‘ನಮ್ಮ ಮೆಟ್ರೋ’ಗೆ ಪಾಠ ಮತ್ತು ಪ್ರೇರಣೆ!

‘ನಮ್ಮ ಮೆಟ್ರೋ’ಗೆ ಪಾಠ ಮತ್ತು ಪ್ರೇರಣೆ!

ಮೆಟ್ರೋ ಮ್ಯಾನ್ ಎಂದೇ ಗುರುತಿಸಲ್ಪಟ್ಟ ಇ.ಶ್ರೀಧರನ್ ಅವರ ಜೀವನಚರಿತ್ರೆ ಪುಸ್ತಕದ ಶೀರ್ಷಿಕೆ ‘ಕರ್ಮಯೋಗಿ’. ಎಂ.ಎಸ್. ಅಶೋಕನ್ ಅವರು ಮಲಯಾಳಂನಲ್ಲಿ ರಚಿಸಿರುವ ಈ ಕೃತಿಯನ್ನು ರಾಜೇಶ್ ರಾಜಮೋಹನ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಪ್ರತಿಷ್ಠಿತ ಪೆಂಗ್ವಿನ್ ಸಂಸ್ಥೆ ಹೊರತಂದಿರುವ ‘ಕರ್ಮಯೋಗಿ’ ಪುಸ್ತಕದ ಪ್ರತಿಯೊಂದು ಅಧ್ಯಾಯವೂ ಮನನೀಯ. ಇದು ಇ.ಶ್ರೀಧರನ್ ಅವರ ಜೀವನಚರಿತ್ರೆ ಮಾತ್ರವಲ್ಲ; ಭಾರತದ ಮೆಟ್ರೋ ಯೋಜನೆಯ ಅನುಷ್ಠನದ ನೀಳ್ಗಥೆಯೂ ಹೌದು. ಪ್ರಸ್ತುತ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಗೆ ಮೆಟ್ರೋ ರೈಲು ಸೌಲಭ್ಯವನ್ನು ಬಹುಮುಖ್ಯ ಪರಿಹಾರವಾಗಿ ಪರಿಗಣಿಸಲಾಗಿದೆ. ಹಾಗಾಗಿ ಮಹಾನಗರದಲ್ಲಿ […]

ಪರಿವರ್ತನೆಗೆ ಪ್ರೇರಕವಾದ ಬೈಕ್ ಸವಾರಿ

-ಮಂಜುನಾಥ ಡಿ.ಎಸ್.

‘ಎ ರೈಡ್ ಅನ್ ದಿ ರೋಡ್ ಟು ಎಕ್ಸಲೆನ್ಸ್’ ಕೃತಿಯ ಕರ್ತೃ ಡಾ.ಎ.ಬಾಲಮುರುಗನ್ ಪ್ರವಾಸಪ್ರಿಯರು, ಲೇಖಕರು, ಪ್ರೇರಕ ಉಪನ್ಯಾಸಕರು, ಮತ್ತು ಉದ್ದಿಮೆ ಹಾಗು ವ್ಯಕ್ತಿ ಪರಿವರ್ತನೆಯ ತರಬೇತುದಾರರು. ಇವರು ಒಂದು ಸಂಜೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಗೆಳೆಯ ಆರ್ಯ (ಕಥಾನಾಯಕ) ಕರೆ ಮಾಡುತ್ತಾರೆ. ಕಚೇರಿಯಲ್ಲಿ ವಾರ್ಷಿಕ ಮೌಲ್ಯಮಾಪನ ತೃಪ್ತಿದಾಯಕವಾಗಿರದ ಕಾರಣ ತಾನು ಅತ್ಯಂತ ಕಷ್ಟದಲ್ಲಿರುವುದಾಗಿಯೂ, ಮುಂದಿನ ನಡೆಗಾಗಿ ಇವರನ್ನು ಆದಷ್ಟು ಬೇಗ ಕಾಣಬೇಕೆಂದೂ ತಿಳಿಸುತ್ತಾರೆ. ಮರುದಿನ ಭೇಟಿ ನಿಗದಿಯಾಗುತ್ತದೆ. ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ ಕನಿಷ್ಠ ಹತ್ತು […]

ಕಾಲದ ಕನ್ನಡಿಯಲ್ಲಿ ಬದಲಾಗದ ಬಿಂಬಗಳು

-ಎಸ್.ಭೂಮಿಸುತ

ಇವೆರಡೂ ನಾಟಕಗಳು ಕಾಲೇಜುಗಳಲ್ಲಿ ಪ್ರದರ್ಶಿಸಲು, ವಿದ್ಯಾರ್ಥಿಗಳು ಅಭಿನಯಿಸಲು ಅತ್ಯಂತ ಸೂಕ್ತ ಮತ್ತು ಸರಳವಾದವು. ಅಲ್ಲದೆ ತುಂಬಾ ಕಡಿಮೆ ಅವಧಿಯಲ್ಲಿಯೇ ಮುಗಿಸಬಹುದಾದ ನಾಟಕಗಳು. ಕಾಲದ ಕನ್ನಡಿಯಲ್ಲಿ ಬದಲಾಗದ ಬಿಂಬಗಳು. -ಎಸ್.ಭೂಮಿಸುತ ಇತ್ತೀಚೆಗೆ ಬಿಡುಗಡೆಗೊಂಡ ‘ಹತ್ತು ಪತ್ರಗಳು ಮತ್ತು ನಮ್ಮ ಕನಸಿನ ಗೋರಿ’ ಎಂಬ ಎರಡು ಕಾಲೇಜು ನಾಟಕಗಳ ಕೃತಿ ಪ್ರಸ್ತುತ ಸಂದರ್ಭಕ್ಕೆ ತೀರಾ ಹತ್ತಿರವಾಗುವಂತಿದೆ. ಲೇಖಕ ಜಯರಾಮ್ ರಾಯಪುರ ಅವರು, ತಮ್ಮ ಕಾಲೇಜು ದಿನಗಳಲ್ಲಿ, ಅಂದರೆ 1987ರ ಹೊತ್ತಿನಲ್ಲಿ ಇವೆರಡು ನಾಟಕಗಳನ್ನು ರಚಿಸಿದ್ದು, ಇತ್ತೀಚೆಗೆ ಅವನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ […]

ಅಕ್ಕಡಿ ಸಾಲು ಕರುಳು ಮಿಡಿಯುವ ಹೆಣ್ಣು ಬರಹ

-ಡಾ.ಕೆ.ಷರೀಫ

ಹೃದಯಸ್ಪರ್ಶಿ ‘ಅಕ್ಕಡಿಯ ಸಾಲು’ ಸಾಲುಗಳಲ್ಲಿ ಸತ್ಯಗಳನ್ನು ಒತ್ತೊತ್ತಾಗಿ ಬಿತ್ತಲಾಗಿದೆ. ಕಾವ್ಯಾಸಕ್ತರ ಮನಸು ಕದ್ದ ಕಾವ್ಯ ಮಕಾನದಾರರದು. ಹರೆಯದ ಆಸೆ ಆಕಾಂಕ್ಷೆಗಳನ್ನು ನುಚ್ಚು ನೂರಾಗಿಸಿ ನುಚ್ಚಿನ ಗಡಿಗೆಗೆ ಹಾಕಿ ಕುದಿಸುವ ಕಾವ್ಯಚಿತ್ರಣ ಮನ ತಟ್ಟುತ್ತದೆ. -ಡಾ.ಕೆ.ಷರೀಫ ಎ.ಎಸ್.ಮಕಾನದಾರ ಅವರ 3 ದಶಕಗಳ ಕಾವ್ಯವನ್ನು ಸಮಗ್ರವಾಗಿ ಪ್ರಕಟಿಸಿದ ‘ಅಕ್ಕಡಿ ಸಾಲು’ ಸಂಕಲನವು, ಸುಮಾರು 211 ಕವಿತೆಗಳ 240 ಪುಟಗಳ ಪುಸ್ತಕ. ಮಕಾನದಾರ ಅವರ ಕವಿತೆಗಳು ವ್ಯವಸ್ಥೆಯಲ್ಲಿಯ ಕ್ರೂರ ಸತ್ಯಗಳನ್ನು ಮುಖಾಮುಖಿಯಾಗುತ್ತಲೇ ಜೀವರಸದ ಸೆಲೆಗಳಾಗಿ ಹೊರಹೊಮ್ಮುತ್ತವೆ. ಅವರು ಬಹುತ್ವದ ನೆಲೆಗಳನ್ನು ನಂಬಿ […]

ಹೊಸ ಪುಸ್ತಕ

ಬಿ.ಆರ್.ವಾಡಪ್ಪಿ ಲಲಿತ ಪ್ರಬಂಧಗಳ ಸಂಗ್ರಹ ಸಂಪಾದಕರು: ರಂಗನಾಥ ವಾಡಪ್ಪಿ, ಶ್ರೀನಿವಾಸ ವಾಡಪ್ಪಿ ಪುಟ: 372 ಬೆಲೆ: ರೂ. 400 ಮನೋಹರ ಗ್ರಂಥಮಾಲಾ ಲಕ್ಷ್ಮೀಭವನ, ಸುಭಾಶ್ ರಸ್ತೆ, ಧಾರವಾಡ ಪ್ರಥಮ ಮುದ್ರಣ: 2019 ಹಿರಿಯ ಸಾಹಿತಿ ಬಿ.ಆರ್.ವಾಡಪ್ಪಿ ಅವರ ಲಲಿತ ಪ್ರಬಂಧಗಳನ್ನು ಒಳಗೊಂಡ ಕೃತಿ. ಹದಿನೈದು ವರ್ಷಗಳ ಹಿಂದೆ ಅಗಲಿರುವ ವಾಡಪ್ಪಿ ಅವರ ಬರಹಗಳು ಒಟ್ಟಾಗಿ ಲಭ್ಯವಿಲ್ಲದ ಸಂದರ್ಭ, ಅವರ ಮಕ್ಕಳು ಈ ಕೃತಿಯನ್ನು ಸಂಪಾದಿಸಿದ್ದಾರೆ. ಬಿ.ಆರ್. ವಾಡಪ್ಪಿ ಅವರ ಓದುಗಬಳಗಕ್ಕೆ ವಾಡಪ್ಪಿ ಹರಟೆಯ ರುಚಿಯನ್ನು ಮತ್ತೆ ನೀಡಬಲ್ಲ […]

ಹೋರಾಟಗಾರ್ತಿ

ಕನ್ನಡಕ್ಕೆ: ಪ್ರಕಾಶ ಪರ್ವತೀಕರ

ಮರಾಠಿ ಮೂಲ: ಸರ್ವೋತ್ತಮ ಸಾತಾಳಕರ ಸರ್ವೋತ್ತಮ ಸಾತಾಳಕರ ಥರ್ಮಲ್ ಪಾವರ್ ವಿಭಾಗದಲ್ಲಿ ಎಂ.ಇ. ಮಾಡಿರುವ ಸರ್ವೋತ್ತಮ ಸಾತಾಳಕರ ಅವರು ಕಲಬುರ್ಗಿಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇವರ ಮೂರು ಕಥಾ ಸಂಗ್ರಹಗಳು, ಒಂದು ಕಾದಂಬರಿ ಹಾಗೂ ವಿವಿಧ ವಿಷಯಗಳ ಲೇಖನಗಳು ಮರಾಠಿಯಲ್ಲಿ ಪ್ರಕಟಗೊಂಡಿವೆ. ಅಲ್ಲದೆ, ಸೃಜನಾತ್ಮಕ ಸಾಹಿತ್ಯಕ್ಕೆ ಮೀಸಲಾದ ‘ಭಾವ ಅನುಬಂಧ’ ಎಂಬ ಮರಾಠಿ ತ್ರೈಮಾಸಿಕದ ಕಾರ್ಯಕಾರಿ ಸಂಪಾದಕರಾಗಿದ್ದಾರೆ. ಪ್ರಕಾಶ ಪರ್ವತೀಕರ ಅನುವಾದಕರು ಮೂಲತಃ ಕರ್ನಾಟಕದ ವಿಜಯಪುರದವರು; ವೃತ್ತಿಯಲ್ಲಿ ಸಿವಿಲ್ ಇಂಜನೀಯರ್. ತಮಿಳುನಾಡಿನ ತಿರುಪೂರಿನಲ್ಲಿ ತಮ್ಮದೇ ಆದ ಆರ್ಕಿಟೆಕ್ಟ್ […]

ದುರಂತನಾಯಕನಾದ ’ಮಹಾನಾಯಕ’ನ ಕಥೆ

- ಎನ್.ಸಂಧ್ಯಾರಾಣಿ

 ದುರಂತನಾಯಕನಾದ ’ಮಹಾನಾಯಕ’ನ ಕಥೆ <p><sub> - ಎನ್.ಸಂಧ್ಯಾರಾಣಿ </sub></p>

ಈ ಪುಸ್ತಕದ ಮಹತ್ವ ಇರುವುದು ಇದು ಕೇವಲ ಎನ್ಟಿಆರ್ ಕತೆಯನ್ನು ಮಾತ್ರ ಹೇಳುವುದಿಲ್ಲ ಎನ್ನುವುದರಲ್ಲಿ. ಇದು ಸರಿಸುಮಾರು 40-45 ವರ್ಷಗಳ ತೆಲುಗು ಚಿತ್ರರಂಗದ ಕತೆಯನ್ನು, ಕಾಂಗ್ರೆಸ್ಸೇತರ ಪಕ್ಷಗಳು ಒಂದಾದ ನ್ಯಾಶನಲ್ ಫ್ರಂಟ್ ಕಥೆಯನ್ನು, ಸಮರ್ಥವಾದ ಪ್ರಾಂತೀಯ ಪಕ್ಷವೊಂದು ಹೇಗೆ ತನ್ನ ಮತ್ತು ತನ್ನ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನೂ ಹೇಳುತ್ತದೆ. ’ನಮೋ ವೆಂಕಟೇಶ, ನಮೋ ತಿರುಮಲೇಶ…’ -ಊರಾಚೆಯ ಟೂರಿಂಗ್ ಟಾಕೀಸಿನಿಂದ ಕೇಳಿಬರುತ್ತಿದ್ದ ಈ ಹಾಡು ಮಾಯಾಬಜಾರ್ ತೆರೆಸರಿಸಲು ಹೊಡೆಯುತ್ತಿದ್ದ ಥರ್ಡ್ ಬೆಲ್! ಆ ಹಾಡಷ್ಟೇ ಅಲ್ಲ, ತೆಲುಗಿನ […]

ಸಂಚಾರದಟ್ಟಣೆ ನಿರ್ವಹಣೆ ಐಪಿಎಸ್ ಆಧಿಕಾರಿಯ ನಿರೂಪಣೆ

- ಶರೀಫ್ ಕಾಡುಮಠ

ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿ ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ ಮಾಡಬಹುದಾದ ಯೋಜನೆಗಳ ಕುರಿತು ದೂರದೃಷ್ಟಿಯಿಂದ ಕೂಡಿದ ಸಲಹೆಗಳು ಡಾ.ಎಂ.ಎ.ಸಲೀಂ ಅವರ ಈ ಕೃತಿಯಲ್ಲಿವೆ. ಈ ಕ್ರಮಗಳನ್ನು ಒಂದಕ್ಕೊಂದು ಪೂರಕವಾಗಿ ಬಳಸಿಕೊಳ್ಳುವುದರಿಂದ ಉತ್ತಮ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಬಹುದಾಗಿದೆ. ಸಂಚಾರ ದಟ್ಟಣೆಯ ಕುರಿತಂತೆ ಸಮಗ್ರ ಮಾಹಿತಿಯ ಕೃತಿಗಳು ವಿರಳವಾಗಿರುವ ಹೊತ್ತಿನಲ್ಲಿ ಹೊಸದೊಂದು ಪುಸ್ತಕ ನಮ್ಮ ಮುಂದಿದೆ. ಹಲವು ವರ್ಷಗಳಿಂದ ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಆಸಕ್ತಿಯಿಂದ ಅಧ್ಯಯನ ನಡೆಸುತ್ತಲೇ ಇರುವ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರ ಹೊಸ ಕೃತಿ ‘ಟ್ರಾಫಿಕ್ […]

ಹೊಸ ಪುಸ್ತಕ

ನೈಮಿತ್ತಿಕ ಎನ್.ಬೋರಲಿಂಗಯ್ಯ ಪುಟ: 104, ಬೆಲೆ: ರೂ.90 ದಾರಿದೀಪ ಪ್ರಕಾಶನ #44, 8ನೇ ಮುಖ್ಯರಸ್ತೆ, 12ನೇ ಕ್ರಾಸ್, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತೀಪುರಂ, ಮೈಸೂರು 570009 ಪ್ರಥಮ ಮುದ್ರಣ: 2019 ನವೋದಯ ಕವಿ ಎಂ.ಗೋಪಾಲಕೃಷ್ಣ ಅಡಿಗರ ಕೆಲವು ಪ್ರಸಿದ್ಧ ಕವಿತೆಗಳ ಕುರಿತ ವಿಮರ್ಶಾ ಕೃತಿಯಿದು. ಪ್ರಾರ್ಥನೆ, ಕೂಪಮಂಡೂಕ, ಕೆಂದಾವರೆ ಮುಂತಾದ ಪ್ರಮುಖ ಕವಿತೆಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ. ಅಡಿಗರ ಕಾವ್ಯವನ್ನು ಮತ್ತೆ ಮತ್ತೆ ವಿಮರ್ಶೆಗೊಡ್ಡುವ ಪ್ರಕ್ರಿಯೆಯ ಸಾಲಿನಲ್ಲಿ ಈ ಕೃತಿಯನ್ನು ಪರಿಗಣಿಸಬಹುದು. ಹೊನ್ನಿಹಳ್ಳಿ (ಮಣ್ಣಿನ ಮೂರು ನೀಳ್ಗತೆಗಳು) […]

ಅಂತರ್ಜಾಲದ ಅಪಾಯಗಳೂ ಆಪತ್ತುಗಳೂ

ವಂದಿತಾ ದುಬೆ

ವಂದಿತಾ ದುಬೆ ಮನಶ್ಶಾಸ್ತ್ರ ಚಿಕಿತ್ಸಕರಾಗಿದ್ದು 1995ರಲ್ಲಿ ಮುಂಬಯಿಯ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ಎಂಎ ಪದವಿ ಮಾಡಿದಾಗಿನಿಂದಲೂ ಮಕ್ಕಳು ಮತ್ತು ಕುಟುಂಬಗಳ ನಡುವೆ ತಮ್ಮ ಕಾರ್ಯ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. 2006ರಲ್ಲಿ ಅಮೆರಿಕದಲ್ಲಿ ಮನಶ್ಶಾಸ್ತ್ರ ಚಿಕಿತ್ಸೆಯ ಡಾಕ್ಟರೇಟ್ ಪಡೆದಿದ್ದಾರೆ. ಮಕ್ಕಳು ಎದುರಿಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿರುವ ವಂದಿತಾ ದುಬೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ಅಮೆರಿಕ ಮತ್ತು ಭಾರತದಲ್ಲಿ ಮಾನಸಿಕ ಚಿಕಿತ್ಸೆ ನೀಡುವಲ್ಲಿ ನಿರತರಾಗಿರುವ ವಂದಿತಾ ದುಬೆ ಅನೇಕ ಶಾಲೆಗಳಲ್ಲಿ ತಮ್ಮ […]

ಯಡೂರು ಮಹಾಬಲ ಅವರ ನಿಗೂಢ ಟಿಬೆಟ್

ಡಾ.ರಾಜೇಗೌಡ ಹೊಸಹಳ್ಳಿ

ಟಿಬೆಟ್ ಹಾಗೂ ಅದರ ಭಾಗದ ಇತಿಹಾಸವನ್ನು ಲೇಖಕರು ಅನೇಕ ಸಮರ್ಥರ ಬರವಣಿಗೆಗಳನ್ನು ಕ್ರೂಢೀಕರಿಸಿ ನಮ್ಮ ಮುಂದಿಡುತ್ತಾರೆ.ಅದೇ ರೀತಿ ಅರುಣಾಚಲ ಭಾರತಕ್ಕೆ ಸೇರಿದ ವಿಚಾರವನ್ನು ವಿವರಿಸುತ್ತಾರೆ. ಲೇಖಕರು ಈಶಾನ್ಯ ರಾಜ್ಯಗಳಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಲೋಹಿಯಾ, ಅರುಣಾಚಲ, ಕ್ವಿಟ್ ಇಂಡಿಯಾ, ದೋಕ್ಲಾ -ಇಂಥವು ಕುರಿತು ಸಾವಿರಾರು ಪುಟಗಳ ಒಳಚರಿತ್ರೆಗಳನ್ನು ಬಗೆದು ನಮ್ಮ ಮುಂದಿಟ್ಟಿದ್ದಾರೆ. ಇಂಥದೇ ಮತ್ತೊಂದು ಕೃತಿ 533 ಪುಟಗಳ `ನಿಗೂಢ ಟಿಬೆಟ್’. `ಟಿಬೆಟನ್ನು ಭೂಮಿಯ ನೆತ್ತಿಭಾಗ ಅಥವಾ ಮೇಲ್ಛಾವಣೆ’ ಎಂದು ವಿವರಿಸುತ್ತಾ ಅದೊಂದು ಕೇವಲ 20 ಅಂಗುಲ ಮಳೆ […]

ತಾಯಿ ಅಂತಃಕರಣದ ಕಾಡು ಕನಸಿನ ಬೀಡಿಗೆ

-ಈಶ್ವರ ಹತ್ತಿ

ಕಾದಂಬರಿಯ ಉದ್ದಕ್ಕೂ ಕರದಳ್ಳಿಯವರು ಎಲ್ಲಿಯೂ ತಮ್ಮ ಪ್ರೌಢಿಮೆಯನ್ನು ಪ್ರದರ್ಶಿಸುವುದಕ್ಕೆ ಹೋಗಿಲ್ಲ. ಅತ್ಯಂತ ಸರಳ, ಮುದ್ದಿನ ಭಾಷೆಯಲ್ಲೇ ಘಟನಾವಳಿಗಳನ್ನು ಕಟ್ಟಿಕೊಡುತ್ತಾರೆ. ಮಕ್ಕಳು ಮತ್ತು ಕಾಡು ತಾಯಿಯ ಸಂವಾದಗಳು, ತಾಯಿ-ಮಕ್ಕಳ ಮಾತುಕತೆಗಳಂತಿವೆ. ಲೇಖಕ ಓರ್ವ ತಾಯಿಯಾಗಿ, ಮಕ್ಕಳಿಗೆ ಹೇಳುವುದಿದೆಯಲ್ಲ, ಅದು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾದ ಜವಾಬ್ದಾರಿ. ಕೃತಿಕಾರ ಸ್ವತಃ ‘ತಾಯಿ’ ಇಲ್ಲವೇ ‘ಆಯಿ’ ಆಗದ ಹೊರತು ಅದು ಸಿದ್ಧಿಸದು. ಶಹಪೂರದ ಗೆಳೆಯರು ಪ್ರೀತಿಯಿಂದ ಪುಸ್ತಕವೊಂದನ್ನು ಕಳಿಸಿದ್ದಾರೆ. ಪುಸ್ತಕದ ಜೊತೆಗೆ ಸಣ್ಣ ಕಾಗದವನ್ನು ಇಡಲು ಮರೆತಿರಲಿಲ್ಲ. ‘ಕೇವಲ ಎರಡು ತಾಸುಗಳಲ್ಲಿ ಓದಿ […]

ಓದಿನ ಹಾದಿಗೆ ಸ್ಫೂರ್ತಿ ಈ ‘ಅಬ್ಬೆ’

- ಗಣಪತಿ ಶಿವರಾಮ ಭಟ್ಟ

ಆ ಊರಿನ ಬಹುತೇಕರು ಅಬ್ಬೆ ಎಂದು ಕರೆಯುತ್ತಾರೆ. ಅವರ ಪಕ್ಕದ ಮನೆಯವನಾದ ನನಗೆ ತಿಳಿವಳಿಕೆ ಬಂದಾಗಿನಿಂದ ನಾನು ಕೂಡ ಅವರನ್ನು ಹಾಗೆಯೇ ಕರೆಯುತ್ತಾ ಬಂದಿದ್ದೇನೆ. 82ರ ಇಳಿವಯಸ್ಸಿನಲ್ಲಿಯೂ ಪುಸ್ತಕಪ್ರೀತಿ ಹೊಂದಿರುವ ಉತ್ತರಕನ್ನಡ ಜಿಲ್ಲೆಯ, ಯಲ್ಲಾಪುರ ತಾಲೂಕಿನ, ಗಿಡಗಾರಿ ಎಂಬ ಕುಗ್ರಾಮದ ಗಾಯತ್ರಿ ವಿಶ್ವನಾಥ ಭಟ್ಟ ಒಬ್ಬ ಅಕ್ಷರದಾಹಿ. ಓದುವಿಕೆಯ ಸುಖವನ್ನು ಅರಿತು ಪುಸ್ತಕದ ಜತೆ ನಂಟು ಬೆಳೆಸಿಕೊಂಡವರು. ಓದಿನ ಹಾದಿಯಲ್ಲಿ ಅಬ್ಬೆ ನಮಗೆಲ್ಲರಿಗೂ ಸ್ಫೂರ್ತಿ ಮತ್ತು ಮಾದರಿ. ಇದು ಅಬ್ಬೆ ಜತೆಗಿನ ಮಾತುಕತೆ. ಅಬ್ಬೆ ನಮಸ್ಕಾರ, ನೀವು […]

ಇತಿಹಾಸ ಸಂಶೋಧನೆಗೆ ಬೇಕಿದೆ ಹೊಸ ದೃಷ್ಟಿಕೋನ

- ಲಕ್ಷ್ಮೀಶ್ ಸೋಂದಾ

ಸಂಶೋಧನೆಯಲ್ಲಿ ವೈಜ್ಞಾನಿಕ ಸಂಶೋಧನೆ, ಕಲಾತ್ಮಕ ಸಂಶೋಧನೆ, ಮತ್ತು ಐತಿಹಾಸಿಕ ಸಂಶೋಧನೆಗಳೆಂಬ ಮೂರು ಪ್ರಮುಖ ವಿಭಾಗಗಳಿವೆ. ಪ್ರಸ್ತುತ ಲೇಖನ ಐತಿಹಾಸಿಕ ಸಂಶೋಧನೆಗೆ ಸಂಬಂಧಿಸಿದೆ. ಸಂಶೋಧನೆ ಎಂದರೆ ಹೊಸತೊಂದರ ಕ್ರಮಬದ್ಧ ಹುಡುಕಾಟ ಅಥವಾ ಮುಕ್ತ ಮನಸ್ಸಿನ ಶೋಧನೆ, ಹೊಸ ಸಿದ್ಧಾಂತದ ಅಭಿವೃದ್ಧಿ, ಹೀಗೆ ವಿಭಿನ್ನ ವ್ಯಾಖ್ಯಾನವನ್ನು ಸಂಶೋಧನೆಗೆ ಸಂಬಂಧಿಸಿದಂತೆ ನೀಡಬಹುದು. 19ನೇ ಶತಮಾನದ ದ್ವಿತೀಯಾರ್ಧದಿಂದ ಭಾರತದಲ್ಲಿ ಪ್ರಾರಂಭವಾದ ಈ ವೈಜ್ಞಾನಿಕ ಇತಿಹಾಸ ಸಂಶೋಧನೆ ಅಥವಾ ಅಧ್ಯಯನ ಕ್ರಮ, ಅಲ್ಲಿಂದ ಇಲ್ಲಿಯವರೆಗೂ ಒಂದೇ ದೃಷ್ಟಿಯಲ್ಲಿ ನಡೆದುಬರುತ್ತಿದೆ. ‘ಭಾರತದ ಇತಿಹಾಸ’ ಎಂಬ ಶೀರ್ಷಿಕೆಯಡಿ […]

ಹೊಸ ಪುಸ್ತಕ

ಸ್ಪ್ಯಾನಿಶ್ ಪ್ರೊವಬ್ರ್ಸ್ ಅನುವಾದಕರು: ರವಿ ಹಂಜ್ ಪುಟ: 80+4, ಬೆಲೆ: ರೂ.80 ಪ್ರಥಮ ಮುದ್ರಣ: 2019 ರೀಡ್‍ಫ್ರೆಶ್ #1163, 26ನೇ ‘ಎ’ 41ನೇ ಅಡ್ಡರಸ್ತೆ ಜಯನಗರ 9ನೇ ಬ್ಲಾಕ್ ಬೆಂಗಳೂರು. 560069 ಸ್ಪ್ಯಾನಿಶ್ ಗಾದೆಗಳ ಇಂಗ್ಲಿಷ್ ಅನುವಾದವಿದು. ರಂಗಸ್ವಾಮಿ ಮೂಕನಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದ ಈ ಕೃತಿಯನ್ನು ರವಿ ಹಂಜ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಸ್ಪ್ಯಾನಿಶ್ ಭಾಷೆಯ ಪ್ರಸಿದ್ಧ ಗಾದೆಗಳನ್ನು ಸಂಗ್ರಹಿಸಿ ಅವುಗಳ ಒಳಾರ್ಥವನ್ನೂ ಇಲ್ಲಿ ನೀಡಲಾಗಿದೆ. ಅಲ್ಲದೆ ಸ್ಪ್ಯಾನಿಶ್ ಭಾಷೆಯಲ್ಲಿಯೇ ಗಾದೆಗ¼ನ್ನು ನೀಡಿ ಅವುಗಳ ಉಚ್ಛಾರದ ಕ್ರಮಗಳನ್ನೂ ಕೊಡಲಾಗಿದೆ. […]

ಬೆಂಕಿಯಿಂದ ಹೊರಬಂದ ಬರಸಿಡಿಲು (ಪರಶುರಾಮನ ಗಾಥೆಯನ್ನು ಅರ್ಥೈಸುವ ನಿಟ್ಟಿನಲ್ಲಿ)

ಹೊ.ಮ.ಮಂಜುನಾಥ

 ಬೆಂಕಿಯಿಂದ ಹೊರಬಂದ ಬರಸಿಡಿಲು (ಪರಶುರಾಮನ ಗಾಥೆಯನ್ನು ಅರ್ಥೈಸುವ ನಿಟ್ಟಿನಲ್ಲಿ) <p><sub> ಹೊ.ಮ.ಮಂಜುನಾಥ </sub></p>

“ಭಾರತದಂತಹ ಸಂಸ್ಕೃತಿಯಲ್ಲಿ, ಭೂತವು ಹಿಂದೆ ಸರಿಯುವುದಿಲ್ಲ. ಅದು ವರ್ತಮಾನಕ್ಕೆ ಬೇರೆಬೇರೆ ಚೌಕಟ್ಟುಗಳನ್ನು ಅಥವಾ ವ್ಯಂಗ್ಯಗಳನ್ನು ನೀಡುತ್ತಾ ಹೋಗುತ್ತದೆ ಅಥವಾ ನಮಗೆ ಹಾಗೆನ್ನಿಸುತ್ತದೆ” -ಎ.ಕೆ.ರಾಮಾನುಜನ್ ಪ್ರಾರಂಭಿಕ ಪುರಾಣ ಹಾಗೂ ದಂತಕಥೆಗಳು ಜನಾಂಗವೊಂದರ ಅಮೂರ್ತದ್ರವ್ಯದ ಮೇಲೆ ಕಟ್ಟಲಾದ ಕಲಾಕೃತಿಗಳು. ಅವು ಭಾವಗಮ್ಯ ತಿಳಿವು ಹಾಗೂ ತಾರ್ಕಿಕ ಅರಿವುಗಳ ನಡುವಿನ ಬಿಂದುವಿನ ಹಿನ್ನೆಲೆಯಲ್ಲಿ ಕಾಲ ದೇಶಗಳನ್ನು ಮೀರಿ ಅಂಟಿಕೊಂಡಿರಬಲ್ಲ ಪ್ರತಿಮೆಗಳನ್ನು, ರೂಪಕಗಳನ್ನು ಸೃಷ್ಟಿಸುತ್ತವೆ. ಹಾಗೆಂದೇ, ಜನಾಂಗದ ಸಾಮಾಜಿಕ-ಸಾಂಸ್ಕೃತಿಕ ಜೀವನದ ಅನೇಕ ಮುಖಗಳನ್ನು ಪುರಾಣಗಳು ಮೈಗೂಡಿಸಿಕೊಂಡಿರುತ್ತವೆ. ಒಂದು ಸಮುದಾಯ ಅಥವಾ ರಾಷ್ಟ್ರವು ಕಾಲದಲ್ಲಿ […]

ವಸಾಹತುಶಾಹಿ ಸ್ವರೂಪ ಅರ್ಥೈಸುವ ಕೃತಿ

- ಪ್ರತಿವಿಂಧ್ಯ

ಇಂತಹ ಒಂದು ಕಥನವನ್ನು ರಚಿಸಲು ಇಂಗ್ಲೀಷ್, ಹಿಂದೂಸ್ತಾನಿ ಮತ್ತಿತರ ಭಾಷೆಗಳಲ್ಲಿನ ಹಲವಾರು ಅಪರೂಪದ ಆಕರಗಳನ್ನು ವಿಶದವಾಗಿ ಅಭ್ಯಸಿಸಿದ್ದಾರೆ. ಎಂದಿನಂತೆ ಬರವಣಿಗೆಯ ಶೈಲಿ ಓದುಗನ ಆಸಕ್ತಿ ಮತ್ತು ಕುತೂಹಲಗಳನ್ನು ಉಳಿಸಿಕೊಳ್ಳುತ್ತ ಹೋಗುತ್ತದೆ. ಭಾರತದ ಆಧುನಿಕ ಇತಿಹಾಸದ ಬಗ್ಗೆ ಆಸಕ್ತ ಓದುಗರೆಲ್ಲರೂ ಗಮನಿಸಿಲೇಬೇಕಾಗಿರುವ ಕೃತಿಯಿದು. ವಿಲಿಯಮ್ ಡಾಲರಿಂಪಲ್ ನಮ್ಮ ಕಾಲದ ಅತ್ಯಂತ ಜನಪ್ರಿಯ ಇತಿಹಾಸಕಾರರಲ್ಲೊಬ್ಬರು. ವಸಾಹತುಶಾಹಿ ಯು ಭಾರತಕ್ಕೆ ಕಾಲಿಡುತ್ತಿದ್ದ 18 ಮತ್ತು 19ನೆಯ ಶತಮಾನಗಳ ಇತಿಹಾಸಗಳ ಬಗ್ಗೆ ಹಲವಾರು ಮೌಲಿಕ ಕೃತಿಗಳನ್ನು ರಚಿಸಿರುವ ಡಾಲರಿಂಪಲ್ ಒಂದು ರೀತಿಯಲ್ಲಿ ಅಸಾಂಪ್ರದಾಯಿಕ […]

ಹೊಸ ಪುಸ್ತಕ

ಹಳತು ಹೊನ್ನು ಸಂಪಾದಕರು: ಡಾ. ಮನು ಬಳಿಗಾರ್, ಡಾ. ಪದ್ಮರಾಜ ದಂಡಾವತಿ ಪುಟ: 276+20 ಬೆಲೆ: ರೂ.210 ಪ್ರಥಮ ಮುದ್ರಣ: 2019 ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು. 560018 ಇದು ಪ್ರಥಮ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಗ್ರಹ. ನಾಡಿನ ಹಲವು ಪ್ರಮುಖ ವಿದ್ವಾಂಸರು ಮಂಡಿಸಿದ ಪ್ರಬಂಧಗಳ ಬರಹ ರೂಪವನ್ನು ಇಲ್ಲಿ ಕಾಣಲು ಸಾಧ್ಯ. ಪ್ರಸಿದ್ಧ ಇತಿಹಾಸಕಾರ ಷ. ಶೆಟ್ಟರ್ ಅವರ ಅಧ್ಯಕ್ಷ ಭಾಷಣ, ಪ್ರೊ. ಹಂಪ […]

ಅಮೆಜಾನ್ ಮಳೆಕಾಡಿಗೆ ಅಗ್ನಿಪರೀಕ್ಷೆ

ಟಿ.ಆರ್.ಅನಂತರಾಮು

ಭೂ ಇತಿಹಾಸದಲ್ಲಿ 560 ಲಕ್ಷ ಮತ್ತು 340 ಲಕ್ಷ ವರ್ಷಗಳ ನಡುವಿನ ಅವಧಿಯಲ್ಲಿ ಹುಟ್ಟಿದೆ ಅಮೆಜಾನ್ ಕಾಡು. ಹಿಮಯುಗವನ್ನು ಎದುರಿಸಿ ಎದ್ದು ನಿಂತ ಕಾಡಂತೆ ಇದು. ನಮ್ಮ ಭೂಮಿಯ ಮೇಲಿನ ಶೇ.20 ಭಾಗ ಆಕ್ಸಿಜನ್‍ಗೆ  ಅಮೆಜಾನ್ ಕಾಡಿನ ಕೊಡುಗೆ ಇದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ. ಆ ಲೆಕ್ಕದಲ್ಲಿ ಭೂಮಿಯ ಇಡೀ ಜೀವಿ ಸಂಕುಲವೇ ಅಮೆಜಾನ್ಕಾಡಿಗೆ ಋಣಿ. ಅದಕ್ಕೇ ಅಮೆಜಾನ್ ಮಳೆಕಾಡಿಗೆ `ಭೂಮಿಯ ಶ್ವಾಸಕೋಶ’ ಎಂಬ ಬಿರುದು. ಇದೇ ಕಾರಣಕ್ಕೆ, ಅಲ್ಲಿ ಬೆಂಕಿಬಿದ್ದರೆ ಜಗತ್ತೇ ಬೆಚ್ಚಿಬೀಳುತ್ತದೆ. ಅಮೆಜಾನ್ ಕಾಡಿಗೆ ತಗುಲಿದ ಬೆಂಕಿಯ ಕಾರಣ, ರಾಜಕಾರಣ, ಜಾಗತಿಕ […]

‘ಬೇಗಂಪುರ’

ಬಲಬೀರ್ ಮಾಧೋಪುರಿ

 ‘ಬೇಗಂಪುರ’ <p><sub> ಬಲಬೀರ್ ಮಾಧೋಪುರಿ </sub></p>

ಸಂತಕವಿ ಗುರು ರವಿದಾಸರ ಸಮತೆ ಕನಸಿನ ನಾಡು ‘ಬೇಗಂಪುರ’ ಹದಿನಾಲ್ಕನೇ ಶತಮಾನದ ಸಂತ ಕವಿ ಗುರು ರವಿದಾಸರು ಸಮಾಜದ ಎಲ್ಲ ವರ್ಗದ ಜನರೂ ಮೇಲು ಕೀಳಿಲ್ಲದೆ ಬಾಳಬಲ್ಲಂಥ ಸಮಸಮಾಜದ ಕನಸನ್ನು ಕಂಡರು. ಅವರು ಅಂತಹ ಆದರ್ಶ ಸಮಾಜವನ್ನು ‘ಬೇಗಂಪುರ’ ಎಂಬ ಹೆಸರಿನಿಂದ ಕರೆದರು. ‘ಬೇಗಂಪುರ’ ಎಂದರೆ ನೋವಿಲ್ಲದ ನೆಲ. ಗುರು ರವಿದಾಸರು 16 ರಾಗಗಳಲ್ಲಿ ಸಂಯೋಜಿದ 40 ಕಂದಗಳು ‘ಗುರುಗ್ರಂಥ ಸಾಹಿಬ್’ನ ಭಾಗವಾಗಿವೆ. ಅದರ ಹೊರತಾಗಿಯೂ ದೇವ ಹಾಗೂ ನಿರ್ಗುಣ ತತ್ವಗಳ ಕುರಿತು ಅವರು ಬರೆದ ಅನೇಕ ಪದ್ಯಗಳು […]

1 2 3 4