ಸಮಾಜಮುಖಿ ದುಂಡುಮೇಜಿನ ಸಭೆ

ಇದೀಗ ‘ಚಿಂತನಶೀಲ ಸಮಾಜಮುಖಿ’ ಮಾಸಪತ್ರಿಕೆ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಈ ಹರ್ಷ ಹಂಚಿಕೊಳ್ಳಲು, ಪರಾಮರ್ಶೆಗೆ ಈಡಾಗಲು, ಸಲಹೆಗಳಿಗೆ ಕಿವಿಗೊಡಲು ಜನವರಿ 13ರಂದು ಬೆಂಗಳೂರಿನ ಗಾಂಧೀಭವನದಲ್ಲಿ ಲೇಖಕರ ಮತ್ತು ಓದುಗರ ದುಂಡುಮೇಜಿನ ಸಭೆ ಏರ್ಪಡಿಸಲಾಗಿತ್ತು. ಪತ್ರಿಕೆ ಸಾಗುತ್ತಿರುವ ದಿಕ್ಕು, ದಾರಿ ಸರಿಯಿದೆಯೇ? ಓದುಗರ ನಿರೀಕ್ಷೆಗೆ ತಕ್ಕಂತೆ ಪತ್ರಿಕೆ ರೂಪುಗೊಳ್ಳುತ್ತಿದೆಯೇ? ಲೇಖಕರ ಅಭಿಪ್ರಾಯವೇನು? ಪತ್ರಿಕೆಯ ಲೋಪದೋಷಗಳೇನು? ಆಗಬೇಕಿರುವ ಸುಧಾರಣೆಗಳೇನು? …ಈ ಎಲ್ಲವನ್ನೂ ತಿಳಿಯುವ, ತಿದ್ದಿಕೊಳ್ಳುವ ವಿನಮ್ರ ಉದ್ದೇಶದಿಂದ ಹಮ್ಮಿಕೊಂಡ ಸಭೆಯಿದು. ಅಂದು ಸಮಾಜಮುಖಿ ಕರೆಗೆ ಓಗೊಟ್ಟವರು 40ಕ್ಕೂ ಹೆಚ್ಚು ಲೇಖಕರು, […]

ಕಾಲಾಯ ತಸ್ಮೈ ನಮಃ

-ಅಜೀತಕುಮಾರ ಮಡಿವಾಳ

ಅಂತರ್ಜಾಲದ ಆವಿಷ್ಕಾರ ಒಂದು ಕ್ರಾಂತಿಕಾರಕ ಹೆಜ್ಜೆಯೆಂದೇ ಪರಿಗಣಿಸಲ್ಪಟ್ಟರೂ ಸದ್ಯದ ಮಟ್ಟಿಗೆ ನಮ್ಮಲ್ಲಿ ಉಪಯೋಗಕ್ಕಿಂತ ಹೆಚ್ಚು ದುರುಪಯೋಗ ಆಗಿರುವುದನ್ನೇ ಕಾಣುತ್ತೇವೆ. ಯಾಕಿರಬಹುದು? ‘ಮಂಗನ ಕೈಯಲ್ಲಿನ ಮಾಣಿಕ್ಯ’ ದಂತೆ ಈ ಶಕ್ತಿಶಾಲಿ ಮಂತ್ರದಂಡವನ್ನು ನಾವು ಅರಿಯದವರ ಕೈಯಲ್ಲಿಟ್ಟಿದ್ದೇವೆ. ದ್ವಿತೀಯ ಪಿಯು ಓದುತ್ತಿರುವ ಸುಜಾತಳಿಗೆ ಅವಳ ಓದಿಗೆ ಅನುಕೂಲವಾಗಲೆಂದು ಹೊಸ ಮೊಬೈಲ್ ತಂದುಕೊಟ್ಟಾಗಿನಿಂದ ಮನೆಯಲ್ಲಿ ಮಾತು ಕಡಿಮೆ ಮಾಡಿದ್ದಳು. ಮುಂದೆಯೇ ಇದ್ದ ಅಪ್ಪಅಮ್ಮರ ಜೊತೆ ಬೆರೆಯದೇ ಮೊಬೈಲ್ ಹಿಡಿದು ಚಾಟ್ ಮಾಡುತ್ತಲೋ ವಿಡಿಯೋ ನೋಡುತ್ತಲೋ ಕಳೆದುಹೋಗಿರುತ್ತಿದ್ದಳು. ಕೆಲವೊಮ್ಮೆ ಅಮ್ಮ ಊಟಕ್ಕೆ ಕರೆದರೂ […]

ತಿಂಗಳ ಓದುಗ

ಮುಖ್ಯಚರ್ಚೆ ಪುಸ್ತಕವಾಗಲಿ ‘ಸಮಾಜಮುಖಿ’ ತನ್ನ ಮೊದಲನೆಯ ವರ್ಷವನ್ನು ಯಶಸ್ವಿಯಾಗಿ ಮುಗಿಸಿ ಎರಡನೆಯ ವರ್ಷಕ್ಕೆ ಯೋಗ್ಯ ಮುಖ್ಯಚರ್ಚೆಯೊಂದಿಗೆ ತನ್ನ ಮೊದಲ ಹೆಜ್ಜೆಯಿರಿಸಿರುವುದು ಸಮಾಧಾನ ಮತ್ತು ಸಂತಸದ ವಿಷಯ. ಮೊದಲ ವರ್ಷದ ಮುಖ್ಯಚರ್ಚೆಗಳು ತಕ್ಕ ಪರಿಷ್ಕಾರ ಮತ್ತು ಹಿನ್ನೆಲೆಮುನ್ನೆಲೆಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗಿ ಆದಷ್ಟು ಬೇಗ ಓದುಗರ ಕೈಸೇರುವುದು ಆವಶ್ಯಕ. ಯಾಕೆಂದರೆ ಮೂಲ ವಿಜ್ಞಾನ ಕುರಿತ ಮುಖ್ಯಚರ್ಚೆ ಸಮಸ್ಯೆಗಳು ಬಿಂಬ ಪ್ರತಿಬಿಂಬಗಳೊಂದಿಗೆ ವಿಸ್ತಾರವಾಗಿ ಚರ್ಚೆಗೊಂಡು ಯೋಜಿತ ಒಳನೋಟಗಳಿಂದಲೂ ಕೂಡಿ ಗಮನಾರ್ಹವಾಗಿವೆ. ಭೂಮಿಯ ಮೇಲೆ ಇನ್ನುಳಿದಿರುವ 98 ವರ್ಷಗಳಲ್ಲಿಯಾದರೂ ದೇವಮಾನವರಾಗಲು ಬೇಕಾದ […]

ವಿಜ್ಞಾನ ವಿನಾಶವೇ?

-ಡಾ.ಉಮಾ ವೆಂಕಟೇಶ್

ತೀವ್ರ ವೇಗದಲ್ಲಿ ಜರುಗುತ್ತಿರುವ ಬದಲಾವಣೆಗಳನ್ನು ತಡೆದುಕೊಳ್ಳುವ ಶಕ್ತಿಯಿಲ್ಲದ ಹಿಂದಿನಪೀಳಿಗೆ ಸತತವಾಗಿ ಆಘಾತಗಳನ್ನು ಎದುರಿಸುತ್ತಿರುವುದು ಒಂದು ಸಾಮಾಜಿಕ ಸಮಸ್ಯೆಯೆನಿಸಿದೆ. ತಮ್ಮ ಜೀವನಮೌಲ್ಯಗಳನ್ನು ಬಿಡಲಾಗದೆ, ಬದಲಾಗುತ್ತಿರುವ ಮೌಲ್ಯಗಳಿಗೆ ಹೊಂದಿಕೊಳ್ಳಲಾಗದೆ, ಯುವಪೀಳಿಗೆಯೊಂದಿಗೆ ನಡೆಸಬೇಕಾದ ಸಂಘರ್ಷಗಳಿಗೆ ತತ್ತರಿಸುತ್ತಿರುವ ಹಿರಿಯಪೀಳಿಗೆಯ ಧ್ವನಿಗಳನ್ನು ಕೇಳುವವರಿಲ್ಲ. ನಮ್ಮ ಸೌರಮಂಡಲದಲ್ಲೇ ಅನನ್ಯ ಗ್ರಹವಂತೆ ನೀಲವರ್ಣದ ಈ ಮನಮೋಹಕ ಭೂಮಿ. ಹೀಗೆಂದು ವರ್ಣಿಸಿದ ವ್ಯಕ್ತಿ ಮೊದಲ ಬಾಹ್ಯಾಕಾಶ ಯಾತ್ರಿ ರಶ್ಯನ್ ಯೂರಿ ಗಗಾರಿನ್. ಮಾನವ ಬಾಹ್ಯಾಕಾಶ ಪ್ರವೇಶಿಸಿದ 60ರ ದಶಕದಲ್ಲಿ ಜನಿಸಿದ ನನಗೆ, ಶಾಲಾ ದಿನಗಳಿಂದಲೇ ವಿಜ್ಞಾನದ ಬಗ್ಗೆ ಒಲವು. […]

‘ಕಾಲ’ದ ನಂತರ…

-ಪುರುಷೋತ್ತಮ ಆಲದಹಳ್ಳಿ

ಜೀವರಹಿತ ಕಂಪ್ಯೂಟರ್ ಕಾರ್ಬನ್ ಅಣುಗಳು ಮೆದುಳಿನ ಜೈವಿಕ ಕಾರ್ಬನ್ ಕೋಶಗಳೊಡನೆ ಸಂಪರ್ಕ-ಸಂವಹನ ಹೊಂದುವ ಆವಿಷ್ಕಾರ ಮುಂದಿನ ವರ್ಷಗಳಲ್ಲಿ ನಮ್ಮೆದುರು ಕಾಣುವ ಎಲ್ಲಾ ದಟ್ಟ ಸಾಧ್ಯತೆಗಳಿವೆ. ಇದರೊಡನೆ ಜೀವರಹಿತ ಕಂಪ್ಯೂಟರ್ ಕೋಶಗಳು ಜೀವಿತ ಅಣುಗಳೊಂದಿಗೆ ಸಂಭಾಷಿಸುವ ಸಾಧ್ಯತೆಯಲ್ಲಿ ನಮ್ಮೆಲ್ಲಾ ಜ್ಞಾನ ಪ್ರಪಂಚಗಳು ಅಮರವಾಗಲಿವೆ. ನಮ್ಮ ಬಳಿಯ ಮಾಹಿತಿ, ಅನುಭವ ಹಾಗೂ ತಿಳಿವಳಿಕೆಗಳೇ ನಮ್ಮ ಬುದ್ಧಿಮತ್ತೆಯನ್ನು ನಿರ್ಧರಿಸುತ್ತವೆ. ಇವುಗಳನ್ನು ಪಡೆಯಲೆಂದೇ ನಾವು ಕೋಶವನ್ನು ಓದುವ ಮತ್ತು ದೇಶವನ್ನು ನೋಡುವ ಸಾಹಸದಲ್ಲಿ ನಮ್ಮ ಯೌವನಾವಸ್ಥೆಯನ್ನು ಕಳೆಯುತ್ತೇವೆ. ತಕ್ಕಮಟ್ಟಿಗೆ ನಮ್ಮ ಅರಿವಿನ ಪ್ರೌಢಿಮೆ […]

ದ ಗ್ರೇಟ್ ಡಿರೇಂಜಮೆಂಟ್ ಕೃತಿಯ ಆಯ್ದ ಭಾಗಗಳು

-ಅಮಿತಾವ್ ಘೋಷ್

ಅಮಿತಾವ್ ಘೋಷ್ ಇಂಗ್ಲಿಷಿನಲ್ಲಿ ಬರೆಯುವ ಭಾರತೀಯ ಮೂಲದ ಅತ್ಯುತ್ತಮ ಬರಹಗಾರರಲ್ಲೊಬ್ಬರು. ಪ್ರಮುಖವಾಗಿ ಕಾದಂಬರಿ ಮತ್ತು ಪ್ರಬಂಧ ಪ್ರಕಾರಗಳಲ್ಲಿ ತಮ್ಮ ಸಾಹಿತ್ಯಕೃಷಿ ನಡೆಸುವ ಘೋಷ್ 2018ರ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಜ್ಞಾನಪೀಠವನ್ನು ಪಡೆದ ಮೊದಲ ಇಂಗ್ಲಿಷ್ ಸಾಹಿತಿಯಿವರು. ಮಾನವಶಾಸ್ತ್ರ ಮತ್ತು ಇತಿಹಾಸಗಳನ್ನು ಗಂಭೀರವಾಗಿ ಅಭ್ಯಸಿಸಿರುವ ಘೋಷ್ ಹವಾಮಾನ ವೈಪರೀತ್ಯಗಳ ಬಗ್ಗೆ ದ ಗ್ರೇಟ್ ಡಿರೇಂಜಮೆಂಟ್ ಎಂಬ ಕೃತಿಯನ್ನು ರಚಿಸಿದ್ದಾರೆ. ಇದರ ಮೊದಲ ಭಾಗದ ಮೂರು ಮತ್ತು ನಾಲ್ಕನೆಯ ಅಧ್ಯಾಯಗಳಿಂದ ಆಯ್ದ ಭಾಗಗಳನ್ನು ಇಲ್ಲಿ ಅನುವಾದಿಸಲಾಗಿದೆ. ನಮ್ಮ ಕಾಲದ ಅತ್ಯಂತ […]

ಚಲನಚಿತ್ರೋತ್ಸವ ಅದ್ದೂರಿಯೋ? ಅರ್ಥಪೂರ್ಣವೋ?

-ಮಂಜುಳಾ ಪ್ರೇಮಕುಮಾರ್.

ಇತ್ತೀಚೆಗೆ ಗೋವಾದ ಪಣಜಿಯಲ್ಲಿ ಮುಕ್ತಾಯಗೊಂಡ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಒಟ್ಟಾರೆ ಚಿತ್ರೋತ್ಸವಗಳನ್ನು ಕುರಿತ ಅವಲೋಕನ ಇಲ್ಲಿದೆ. ಭಾರತದ ಅಂತರರಾಷ್ಟ್ರೀಯ (ಪಣಜಿ) ಚಲನ ಚಿತ್ರೋತ್ಸವದ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಗುಣಮಟ್ಟ ಹೆಚ್ಚಿಸುವ ಮಾತುಗಳು ಪ್ರತಿವರ್ಷ ಚಿತ್ರೋತ್ಸವದ ಸಂದರ್ಭದಲ್ಲಿ ಕೇಳಿಬರುತ್ತವೆ. ಆದರೆ ಪರಿಸ್ಥಿತಿ ಸುಧಾರಿಸಿಲ್ಲ. ಚಿತ್ರೋತ್ಸವದ ಗುಣಮಟ್ಟ ಎಂದರೆ ಅಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಗುಣಮಟ್ಟ. ಮುಂದಿನ ವರ್ಷ(2019) ನಡೆಯುವ ಚಿತ್ರೋತ್ಸವ 50ನೆಯದು. ಅದನ್ನು ಅದ್ದೂರಿಯಾಗಿ ನಡೆಸುವ ಮಾತುಗಳನ್ನು ಕೇಂದ್ರ ವಾರ್ತಾ ಸಚಿವರು ಆಡಿದ್ದಾರೆ. ಅದ್ದೂರಿ ಎಂದರೆ ಏನು? […]

ಕಣ್ಮರೆಯಾಗುತ್ತಿರುವ ಗೋಲಿ ಆಟ

-ಕೆ.ವಿ.ಪರಮೇಶ್.

ಆಧುನಿಕತೆಯ ಅಬ್ಬರ ನಮ್ಮ ಹಳ್ಳಿಸೊಗಡಿನ ಆಟವನ್ನು ನಿರ್ಲಕ್ಷಿಸುವಂತೆ ಮಾಡುತ್ತಿದೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಗೋಲಿ ಆಟ. ಈ ಆಟದ ಪ್ರಮುಖ ಉದ್ದೇಶ ಮಾನಸಿಕ ಸ್ಥೈರ್ಯ, ಏಕಾಗ್ರತೆ ಮತ್ತು ನಿರ್ದಿಷ್ಟ ಗುರಿಯ ಚಾಕಚಕ್ಯತೆ. ಯಾವುದೇ ಒಂದು ಆಟ ಎನ್ನುವುದು ಕೇವಲ ಮನರಂಜನೆಗೆ ಸೀಮಿತವಾದುದಲ್ಲ. ಬದಲಿಗೆ ಮಾನಸಿಕ ಸ್ಥೈರ್ಯ ಹಾಗೂ ಆಟಗಾರನಲ್ಲಿ ಹುಮ್ಮಸ್ಸು ಮತ್ತು ಚೈತನ್ಯಶಕ್ತಿಯನ್ನು ಅದು ವೃದ್ಧಿಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಗ್ರಾಮೀಣ ಕ್ರೀಡೆಗಳು ಈವತ್ತಿಗೂ ಜೀವಂತಿಕೆಯಲ್ಲಿವೆ. ಹಾಗಿದ್ದು ಆಧುನಿಕತೆಯ ಅಬ್ಬರ ನಮ್ಮ ಹಳ್ಳಿಸೊಗಡಿನ ಆಟವನ್ನು ನಿರ್ಲಕ್ಷಿಸುವಂತೆ […]

ಹೆಗ್ಗಡದೇವನಕೋಟೆ ಬಳಿಯ ಚಿಕ್ಕದೇವಮ್ಮ ಬೆಟ್ಟ

-ಎಲ್.ಚಿನ್ನಪ್ಪ.

ಬೆಟ್ಟದ ಮೇಲೆ ನಿಂತು ನೋಡಿದರೆ ನಾಲ್ಕು ದಿಕ್ಕುಗಳಲ್ಲಿ ಸುತ್ತಲೂ ಕಾಣುವ ಸಾಲುಸಾಲು ಹಸಿರುಹೊದ್ದ ನಿಸರ್ಗ ರಾಶಿಯ ರಮಣೀಯ ದೃಶ್ಯಗಳು ವಿಸ್ಮಯ ಮೂಡಿಸುತ್ತವೆ. ಸೃಷ್ಟಿಯ ಸೊಬಗನ್ನು ಸವಿಯಲು ದೂರ ಹೋಗಬೇಕಾಗಿಲ್ಲ; ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿಕೊಂಡು ಸಾವಿರಾರು ಕಿ.ಮೀ. ದೂರವಿರುವ ವಿದೇಶಗಳಿಗೆ ಹೋಗಬೇಕಾಗಿಲ್ಲ. ಇಲ್ಲೇ ನಮ್ಮ ದೇಶದಲ್ಲೇ ನಾಡಲ್ಲೇ ಅಂತಹ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿವೆ. ನಮ್ಮ ಕೈಗೆಟುಕುವ ಬಜೆಟ್‍ನಲ್ಲಿಯೇ ನೋಡಿಬರುವಂತಹ ಸ್ಥಳಗಳು ಅತಿ ಸಮೀಪವೇ ಇವೆ. ಆದರೆ ಅಂತಹ ಸ್ಥಳಗಳು ಯಾವುವು ಮತ್ತು ಎಲ್ಲಿವೆ ಎಂಬುದು ಹೆಚ್ಚಾಗಿ ಬೆಳಿಕಿಗೆ ಬಂದಿಲ್ಲ. […]

ಮತೀಯ ಸಾಮರಸ್ಯದ ವಿಶಿಷ್ಟ ಮಾದರಿ

-ಪ.ರಾಮಕೃಷ್ಣ ಶಾಸ್ತ್ರಿ.

ಇಂತಹ ಸ್ನೇಹಪರರ ಊರಿನ ಸಹಜೀವನ, ಸಮಾನತೆಯ ಸಂಕೇತ ಸುದ್ದಿಯಾಗಿಲ್ಲ. ಹೀಗಾಗಿ ಸರಕಾರ ಈ ಊರಿಗೆ ಒಂದು ಸಾರ್ವಜನಿಕ ಶೌಚಾಲಯ ಕೊಟ್ಟಿಲ್ಲ! ಇದು ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಗ್ರಾಮ. ಮತದಾರರ ಸಂಖ್ಯೆ ಹೆಚ್ಚೆಂದರೆ ಎಂಟುನೂರು ಇರಬಹುದು. ಇಲ್ಲಿ ಎರಡು ದೇವಾಲಯಗಳಿವೆ, ಒಂದು ಮಸೀದಿ ಇದೆ. ಇಗರ್ಜಿಯಿದೆ. ಆದರೆ ಇಷ್ಟು ಜನಸಂಖ್ಯೆಯಿದ್ದರೂ ಒಂದು ಬ್ಯಾಂಕು ಇಲ್ಲ. ಹಣಕಾಸಿನ ವ್ಯವಹಾರಕ್ಕೆ ಜನರು ಎರಡು ಮೈಲು ದೂರದ ಬೇರೆ ಊರಿಗೆ ಹೋಗುವುದು ಅನಿವಾರ್ಯ. ಪ್ರಾಥಮಿಕ ಚಿಕಿತ್ಸಾ ಕೇಂದ್ರವಿಲ್ಲ. ಹಾಗೆಯೇ ಎರಡು ಶಾಲೆಗಳಿವೆ, […]

ರನ್ನನ ಗದಾಯುದ್ಧ ಭೀಮ ದುರ್ಯೋಧನರ ಮುಖಾಮುಖಿ

-ಡಾ.ಗಾಯಿತ್ರಿ ಟಿ.

ಕವಿಚಕ್ರವರ್ತಿ, ಕವಿರತ್ನ ಮುಂತಾದ ಬಿರುದುಗಳನ್ನು ಪಡೆದುಕೊಂಡಿರುವ ರನ್ನ ರತ್ನತ್ರಯರಲ್ಲಿ ಮೂರನೆಯವನಾಗಿದ್ದಾನೆ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ರನ್ನ ಕನ್ನಡ ಸಾಹಿತ್ಯಲೋಕಕ್ಕೆ ಅಜಿತನಾಥ ಪುರಾಣ, ಸಾಹಸಭೀಮವಿಜಯ (ಗದಾಯುದ್ಧ) ಮೊದಲಾದ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾನೆ. ರನ್ನನ ಸಾಹಸಭೀಮ ವಿಜಯ ಅಥವಾ ಗದಾಯುದ್ಧ ಕಾವ್ಯಕ್ಕೆ ಮಾಹಾಭಾರತದ ಕಥೆ ವಸ್ತುವಾಗಿದ್ದರೂ ಭಾಸನ ‘ಊರು ಭಂಗ’ ಹಾಗೂ ಪಂಪನ ‘ವಿಕ್ರಮಾರ್ಜುನ ವಿಜಯ’ ಪ್ರಮುಖ ಪ್ರೇರಣೆಗಳಾಗಿವೆ. ಗದಾಯುದ್ಧ ಕೃತಿಯು ಭೀಮನನ್ನು ನಾಯಕನನ್ನಾಗಿ, ದುರ್ಯೋಧನನನ್ನು ಪ್ರತಿನಾಯಕನಾಗಿಟ್ಟುಕೊಂಡು ರಚಿತವಾದಂತಹ ಕೃತಿಯಾಗಿದೆ. ಇಲ್ಲಿ ಆಶ್ರಯದಾತನಾದ ಸತ್ಯಾಶ್ರಯ ಇರವೆಬೆಡಂಗನನ್ನು ಮಹಾಭಾರತದ ಭೀಮನಿಗೆ ಸಮೀಕರಿಸಲಾಗಿದೆ. […]

ಮಾಲ್ ಎಂಬ ಹೈಟೆಕ್ ಸಂತೆ

-ನೂತನ ದೋಶೆಟ್ಟಿ.

ಕೈತುಂಬ ಚೀಲಗಳಲ್ಲಿ ಬೇಡದ್ದು ಬೇಕಾದ್ದು ಎಲ್ಲ ತುಂಬಿಕೊಂಡಿದ್ರೂ ಏನೋ ಖಾಲಿಖಾಲಿ. ನೂರಾರು ರೂಪಾಯಿ ಕೊಟ್ಟು ರುಚಿ ರುಚಿ ಐಸ್ಕ್ರೀಂ ತಿಂದ್ರೂ ಅಮ್ಮ ತರುತ್ತಿದ್ದ ಕೇವಲ ಇಪ್ಪತ್ತೈದು ಪೈಸೆಯ ದೂಧ್ ಐಸ್‍ನಂತೆ ಹೊಟ್ಟೆ, ಮನಸ್ಸು ಎರಡೂ ತಂಪಾಗಲ್ಲ. ಸಣ್ಣ ಪಟ್ಟಣಗಳಲ್ಲಿ ವಾರದ ಒಂದು ದಿನ ‘ಸಂತೆ ದಿನ’ ವಾಗಿರುತ್ತದೆ. 2-3 ದಶಕಗಳ ಹಿಂದಿನವರೆಗೂ ಅಲ್ಲಿ ಬಹುತೇಕ ಕೃಷಿಕರು ಹಾಗೂ ಸಣ್ಣ ವ್ಯಾಪಾರಸ್ಥರು ನೆಲೆಸಿದ್ದರಲ್ಲ; ಅವರೆಲ್ಲ ವಾರದಲ್ಲಿ ಒಂದು ದಿನ ಬಿಡುವು ಮಾಡಿಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಲೋ ಅಥವಾ ಮಾರಾಟ […]

ನನ್ನ ಕ್ಲಿಕ್ಸ್

ಇಳಿಹೊತ್ತು ಇಳಿಹೊತ್ತುಅಂಡಮಾನಿನ ರಾಧಾನಗರ ಬೀಚಿನಲ್ಲಿ ಮೀನಿಗಾಗಿ ದಿನದ ಕೊನೆಯ ಹುಡುಕಾಟಕ್ಕೆ ಸಜ್ಜಾಗುತ್ತಿರುವ ಸ್ಥಳೀಯ ಮೀನುಗಾರರು. ಈ ಚಿತ್ರವನ್ನು ತೆಗೆಯುವ ಸಮಯದಲ್ಲಿ ಅಲ್ಲಿ ಇದ್ದದ್ದು ನೂರಾರು ಜನ. ಆದರೆ ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಇವರಿಬ್ಬರೇ. ಇವರು ಮರಳಿ ಬಂದಾಗ, ಹಿಡಿದು ತಂದ ಮೀನುಗಳೆಲ್ಲಾ ಕ್ಷಣಾರ್ಧದಲ್ಲಿ ಮಾರಾಟವಾದವು.                                             […]

ಕರ್ನಾಟಕ ಸಂಸ್ಕೃತಿ ಮತ್ತು ಕರ್ನಾಟಕದ ಕಲ್ಪನೆ

-ರಹಮತ್ ತರೀಕೆರೆ.

ವಿಭಿನ್ನ ಮೌಲ್ಯಗಳ ತಿಕ್ಕಾಟಗಳ ಒಳಗೆ ಕರ್ನಾಟಕ ಕಲ್ಪನೆಯು ಮೂಡುತ್ತಿದೆ. ಕರ್ನಾಟಕದ ಕಲ್ಪನೆ ಮುಗಿದ ಕ್ರಿಯೆಯಲ್ಲ. ನಡೆಯುತ್ತಲೇ ಇರುವ ಪ್ರಕ್ರಿಯೆ. ಹುಯಿಲಗೋಳರ `ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಹಾಡನ್ನು ಏಕೀಕರಣದ ಬಳಿಕ ಹಾಡಬಾರದು ಎಂಬ ಮಾತು ಬಂದಾಗ, ಬೇಂದ್ರೆ ಹೇಳಿದರಂತೆ: `ಕರ್ನಾಟಕ ಏಕೀಕರಣ ಆಗಿದೆ. ಚೆಲುವ ಕನ್ನಡನಾಡು ಇನ್ನೂ ಉದಿಸಿಲ್ಲ. ಅದು ನಿರಂತರ ಉದಿಸುತ್ತಲೇ ಇರಬೇಕು’ ಎಂದು. ಈ ಮಾತು ಕರ್ನಾಟಕದ ಕಲ್ಪನೆಗೂ ಅನ್ವಯವಾಗುತ್ತದೆ. ಒಂದು ಪ್ರದೇಶದ ಜನರ ನಂಬಿಕೆ, ಚಿಂತನಕ್ರಮ ಹಾಗೂ ಬದುಕುವ ವಿಧಾನವನ್ನು ಅರ್ಥಾತ್ ನಡೆ-ನುಡಿಯನ್ನು […]

ಹೊಸ ಪುಸ್ತಕ

ಸ್ಮರಣೆಗೆ ಶರಣಾದೆ ಇಂದಿರಾ ಹಾಲಂಬಿ ಪುಟ: 170, ಬೆಲೆ: ರೂ.160 ಪ್ರಕಾಶನ: ಸಂದೀಪ ಸಾಹಿತ್ಯ, ಅತ್ರಾಡಿ, ಉಡುಪಿ-576107. ದೂ: 9480655247     ರನ್ನನ ಕೃತಿರತ್ನ ಪರೀಕ್ಷೆ ಜಿ.ಎಚ್.ನಾಯಕ ಪುಟ:140, ಬೆಲೆ: ರೂ.140 ಪ್ರಕಾಶನ: ಚಿಂತನ ಚಿತ್ತಾರ, ನಂ.2, ಮೂಡಾ ಕಾಂಪ್ಲೆಕ್ಸ್, 1ನೇ ಬ್ಲಾಕ್, ರಾಮಕೃಷ್ಣನಗರ, ಮೈಸೂರು-570022. ಜಿ.ಎಚ್.ನಾಯಕ ಕೃತಿ ವಿಮರ್ಶೆಗೆ ಹೆಸರಾದವರು. ವಸ್ತುನಿಷ್ಠ ವಿಮರ್ಶೆಯಿಂದಲೇ ಮನೆಮಾತಾದ ನಾಯಕರು ವಿಮರ್ಶಿಸಿದ ವಿಷಯಗಳು, ಕೃತಿಗಳು ಹಲವಾರು. ಕನ್ನಡ ಸಾಹಿತ್ಯ ಪ್ರಕಾರದ ಎಲ್ಲಾ ಬಗೆಯ ಕೃತಿಗಳನ್ನು ವಿಮರ್ಶಿಸಿದ ಶ್ರೇಯ ಅವರಿಗೆ […]

ವೈ.ಎಸ್.ವಿ. ದತ್ತರ ‘ವರ್ತಮಾನ’ ಸಮಕಾಲೀನ ತಲ್ಲಣಗಳು

-ಡಾ.ರುದ್ರೇಶ್ ಅದರಂಗಿ.

ವರ್ತಮಾನವೆಂಬ ಸಂಕೀರ್ಣವಾದ ವಿಷಯವನ್ನೊಳಗೊಂಡಿರುವ ಈ ಪುಸ್ತಕವನ್ನು ಕೇವಲ ಒಂದು ಸಾಹಿತ್ಯದ ವಿಭಾಗದಲ್ಲಿ ಮಾತ್ರ ಸೇರಿಸಿದರೆ ತಪ್ಪಾಗುತ್ತದೆ. ಇದು ತನ್ನ ವಸ್ತು ಮತ್ತು ಆಶಯದ ದೃಷ್ಟಿಯಿಂದ ಸಾಮಾಜಿಕ, ಐತಿಹಾಸಿಕ, ರಾಜಕೀಯ, ಜಾನಪದ ಹೀಗೆ ಬಹು ಆಯಾಮವನ್ನೊಳಗೊಂಡಿದೆ. ನಮ್ಮ ನಡುವಿನ ಸೂಕ್ಷ್ಮತೆ, ಸಂವೇದನಾಶೀಲತೆಯ ಬೆರಳೆಣಿಕೆಯಷ್ಟು ರಾಜಕಾರಣಿಗಳಲ್ಲಿ ವೈ.ಎಸ್.ವಿ. ದತ್ತ ಅವರು ಪ್ರಮುಖರು. ಅವರು ಕೇವಲ ರಾಜಕಾರಣಿಯೆಂದಷ್ಟೇಯಲ್ಲ; ಸಮಾಜದ ಬಗೆಗೆ ಚಿಂತಿಸುವ, ಒಂದು ನಿರ್ದಿಷ್ಟವಾದ ಪಕ್ಷದೊಳಗಿದ್ದೂ ಪಕ್ಷದಾಚೆಗೆ ವ್ಯಕ್ತಿತ್ವವನ್ನೊಳಗೊಂಡು, ತುಳಿತಕ್ಕೊಳಗಾದವರ ಪರವಾಗಿ ಯಾವ ಮುಲಾಜೂ ಇಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ವಕಾಲತ್ತನ್ನು ವಹಿಸುವ […]

ಕವನಗಳು

ತರಗೆಲೆಗಳು ನಸುಕಲ್ಲಿ ನಡೆವಾಗ ರಸ್ತೆಯಿಬ್ಬದಿಯಲಿ ಸರ ಸರ ಸರಿದಾಡೋ ಸಾವಿರೆಲೆಗಳು, ತಡವಾಗಿ ಬಂದಾಗ ಉತ್ತರಕೂ ಕಾಯದೆ ಕೋಪದಿ ಕೆಂಪಾಗಿ ಕಂಪಿಸಿದ ನಿನ್ನಧರಗಳಂತೆ; ರಸಿಕತೆಯು ಉಕ್ಕಿಹರಿದು ಲಕೋಟೆಯಿಂದ ಸೋರಿದಾಗ ನೀ ಹರಿದು ಗಾಳಿಯಲಿ ತೂರಿದ ನನ್ನ ಪ್ರೇಮಪತ್ರದ ಚೂರುಗಳಂತೆ; ಕೆಸರ ಕೊಸರಿ ಹಾರಲಾಗದೆ ನೆಲಕಚ್ಚಿರುವುವು ಸುಖವುಂಡು ನೀ ತೋಯ್ದು ತೆವಳಿದಂತೆ; ರೆಂಬೆಯಿಂದ ಕಳಚಿ ಬಿದ್ದರೂ ಬದುಕಿರುವ ಭ್ರಮೆಯಲಿವೆ ದೂರಾದ ನಿನ್ನ ದೂರುತ್ತಲೇ ಕಾಣುವ ಸಾಮೀಪ್ಯದ ಕನಸುಗಳಂತೆ; ಗಡ ಗಡನೆ ಗುಡಿಸಿ ಗುಂಪುಮಾಡಿ ಮಾಲಿ ಮಂಜ ಬೆಂಕಿ ಹೊತ್ತಿಸಿ ನಿರ್ದಯೆಯಿಂದ […]

ಮುಖ್ಯ ಹಣಕಾಸು ಸಲಹೆಗಾರನ ಆಪ್ತ ಸಲಹೆ

-ಚಾಣಕ್ಯ.

ತಮ್ಮ ನಾಲ್ಕು ವರ್ಷಗಳ ಸುದೀರ್ಘ ಅನುಭವವನ್ನು ಅರವಿಂದ ಸುಬ್ರಹ್ಮಣಿಯಮ್ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ನಾಲ್ಕೂ ವರ್ಷಗಳಲ್ಲಿ ನಡೆದ ಆರ್ಥಿಕ ಅಗುಹೋಗುಗಳ ಐತಿಹಾಸಿಕ ಪ್ರಾಮುಖ್ಯ ಹಾಗೂ ಉದ್ದೇಶಗಳನ್ನು ಅತ್ಯಂತ ವಿಶದವಾಗಿ ಬಿಚ್ಚಿಟ್ಟಿದ್ದಾರೆ. ಅರವಿಂದ ಸುಬ್ರಹ್ಮಣಿಯಮ್ ಅವರು ಭಾರತ ಸರ್ಕಾರದ ಮುಖ್ಯ ಹಣಕಾಸು ಸಲಹೆಗಾರರಾಗಿದ್ದ 2014 ರಿಂದ 2018ರ ಸಮಯದಲ್ಲಿ ಭಾರತದ ಆರ್ಥಿಕ ಇತಿಹಾಸದಲ್ಲಿ ಅತ್ಯಂತ ಗುರುತರವಾದ ಬೆಳವಣಿಗೆಗಳಾದವು. ನೋಟು ಅಮಾನ್ಯೀಕರಣ, ಜಿಎಸ್‍ಟಿ, ದಿವಾಳಿ ಕಾನೂನು, ಕಂಪನಿಗಳನ್ನು ಮುಚ್ಚಿಹಾಕಲು ಸುಲಭ ಕಾನೂನು ವ್ಯವಸ್ಥೆ, ಬ್ಯಾಂಕುಗಳಲ್ಲಿ ಕೆಟ್ಟ ಅನುಪಯುಕ್ತ ಸಾಲಗಳ ಶುದ್ಧೀಕರಣ, […]

ಕನ್ನಡಚಿಂತನೆಯ ತೊರೆ ಹರಿದ ಹಾದಿಗಳು

-ಡಾ.ಸರ್ಜಾಶಂಕರ ಹರಳಿಮಠ.

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷ ನೂರಾರು ಪಿ.ಹೆಚ್.ಡಿ. ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ನುರಿತ ಪ್ರಾಧ್ಯಾಪಕರಿಂದ ಪರಿಶೀಲನೆ ನಡೆಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ ಮಾಹಿತಿ ಮತ್ತು ಪ್ರಯೋಜನ ಸಮಾಜದ ಒಳಿತಿಗೆ ಸುಲಭವಾಗಿ ದಕ್ಕುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಒಂದು ಆಯ್ದ ಪಿ.ಹೆಚ್.ಡಿ. ಪ್ರಬಂಧದ ಸಾರಾಂಶವನ್ನು ಓದುಗರಿಗೆ ಒದಗಿಸಲಾಗುವುದು. ಈ ಬಾರಿಯ ಪಿ.ಹೆಚ್.ಡಿ. ವಿಷಯ: ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು, ಸಂಶೋಧಕರು: ಡಾ.ಸರ್ಜಾಶಂಕರ ಹರಳಿಮಠ, ಮಾರ್ಗದರ್ಶಕರು: […]

ಇರ್ಫಾನ್ ಹಬೀಬ್ ಅವರ ಇಂಡಿಯನ್ ನ್ಯಾಷನಲಿಸಂ: ದಿ ಎಸೆನ್ಶಿಯಲ್ ರೈಟಿಂಗ್ಸ್ ರಾಷ್ಟ್ರವಾದದ ವಿಕಸನದ ನೆನಹು

-ಕಮಲಾಕರ ಕಡವೆ.

ಈ ಪುಸ್ತಕದ ಮುನ್ನೂರಕ್ಕೂ ಕಮ್ಮಿ ಪುಟಗಳಲ್ಲಿ ಗಹನ ವಿಷಯವೊಂದರ ವಿವಿಧ ವಿಚಾರಸರಣಿಗಳನ್ನು ದಾಖಲಿಸಿ ಹಬೀಬ್ ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ. ರಾಷ್ಟ್ರವಾದದ ಆಕ್ರೋಶ, ಸಿಟ್ಟುಸೇಡಿನ ಮುಖ ಭಾರತದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವುದೇ ಇಲ್ಲಿ ಓದಿಗೆ ಎತ್ತಿಕೊಂಡಿರುವ ಪುಸ್ತಕದ ಪ್ರಕಟಣೆಗೆ ಕಾರಣವಿರಬಹುದು. ಪುಸ್ತಕದ ಮುಖಪುಟದಲ್ಲಿ ಇರುವ ಉಲ್ಲೇಖಗಳು ನಮ್ಮನ್ನು ಹೀಗೆ ಯೋಚಿಸಲು ಹಚ್ಚುವುದಂತೂ ಹೌದು. ಉದಾಹರಣೆಗೆ, ಮುಖಪುಟದ ಮೇಲೆ ಗಾಂಧೀಜಿಯ ‘ರಾಷ್ಟ್ರವಾದಕ್ಕೆ ದ್ವೇಷ ಅತ್ಯವಶ್ಯವೇ?’ ಎಂಬ ಮಾತನ್ನು ಉದ್ಧರಿಸಲಾಗಿದೆ. ಪುಸ್ತಕದ ವಿಸ್ತೃತ ಪೀಠಿಕೆ ಶುರುವಿನಲ್ಲೇ ಈ ಹಿನ್ನೆಲೆಯ ಕಡೆ ನಮ್ಮ ಗಮನವನ್ನು […]