ಗ್ರಾಮೀಣ ಗ್ರಂಥಾಲಯ ಓದುಗರಿಗೆ

ನೀವೂ ಕೊಡುಗೆ ನೀಡಿ ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ […]

ಕೊಡಗಿನಲ್ಲಿ ಸಮಾಜಮುಖಿ ನಡಿಗೆ

ಕೊಡಗಿನಲ್ಲಿ ಸಮಾಜಮುಖಿ ನಡಿಗೆ

ಸಮಾಜಮುಖಿ ಬಳಗದ ‘ನಡೆದು ನೋಡು ಕರ್ನಾಟಕ’ ಸರಣಿಯ ಮೂರನೆಯ ನಡಿಗೆ ಕೊಡಗು ಪ್ರದೇಶದಲ್ಲಿ ಏಪ್ರಿಲ್ 12 ರಿಂದ 14ರವರೆಗೆ ನಡೆಯಿತು. ಏಪ್ರಿಲ್ 12ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡಿಗೆಗೆ ಚಾಲನೆ ಹಾಗೂ ಸಮಾಜಮುಖಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊಡಗಿನ `ಪ್ರಜಾಸತ್ಯ ದಿನಪತ್ರಿಕೆ’ ಹಾಗೂ ಕೊಡಗು ಪ್ರೆಸ್ ಕ್ಲಬ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ‘ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಪರ್ಯಾಯವಾಗಿ ಅಧ್ಯಯನ ಕಾರ್ಯಕ್ರಮ ಆಯೋಜಿಸಿರುವುದು ತುಂಬಾ ಸಂತೋಷದ […]

ಓದುಗರ ಅಭಿಪ್ರಾಯಗಳು

ನೂರು ಪಟ್ಟು ಗುಣಮಟ್ಟ ಹುಬ್ಬಳ್ಳಿಯ ಸ್ನೇಹಿತನ ಮನೆಯಲ್ಲಿ ‘ಸಮಾಜಮುಖಿ’ ನೋಡಿ ಬಹಳಷ್ಟು ಖುಷಿಯಾಯಿತು. ಪತ್ರಿಕೆಯಲ್ಲಿಯ ಲೇಖನಗಳು ಓದಿಸಿಕೊಂಡು ಹೋದವು. ಪತ್ರಿಕೆಯ ಗುಣಮಟ್ಟ ಇತರೇ ಪತ್ರಿಕೆಗೆಗಿಂತ 100 ಪಟ್ಟು ಹೆಚ್ಚಾಗಿರುವಂತೆ ತೋರಿತು. ಮಾಧ್ಯಮ ಭ್ರಷ್ಟಾಚಾರ ಕುರಿತಾದ ಲೇಖನಗಳು ಪ್ರಸ್ತುತವಾಗಿದ್ದವು. ಮೋದಿ ಕುರಿತಾದ ಬರಹಗಳು ಪತ್ರಿಕೆಯ ಘನತೆಯನ್ನು ಹೆಚ್ಚಿಸಿದ್ದವು. ಪೂರಕವೆಂಬಂತೆ ನಾಮದೇವ ಕಾಗದಗಾರ ಅವರ ವ್ಯಂಗ್ಯಚಿತ್ರಗಳು ಉತ್ತಮವಾಗಿದ್ದವು. -ಪವನ್ ತಹಶೀಲ್ದಾರ ,ಮಲಗಿ. ಮೋದಿ ಚಿತ್ರ ಏಕೆ? ರಘುನಂದನ ಅವರ ಕವಿತೆ ಬಹಳ ಅದ್ಭುತವಾಗಿದೆ. ಆದರೆ ಈ ಕವಿ ಮತ್ತು ನಾಟಕಕಾರ […]

ಕನ್ನಡ ಪತ್ರಿಕೋದ್ಯಮದ ಅನೀತಿ ಪರ್ವದ ಆರಂಭ!

- ಜಾಣಗೆರೆ ವೆಂಕಟರಾಮಯ್ಯ

ಸಮಾಜವನ್ನು ಸುಸ್ಥಿತಿಗೆ ಕರೆದೊಯ್ಯುವ, ಅನ್ಯಾಯ-ಅಕ್ರಮಗಳನ್ನು ಎತ್ತಿ ಹೇಳುವ, ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳನ್ನು ಸದಾ ಎಚ್ಚರಿಸುವ ಮಹತ್ತರ ಹೊಣೆಗಾರಿಕೆಯನ್ನು ಹೊಂದಿದ್ದ ಮಾಧ್ಯಮರಂಗವು ಅಡ್ಡದಾರಿ ಹಿಡಿದ ಅಧ್ವಾನದ ಕತೆ ಹೀಗಿದೆ. ‘ಚಿಂತನಶೀಲ ಸಮಾಜಮುಖಿ’ ಸಂಪಾದಕೀಯಕ್ಕೆ ‘ಮಾಧ್ಯಮ ರಂಗದ ವ್ಯಭಿಚಾರ’ ಎಂಬ ತಲೆಬರಹ ಕೊಟ್ಟಿರುವುದನ್ನು ಓದಿ ರೋಮಾಂಚನಗೊಂಡೆ. ಅದರಲ್ಲಿ ‘ಹಣ ಮಾಡುವುದು ಹೇಗೆ? ಯಶಸ್ಸು ಗಳಿಸುವುದು ಹೇಗೆ?’ ಎಂಬುದನ್ನು ಕುರಿತು ಬೇಕಾದಷ್ಟು ಪುಸ್ತಕಗಳು ಪ್ರಕಟವಾಗಿವೆ. ಆದರೆ ‘ಪ್ರಾಮಾಣಿಕವಾಗಿ ಬದುಕುವುದು ಹೇಗೆ?’ ಎಂಬುದರ ಕುರಿತಂತೆ ಯಾವುದೇ ಕೈಪಿಡಿ ಅಥವಾ ಕೃತಿಗಳು ಪ್ರಕಟವಾಗದಿರುವುದಕ್ಕೆ ವಿಷಾದ ವ್ಯಕ್ತವಾಗಿದೆ. ಇದು […]

ಪತ್ರಿಕೆಯ ಆತ್ಮ ಕೊಲ್ಲುವ ನೈತಿಕ ಭ್ರಷ್ಟಾಚಾರ

- ಜಿ.ಎನ್.ರಂಗನಾಥ ರಾವ್

 ಪತ್ರಿಕೆಯ ಆತ್ಮ ಕೊಲ್ಲುವ ನೈತಿಕ ಭ್ರಷ್ಟಾಚಾರ <p><sub> - ಜಿ.ಎನ್.ರಂಗನಾಥ ರಾವ್ </sub></p>

ಪತ್ರಕರ್ತರೂ ಲೋಕಾಯುಕ್ತ ಕಾಯಿದೆಯ ವ್ಯಾಪ್ತಿಗೊಳಪಡುತ್ತಾರೆ. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಬಂದಿರುವ ಭ್ರಷ್ಟಾಚಾರ ನಿರೋಧ (ಎಸಿಬಿ) ಕಾನೂನಿನ ವ್ಯಾಪ್ತಿಗೂ ಸೇರುತ್ತಾರೆ. ಆದರೆ ಹಿಂದಿನ ಲೋಕಾಯುಕ್ತರಿಗಾಗಲೀ ಅಥವಾ ಈಗಿನ ವ್ಯವಸ್ಥೆಗಾಗಲೀ ಇಂಥ ದೂರು ಹೋಗಿರುವುದು ವರದಿಯಾಗಿಲ್ಲ. ಭ್ರಷ್ಟಾಚಾರಕ್ಕಾಗಿ ಪತ್ರಕರ್ತರಿಗೆ ಶಿಕ್ಷೆಯಾದ ಪ್ರಕರಣಗಳು ಇಲ್ಲವೇ ಇಲ್ಲ! ಪತ್ರಿಕಾ ವೃತ್ತಿಯು ನೇಗಿಲ ಯೋಗಿಯಂಥ ನಿಸ್ವಾರ್ಥ ಸೇವೆಯ ಪತ್ರಿಕಾ ವ್ಯವಸಾಯವಾಗಿದ್ದ ದಿನಗಳಿದ್ದವು. ಅದು ಸ್ವಾತಂತ್ರ್ಯಪೂರ್ವದಲ್ಲಿ. ಸ್ವಾತಂತ್ರ್ಯಾನಂತರ ಪತ್ರಿಕಾ ವ್ಯವಸಾಯವು ಪತ್ರಿಕೋದ್ಯಮವಾಗಿ ಬೆಳೆದದ್ದು ಈಗ ಇತಿಹಾಸ. ಇತ್ತೀಚೆಗಿನ ದಿನಗಳಲ್ಲಂತೂ ಪತ್ರಿಕೋದ್ಯಮ ಸ್ವಾರ್ಥ ಲಾಲಸೆಯಿಂದ, ಭ್ರಷ್ಟಾಚಾರಗಳಿಂದ ನಾರುತ್ತಿದೆ ಎಂಬ […]

ಅಭಿಯಾನ

ಮಾಧ್ಯಮಗಳ ಭ್ರಷ್ಟಾಚಾರ ವಿರೋಧಿಸಿ! ಏಕೆ ಮಾತನಾಡುತ್ತಿಲ್ಲ? ಮಾಧ್ಯಮಗಳಲ್ಲಿ ಭ್ರಷ್ಟಾಚಾರ ಇದೆ. ಹಾಗೆಂದು ಎಲ್ಲರೂ ಭ್ರಷ್ಟರಲ್ಲ. ಪ್ರಮಾಣಿಕರೂ ಇದ್ದಾರೆ. ಆದರೆ ಅವರು ಭ್ರಷ್ಟ ಪತ್ರಕರ್ತರ ಬಗ್ಗೆ ಮಾತನಾಡುವುದಿಲ್ಲ. ನಮಗೇಕೆ ಇವರ ವಿಚಾರ ಎಂದು ಸುಮ್ಮನಾಗುತ್ತಾರೆ. ಭ್ರಷ್ಟ ಪತ್ರಕರ್ತರ ನಿಯಂತ್ರಣಕ್ಕೆ ಯಾವುದೇ ಕಾನೂನಿಲ್ಲ. ಆದಾಯ ತೆರಿಗೆ ಇಲಾಖೆ ಭ್ರಷ್ಟ ಪತ್ರಕರ್ತರ ಮೇಲೆ ದಾಳಿ ಮಾಡಿ ಆದಾಯದ ಮೂಲದ ಬಗ್ಗೆ ತನಿಖೆ ಮಾಡುವುದಿಲ್ಲ. ಕಾನೂನು ರೂಪಿಸುವ ಶಾಸಕಾಂಗ ಪತ್ರಕರ್ತರ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಪತ್ರಕರ್ತರ ಉಸಾಬರಿ ನಮಗೆ ಬೇಡ ಎಂದು ಎಲ್ಲರೂ […]

ಹಳೆಯ ವೈಫಲ್ಯಗಳು ಹೊಸ ಭರವಸೆಗಳು

ಶಶಿಧರ ಭಟ್

ಮುಂದುವರೆದ ಚರ್ಚೆ ದೇಶಪ್ರೇಮ, ದೇಶದ ಭದ್ರತೆಯ ಪ್ರಶ್ನೆಗಳನ್ನು ಇವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಇವು ಭಾವನಾತ್ಮಕ ವಿಚಾರಗಳು. ಈ ಬಗ್ಗೆ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕಷ್ಟ. ಹಾಗೆ ದೇಶ ಎದುರಿಸುತ್ತಿರುವ ಪ್ರಮುಖ ಜ್ವಲಂತ ಸಮಸ್ಯೆಗಳ ಬಗ್ಗೆ ಯೋಚಿಸದಂತೆ ಇವು ಮಾಡುತ್ತವೆ. ಸೈನಿಕರು ಮತ್ತು ದೇಶಪ್ರೇಮದ ಮುಂದೆ ಉಳಿದ ಎಲ್ಲ ವಿಚಾರಗಳು ಮರೆಯಾಗಿಹೋಗುತ್ತವೆ. ಈಗ ಆಗಿರುವುದು ಅದೇ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಜನರ ಮುಂದಿದ್ದ ಪ್ರಶ್ನೆ ನರೇಂದ್ರ ಮೋದಿ ಅವರನ್ನು ಮತ್ತೆ ಯಾಕೆ ಆಯ್ಕೆ ಮಾಡಬೇಕು? ಇನ್ನೊಂದು […]

ಮೋದಿಗೆ ಕೊನೆಯ ನಮಸ್ಕಾರ

-ಎಚ್.ಎ.ನಂಜುಂಡಸ್ವಾಮಿ, ವಕೀಲರು, ಮೈಸೂರು.

ಮುಂದುವರೆದ ಚರ್ಚೆ ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು 2014ರ ಚುನಾವಣೆಯಲ್ಲಿ ದೇಶದ ಜನತೆ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸಿದ್ದರು. ಆ ಸಂದರ್ಭದಲ್ಲಿ ದೇಶದ ಜನರಿಗೆ ಅವರು ಮೂರು ಭರವಸೆಗಳನ್ನು ಕೊಟ್ಟಿದ್ದರು. ಅವುಗಳೆಂದರೆ: 1. ಅಭಿವೃದ್ಧಿ ಭಾರತ ಮಾಡುವುದು. 2. ಸ್ವಿಸ್ ಬ್ಯಾಂಕಿನ ಹಣವನ್ನು ದೇಶಕ್ಕೆ ವಾಪಸ್ಸು ತರಿಸಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಬ್ಯಾಂಕಿನ ಖಾತೆಗೆ ಹಾಕುವುದು. 3. ವರ್ಷವೊಂದಕ್ಕೆ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿ ಯುವಕರಿಗೆ ಕೊಡುವುದು. ಮನಮೋಹನ್ ಸಿಂಗ್ ಅವರ ಕೆಟ್ಟ ಆಡಳಿತದಿಂದ ದಿಕ್ಕು […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ಕೊಡುಗೆ

ಬದುಕು ಕಟ್ಟಿಕೊಳ್ಳಲು, ಬೌದ್ಧಿಕವಾಗಿ ಬೆಳೆಯಲು ಅಗತ್ಯವಾದ ಮಾಹಿತಿ, ವಿಶ್ಲೇಷಣೆ, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಹೊತ್ತು ಬರುತ್ತಿರುವ ‘ಸಮಾಜಮುಖಿ’ ಮಾಸಿಕವನ್ನು ನೀವೆಲ್ಲಾ ಗಮನಿಸಿದ್ದೀರಿ. ಅಂತಃಸತ್ವ ಮತ್ತು ಬಾಹ್ಯ ಸ್ವರೂಪ ಎರಡರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಈ ಪತ್ರಿಕೆಯನ್ನು ನೀವು ಅಷ್ಟೇ ವಾತ್ಸಲ್ಯದಿಂದ ಬರಮಾಡಿಕೊಡಿರುವಿರಿ. ಸಮಾಜಮುಖಿಗೆ ವರ್ಷ ತುಂಬಿದ ಈ ಸಂದರ್ಭದಲ್ಲಿ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳುವ ತವಕ ನಮ್ಮದು. ಈ ನಿಟ್ಟಿನಲ್ಲಿ ಹೀಗೊಂದು ಯೋಜನೆಯನ್ನು ನಿಮ್ಮೆದುರು ಮಂಡಿಸುತ್ತಿದ್ದೇವೆ. ಯೋಜನೆಯ ವಿವರ ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ […]

ನಡೆದು ನೋಡಿದ ಮೇಲುಕೋಟೆ

ನಡೆದು ನೋಡು ಕರ್ನಾಟಕ ಸರಣಿಯ ಎರಡನೆಯ ನಡಿಗೆ ಮೇಲುಕೋಟೆ ಕಡೆಗೆ ಸಾಗಿತು ಫೆಬ್ರವರಿ 8ರ ಮುಂಜಾನೆ. ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ನಡಿಗೆಯ ಉದ್ಘಾಟನಾ ಸಮಾರಂಭ ಏರ್ಪಾಡಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸಮಾಜಮುಖಿಗಳಾಗಿ ಬದುಕಿದ ನಿತ್ಯ ಸಚಿವ ಕೆ.ವಿ.ಶಂಕರೇಗೌಡ, ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಮತ್ತು ಲೇಖಕ ಎಚ್.ಎಲ್.ಕೇಶವಮೂರ್ತಿ ಅವರ ಸ್ಮರಣೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಲೇಖಕ ಪ್ರೊ.ಜಯಪ್ರಕಾಶಗೌಡರು ಮಾತನಾಡಿ ಈ ಮಹಾನೀಯರು ಮಂಡ್ಯಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ರಂಗ ನಿರ್ದೇಶಕ ರಘುನಂದನ […]

ಕೋಚೆ ನೆನಪು

  ಇತ್ತೀಚೆಗೆ ನಿಧನರಾದ ನಿವೃತ್ತ ನ್ಯಾಯಾಧೀಶ, ಸಾಹಿತಿ, ಚಿಂತಕ, ಪ್ರಾಂಜಲ ಮನದ ಕೋ.ಚೆನ್ನಬಸಪ್ಪ ಅವರು ಸಮಾಜಮುಖಿಯ ಹಿತೈಷಿಗಳು, ಖಾಯಂ ಓದುಗರು; ದಿನಾಂಕ 08-12-2017ರಂದು ಅವರು ಬರೆದ ಪತ್ರ ಹೀಗಿತ್ತು: ಸಮಾಜಮುಖಿಯ ಉದ್ದೇಶ, ಸಾಧಿಸಬೇಕಾಗಿರುವ ಗುರಿ ಶ್ಲಾಘನೀಯವಾದವು. ಆ ಗುರಿಯ ಸಿದ್ಧಿಗೆ ಬೇಕಾದ ಸಕಲ ಪರಿಕರಗಳ, ಸಲಕರಣೆಗಳ, ಉಪಕರಣಗಳನ್ನು ಗುರುತಿಸಿದ್ದೀರಿ. ಆದರೆ ಆ ಗುರಿಯನ್ನು ತಲುಪಲು ಬೇಕಾದ ಮುಖ್ಯ ಬೀಗದ ಕೈಯನ್ನು ಹುಡುಕಬೇಕಾಗಿದೆ ಎಂದು ಗ್ರಹಿಸಿದ್ದೀರಿ. ಆ ಬೀಗದ ಕೈ ಯಾವುದು? ಅದೀಗ ಮುಖ್ಯವಾದ ಸಂಗತಿ. ಈ ಹುಡುಕಾಟದಲ್ಲಿ […]

ಪತ್ರಿಕೆಯ ಉದ್ದೇಶವೇ ವಿಫಲವಾದೀತು!

-ಪ್ರೊ. ಶಿವರಾಮಯ್ಯ, ಬೆಂಗಳೂರು.

‘ಅನ್ನದ ಭಾಷೆಯ ಚಿನ್ನದ ಮಾಸಿಕ’ ಎಂಬ ಅಭೀಪ್ಸೆಗೆ ತಕ್ಕಂತೆ ‘ಸಮಾಜಮುಖಿ’ ಪತ್ರಿಕೆ ಒಂದು ವರ್ಷ ಕಳೆದು ಬೆಳೆದದ್ದು ಸಂತೋಷದಾಯಕ. ಫೆಬ್ರವರಿ 2019ರ ಸಂಚಿಕೆಯು ಕರ್ನಾಟಕ ರೈತ ಚಳವಳಿ ಪ್ರಸ್ತುತತೆ ಉಳಿಸಿಕೊಂಡಿದೆಯೆ? ಎಂಬ ಮುಖ್ಯಚರ್ಚೆಯನ್ನು ಕೈಗೆತ್ತಿಕೊಂಡು, ರೈತ ಚಳವಳಿಯ ಆಗು-ಹೋಗುಗಳನ್ನು ಕುರಿತು ಅದರಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಇಂದಿಗೂ ಚಳವಳಿಯ ಭಾಗವಾಗಿರುವ ಕೆಲವರಿಂದ ಬರೆಸಿ ದಾಖಲಿಸಿರುವುದು ಸ್ವಾಗತಾರ್ಹ. ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸುವವರಿಗೆ ಇದೊಂದು ಪಾಠ ಕೈಪಿಡಿಯಾಗಬಹುದು. ಹೀಗೆ ‘ದಲಿತ ಸಂಘರ್ಷ ಸಮಿತಿ’, ಹಾಗೂ ‘ಮಹಿಳಾ ಚಳವಳಿ’ಗಳ ಬಗ್ಗೆಯೂ ದಾಖಲೆಗಳಾಗಬೇಕು. ಈ […]

‘ಷ’ ‘ಶ’ ಸಂದೇಹ ನಿವಾರಿಸಿ

-ಸಿ.ಚಿಕ್ಕತಿಮ್ಮಯ್ಯ, ಹಂದನಕೆರೆ.

ರಂಗನಾಥ ಕಂಟನಕುಂಟೆ ಅವರು ಕನ್ನಡ ಭಾಷಾ ಮಾಧ್ಯಮ ಮತ್ತು ಸರ್ಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ತೆರೆಯುವುದರ ಕುರಿತು ಸಮಾಜಮುಖಿಯಲ್ಲಿ ಮೌಲಿಕವಾದ ಲೇಖನಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ನಾನು ನನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡೆ. ಆದರೆ ಅವರು ಬಳಸುವ ಕೆಲವು ಪದ ಪ್ರಯೋಗಗಳ ಬಗ್ಗೆ ನನಗೆ ಸ್ವಲ್ಪ ಮಟ್ಟಿಗೆ ಗೊಂದಲವಿದೆ. ಲೇಖನದ ಕೊನೆಯ ನಿಮ್ಮ ಅಡಿಟಿಪ್ಪಣಿಯನ್ನು ಗಮನಿಸಿಯೂ ಅನುಮಾನ ಬಗೆಹರಿದಿಲ್ಲ. ಲೇಖಕರು ‘ಷ’ ಬದಲು ‘ಶ’, ‘ವರ್ಗ’ ಬದಲು ‘ವರ್ಗ’, ‘ಕರ್ನಾಟಕ’ ಬದಲು ‘ಕರ್ನಾಟಕ’ ಇತ್ಯಾದಿ ಏಕೆ ಬಳಸುತ್ತಾರೆ? […]

ಕನ್ನಡ ಲಿಪಿಯನ್ನು ತರ್ಕಬದ್ದಗೊಳಿಸುವ ಯತ್ನ

-ರಂಗನಾಥ ಕಂಟನಕುಂಟೆ, ಹೊನ್ನಾವರ.

ಲೇಖಕರ ವಿವರಣೆ : ‘ಸಮಾಜಮುಖಿ’ಯ 2018ರ ಜುಲೈ, ನವೆಂಬರ್ ಮತ್ತು ಡಿಸೆಂಬರ್ ಸಂಚಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಲಿಪಿ ಸುಧಾರಣೆಯ ಭಾಗವಾಗಿ ಕನ್ನಡದಲ್ಲಿ ನಡೆಯುತ್ತಿರುವ ಚಿಂತನೆಗಳನ್ನು ಅನುಸರಿಸುತ್ತ ಕೆಲವು ಮಾರ್ಪಾಟುಗಳನ್ನು ಮಾಡಿಕೊಂಡು ಬರೆಹವನ್ನು ಮಾಡಿದ್ದೆ. ಅವುಗಳಲ್ಲಿ ‘ಷ’ ಬದಲಾಗಿ ‘ಶ’ವನ್ನು, ರ್‘’ ಅರ್ಕಾವೊತ್ತಿಗೆ ಬದಲಾಗಿ ಸೂರ್ಯ, ವರ್ಗ, ವರ್ಣ ಹೀಗೆ ಬಳಸಲಾಗಿತ್ತು. ಇದರ ಬಗೆಗೆ ಹಿರಿಯರೂ, ಪರಿಚಿತರೂ ಮತ್ತು ಕನ್ನಡ ಸಾಹಿತ್ಯದ ಗಂಭೀರ ಓದುಗರೂ ಆದ ಚಿಕ್ಕತಿಮ್ಮಯ್ಯನವರು ಸ್ಪಶ್ಟನೆ ಬಯಸಿದ್ದಾರೆ. ಹಾಗಾಗಿ ಇಲ್ಲಿ ನನ್ನ ಅಭಿಪ್ರಾಯವನ್ನು […]

ಅತ್ಯುತ್ತಮ ಸಂದರ್ಶನ

-ಡಾ.ಎನ್.ಟಿ.ಅನಿಲ್, ಬೆಂಗಳೂರು.

ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಬೆಳೆದ ಪರಿಸರ, ಹವ್ಯಾಸ, ಆಸಕ್ತಿ, ಮನೆಯ ವಾತಾವರಣ, ಬಾಲ್ಯದ ಶಿಕ್ಷಣ, ಅವರು ಕಂಡ ಸಿವಿಲ್ ಸರ್ವಿಸ್ ಪರೀಕ್ಷೆಯ ಕನಸು ಮತ್ತು ನನಸು ಮಾಡಿದ ದಿಟ್ಟ ನಡೆ, ಪೊಲೀಸ್ ಇಲಾಖೆಯ ಸವಾಲುಗಳು, ಅಧಿಕಾರಿ ವರ್ಗದ ಹಾಗೂ ಜನಸಾಮಾನ್ಯರ ಸಹಕಾರದ ಪ್ರಾಮುಖ್ಯ, ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನದ ನುಡಿಗಳು ಅತ್ಯುತ್ತಮ ಸಂದರ್ಶನವಾಗಿ ಮೂಡಿಬಂದಿದೆ. ಜೊತೆಗೆ ಅವರ ತುಂಬು ಕುಟುಂಬದ ಭಾವಚಿತ್ರವನ್ನು ನೋಡಿ ತುಂಬಾ ಸಂತೋಷವಾಯಿತು. ಈ ಅಂಕಣ ನಾಗರಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಅಚ್ಚಳಿಯದೆ ಉಳಿಯುತ್ತದೆ. ದಕ್ಷ ಅಧಿಕಾರಿ […]

ಕರ್ನಾಟಕ ಮತ್ತು ಮಹಾರಾಷ್ಟ್ರ ರೈತ ಚಳವಳಿಗಳ ವೈರುಧ್ಯಗಳು

-ಮುಜಫರ್ ಅಸ್ಸದಿ

ರೈತ ಚಳವಳಿಗಳ ಕಾಲ ಮುಗಿಯಿತೇ? ಅಥವಾ ಅವು ಸೋತುಹೋದವೇ? ಚಳವಳಿಗಳಿಗೆ ಕೆಲವು ಸಂದರ್ಭದಲ್ಲಿ ಹಿನ್ನಡೆಯಾದದ್ದು ಸತ್ಯ. ಅವು ರೈತರ ಆತ್ಮಹತ್ಯೆಯನ್ನು ತಡೆಯಲು ವಿಫಲವಾದದ್ದು ದಿಟ. ಆದರೆ ಚಳವಳಿಗಳ ಕಾಲ ಮುಗಿದಿಲ್ಲ. ರೈತ ಚಳವಳಿಗಳ ಬಗ್ಗೆ ಶಾಸ್ತ್ರೀಯ ಚರ್ಚೆಗಳು ಆರಂಭಗೊಂಡದ್ದು 1990ರ ದಶಕದಲ್ಲಿ. ಅಷ್ಟರ ತನಕ ಇದು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿತ್ತು. ಈ ಚರ್ಚೆಗಳಲ್ಲಿ ಹೆಚ್ಚು ಒತ್ತು ಸಿಗುತ್ತಿದ್ದದ್ದು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಿಕಾಯತ್‍ರವರ ಚಳವಳಿಗಳಿಗೆ. ಕರ್ನಾಟಕ ಮತ್ತು ತಮಿಳುನಾಡು ಇದಕ್ಕೆ ಅಪವಾದಗಳಾಗಿದ್ದವು. ಮಹಾರಾಷ್ಟ್ರ ಚಳವಳಿ ಚರ್ಚೆಯ […]

ನಾಯಕರ ಮೆರವಣಿಗೆಯಲ್ಲಿ ಮರೆಯಾದ ರೈತ!

-ಬಾದಾಮಿ ಭಾಸ್ಕರ ನಾಯಕ

ಕರ್ನಾಟಕದಲ್ಲಿ ಮೊದಲಿಗಿಂತಲೂ ಹೆಚ್ಚು ರೈತಪರ ಸಂಘಟನೆಗಳು ಇವೆ. ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರ ಪಡೆ ಇದೆ. ಆದರೂ ಈ ದಿನಮಾನಗಳಲ್ಲಿ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಹಲವಾರು ಕಾರಣಗಳಿವೆ. ಸಮರ್ಥ ನಾಯಕತ್ವದ ಅಭಾವ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು ಮುಖ್ಯ ಕಾರಣ ಸಮರ್ಥ ನಾಯಕತ್ವದ ಕೊರತೆ. ಇಂದಿನ ರೈತ ಸಂಘಟನೆಗಳ ಜಿಲ್ಲಾಧ್ಯಕ್ಷರು ಕರ್ದರ್ ಅಂಗಿ ತೊಟ್ಟು, ಭುಜದ ಮೇಲೆ ಹಸಿರು ಶಾಲು ಹಾಕಿಕೊಂಡು ವಿಐಪಿ ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಬಯಸುತ್ತಾರೆ. ಅಲ್ಲದೆ ಇವರು ರೈತರ ಸಮಸ್ಯೆಗಳನ್ನು […]

ಇದು ನಿಜವಾದ ಹಕೀಕತ್ತು

-ಹುರುಕಡ್ಲಿ ಶಿವಕುಮಾರ

ರೈತ ಹೋರಾಟ ಇಂದು ನಿನ್ನೆಯದಲ್ಲ; ಹತ್ತನೇ ಶತಮಾನದಲ್ಲೇ ರೈತರ ಬಂಡಾಯ ದಾಖಲಾಗಿದೆ. ಇಷ್ಟು ದೀರ್ಘಕಾಲವೂ ಹೋರಾಟದಿಂದ ನ್ಯಾಯ ಪಡೆಯದ ವರ್ಗವೆಂದರೆ ಅದು ರೈತ ವರ್ಗವೇ ಆಗಿದೆ. ಗುಂಡುಸೂಜಿ, ಚಪ್ಪಲಿಯಿಂದ ಹಿಡಿದು ವಿಮಾನದವರೆಗೆ ಅದನ್ನು ತಯಾರು ಮಾಡಿದ ಕಾರ್ಖಾನೆಯ ಮಾಲೀಕರಿಗೆ ಅದರ ಬೆಲೆ ನಿಗದಿ ಮಾಡುವ ಹಕ್ಕು ಅಧಿಕಾರವಿದೆ. ಆದರೆ ಜೋಳ, ನವಣೆ ಬೆಳೆದುಕೊಡುವ ರೈತನಿಗೆ ಮಾತ್ರ ಅದರ ಬೆಲೆ ನಿಗದಿಮಾಡುವ ಹಕ್ಕು ಅಧಿಕಾರ ಏಕೆ ಇಲ್ಲ? ಇದು ಕಳೆದ ಐವತ್ತು ವರ್ಷಗಳಿಂದ ರೈತ ಹೋರಾಟಗಾರರು ಕೇಳುತ್ತಿರುವ ಪ್ರಶ್ನೆ. […]

ಅದೆಲ್ಲಿ ಮಾಯವಾಗಿದ್ದೀರಿ, ಬನ್ನಿ ನ್ಯಾಯ ಕೊಡಿಸೋಣ

-ವಿರುಪಾಕ್ಷಿ ಕಡ್ಲೆ, ಕಲ್ಲುಕಂಬ

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಯ ಬದಿಯಲ್ಲಿ ಕೈಹೊತ್ತು ಕುಳಿತ ಮಣ್ಣಿನ ಮಕ್ಕಳ ಆಕ್ರಂದನದ ಕೂಗಿದು. ಕಣ್ಣಿದ್ದು ಕುರುಡಾದ ರೈತ ಸಂಘಟನೆಗಳ ಕಥೆ ಇದು. ಈ ಮಣ್ಣಿನಲ್ಲಿ ಹೋರಾಟಗಳಿಗೆ ಎಷ್ಟು ಮಹತ್ವ ಇದೆ ಎನ್ನುವುದಕ್ಕೆ ಗಾಂಧಿ ಉದಾಹರಣೆಯಾಗಿ ನಿಲ್ಲುತ್ತಾರೆ. ಇದರ ಮುಂದುವರಿದ ಭಾಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಶಿಕ್ಷಣ, ಸಂಘಟನೆ, ಹೋರಾಟ ನಮಗೆ ಅಸ್ತ್ರವೆಂದು ಹೇಳಿದ್ದರು. ಇಂತಹ ಅನೇಕರ ಚಿಂತನೆಗಳಿಂದ ಉತ್ತೇಜನಗೊಂಡು ಹುಟ್ಟಿಕೊಂಡ ಅನೇಕ ಸಂಘಟನೆಗಳಲ್ಲಿ ರೈತ ಸಂಘಟನೆ ಕೂಡ ಒಂದು. ಪ್ರಸ್ತುತ ದೇಶವ್ಯಾಪಿ ಚಾಪನ್ನು ಮೂಡಿಸಿರುವ […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. […]