ ಕೃಷಿಯ ಹೊರತಾಗಿಯೂ ನಾವು ಮೂವರೂ ಕೃಷಿಕಾರ್ಮಿಕರಾಗಿದ್ದೇವೆ. ಆದಾಗ್ಯೂ ಇದು ನಮ್ಮ ಪರಿಸ್ಥಿತಿ; ಇಷ್ಟರಲ್ಲೆ ಆರಾಮವಿದ್ದೇವೆ. ಮಕ್ಕಳ ಓದು, ಉದ್ಯೋಗ, ಮನೆ.. ಭವಿಷ್ಯ ಎಂತೇನೋ ಗೊತ್ತಿಲ್ಲ. ಅವನ ಹೆಸರು ಮಂಜುನಾಥ. ಆತ ಹೇಳಿದ್ದು: ‘ಪಿಯುಸಿ ನಂತರ ಮುಂದೆ ಓದುವ ಆಸೆಯೇನೋ ಇತ್ತು. ಆದರೆ, ಓದಲಾಗಲಿಲ್ಲ. ಬದುಕಿನ ಬಗ್ಗೆ ಏನೆಲ್ಲ ಕನಸುಗಳಿದ್ದವು. ಅವು ಕನಸಾಗಿಯೇ ಉಳಿದವು. ಯಾವುದೋ ಒಂದು ಅವಕಾಶ ಅನಿರೀಕ್ಷಿತ ಬದಲಾವಣೆ ತಂದೀತು ಎಂಬ ನಿರೀಕ್ಷೆಯೂ ಹುಸಿಯಾಯಿತು’. ಇಂಥ ಮಾತು ಆಡುವಾಗಲೂ ಅವನಲ್ಲಿ, ದುಃಖವಾಗಲಿ, ಬೇಸರವಾಗಲಿ ಇರಲಿಲ್ಲ. […]

ಚಪ್ಪರದ ಮನೆಯಲ್ಲಿ ಹೈನುಗಾರಿಕೆ

-ಮಾಲತೇಶ ಅಂಗೂರ

ಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾಎಮ್ಮೆ-ಮೇಕೆ ಸಾಕಾಣಿಕೆಯಲ್ಲಿ ಬದುಕು ಕಟ್ಟಿಕೊಂಡ ಹಾವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ.ವೇರಿಯ ಚಿಕ್ಕ ಕುಟುಂಬದ ವಿವರ ಇಲ್ಲಿದೆ. ಅತ್ತ ದೊಡ್ಡ ಶಹರವು ಅಲ್ಲದ, ಇತ್ತ ದೊಡ್ಡ ಹಳ್ಳಿಯು ಅಲ್ಲದ ಜಿಲ್ಲಾ ಕೇಂದ್ರ ಸ್ಥಳವಾಗಿರುವ ಹಾವೇರಿ ನಗರದ ನಾಗೇಂದ್ರನಮಟ್ಟಿಯ ಸ್ಲಂ ಪ್ರದೇಶ ನಾನಾ ಸ್ತರದ ಹತ್ತಾರು ಸಾವಿರ ಜನತೆಗೆ ಆಶ್ರಯ ನೀಡಿದೆ. ಈ ಪ್ರದೇಶದಲ್ಲಿ ಕಳೆದ ಎರಡು ದಶಕಗಳ ಹಿಂದೆ ರಮೇಶ ಹ್ಯಾಡ್ಲ, ಶಶಿಕಲಾ ಹ್ಯಾಡ್ಲ್ ದಂಪತಿ ತಮಗೆ ಸಿಕ್ಕ ಆಶ್ರಯ ನಿವೇಶನದಲ್ಲಿ […]

ಮಗನ ಶಿಕ್ಷಣಕ್ಕೆ ಹಣದ ಕೊರತೆ

-ಆರ್.ಲಾವಣ್ಯ

ತಂದೆಯ ಆಸ್ಪತ್ರೆಯ ಖರ್ಚಿಗೆ ಉಳಿತಾಯದ ಹಣ ಸಾಲದೇ ಕೆಲ ಚರಾಸ್ತಿಗಳನ್ನು ಮಾರಾಟ ಮಾಡಬೇಕಾಯಿತು. ಇಷ್ಟು ಹಣ ವೆಚ್ಚ ಮಾಡಿದರೂ ತಂದೆ ಉಳಿಯಲಿಲ್ಲ. ಮಧುಗಿರಿಯ 44 ವರ್ಷದ ಎಂ.ಎಸ್.ರಘುನಾಥ್ ಈ ಮನೆಯ ಯಜಮಾನ. ಇವರ ತಂದೆ 68 ವರ್ಷದ ಎಂ.ಸತ್ಯನಾರಾಯಣ ಶೆಟ್ಟಿ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಯಿ 60 ವರ್ಷದ ವಿಶಾಲಾಕ್ಷಮ್ಮ, ಪತ್ನಿ 38 ವರ್ಷದ ಎಂ.ಆರ್.ಗಾಯಿತ್ರಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಅಂಕಿತ್ ಅವರನ್ನು ಒಳಗೊಂಡ ಕುಟುಂಬ ಇವರದು. ಮಧುಗಿರಿಯೇ ಇವರ ಮೂಲಸ್ಥಾನವಾಗಿದೆ. ಹಿಂದೂ ಧರ್ಮದವರಾದ […]

ಆರ್ಥಿಕ ಹೊರೆ ಇಲ್ಲದ ರಫಿ

-ಎಚ್.ಎಸ್.ಸಚ್ಚಿತ್

ಆರ್ಥಿಕ ಹೊರೆ ಇಲ್ಲದ ರಫಿ
-ಎಚ್.ಎಸ್.ಸಚ್ಚಿತ್

ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್ ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ. ಹುಣಸೂರು ಪಟ್ಟಣದ ಹಣ್ಣಿನ ವ್ಯಾಪಾರಿ ಮಹಮದ್ ರಫಿ (38) ಕಳೆದ 20 ವರ್ಷದಿಂದಲೂ ಫುಟ್ ಪಾತಿನಲ್ಲಿ ಹಣ್ಣು ವ್ಯಾಪಾರ ಕಾಯಕದಲ್ಲಿ ಸಂಪಾದಿಸಿ ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿರುವ ಮಧ್ಯ ವಯಸ್ಸಿಗ. ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾನೆ. 7ನೇ ತರಗತಿಗೆ ವ್ಯಾಸಂಗ ಮೊಟಕುಗೊಳಿಸಿಕೊಂಡ ರಫಿ, ತನ್ನ ಮಕ್ಕಳನ್ನು ಓದಿಸಬೇಕು ಎಂಬ ಹಂಬಲದಲ್ಲಿದ್ದಾನೆ. ಪುತ್ರ ಮಹಮದ್ ತೋಫಿಕರ್ ಸರ್ಕಾರಿ […]

1 2 3