ಆರ್ ಬಿಐ ‘ಅನ್-ರಿಸರ್ವಡ್’ ಆಗಬೇಕು

- ಪುರುಷೋತ್ತಮ

 ಆರ್ ಬಿಐ  ‘ಅನ್-ರಿಸರ್ವಡ್’ ಆಗಬೇಕು <p><sub>  - ಪುರುಷೋತ್ತಮ </sub></p>

ಸದ್ಯಕ್ಕೆ ಆರ್ಬಿಐ ಕೇಂದ್ರ ಸರ್ಕಾರಕ್ಕೆ ಮಣಿದಂತೆ ಕಾಣುತ್ತಿದೆಯಾದರೂ ಮುಂದಿನ ದಿನಗಳಲ್ಲಿ ಆರ್ಬಿಐ ತೆಗೆದುಕೊಳ್ಳುವ ನಿರ್ಧಾರಗಳಿಂದ ಈ ಸಮಸ್ಯೆ ಬಗೆಹರಿದಿದೆಯೋ ಇಲ್ಲವೋ ಎಂದು ತಿಳಿಯಬೇಕಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲ ಸ್ವಾಯತ್ತ ಸಂಸ್ಥೆಗಳೊಡನೆ ಒಂದಲ್ಲಾ ಒಂದು ತೊಂದರೆಯಿರುವಂತಿದೆ. ತೊಂದರೆಯಿರುವುದು ತನ್ನಿಂದ ತಾನೇ ಒಳ್ಳೆಯದೂ ಅಲ್ಲ ಕೆಟ್ಟದೂ ಅಲ್ಲ. ಕೆಲವೊಮ್ಮೆ ಯಾವುದು ಸರಿಯೋ ಅದಕ್ಕೆ ಪಟ್ಟುಹಿಡಿದು ಕುಳಿತು ಅಥವಾ ಕಾಲುಕೆರೆದು ಜಗಳ ಮಾಡಬೇಕಾಗುತ್ತದೆ. ಇಂತಹ ಸನ್ನವೇಶದಲ್ಲಿಯೇ ಯಾವುದು ಸರಿ, ಯಾವುದು ಸತ್ಯ ಹಾಗೂ ಯಾವುದು ಸೂಕ್ತ ಎಂದು ನಿರ್ಧಾರವಾಗುತ್ತದೆ. ಕೇಂದ್ರ ಸರ್ಕಾರದ […]

ಅಭ್ಯರ್ಥಿಗಳ ಖರ್ಚು – ವೆಚ್ಚ ನಿಯಂತ್ರಣ

ಚುನಾವಣಾ ಅಭ್ಯರ್ಥಿಗಳ ಖರ್ಚು-ವೆಚ್ಚ ನಿಯಂತ್ರಣ ಬೇಕೆ? ದೇಶದ ಚುನಾವಣಾ ಕಾನೂನಿನ ಅನ್ವಯ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯೊಬ್ಬ ಕೇವಲ 18 ಲಕ್ಷ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಬಹುದು. ಇಂದಿನ ದಿನಗಳಲ್ಲಿ 18 ಲಕ್ಷ ರೂಪಾಯಿ ಅತ್ಯಂತ ದೊಡ್ಡ ಮೊತ್ತವೇನೂ ಅಲ್ಲ. ಆದರೂ ಎಲ್ಲಾ ಪಕ್ಷದ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಸುಲಭವಾಗಿ ಮುಂದೆ ಬರಲಾರರು. ರಾಜಕೀಯ ಅಧಿಕಾರ ಅನುಭವಿಸುತ್ತಿರುವ ಪಕ್ಷವೊಂದು ಅಭ್ಯರ್ಥಿಯ ಎಲ್ಲಾ ಖರ್ಚನ್ನು ಭರಿಸುತ್ತೇವೆಂದು ಆಶ್ವಾಸನೆ ನೀಡಿದರೂ ಉಮೇದುವಾರರಿಗೆ ಹುಡುಕಬೇಕಾದ ಸಮಸ್ಯೆಯಿದೆ. ಬೆಂಗಳೂರಿನ ಸುತ್ತಮುತ್ತಲ ಯಾವುದೇ ವಿಧಾನಸಭೆ […]

ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ?

ಚುನಾವಣೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ? ಚುನಾವಣೆ ಬಂದಾಗ ಅಭ್ಯರ್ಥಿಗಳ ಗೋಳು ನೋಡಲಾಗುವುದಿಲ್ಲ. ಮನೆ-ಮಠ ಮಾರಿ ಹಾಗೂ ಸಾಲ-ಸೋಲ ಮಾಡಿಯಾದರೂ ಚುನಾವಣೆಯಲ್ಲಿ ವಿತರಣೆ ಮಾಡಬೇಕಾದ ಹಣ ಹೊಂಚಲೇಬೇಕು. ರಾಜ್ಯಾದ್ಯಂತ ವೋಟಿಗೆ ರೂ.500ಗಳು ಅತ್ಯಂತ ಕಡಿಮೆಯ ದರವಾದರೆ, ಕೆಲವು ಕ್ಷೇತ್ರಗಳ ಆಯ್ದ ಭಾಗಗಳಲ್ಲಿ ವೋಟಿಗೆ ರೂ.2,000 ದಿಂದ ರೂ.5,000 ವರೆಗೂ ಕೊಡಬೇಕಾಗುತ್ತದೆ. ಅಭ್ಯರ್ಥಿಯು ವೋಟು ಖರೀದಿಸಲು ಹಣ ನೀಡುವುದಿಲ್ಲ ಎಂದೇನಾದರೂ ಪ್ರಚಾರವಾದರೆ ಅವನ ಮನೆಯ ಬಳಿ ನಾಯಿ-ನರಿಗಳೂ ಸುಳಿಯದ ಪರಿಸ್ಥಿತಿಯಿದೆ. ಸಮಸ್ಯೆ ಅದಲ್ಲ. ಸಮಸ್ಯೆ ಹಣ ವಿತರಣೆಗೆ […]

ಕಾನೂನು ರಚಿಸುವ ಹೊಣೆ ಸರ್ವೋಚ್ಚ ನ್ಯಾಯಾಲಯಕ್ಕೆ!

ಕಾನೂನು ರಚಿಸುವ ಹೊಣೆ ಸರ್ವೋಚ್ಚ ನ್ಯಾಯಾಲಯಕ್ಕೆ! ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನ ಹೆಳವನೇ ರಾಜನಂತೆ. ಮೂಗರ ಮಠದಲ್ಲಿ ತೊದಲುವ ಹೆಡ್ಡನೇ ಗುರುವಂತೆ. ದೇಶದ ಕಾನೂನು ರಚಿಸುವ ಪ್ರಕ್ರಿಯೆಯಲ್ಲಿನ ‘ಗರಬಡಿದ’ ಪರಿಸ್ಥಿತಿಯಲ್ಲಿ ಯಾರು ಕಾನೂನು ರಚನೆ ಮಾಡಬೇಕು ಹಾಗೂ ಅದನ್ನು ಅರ್ಥೈಸಬೇಕು ಎನ್ನುವ ಲೆಕ್ಕಾಚಾರವೇ ತಲೆಕೆಳಗಾಗಿದೆ. ದೇಶದ ಸಂಸತ್ತು ಮತ್ತು ರಾಜ್ಯಗಳ ವಿಧಾನಮಂಡಳಗಳು ಶಾಸನ ರಚಿಸಬೇಕೆನ್ನುವ ತಮ್ಮ ಇರಾದೆಯನ್ನೇ ಮರೆತುಬಿಟ್ಟಿವೆ ಎಂದು ಅನ್ನಿಸುತ್ತಿದೆ. ದೇಶದ ಯಾವುದೇ ಸಾಮಾಜಿಕ ಅಥವಾ ರಾಜಕೀಯ ಸಮಸ್ಯೆಗಳಿಗೆ ಕಾನೂನು ಸಮಾಧಾನ ಹುಡುಕುವ ಸಾಧ್ಯತೆಯೇ ಬದಲಾಗಿದೆ. ಇದಕ್ಕೆ […]

ಸಂವಿಧಾನ ಬದಲಾದರೆ ತಪ್ಪೇನು?

- ರವಿ ಹಂಜ್

ಎಲ್ಲ ಮಹಾನ್ ಚಿಂತನೆಗಳು, ಆವಿಷ್ಕಾರಗಳು ಆರಂಭದಲ್ಲಿ ಅಸಂಬದ್ಧ ಹಾಗೂ ಹಾಸ್ಯಾಸ್ಪದ ಎನ್ನಿಸುತ್ತವೆ. ಇದು ಭೂಮಿ ದುಂಡಾಗಿದೆ ಎಂದ ಗೆಲೆಲಿಯೋನಿಂದ ಹಿಡಿದು ಇಂದಿನ ವಿಡಿಯೋ ಪೂನುಗಳ ಆವಿಷ್ಕಾರದವರೆಗೆ ಎಲ್ಲವೂ ಒಂದೊಮ್ಮೆ ಅಸಂಬದ್ಧವೆನಿಸಿತ್ತು. ಆದರೆ ನವ್ಯ ಭಾರತದಲ್ಲಿ ದಿಟವಾದ ಹತ್ತು ಹಲವಾರು ಅಸಂಬದ್ಧತೆಗಳು ಜನಪರ ಹೋರಾಟ, ಕಾನೂನು, ಶಾಸನಗಳಾಗುತ್ತ ಇಡೀ ದೇಶವನ್ನೇ ಅಸಂಬದ್ಧ ಅತಾರ್ಕಿಕ ಹುಚ್ಚಾಸ್ಪತ್ರೆ ಎನಿಸಿಬಿಡುತ್ತಿವೆ. ಉದಾಹರಣೆಗೆ ಸದ್ಯದ ಸಂಗತಿಗಳನ್ನು ಗಮನಿಸೋಣ. ಸಂಪರ್ಕ ವ್ಯವಸ್ಥೆ: ವಾಹನಗಳ ನೋಂದಣೆಯ ಭಾಗವಾಗಿ ಆಜೀವಪರ್ಯಂತ ರಸ್ತೆ ತೆರಿಗೆ ಕಟ್ಟಿದ್ದರೂ ರಸ್ತೆಗಳಿಗೆ ಟೋಲು ಹಾಕುವ […]

ಸರ್ಕಾರಿ ಆಸ್ಪತ್ರೆ ಹರಾಜು ಹಾಕಿ

ಸರ್ಕಾರಿ ಆಸ್ಪತ್ರೆಗಳನ್ನು ನಡೆಸುವ ಹಕ್ಕನ್ನು ಪ್ರತಿ ವರ್ಷ ಹರಾಜು ಹಾಕಿ ಸರ್ಕಾರಿ-ಖಾಸಗಿ ವೈದ್ಯರಿಗೆ ನಡೆಸಲು ಬಿಡಬಾರದೇಕೆ? ಸರ್ಕಾರಿ ಆಸ್ಪತ್ರೆ ಹರಾಜು ಹಾಕಿ ಪ್ರತಿ ವರ್ಷ ಕರ್ನಾಟಕದ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ನಡೆಸಲು ರೂ.10,000 ಕೋಟಿಗೂ ಮಿಗಿಲಾಗಿ ನಾವು ಖರ್ಚು ಮಾಡುತ್ತೇವೆ. ಆದರೂ ಈ ಸರ್ಕಾರಿ ಆಸ್ಪತ್ರೆಗಳಿಂದ ಹಾಗೂ ಆರೋಗ್ಯ ಕೇಂದ್ರಗಳಿಂದ ಜನರಿಗೆ ಸಿಗುತ್ತಿರುವ ಸೌಲಭ್ಯಗಳು ಅಷ್ಟರಲ್ಲಿಯೇ ಇವೆ. ಜನಸಾಮಾನ್ಯರು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳ ವೈದ್ಯರನ್ನೇ ಬಹುತೇಕ ನೆಚ್ಚಿಕೊಂಡಿದ್ದಾರೆ. ಔಷಧಿಗಂತೂ ಬಹುತೇಕ ಖಾಸಗಿ ಪೂರೈಕೆಯ ಅಂಗಡಿಗಳನ್ನೇ ನಮ್ಮವರು […]

ಮಗಳನ್ನು ಶಾಲೆ ಬಿಡಿಸಿದರೆ ಹೇಗೆ?

- ಗುರುಪ್ರಸಾದ ಕುರ್ತಕೋಟಿ

 ಮಗಳನ್ನು ಶಾಲೆ ಬಿಡಿಸಿದರೆ ಹೇಗೆ? <p><sub> - ಗುರುಪ್ರಸಾದ ಕುರ್ತಕೋಟಿ </sub></p>

ಕಳೆದ ವರ್ಷದಿಂದ ಮಗಳಿಗೆ ಶಾಲೆ ಬಿಡಿಸಿಬಿಡಲೇ ಎಂಬ ಯೋಚನೆ ಬಲವಾಗಿ ಮೂಡತೊಡಗಿದೆ. ಅದಕ್ಕೆ ಕಾರಣಗಳು ಒಂದೇ ಎರಡೇ…? ಅಮೆರಿಕೆಯ ಶಾಲೆಯಲ್ಲಿ ಮಗಳು ಕಲಿಯುತ್ತಿದ್ದಾಗ ಯಾವಾಗಲೂ ಒಂದು ಆತಂಕವಿರುತ್ತಿತ್ತು. ಅವಳು ಅಲ್ಲಿ ಪಾಠಕ್ಕಿಂತ ಇನ್ನೂ ಏನೇನು ಕಲಿತುಬಿಡುವಳೋ ಅಂತ. ಅಲ್ಲಿನವರು ಬಳಸುವ ಕೆಟ್ಟ ಶಬ್ದಗಳು, ಅವರ ಸ್ವೇಚ್ಛೆ ನೋಡಿದ್ದೇ ಆ ಹೆದರಿಕೆಗೆ ಕಾರಣವಿದ್ದಿರಬಹುದು. ಅಲ್ಲಿಂದ ತಪ್ಪಿಸಿಕೊಂಡು ಭಾರತಕ್ಕೆ ಬಂದಾಗ ನಿರಾಳನಾಗಿದ್ದೆ. ಇಲ್ಲಿ ಶಾಲೆ ಶುರುವಾಗಿ ನಿಧಾನವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಮಗಳು ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದಳು. ಅಲ್ಲಿ ಪರೀಕ್ಷೆಗಳೇ ಇರಲಿಲ್ಲ, […]

ಭೂಪರಿವರ್ತನೆಗೆ ನಿರ್ಬಂಧ ಏಕೆ?

ಕರ್ನಾಟಕದ ಯಾವುದೇ ಕೃಷಿ ಭೂಮಿಯನ್ನು ವಸತಿ ಹಾಗೂ ವಾಣಿಜ್ಯ ಬಳಕೆಗೆ ಅನುಮತಿ ನೀಡಿ ಬಳಕೆ ಯೋಗ್ಯ ಭೂಮಿಯ ಕೃತಕ ಕೊರತೆಯನ್ನು ನೀಗಿಸಬಾರದೇಕೆ? ಭೂಪರಿವರ್ತನೆಗೆ ನಿರ್ಬಂಧ ಬೇಕಿಲ್ಲ ಕರ್ನಾಟಕ ಸರ್ಕಾರ ಉದ್ಯಮಶೀಲತೆ, ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಉತ್ತೇಜನ ನೀಡಲು ‘ಕೈಗಾರಿಕೆ ಮತ್ತು ಹೂಡಿಕೆ ನೀತಿ’ಯನ್ನೇ ಹೊಂದಿದೆ. ಒಮ್ಮೊಮ್ಮೆ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‍ಗಳನ್ನೂ ನಡೆಸುತ್ತದೆ. ಕೈಗಾರಿಕೆಗಳಿಗೆ ಸಹಾಯ ಮಾಡಲು ‘ಉದ್ಯೋಗಮಿತ್ರ’ದ ಮೊದಲಾಗಿ ಹಲವಾರು ನಿಗಮ ಮಂಡಳಿಗಳಿವೆ. ಪದೇಪದೇ ಹೈಲೆವಲ್ ಕಮಿಟಿ ಮತ್ತು ಸಿಂಗಲ್ ವಿಂಡೋ ಏಜೆನ್ಸಿಯ ಸಭೆಗಳನ್ನು ನಡೆಸಿ […]

ಭ್ರಷ್ಟಾಚಾರ ಕಡಿವಾಣಕ್ಕೆ ಉಪಾಯ

- ಟಿ.ವಿದ್ಯಾಧರ

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಆಯೋಗವೇ ಪ್ರಚಾರ ಮಾಡಬೇಕು ಹಾಗೂ ಪ್ರಚಾರದ ಖರ್ಚನ್ನು ಅಭ್ಯರ್ಥಿಗಳೇ ಭರಿಸಬೇಕು ಜನ ಸಾಮಾನ್ಯರಿಗೆ ಭ್ರಷ್ಟಾಚಾರದ ಕಾಟ ಹೆಚ್ಚಾಗಿ ಪೊಲೀಸ ರಿಂದ, ಸರ್ಕಾರಿ ನೌಕರರಿಂದ ಆಗಿರುತ್ತದೆ. ಯಾಕಂದರೆ ಆರಂಭದಲ್ಲಿ ಈ ನೌಕರರಿಗೆ ಸಂಬಳ ತುಂಬ ಕಡಿಮೆ ಇತ್ತು. ಆದರೆ ಬರಬರುತ್ತಾ ಅತಿದೊಡ್ಡ ಹುದ್ದೆಯಲ್ಲಿರುವವರೂ ಭ್ರಷ್ಟಾಚಾರದಲ್ಲಿ ತೊಡಗಿದರು. ಸಾಲದ್ದಕ್ಕೆ ಹೆಚ್ಚಿನವರು ಭ್ರಷ್ಟಾಚಾರ ಮಾರ್ಗವೇ ಉತ್ತಮ ಎಂಬ ನಂಬಿಕೆಯಿಂದ ರಾಜಕೀಯಕ್ಕೆ ಧುಮುಕುತ್ತಾರೆ. ಸರಸ್ವತಿಯನ್ನು ಒಲಿಸಿಕೊಳ್ಳಲಾಗದವರು ಶಾಲೆ, ಕಾಲೇಜಿನಲ್ಲೇ ನಾಯಕರಾಗಿ ಮುಂದೆ ರಾಜಕೀಯ ಸೇರುತ್ತಾರೆ. ಇದು […]

ಪಾರ್ಟ್‍ಟೈಮ್ ಉದ್ಯೋಗ ವ್ಯವಸ್ಥೆ

- ವಿನತೆ ಶರ್ಮ

ಉದ್ಯೋಗದಲ್ಲಿ ತೊಡಗಿಕೊಳ್ಳುವ ಸಾಂಪ್ರದಾಯಕ ವ್ಯವಸ್ಥೆಯನ್ನು ಬದಲಾಯಿಸಿ, ಇಪ್ಪತ್ತು, ಮೂವತ್ತು ವಯಸ್ಸಿನ ಹೆಣ್ಣುಗಂಡುಗಳಿಗೆ ತಮ್ಮದೇ ಕುಟುಂಬವನ್ನು ಧ್ಯಾನವಹಿಸಿ, ಮುತುವರ್ಜಿಯಿಂದ, ಹಿರೀಕರ ಸಹಾಯದಿಂದ ಸಲಹುವ ಅವಕಾಶವನ್ನು ಸರಕಾರ, ಉದ್ಯೋಗದಾರರು ಮತ್ತು ಸಮಾಜ ಮಾಡಿಕೊಡಬೇಕು. ಮಹಿಳೆಯರಿಗೆ ಸಿಕ್ಕುವ ಹೆರಿಗೆ ರಜೆಯ ಕಾಲವನ್ನ ಈಗ ಏಳು ವಾರಗಳಿಗೆ ವಿಸ್ತರಿಸಿದ್ದಾರೆ. ಆದರೆ ಈ ಹೊಸ ಕಾನೂನು ಎಲ್ಲಾ ಉದ್ಯೋಗಸ್ಥ ಮಹಿಳೆಯರನ್ನು ತಲುಪುವ ಕಡ್ಡಾಯ ವ್ಯವಸ್ಥೆಯಾಗಬೇಕು. ಹೆಂಗಸರಿಗೆ ಆರು ತಿಂಗಳು ರಜೆ ಸಿಕ್ಕಬೇಕು. ಅಲ್ಲದೆ ಹೊಸದಾಗಿ ಹುಟ್ಟಿದ ಮಗುವಿನ ತಂದೆಗೂ ಸಹ ಕನಿಷ್ಠ ಮೂರು ತಿಂಗಳ […]

ಸಂಪೂರ್ಣ ಉಚಿತ ಸಾರಿಗೆ

ಖಾಸಗಿ ವಾಹನಗಳ ಮೇಲಿನ ತೆರಿಗೆಯನ್ನು ದುಪ್ಪಟ್ಟುಗೊಳಿಸಿ, ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಉಚಿತ ಮಾಡಬಾರದೇಕೆ? ಸಂಪೂರ್ಣ ಉಚಿತ ಸಾರಿಗೆ ಪ್ರಪಂಚದಾದ್ಯಂತ ಸಾರ್ವಜನಿಕ ಸಾರಿಗೆ ಹಳಿಗಳ ಮೇಲೆ ಓಡುತ್ತಿದೆ. ವಿಶ್ವದ ಯಾವುದೇ ಮುಖ್ಯ ನಗರದಲ್ಲಿ ಮೆಟ್ರೋ, ಮಾನೋ, ಎಲಿವೇಟೆಡ್ ಕಾರಿಡಾರ್ ಹಾಗೂ ಪೂರಕ ಬಸ್ ವ್ಯವಸ್ಥೆಯ ಆಧಾರದಲ್ಲಿ ಜನಜೀವನ ಅವಲಂಬಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಮಾತ್ರ ಸಾರ್ವಜನಿಕ ಸಾರಿಗೆ ಖಾಸಗಿ ವಾಹನಗಳಲ್ಲಿಯೇ ಸಂಚರಿಸುವ ಕೆಟ್ಟ ಪದ್ಧತಿ ಬೆಳೆದು ಬಂದಿದೆ. ಇದಕ್ಕೆ ಕಾರಣಗಳು ಹಲವು: ಮೊದಲನೆಯದಾಗಿ ಕಳೆದ 2-3 ದಶಕಗಳಿಂದ […]

ವಿಶ್ವವಿದ್ಯಾನಿಲಯಗಳನ್ನು ಮಾರಿಬಿಡಿ

ಜಿಲ್ಲೆಗೊಂದರಂತೆ ತಲೆಯೆತ್ತಿರುವ ಕರ್ನಾಟಕದ ಸರ್ಕಾರಿ ವಿಶ್ವವಿದ್ಯಾನಿಲಯಗಳು ಅಕ್ಷರಶಃ ಬಿಳಿಯಾನೆಗಳಾಗಿವೆ. ಇವುಗಳನ್ನು ಸಾಕಲೂ ಆಗದೆ, ಕಾಡಿಗೆ ಅಟ್ಟಲೂ ಆಗದೆ, ಕರ್ನಾಟಕ ಸರ್ಕಾರ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದೆ. ರಾಜಕೀಯ ಒತ್ತಡಕ್ಕೆ ಒಳಗಾಗಿ ರಾಜ್ಯಾದ್ಯಂತ ಸರ್ಕಾರಿ ವಿಶ್ವವಿದ್ಯಾನಿಲಯಗಳನ್ನು ತೆರೆಯಲಾಗಿವೆ. ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ಹಲವು ತಾಲ್ಲೂಕು ಕೇಂದ್ರಗಳಲ್ಲಿ ಸ್ನಾತಕೋತ್ತರ ಶಾಖೆಗಳನ್ನು ತೆರೆಯಲಾಗಿದೆ. ಆದರೆ ಈ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಪ್ರಾಧ್ಯಾಪಕರಿರಲಿ, ಅಧ್ಯಾಪಕರೂ ಇಲ್ಲ. ಬಹುತೇಕ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿರುವ ಅರೆಕಾಲಿಕ ಉಪನ್ಯಾಸಕರಿಂದ ಈ ವಿವಿಗಳು ಶಿಕ್ಷಣ ಬೋಧಿಸುತ್ತಿವೆ. ಶಿಕ್ಷಕೇತರ ಸಿಬ್ಬಂದಿಯಂತೂ […]

ಶಾಲೆಗಳ ನಡುವೆ ಶುಲ್ಕ ಸ್ಪರ್ಧೆ

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರಿಗೆ ಸ್ಪರ್ಧಾತ್ಮಕವಾಗಿ ಫೀಸ್ ಕಟ್ಟಿಸಿಕೊಳ್ಳಲು ಅವಕಾಶ ನೀಡಿ ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಿಸಬಾರದೇಕೆ? ಸರ್ಕಾರಿ ಖಾಸಗಿ ಶಾಲೆಗಳ ನಡುವೆ ಶುಲ್ಕ ಸ್ಪರ್ಧೆ ಸರ್ಕಾರಿ ಶಾಲೆಗಳಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೆ, ಈ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟವೂ ಕುಸಿಯುತ್ತಿದೆ ಎಂಬ ದೂರಿದೆ. ಈ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಹಾಗೂ ಸದ್ಯಕ್ಕೆ 2-3 ಶಾಲೆಗಳನ್ನು ಒಂದುಗೂಡಿಸಿಯಾದರೂ ನಡೆಸಬೇಕು ಎಂಬ ಮಾತು ಸರ್ಕಾರಿ ವಲಯಗಳಲ್ಲಿ ಪದೇಪದೇ ಕೇಳಿಬಂದಿದೆ. ಕನ್ನಡ ಮಾಧ್ಯಮದ ಮತ್ತು ಸರ್ಕಾರಿ ಶಾಲೆಗಳನ್ನು […]

ಸುಲಭ ಲಂಚ-ಸಕಾಲ ಸೇವೆ

ಪ್ರತಿಯೊಂದು ಸರ್ಕಾರಿ ಕೆಲಸಕ್ಕೆ ನೀಡಬೇಕಾದ ಲಂಚವನ್ನು ಆನ್‍ಲೈನ್ ಮೂಲಕವೇ ಪಾವತಿಸಲು ಅನುಕೂಲ ಮಾಡಿ ‘ಸಕಾಲ’ ಯೋಜನೆಯನ್ನು ಯಶಸ್ವಿ ಮಾಡಬಾರದೇಕೆ? ಸುಲಭ ಲಂಚ-ಸಕಾಲ ಸೇವೆ ‘ಸಕಾಲ’ ಸೇವಾ ಯೋಜನೆಯನ್ನು ಸಗೌರವದೊಂದಿಗೆ ಸಂಸ್ಕಾರ ಮಾಡುವ ‘ಕಾಲ’ ಬಂದಿದೆಯೆಂದು ನಿಮಗೆ ಅನಿಸಿರಬಹುದು. ವರ್ಷದಿಂದ ವರ್ಷಕ್ಕೆ ಭ್ರಷ್ಟಾಚಾರದ ಸ್ವರೂಪ, ಪ್ರಮಾಣ ಮತ್ತು ಪರಿಣಾಮಗಳು ಹೆಚ್ಚುತ್ತಲೇ ಹೋಗುತ್ತಿವೆ. ಕಳೆದ 20 ವರ್ಷಗಳಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲಾ ರಾಜ್ಯ ಸರ್ಕಾರಗಳೂ ಹಿಂದಿನ ಸರ್ಕಾರದ ಹೋಲಿಕೆಯಲ್ಲಿ ಹೆಚ್ಚಿನ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪವಿದೆ. ರಾಜ್ಯ ಮಟ್ಟದಲ್ಲಿ ನಡೆಯುವ […]

ಭಾಷೆ ಬೇರ್ಪಡಿಸದಿರಲಿ

- ಸಾರಾ ಅಬೂಬಕ್ಕರ

ಬೆಸೆಯುವ ಭಾಷೆ ಬೇರ್ಪಡಿಸದಿರಲಿ ಕನ್ನಡವೆಂದರೆ ಅಸ್ಮಿತೆ, ಕನ್ನಡವೆಂದರೆ ಅನನ್ಯತೆ, ಕನ್ನಡವೆಂದರೆ ಆದ್ಯತೆ ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇಂದು ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿಯುತ್ತದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಬೆಂಗಳೂರಿ ನಲ್ಲಿ ಕನ್ನಡ ಭಾಷೆಯನ್ನು ಹುಡುಕುವ ಪರಿಸ್ಥಿತಿ ಇದೆಯೆನ್ನಲಾಗುತ್ತಿದೆ. ಮಂಗಳೂರಿನಲ್ಲಿ ಪರಿಸ್ಥಿತಿ ಅಷ್ಟು ಕೆಟ್ಟಿಲ್ಲವಾದರೂ ಉತ್ತಮವಾಗಿಯೇನೂ ಇಲ್ಲ. ಲಿಪಿ ಇಲ್ಲದ ಕೆಲವು ಭಾಷೆಗಳು ಮಂಗಳೂರಿನಲ್ಲಿರುವುದರಿಂದ ಹಾಗೂ ಆ ಭಾಷೆಗಳಲ್ಲಿ ಸಾಹಿತ್ಯ ಅಕಾಡೆಮಿಗಳಿರುವುದರಿಂದ ಈ ಲಿಪಿಯನ್ನು ಜನರು ಮರೆಯಲಾರರು. ಆದರೆ ಕನ್ನಡ ಭಾಷೆಯ ಸಾಹಿತ್ಯದ ಕುರಿತು ಚಿಂತಿಸುವಾಗ ಈ […]

ಮಕ್ಕಳಿಗೆ ರಾಜಕೀಯ ನಾಯಕತ್ವ ವರ್ಗಾವಣೆ

ತಂದೆಯಿಂದ ಮಕ್ಕಳಿಗೆ ರಾಜಕೀಯ ನಾಯಕತ್ವ ವರ್ಗಾವಣೆ ವಂಶಾಡಳಿತ ಒಪ್ಪಿಕೊಳ್ಳಬಾರದೇಕೆ? ವಾಕ್ ಸ್ವಾತಂತ್ರ್ಯ ಹಾಗೂ ರಾಜಕೀಯ ಸ್ವಾತಂತ್ರ್ಯದ ಮುಕ್ತ ಪ್ರಜಾಪ್ರಭುತ್ವದಲ್ಲಿ ನಾವಿದ್ದೇವೆ ಎಂದು ಹಲವು ಬಾರಿ ಗರ್ವದಿಂದ ಹೇಳಿಕೊಳ್ಳುತ್ತೇವೆ. ಆದರೆ ನಮ್ಮ ಸೋಗಲಾಡಿತನದ ಮುಸುಕು ತೆಗೆದು ನೋಡಿದರೆ ಯಜಮಾನಿಕೆ-ದಾಸ್ಯತ್ವ ಬಯಸುವ ಊಳಿಗಮಾನ್ಯದ (ಫ್ಯೂಡಲ್) ರಾಜಕೀಯ ವ್ಯವಸ್ಥೆ ನಮ್ಮನ್ನು ಕೆಣಕು ತ್ತಿದೆ. ದೇಶದಲ್ಲಿ ಬಹುಪಕ್ಷಗಳ ಸ್ಪರ್ಧಾತ್ಮಕ ಪ್ರಜಾಪ್ರಭುತ್ವವನ್ನು ನಾವು ಹೊಂದಿದ್ದೇವೆ ಎಂಬ ನಮ್ಮ ನಂಬಿಕೆ ನೆಪಮಾತ್ರಕ್ಕೆ ಎಂದು ತಿಳಿಯುತ್ತದೆ. ನಿಜವಾಗಿ ಹೇಳಬೇಕೆಂದರೆ ಆಂತರಿಕ ಪ್ರಜಾಪ್ರಭುತ್ವವುಳ್ಳ ಒಂದೇ ಒಂದು ರಾಜಕೀಯ ಪಕ್ಷವೂ […]

1 4 5 6