ತೆರೆಗಳು

- ಪಿ. ಲಂಕೇಶ್

 ತೆರೆಗಳು <p><sub> - ಪಿ. ಲಂಕೇಶ್ </sub></p>

ಟಿಪ್ಪಣಿ ಈ ನಾಟಕದಲ್ಲಿ ಹೆಚ್ಚು ನಿರ್ದೇಶನಗಳನ್ನು ಸೂಚಿಸಿಲ್ಲ. ಯಾಕೆಂದರೆ ನಿರ್ದೇಶಕರು ಪಾತ್ರಗಳ, ಸಂಭಾಷಣೆಯ ಕಾವಿಗೆ ತಕ್ಕಂತೆ ತಮ್ಮ ಕ್ರಿಯಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವಕಾಶವಿರಬೇಕು. ಆದರೆ ಕೆಲವು ಸಾಮಾನ್ಯ ಸೂಚನೆಗಳನ್ನು ಕೊಡಬಹುದು. ತೆರೆಯೆದ್ದೊಡನೆ ರಂಗದ ಮೇಲೆ ಹೆಚ್ಚುಕಮ್ಮಿ ಏನೂ ಇರುವುದಿಲ್ಲ. “ವ್ಯಕ್ತಿ”ಯೊಬ್ಬ ಮಧ್ಯೆ ಇರುತ್ತಾನೆ. ಆತ ಓದುತ್ತಿರಬಹುದು, ಹಣ ಏಣಿಸುತ್ತಿರಬಹುದು. ಅವನ ಮೇಲೆ ಬೆಳಕಿರುತ್ತದೆ. ಇತರ ಸ್ಪಾಟ್‍ಗಳನ್ನು ಉಪಯೋಗಿಸತೊಡಗಿದಂತೆ “ಮೂವರು” ಗೋಚರಿಸುತ್ತಾರೆ. ಕ್ರಮೇಣ ಒಂದು ಟೇಬಲ್ ಮತ್ತು ಸ್ಟೂಲು (ಅವನ್ನೂ ಬಟ್ಟೆಯಲ್ಲಿ ಮುಚ್ಚಿ ನ್ಯೂಟ್ರಲ್ ಮಾಡಿದ್ದರೆ ವಾಸಿ) ಗಮನಕ್ಕೆ ಬರುತ್ತವೆ. […]