ಬದುಕಿನ ಪಥ ಬದಲಿಸುವ ಹತ್ತು ತಂತ್ರಜ್ಞಾನ ಶೋಧನೆಗಳು

ಪೂರ್ಣಿಮಾ ಮಾಳಗಿಮನಿ

ಬದುಕಿನ ಪಥ ಬದಲಿಸುವ  ಹತ್ತು ತಂತ್ರಜ್ಞಾನ ಶೋಧನೆಗಳು
ಪೂರ್ಣಿಮಾ ಮಾಳಗಿಮನಿ

ಮನುಷ್ಯಕುಲವೇ ಆತಂಕ ಬೆರೆತ ಕುತೂಹಲದಿಂದ ಕಾಯುವಂತೆ ಮಾಡಿರುವ ಕೆಲವು ವಿಸ್ಮಯಕಾರಿ ಸಂಶೋಧನೆಗಳು, ಬೆಳವಣಿಗೆಗಳು 2019ರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿವೆ. ಈ ಸಂಶೋಧನೆಗಳು ವಿಶ್ವದಾದ್ಯಂತ ಸಾಮಾಜಿಕ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವಷ್ಟು ಶಕ್ತ! ಅವು ಯಾವ ಸಂಶೋಧನೆಗಳು? ಸದ್ಯಕ್ಕೆ ಯಾವ ಹಂತದಲ್ಲಿವೆ? 1. ಕೃತಕ ಬುದ್ಧಿಮತ್ತೆ (ಎಐ) ಮತ್ತು ವರ್ಚುಯಲ್ ರಿಯಾಲಿಟಿ ಗಣಕಯಂತ್ರದ ಮೂಲಭೂತ ಮಾದರಿಯನ್ನು 1940ರಲ್ಲೇ ವಿಜ್ಞಾನಿಗಳು ಕಂಡುಹಿಡಿದಿದ್ದರು. ಗಣಕಯಂತ್ರದ ಕಾರ್ಯವೈಖರಿಯಿಂದ ಪ್ರೇರಿತರಾಗಿ ಕೆಲವು ವಿಜ್ಞಾನಿಗಳು ಆಗಲೇ electronic brain ಸೃಷ್ಟಿಸುವ ಬಗ್ಗೆ ಯೋಚನೆ ಮಾಡಿದ್ದರೂ, ಈ ವಿಷಯದಲ್ಲಿ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ನಮ್ಮ ದೇಶದಲ್ಲಿ ಅಂತರಜಾಲ ಬಳಕೆದಾರರು ಜಾಸ್ತಿಯಾಗಿದ್ದರೂ, ಆ ಪೈಕಿ ಮಹಿಳೆಯರ ಸಂಖ್ಯೆ ಕಡಿಮೆಯಿದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಈ ಪರಿಸ್ಥಿತಿಯನ್ನು ಬದಲಾಯಿಸಿ ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸಲು ಹಲವು ಸಂಸ್ಥೆಗಳು ಕೆಲಸಮಾಡುತ್ತಿವೆ. ಮೊಬೈಲ್ ಜಗತ್ತಿನ ಜಾಗತಿಕ ಸಂಸ್ಥೆ ಜಿಎಸ್‍ಎಂ ಅಸೋಸಿಯೇಶನ್ ಜೊತೆಗೆ ಕೈಜೋಡಿಸಿರುವ ಜಿಯೋ ‘ಕನೆಕ್ಟೆಡ್ ವಿಮೆನ್’ ಕಾರ್ಯಕ್ರಮವನ್ನು ಭಾರತಕ್ಕೂ ತಂದಿದೆ. ಇದೇ ರೀತಿ ಗೂಗಲ್ ಸಂಸ್ಥೆ ಟಾಟಾ ಟ್ರಸ್ಟ್‍ಗಳ ಸಹಯೋಗದಲ್ಲಿ ನಡೆಸುವ ‘ಇಂಟರ್‍ನೆಟ್ ಸಾಥಿ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಹಿಳೆಯರನ್ನು ಅಂತರಜಾಲದ ಲೋಕಕ್ಕೆ ಪರಿಚಯಿಸುತ್ತಿದೆ. […]

‘ಕೊನೆಗೆ ಗೆಲ್ಲುವುದು, ನಿಲ್ಲುವುದು ಸತ್ಯವೇ!’

ಸವಿತಾ ಶ್ರೀನಿವಾಸ್

‘ಕೊನೆಗೆ ಗೆಲ್ಲುವುದು, ನಿಲ್ಲುವುದು ಸತ್ಯವೇ!’
ಸವಿತಾ ಶ್ರೀನಿವಾಸ್

ಐಪಿಎಸ್ ಅಧಿಕಾರಿ ಸವಿತಾ ಶ್ರೀನಿವಾಸ್ ಅವರು ಪ್ರಸ್ತುತ ಐಜಿಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಇನ್ಸ್‍ಪೆಕ್ಟರ್ ಆಫ್ ಪೊಲೀಸ್ (ಏಐಜಿಪಿ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾದಂಬರಿ, ಕಥಾ ಸಂಕಲನ, ವೈಜ್ಞಾನಿಕ ಕೃತಿ, ಅನುವಾದಗಳನ್ನೊಳಗೊಂಡಂತೆ ಸುಮಾರು 15 ಕೃತಿಗಳನ್ನು ರಚಿಸಿದ್ದಾರೆ. ಅವರ ಸ್ಫೂರ್ತಿದಾಯಕ ಸಂದರ್ಶನ ಇಲ್ಲಿದೆ. ನಾಗರಿಕ ಸೇವಾ ಪರೀಕ್ಷೆ ಬರೆಯುವ ಯೋಚನೆ ಹೇಗೆ ಬಂತು? ಪ್ರೇರಣೆ ಏನು? ಆರಂಭದಿಂದಲೂ ನನ್ನ ಪ್ರವೃತ್ತಿ ಬರವಣಿಗೆ. ಮೊದಲಿನಿಂದಲೂ ಏನಾದರೂ ಸಾಧಿಸಬೇಕು ಅನ್ನುವ ಹಂಬಲ, ಅದಕ್ಕಾಗಿ ಶ್ರಮವಹಿಸುವುದು ನನಗೆ ತುಂಬಾ ಇಷ್ಟ. ನನ್ನ ತಂದೆಗೂ […]

ವಿಶ್ವ ವಿದ್ಯಮಾನ

ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
ಪುರುಷೋತ್ತಮ ಆಲದಹಳ್ಳಿ

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ ಮಾಡಬಯಸಿದ ಚೀನಾ ಟಿಬೆಟಿನ ಬೌದ್ಧರ ಧರ್ಮಗುರು ದಲೈ ಲಾಮಾರವರ ಉತ್ತರಾಧಿಕಾರಿಯ ನಿಯುಕ್ತಿಯು ತನ್ನ ಅನುಮೋದನೆಯಿಲ್ಲದೆ ನಡೆಯಲಾಗದೆಂದು ಚೀನಾದ ಆಡಳಿತ ಪ್ರತಿಪಾದಿಸಿದೆ. ಉತ್ತರಾಧಿಕಾರಿಯ ಆಯ್ಕೆ ಲಾಸಾದಲ್ಲಿ ಚಿನ್ನದ ಕರಂಡಿಕೆಯಲ್ಲಿ ಚೀಟಿ ಹಾಕಿ ಎತ್ತುವ ಮೂಲಕ ಆಗಬೇಕು ಹಾಗೂ ಈ ಆಯ್ಕೆ ಪ್ರಕ್ರಿಯೆಯನ್ನು ತಾನು ಅನುಮೋದಿಸಿದರೆ ಮಾತ್ರ ಅದು ನ್ಯಾಯಸಮ್ಮತವೆಂದು ಚೀನಾದ ಆಡಳಿತ ಹೇಳಿಕೊಂಡಿದೆ. 1950ರಿಂದ ಭಾರತದಲ್ಲಿ ರಾಜಕೀಯ ನಿರಾಶ್ರಿತರಾಗಿರುವ ದಲೈ ಲಾಮಾರವರು ಇದೀಗ 84 ವರ್ಷದವರಾಗಿದ್ದಾರೆ. ನಿಧನದ ನಂತರದಲ್ಲಿ ಇವರು ಟಿಬೆಟನ್ ಕುಟುಂಬವೊಂದರಲ್ಲಿ […]

ಚಂದ್ರನ ಮೇಲೆ ಕಾಲಿಟ್ಟ ಘಳಿಗೆಗೆ ಸುವರ್ಣ ಸಂಭ್ರಮ!

ಎಲ್.ಪಿ.ಕುಲಕರ್ಣಿ

ಚಂದ್ರನ ಮೇಲೆ ಕಾಲಿಟ್ಟ ಘಳಿಗೆಗೆ  ಸುವರ್ಣ ಸಂಭ್ರಮ!
ಎಲ್.ಪಿ.ಕುಲಕರ್ಣಿ

ತಾಯಿ ತೋರಿಸಿದ ಚಂದಮಾಮನನ್ನು ಹಿಡಿಯಲು ಹಾಲುಹಲ್ಲಿನ ಮಗು ಶತಮಾನಗಳಿಂದ ಕೈಚಾಚುತ್ತಲೇ ಇತ್ತು. ಕೊನೆಗೂ ನಿಲುಕಿಯೇಬಿಟ್ಟ ಚಂದ್ರಮ! 20ನೇ ಜುಲೈ 1969 ರಂದು ಮಾನವ ಮೊಟ್ಟಮೊದಲ ಬಾರಿಗೆ ಚಂದ್ರನನ್ನು ಮುಟ್ಟಿದ; ಅದಾಗಿ ಬರೋಬ್ಬರಿ 50 ವರ್ಷಗಳಾದವು. ಭಾರತದ ಚಂದ್ರಯಾನ-2ರ ಸಂಭ್ರಮದ ಸನ್ನಿವೇಶದಲ್ಲಿ ಅಪೋಲೋ-11 ಯಾತ್ರೆಯ ಹಿನ್ನೋಟ ಇಲ್ಲಿದೆ. ಐವತ್ತು ವರ್ಷಗಳ ಹಿಂದೆ ಅಮೆರಿಕದ ಮೂವರು ಸಾಹಸಿ ಖಗೋಳಯಾತ್ರಿಗಳನ್ನು ಹೊತ್ತ ‘ಅಪೊಲೊ-11’ ನೌಕೆಯು ಚಂದ್ರನೆಡೆಗೆ ಯಾತ್ರೆ ಬೆಳೆಸಿತು. ಇಂತಹ ಅದ್ಭುತ ಯಾತ್ರೆಯಲ್ಲಿ ಪಾಲ್ಗೊಂಡವರು; ಅಮೆರಿಕದ ಕಮ್ಯಾಂಡರ್ ನೀಲ್ ಆರ್ಮ್ ಸ್ಟ್ರಾಂಗ್, […]

ಕೋಳಿ ಮಾಂಸೋದ್ಯಮದಲ್ಲಿ ಅನಿಯಂತ್ರಿತ ಪ್ರತಿಜೀವಕ ಔಷಧಿಗಳ ಬಳಕೆ

ಡಾ.ಜೆ.ಎಸ್.ಪಾಟೀಲ

ಕೋಳಿ ಮಾಂಸೋದ್ಯಮದಲ್ಲಿ ಅನಿಯಂತ್ರಿತ ಪ್ರತಿಜೀವಕ ಔಷಧಿಗಳ ಬಳಕೆ
ಡಾ.ಜೆ.ಎಸ್.ಪಾಟೀಲ

ಕೋಳಿಮರಿಗಳ ಮಾಂಸಖಂಡ ಬೆಳೆಸಲು ಬಳಸುತ್ತಿರುವ ಕೊಲಿಸ್ಟಿನ್ ಎಂಬ ಪ್ರತಿಜೀವಕ ಔಷಧಿಯು ಕೋಳಿ ತಿನ್ನುವವರ ಆರೋಗ್ಯದ ಮೇಲೆ ದೂರಗಾಮಿ ಪಾಶ್ರ್ವ ಪರಿಣಾಮ ಬೀರಬಲ್ಲದು. ಈ ಕಾರಣದಿಂದ ಜಾಗತಿಕ ಆರೋಗ್ಯ ಸಂಸ್ಥೆಯು ಕೊಲಿಸ್ಟಿನ್ ಬಳಕೆಯನ್ನು ನಿಷೇಧಿಸಬೇಕೆಂದು ಅಗ್ರಹಿಸಿದ.  ಸಂಸ್ಕರಿಸಿದ ಮಾಂಸಾಹಾರ ವ್ಯಾಪಾರವು ಇಂದು ಕಾರ್ಪೋರೇಟ್ ಸ್ವರೂಪ ಪಡೆದು ಬೃಹತ್ ಜಾಗತಿಕ ಉದ್ಯಮವಾಗಿ ಬೆಳೆದು ನಿಂತಿದ್ದನ್ನು ನಾವು ನೋಡು ತ್ತಿದ್ದೇವೆ. ಕಾರ್ಪೋರೇಟ್ ಉದ್ಯಮಗಳೆಂದರೆ ಮಾರುಕಟ್ಟೆ ಪೈಪೋಟಿ ಸಹಜವಾದದ್ದು. ಉದ್ಯಮವನ್ನು ಜಾಗತಿಕ ಸ್ತರದಲ್ಲಿ ವ್ಯಾಪಕವಾಗಿ ವಿಸ್ತರಣೆ ಮಾಡುವುದು ಮತ್ತು ಅಧಿಕ ಲಾಭಾಂಶ ನಿರೀಕ್ಷಣೆಗಳು […]

ಇರಾನ್ ಬುಡಕ್ಕೆ ಯುದ್ಧದ ಕೊಳ್ಳಿಯಿಟ್ಟ ಅಮೆರಿಕಾ

-ಪುರುಷೋತ್ತಮ ಆಲದಹಳ್ಳಿ

ಅಮೆರಿಕದ ರಿಪಬ್ಲಿಕನ್ ಪಕ್ಷದಿಂದ ಆಯ್ಕೆಯಾದ ಅಧ್ಯಕ್ಷರಿಗೆ ಯಾವುದಾದರೊಂದು ಯುದ್ಧವನ್ನು ಪ್ರಾರಂಭ ಮಾಡದಿದ್ದರೆ ಊಟ-ನಿದ್ರೆ ಬರದೆಂದು ಕಾಣಿಸುತ್ತದೆ. ಜಾರ್ಜ್ ಬುಷ್ ಇರಾಖ್ ಮತ್ತು ಆಫ್ಘಾನಿಸ್ತಾನ ಯುದ್ಧಗಳನ್ನು ಪ್ರಾರಂಭ ಮಾಡಿದ್ದರೆ ಇದೀಗ ಡಾನಲ್ಡ್ ಟ್ರಂಪ್ ಇರಾನ್ ಯುದ್ಧವನ್ನು ಪ್ರಾರಂಭಿಸುವ ಹವಣಿಕೆಯಲ್ಲಿದ್ದಾರೆ. ಯುದ್ಧವನ್ನು ಶುರುಮಾಡುವುದೇನೋ ಸುಲಭವಿದ್ದೀತು. ಆದರೆ ಯುದ್ಧಗಳನ್ನು ಅಂತ್ಯಗೊಳಿಸುವುದು ಕಷ್ಟ. ಇರಾಖ್ ಯುದ್ಧವಿನ್ನೂ ಮುಗಿದಂತೆ ಕಾಣುತ್ತಿಲ್ಲ. ಇಸ್ಲಾಮಿಕ್ ಸ್ಟೇಟ್ ಮತ್ತು ಸಿರಿಯಾ ಕಲಹಗಳು ಇನ್ನೂ ಹೊಗೆಯಾಡುತ್ತಲೇ ಇವೆ. ಈಗಲೂ ತಾಲಿಬಾನ್ ಆಫ್ಘಾನಿಸ್ತಾನದ ಅರ್ಧದಷ್ಟನ್ನು ತನ್ನ ವಶದಲ್ಲಿಯೇ ಇರಿಸಿಕೊಂಡಿದೆ. ಲಿಬ್ಯಾದಲ್ಲಿ ಗಡಾಫಿಯನ್ನು […]

ಅಮೆರಿಕೆಯ ‘ಕೃಷಿಕರ ಮಾರುಕಟ್ಟೆ’

ಮಾಲತಿ ಪಟ್ಟಣಶೆಟ್ಟಿ

ಅಮೆರಿಕೆಯ ‘ಕೃಷಿಕರ ಮಾರುಕಟ್ಟೆ’
ಮಾಲತಿ ಪಟ್ಟಣಶೆಟ್ಟಿ

ಅಮೆರಿಕೆಯ ಫಾರ್ಮರ್ಸ್ ಮಾರ್ಕೆಟ್ಟಿನಂತೆ ನಮ್ಮ ರೈತರು ಸಂಘಟಣೆಗೊಂಡು ನೇರವಾಗಿ ತಮ್ಮ ಉತ್ಪನ್ನಗಳನ್ನು ಏಕೆ ಮಾರಬಾರದು? ಇವರಿಗೆ ದಳ್ಳಾಳಿಗಳ ಅಗತ್ಯವಾದರೂ ಏನು? ಕಳೆದ ಕೆಲವು ವರ್ಷಗಳಿಂದ ನನ್ನನ್ನು ಚಿಂತೆಗೀಡು ಮಾಡಿದ ವಿಷಯಗಳೆಂದರೆ ಕರ್ನಾಟಕದಲ್ಲಿಯ ರೈತರ ಆತ್ಮಹತ್ಯೆಗಳು, ಕಬ್ಬಿನ ಬೆಳೆಗಾರರ ಸಮಸ್ಯೆಗಳು, ರೈತರಿಗೆ ಸರಕಾರದಿಂದ ಸಿಗದ ಬೆಂಬಲ ಬೆಲೆ, ಸಾಲಮನ್ನಾ ವಿಷಯ, ರೈತರ ಪ್ರತಿಭಟನೆಗಳು, ಚಳವಳಿಗಳು ಮತ್ತು ರೈತರನ್ನು ಶೋಷಿಸುತ್ತಿರುವ ದಳ್ಳಾಳಿಗಳ ಕ್ರೌರ್ಯಗಳು. ನನ್ನ ಮಗ ಶ್ರೀಶೈಲನು ತಾನಿರುವ ಕ್ಯಾಲಿಫೋರ್ನಿಯಾದಲ್ಲಿಯ ಸ್ಯಾನಹೋಜೆಗೆ ನನ್ನನ್ನು ಕರೆದುಕೊಂಡುಹೋಗಿದ್ದ. ಅವನಿಗೆ ಸಮಯ ಸಿಕ್ಕಾಗಲೆಲ್ಲ ಭಾರತದ, ವಿಶೇಷವಾಗಿ […]

ವಿಶ್ವ ವಿದ್ಯಮಾನ

ವಿಶ್ವ ವಿದ್ಯಮಾನ

ಚೀನಾದ ಟೆಕ್ ಕಂಪನಿಗಳಿಗೆ ತಡೆಗೋಡೆ ನಿರ್ಮಿಸಿದ ಅಮೆರಿಕಾ ಅಮೆರಿಕದ ಒಳಗೆ ನುಸುಳಿ ಬರುವವರನ್ನು ತಡೆಯಲು ಗೋಡೆ ನಿರ್ಮಿಸುತ್ತೇನೆಂದು ಅಧಿಕಾರಕ್ಕೆ ಬಂದ ಡಾನಲ್ಡ್ ಟ್ರಂಪ್ ಇದೀಗ ಅಮೆರಿಕದಿಂದ ನುಸುಳಿ ಹೊರಗೆ ಹೋಗುತ್ತಿರುವ ತಂತ್ರಜ್ಞಾನವನ್ನು ತಡೆಯಲು ಕಾನೂನಿನ ಗೋಡೆ ನಿರ್ಮಿಸುತ್ತಿರುವಂತೆ ಕಾಣಿಸುತ್ತಿದೆ. ಚೀನಾದ ಕಂಪನಿ ‘ಹ್ವಾವೆ’ಯ ಮೇಲೆ ಹಲವಾರು ನಿಬಂಧನೆಗಳನ್ನು ಹಾಕುವುದರ ಜೊತೆಗೆ ಈ ಕಂಪನಿಯ ನಿರ್ದೇಶಕರ ಮೇಲೆ ತಂತ್ರಜ್ಞಾನ ಕಳ್ಳತನದ ಆರೋಪ ಹೊರಿಸಲಾಗಿದೆ. ‘ಹ್ವಾವೆ’ ಕಂಪನಿಯು ಯೂರೋಪಿನ ಮತ್ತು ಅಮೆರಿಕ ಮಿತ್ರರಾಷ್ಟ್ರಗಳ ಜೊತೆಯಲ್ಲಿ ಯಾವುದೇ ವಾಣಿಜ್ಯ-ತಾಂತ್ರಿಕ ಸಂಬಂಧ ಬೆಳೆಸಿಕೊಳ್ಳದಂತೆ […]

ಮಂಜಿನ ಟೋಪಿ ಹೊತ್ತ ಮೌಂಟ್ ಕೀನ್ಯಾ

ಡಾ.ಸುಕನ್ಯಾ ಸೂನಗಹಳ್ಳಿ

ಮಂಜಿನ ಟೋಪಿ ಹೊತ್ತ ಮೌಂಟ್ ಕೀನ್ಯಾ
ಡಾ.ಸುಕನ್ಯಾ ಸೂನಗಹಳ್ಳಿ

ಈ ಬೆಟ್ಟದ ಸುತ್ತಲಿನ ಪ್ರದೇಶ ಹೇಗಿರುತ್ತದೆ ಎಂದರೆ, ಯಾರೋ ಆಗ ತಾನೆ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ ಎನ್ನಿಸುತ್ತದೆ. ಬೆಳಗಿನ ಜಾವ ಸರಿಯಾಗಿ 6 ಘಂಟೆಗೆ ಸುಮಾರು ನಾಲ್ಕು ಕುಟುಂಬಗಳು ಒಂದೆಡೆ ಸೇರಿ ಕಾರನ್ನು ಹತ್ತಿದೆವು. ಕಾರು ಒಂದೇ ವೇಗದಲ್ಲಿ ಓಡುತ್ತಿತ್ತು. ಎಷ್ಟು ದೂರ ಸಾಗಿದರೂ ಬೆಟ್ಟಗುಡ್ಡಗಳ ಶ್ರೇಣಿಗಳು, ಮೋಡ ಕವಿದ ವಾತಾವರಣ, ಎಲ್ಲೆಲ್ಲೂ ಹಚ್ಚ ಹಸಿರು, ನಡುವೆ ಚಹಾ ಮತ್ತು ಕಾಫಿ ತೋಟಗಳು, ತುಂತುರು ಮಳೆ. ನಾವು ಪ್ರಯಾಣಿಸುತ್ತಿದ್ದುದು […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ 3ಜಿ, 4ಜಿ ಮುಂತಾದ ಹೊಸ ತಲೆಮಾರುಗಳು ಬಂದಂತೆಲ್ಲ ಮೊಬೈಲ್ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿರುವುದನ್ನು ನಾವು ನೋಡಿದ್ದೇವೆ. ಇನ್ನೇನು ಬರಲಿರುವ 5ಜಿ ಹಿಂದಿನ ತಲೆಮಾರುಗಳಿಗಿಂತ ಹೆಚ್ಚಿನ ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ. ಮೊಬೈಲ್ ಫೋನುಗಳಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ನೀಡುವ ಜೊತೆಗೆ ಈ ತಂತ್ರಜ್ಞಾನ ವಸ್ತುಗಳ ಅಂತರಜಾಲದ (ಐಓಟಿ) ಮೂಲಕ ಅಂತರಜಾಲದ ಸಂಪರ್ಕಕ್ಕೆ ಬರುವ ಅಸಂಖ್ಯ ಸಣ್ಣ-ದೊಡ್ಡ ಸಾಧನಗಳಿಗೂ ಅತಿವೇಗದ, ಅಡಚಣೆಯಿಲ್ಲದ ಸಂಪರ್ಕ ಒದಗಿಸಲಿದೆ. ಈ ತಂತ್ರಜ್ಞಾನದ ಅನುಕೂಲಗಳು ಎಲ್ಲರಿಗೂ ಸಿಗುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮೊಬೈಲ್ […]

2ನೇ ಶೀತಲ ಸಮರ

ಪುರುಷೋತ್ತಮ

2ನೇ ಶೀತಲ ಸಮರ
ಪುರುಷೋತ್ತಮ

ಅಮೆರಿಕಾ-ಚೀನಾ ಸುಂಕಯುದ್ಧದಲ್ಲಿ 21ನೇ ಶತಮಾನದ ಶೀತಲ ಸಮರ ಪ್ರಾರಂಭವಾಗಿದೆಯೇ? 20ನೇ ಶತಮಾನದ ಅಮೆರಿಕಾ-ರಷ್ಯಾಗಳ ನಡುವಿನ ಶೀತಲ ಸಮರಕ್ಕೂ ಈಗಿನ ಅಮೆರಿಕಾ-ಚೀನಾ ಶೀತಲ ಸಮರಕ್ಕೂ ಇರುವ ವ್ಯತ್ಯಾಸಗಳೇನು? ಚೀನಾದ ಏಕಪಕ್ಷೀಯ ರಫ್ತು ಆರ್ಥಿಕತೆಯ ಮೇಲೆ ಅಮೆರಿಕ ಸೆಟೆದು ನಿಂತಿದೆ. ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಮುಚ್ಚುಮರೆಯಿಲ್ಲದ ಕೊಂಕು ನುಡಿಗಳಲ್ಲಿ ಅಮೆರಿಕವು ದಶಕಗಳ ಕಾಲ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಆಗಿರುವ ನಷ್ಟದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಟ್ರಂಪ್‍ರವರ ಹೇಳಿಕೆಯಂತೆ,“ಪ್ರತಿವರ್ಷ ನಮಗೆ ಈಗಾಗಲೇ $500 ಬಿಲಿಯನ್‍ಗಳಷ್ಟು ರಫ್ತು-ಆಮದು ಕೊರತೆಯಿದ್ದರೆ, ಚೀನಾದ […]

ಇ-ಜ್ಞಾನ

ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ಸ್ಮಾರ್ಟ್‍ ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್) ಪೈಕಿ ಬಹಳ ಜನಪ್ರಿಯವಾಗಿರುವುದು ಆಂಡ್ರಾಯ್ಡ್ ನ ಹೆಗ್ಗಳಿಕೆ. ಗೂಗಲ್ ಸಂಸ್ಥೆ ನಿರ್ವಹಿಸುವ ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿ – ಆಂಡ್ರಾಯ್ಡ್ ಕ್ಯೂ – ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಇಂಗ್ಲಿಷಿನ ಅಕಾರಾದಿ ಕ್ರಮವನ್ನುಅನುಸರಿಸುವ ಆಂಡ್ರಾಯ್ಡ್ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುವುದು (ನೌಗಾಟ್, ಓರಿಯೋ, ಪೈ, ಹೀಗೆ) ಗೂಗಲ್‍ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಪ್ರತಿಯೊಂದು ಹೊಸ ಆವೃತ್ತಿ ಘೋಷಣೆಯಾದಾಗಲೂ ಅದಕ್ಕೆ ಯಾವ ತಿಂಡಿಯ ಹೆಸರು ಸಿಗಬಹುದು […]

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರ್ಚ್2019ರ ಗಣತಿಯಲ್ಲಿಒಟ್ಟು 11.7 ಲಕ್ಷ ವಿದೇಶಿ ವಿದ್ಯಾರ್ಥಿಗಳಿದ್ದರೆ ಅವರಲ್ಲಿ ಶೇಕಡಾ 50ರಷ್ಟು ಭಾರತ ಮತ್ತುಚೀನಾ ದೇಶಗಳಿಂದ ಬಂದವರಾಗಿದ್ದಾರೆ. ಶೈಕ್ಷಣಿಕ ಕೋರ್ಸ್‍ಗಳಿಗಾಗಿ ನೀಡುವ ‘ಎಫ್’ ವೀಸಾ ಮತ್ತು ಔದ್ಯೋಗಿಕ ವೃತ್ತಿ ಶಿಕ್ಷಣಕ್ಕಾಗಿ ನೀಡುವ ‘ಎಮ್’ ವೀಸಾಗಳೆರಡನ್ನೂ ಒಟ್ಟು ಸೇರಿಸಿ ನೋಡಿದರೆ 2018ರ ಮಾರ್ಚ್‍ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇಳಿಮುಖ ಕಂಡಿದೆ. ವಲಸೆ ವಿರೋಧಿ ನೀತಿ ಅನುಸರಿಸುತ್ತಿರುವ ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಹುಚ್ಚು ಘೋಷಣೆಗಳ ಕಾರಣಕ್ಕೆ […]

ಸಮಾನ ಮನಸ್ಕ ನಾಗರಿಕರು ಸ್ಥಾಪಿಸಿದ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ

-ಚಾಣಕ್ಯ

ಸಮಾನ ಮನಸ್ಕ ನಾಗರಿಕರು ಸ್ಥಾಪಿಸಿದ  ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ
-ಚಾಣಕ್ಯ

ಸಮಾಜಮುಖಿಯ ಸಂಪಾದಕೀಯ ತಂಡವು ಬಿ.ಐ.ಸಿ.ಯ ಗೌರವ ನಿರ್ದೇಶಕರಾದ ವಿ.ರವಿಚಂದರ್ ಅವರೊಡನೆ ಈ ಸಂಸ್ಥೆಯ ಉದ್ದೇಶಗಳು, ಪ್ರಸ್ತುತತೆ ಮತ್ತು ಬೆಂಗಳೂರಿನ ನಾಗರಿಕರೊಡನೆ ಹೊಂದಿರುವ ಸಂಬಂಧಗಳ ಬಗ್ಗೆ ಮುಕ್ತ ಚರ್ಚೆಯನ್ನು ನಡೆಸಿತು. ಈ ಚರ್ಚೆಯ ಸಂಕ್ಷಿಪ್ತರೂಪ ಇಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿ.ಐ.ಸಿ.)ವು 2005ರಲ್ಲಿ ಬೆಂಗಳೂರಿನ ಸಮಾನ ಮನಸ್ಕ ಪ್ರಜ್ಞಾವಂತ ನಾಗರಿಕರು ಸ್ಥಾಪಿಸಿದ ವೇದಿಕೆ. ಇಂದಿನ ಬೆಂಗಳೂರಿನ ಕ್ರಿಯಾತ್ಮಕತೆ, ಮಹತ್ವಾಕಾಂಕ್ಷೆ ಮತ್ತು ಭವಿಷ್ಯಮುಖಿ ಆಯಾಮಗಳನ್ನು ಪ್ರತಿನಿಧಿಸುವ ಈ ವೇದಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು, ಬುದ್ಧಿಜೀವಿಗಳು, ಕಲಾವಿದರು ಮತ್ತು ವೃತ್ತಿಪರರು ಪಾಲುದಾರರಾಗಿದ್ದಾರೆ. ಕಳೆದ […]

ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ

-ಡಾ.ಎಂ.ಎಸ್.ಮೂರ್ತಿ

ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ
-ಡಾ.ಎಂ.ಎಸ್.ಮೂರ್ತಿ

2019 ಮೇ 2ನೇ ತಾರೀಖಿಗೆ ಲಿಯೋನಾರ್ಡೋ ಡ ವಿಂಚಿ ತೀರಿಕೊಂಡು ಐನೂರು ವರ್ಷಗಳು ಗತಿಸಿದವು. ಈ ಸಂದರ್ಭದಲ್ಲಿ ಕಾಲಾತೀತ ಕಲಾವಿದನನ್ನು ಪ್ರವೇಶಿಸಲು ಬೇಕಾದ ವ್ಯಕ್ತಿ ಮತ್ತು ಕಲಾಕೃತಿಗಳ ಪರಿಚಯ ಇಲ್ಲಿದೆ. ಲಿಯೊನಾರ್ಡೋ ಡ ವಿಂಚಿ ಕಾಲದಾಚೆಗೆ ಪಯಣಿಸಿದ ಕಲಾವಿದ. ಕಾಲ-ದೇಶದ ಸಂಕೀರ್ಣ ರಚನೆ ಮಹತ್ವದ ಚಿಂತನೆಗೆ ತನ್ನನ್ನು ತಾನು ಒಡ್ಡಿಕೊಂಡ ಮಹರ್ಷಿ. ಈತನ ತಂದೆ ಸೆರ್ ಪಿಯರೊ ಇಟಲಿಯ ಪ್ರಖ್ಯಾತ ನೋಟರಿ; ತಾಯಿ ಕ್ಯಾಥರಿನಾ. ಲಿಯೋನಾರ್ಡೊ ಹುಟ್ಟಿದಾಗ ತಂದೆತಾಯಿ ಮದುವೆಯಾಗಿರುವುದಿಲ್ಲ. ಶ್ರೀಮಂತ ಮನೆತನದ ಪಿಯರೊ ಕುಟುಂಬದೊಂದಿಗೆ ವಾಸಿಸುತ್ತಿದ್ದ […]

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ

-ಮಂಜುನಾಥ ಡಿ.ಎಸ್.

ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ
-ಮಂಜುನಾಥ ಡಿ.ಎಸ್.

2014ರಲ್ಲಿ ಜಾರಿಯಾದ ಶಾಸನದ ಪ್ರಕಾರ ಕಾರ್ಪೋರೇಟ್ ಕಂಪನಿಗಳು ತಮ್ಮ ಸಾಮಾಜಿಕ ಜವಾಬ್ದಾರಿ ಹೊರುವುದು ಕಡ್ಡಾಯ. ಈ ಸಂಸ್ಥೆಗಳು ತಮ್ಮ ವಾರ್ಷಿಕ ನಿವ್ವಳ ಲಾಭದಲ್ಲಿ ಕನಿಷ್ಠ ಶೇಕಡಾ ಎರಡರಷ್ಟನ್ನು ಸಾಮಾಜಿಕ ಚಟುವಟಿಕೆಗಳಿಗೆ ವ್ಯಯಿಸಬೇಕು. ಸಂಸ್ಥೆಯೊಂದರ ಸಿ.ಎಸ್.ಆರ್. ಕಾರ್ಯಕ್ರಮಗಳ ಜಾರಿಯಲ್ಲಿ ಸ್ವತಃ ತೊಡಗಿಸಿಕೊಂಡಿರುವ ಲೇಖಕರು ಈ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ಬೆಳೆದವರು ಆ ಸಮಾಜಕ್ಕೆ ಅಲ್ಪವನ್ನಾದರೂ ಮರಳಿ ನೀಡುವ ಸತ್ಸಂಪ್ರದಾಯ ಭಾರತಕ್ಕೆ ಹೊಸದೇನಲ್ಲ. ವ್ಯಕ್ತಿಗಳು, ಸಂಘ-ಸಂಸ್ಥೆಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಅನೇಕ ನಿದರ್ಶನಗಳು ನಮ್ಮ […]

ಸಮಯದ ಉಳಿತಾಯ ಖಾತೆ ಟೈಮ್ ಬ್ಯಾಂಕಿಂಗ್

ಪೂರ್ಣಿಮಾ ಮಾಳಗಿಮನಿ

ಸಮಯದ ಉಳಿತಾಯ ಖಾತೆ ಟೈಮ್ ಬ್ಯಾಂಕಿಂಗ್
ಪೂರ್ಣಿಮಾ ಮಾಳಗಿಮನಿ

ನಾವು ನಮ್ಮ ಬಳಿ ಇರುವ ಹೆಚ್ಚುವರಿ ಸಮಯವನ್ನು ಹಣದಂತೆ ಬ್ಯಾಂಕಿನಲ್ಲಿ ಕೂಡಿಡಬಹುದು. ಇದಕ್ಕೆ ಟೈಮ್ ಬ್ಯಾಂಕಿಂಗ್ ಅಂತ ಹೆಸರು. ಏಕೆಂದರೆ ಈ ವ್ಯವಸ್ಥೆಯಲ್ಲಿ ಎಲ್ಲವೂ ಬ್ಯಾಂಕ್ ರೀತಿಯಲ್ಲೇ ನಡೆಯುತ್ತದೆ, ಆದರೆ ಹಣದ ಬದಲಿಗೆ ಗಂಟೆಗಳ ಚಲಾವಣೆಯಾಗುತ್ತದೆ! ಅದೊಂದು ನೀರವ ರಾತ್ರಿ, ಕರೆಂಟು ಹೋಗಿದ್ದರಿಂದ, ಗಕ್ಕನೆ ಫ್ಯಾನ್ ನಿಂತು, ಪಕ್ಕನೆ ಎಚ್ಚರವಾಗಿಬಿಟ್ಟಿತು. ಕೆಲವೇ ಕ್ಷಣಗಳಲ್ಲಿ ನಿಶ್ಯಬ್ದವಾದ ಕೋಣೆಯನ್ನೆಲ್ಲಾ ಬಚ್ಚಲು ಮನೆಯಲ್ಲಿ ಸೋರುತ್ತಿದ್ದ ನಲ್ಲಿಯ ಟಿಪ್ ಟಿಪ್ ಮತ್ತು ಗೋಡೆಯ ಮೇಲಿನ ಗಡಿಯಾರದ ಟಿಕ್ ಟಿಕ್ ಆವರಿಸಿಕೊಂಡಿತು. ರೆಪೇರಿಯಾಗದ ನಲ್ಲಿಯನ್ನು […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ವಾಹನ ಚಲಾಯಿಸುವಾಗ ಮೊಬೈಲ್ ಬಳಸುವ ಅನೇಕರನ್ನು ನಾವು ನೋಡಿದ್ದೇವೆ. ಈ ಅಭ್ಯಾಸದಿಂದಾಗಿ ಅನೇಕ ಅಪಘಾತಗಳಾಗುವುದೂ ಉಂಟು. ಚಾಲಕರು ಮೊಬೈಲ್ ಬಳಸುವುದನ್ನು ತಡೆಯಲು ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವ ಹಲವು ಪ್ರಯತ್ನಗಳು ವಿಶ್ವದೆಲ್ಲೆಡೆ ನಡೆಯುತ್ತಿವೆ. ಚಲಿಸುತ್ತಿರುವ ವಾಹನದಲ್ಲಿ ಮೊಬೈಲ್ ಬಳಕೆಯಾಗುತ್ತಿದ್ದರೆ ಅದನ್ನು ಪತ್ತೆಮಾಡುವ ವ್ಯವಸ್ಥೆಯೊಂದನ್ನು ಯುನೈಟೆಡ್‍ ಕಿಂಗ್‍ಡಂನ ಪೊಲೀಸರು ಪರಿಚಯಿಸಿದ್ದಾರೆ. ವಾಹನದಲ್ಲಿನ ಮೊಬೈಲ್ ಸಂಕೇತಗಳನ್ನು ಹೊರಗಿನಿಂದಲೇ ವಿಶ್ಲೇಷಿಸುವ ಮೂಲಕ ಇದು ಮೊಬೈಲ್ ಬಳಕೆಯನ್ನು ಪತ್ತೆಮಾಡಲಿದೆಯಂತೆ. ಸದ್ಯ ಈ ವ್ಯವಸ್ಥೆ ಎಚ್ಚರಿಕೆಯ ಸಂದೇಶವನ್ನು ಮಾತ್ರ ಪ್ರದರ್ಶಿಸಲಿದ್ದು, ಮುಂದೆ ಅಪರಾಧಿ […]

ಸಮಾಜಮುಖಿಯಲ್ಲಿ ಪಿಹೆಚ್‍ಡಿ ಸಾರಾಂಶ

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷವೂ ನೂರಾರು ಪಿಹೆಚ್‍ಡಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ವಿವಿಯ ಒಳಗಿನ ಹಾಗೂ ಹೊರಗಿನ ನುರಿತ ಪ್ರಾಧ್ಯಾಪಕರಿಂದ ಪರಿಶೀಲಿಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಸಂಶೋ ಧನೆಯ ಫಲಿತಾಂಶಗಳನ್ನು ಅಳವಡಿಸಿಕೊಳ್ಳಲಾಗುತ್ತಿಲ್ಲ. ಈ ಕೊರತೆಯನ್ನು ಸರಿದೂಗಿಸಲು ಸಮಾಜಮುಖಿ ಪತ್ರಿಕೆ ಮುಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಲ್ಲಿಸಲಾದ ನಿಮ್ಮ ಪಿಹೆಚ್‍ಡಿ ಪ್ರಬಂಧವನ್ನು 1000 ಶಬ್ದಗಳ ಸಾರಾಂಶದೊಂದಿಗೆ ಪ್ರಕಟಣೆಗೆ ಸಲ್ಲಿಸಿ. ಆಯ್ದ ಸಾರಾಂಶಗಳನ್ನು ಮಾಸ ಪತ್ರಿಕೆಯಲ್ಲಿ […]