ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ ಪೌರತ್ವ ಮಸೂದೆ

-ಮಾಧವ ಶೆಣೈ.

ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ  ಪೌರತ್ವ ಮಸೂದೆ
-ಮಾಧವ ಶೆಣೈ.

ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು ತನ್ನ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಪಾರಿತವಾಗಿದ್ದ ತ್ರಿವಳಿ ತಲಾಖ್ ನಿಷೇಧ ಮಸೂದೆ ಹಾಗೂ ಪೌರತ್ವ (ತಿದ್ದುಪಡಿ) ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಎತ್ತಿಕೊಳ್ಳದಂತೆ ಮಾಡುವಲ್ಲಿ ವಿಪಕ್ಷಗಳು ಜಯಗಳಿಸಿವೆ. ಭಾರತೀಯ ಜನತಾ ಪಕ್ಷದ ಗರಿಮೆಯ ಈ ಎರಡೂ ಕಾನೂನು ತಿದ್ದುಪಡಿಗಳನ್ನು ಚರ್ಚೆಗೆ ಹಾಗೂ ನಿರ್ಣಯಕ್ಕೆ ಎತ್ತಿಕೊಳ್ಳದಂತೆ ಅಡೆತಡೆಯೊಡ್ಡಿ ಕಾಂಗ್ರೆಸ್ ಮತ್ತಿತರ […]

ಮಳೆಯಾಶ್ರಿತ ರೈತನ ಬದುಕು

-ಗುರುಮೂರ್ತಿ ಯರಗಂಬಳಿಮಠ

ಮಳೆಯಾಶ್ರಿತ ರೈತನ ಬದುಕು
-ಗುರುಮೂರ್ತಿ ಯರಗಂಬಳಿಮಠ

ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಕುರುಬರ ಓಣಿಯ ಈರಪ್ಪ ಬಸಪ್ಪ ಕುರಿ ಕುಟುಂಬ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿದೆ. ಈರಪ್ಪನೂ ಒಳಗೊಂಡಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ಕುಟುಂಬದಲ್ಲಿ ಒಟ್ಟು 4 ಜನರಿದ್ದಾರೆ. ಈರಪ್ಪನ ತಂದೆ ಹೆಸರು: ಬಸಪ್ಪ, ತಾಯಿ: ಹನುಮವ್ವ. ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದಾರೆ. ಈ ಕುಟುಂಬವು ಕುರುಬರ (ಹಾಲುಮತ)ದ ಸಮುದಾಯಕ್ಕೆ ಸೇರಿದೆ. ಕುಟುಂಬ ಮುಖ್ಯಸ್ಥನಾಗಿರುವ ಈರಪ್ಪ (36 ವರ್ಷ), ಹೆಂಡತಿ ನೀಲಮ್ಮ (30 ವರ್ಷ), ಮಗ ಮಹಾಂತೇಶ (10 ವರ್ಷ) ಹಾಗೂ ಮಗಳು ಶ್ರೀದೇವಿ […]

ಊರಿಗೆ ಹೋಗುವ ಆಶಯದ ರಾಮಪ್ಪ

-ಟಿ.ಗೋವಿಂದರಾಜು

ಊರಿಗೆ ಹೋಗುವ ಆಶಯದ ರಾಮಪ್ಪ
-ಟಿ.ಗೋವಿಂದರಾಜು

ಉತ್ತರ ಕರ್ನಾಟಕದಿಂದ ವಲಸೆ ಬಂದ ಕೂಲಿಕಾರ್ಮಿಕ ಕುಟುಂಬಗಳ ಗುಡಿಸಲುಗಳನ್ನು ನಾನು ಒಬ್ಬ ಸಾಮಾಜಿಕ ಅಧ್ಯಯನಕಾರನಾಗಿ ಗಮನಿಸುತ್ತಾ ಬಂದಿದ್ದೇನೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಗುಟ್ಕಾದಂತಹ ದುರಭ್ಯಾಸಗಳು ಹಾಗೂ ಬಯಲುಶೌಚದ ಅನಾರೋಗ್ಯದ ಬಗ್ಗೆ ನಾನಾಗಿ ತಿಳಿಹೇಳುವ ಕಾರಣದಿಂದಾಗಿ, ಅವರಲ್ಲಿ ಅನೇಕರ ಪರಿಚಯವೂ ನನಗಾಗಿದೆ.  ಅದೊಂದು ಸಣ್ಣ ಶೆಡ್ ಮಾದರಿ ವಸತಿ. ಅದಕ್ಕೆ ಇನ್ನೂ ವಿಳಾಸ ಬಂದಿಲ್ಲ. ಚಿಮನಿಹಿಲ್‍ನ ನೇವಿ ಬಡಾವಣೆಯ ಯಾರದೋ ಖಾಲಿ ಇದ್ದ ನಿವೇಶನದಲ್ಲಿ ಇವರು ಶೆಡ್ ಹಾಕಿಕೊಂಡಿದ್ದಾರೆ. ಇಲ್ಲಿ ವಿದ್ಯುತ್, ನೀರು, ಶೌಚಾಲಯ ವ್ಯವಸ್ಥೆಯೂ ಇಲ್ಲ. ಪಕ್ಕದ […]

ಆರ್ಥಿಕ ಹೊರೆ ಇಲ್ಲದ ರಫಿ

-ಎಚ್.ಎಸ್.ಸಚ್ಚಿತ್

ಆರ್ಥಿಕ ಹೊರೆ ಇಲ್ಲದ ರಫಿ
-ಎಚ್.ಎಸ್.ಸಚ್ಚಿತ್

ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್‍ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ. ಹುಣಸೂರು ಪಟ್ಟಣದ ಹಣ್ಣಿನ ವ್ಯಾಪಾರಿ ಮಹಮದ್ ರಫಿ (38) ಕಳೆದ 20 ವರ್ಷದಿಂದಲೂ ಫುಟ್ ಪಾತಿನಲ್ಲಿ ಹಣ್ಣು ವ್ಯಾಪಾರ ಕಾಯಕದಲ್ಲಿ ಸಂಪಾದಿಸಿ ಬದುಕು ಕಟ್ಟಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿರುವ ಮಧ್ಯ ವಯಸ್ಸಿಗ. ಈತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾನೆ. 7ನೇ ತರಗತಿಗೆ ವ್ಯಾಸಂಗ ಮೊಟಕುಗೊಳಿಸಿಕೊಂಡ ರಫಿ, ತನ್ನ ಮಕ್ಕಳನ್ನು ಓದಿಸಬೇಕು ಎಂಬ ಹಂಬಲದಲ್ಲಿದ್ದಾನೆ. ಪುತ್ರ ಮಹಮದ್ ತೋಫಿಕರ್ ಸರ್ಕಾರಿ ಆದರ್ಶ […]

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!

-ಪ.ರಾಮಕೃಷ್ಣ ಶಾಸ್ತ್ರಿ

ಗಿಡ್ಡ ಕಂಬಳಿ ಕಾಲಿಗೆಳೆದರೆ ತಲೆಗಿಲ್ಲ!
-ಪ.ರಾಮಕೃಷ್ಣ ಶಾಸ್ತ್ರಿ

ಕೊರತೆಗಳ ಎಲ್ಲ ದುಃಖವನ್ನೂ ಮರೆಸುವ ನಿರಂತರ ನಗುವೇ ಜಿನ್ನಪ್ಪ ಪೂಜಾರಿಯವರ ಆಸ್ತಿಯಾಗಿದ್ದರೂ ಅದನ್ನು ಮೀರಿಸಿದ ನೋವಿನ ಹೊಳಹು ನಗೆಯ ನಡುವೆ ಚಿಮ್ಮುತ್ತದೆ. ಇವರು ಜಿನ್ನಪ್ಪ ಪೂಜಾರಿ. ಅರುವತ್ನಾಲ್ಕರ ಹರಯ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಗಾಂಧಿನಗರದಲ್ಲಿ ಅವರ ವಾಸ. ಒಂದು ಕಾಲದಲ್ಲಿ ತಾಳೆಮರವೇರಿ ಕಳ್ಳು ಇಳಿಸಿ ಬದುಕುತ್ತಿದ್ದ ಬಿಲ್ಲವ ಜನಾಂಗ ಅವರದು. ಸರಕಾರದ ನೀತಿಯಿಂದಾಗಿ ಈ ಗ್ರಾಮೀಣ ಕಸುಬನ್ನು ಹಲವು ಕಾನೂನು ಕಟ್ಟಳೆಗಳು ಪೀಡಿಸಿದ ಪರಿಣಾಮ ವೃತ್ತಿ ಅಳಿವಿನಂಚು ಸೇರಿತು. ಮುಕ್ತವಾದ ಸೇಂದಿ ಮಾರಾಟಕ್ಕೂ ಕಾಯಿದೆಯ ಕಬಂಧ […]