ಭಾರತವೀಗ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿ

-ಮೋಹನ್‍ದಾಸ್

2019ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಕಳೆದ ವರ್ಷ ಫ್ರಾನ್ಸ್ ಅನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಏರಿದ್ದ ಭಾರತ ಇದೀಗ 2019ರಲ್ಲಿ ಯುನೈಟೆಡ್ ಕಿಂಗ್‍ಡಮ್ ಅನ್ನೂ ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಬೀಳಲಿದೆ. ಕಳೆದ 2017ನೆಯ ವರ್ಷದಲ್ಲಿ ಫ್ರಾನ್ಸ್‍ನ $2.582 ಟ್ರಿಲಿಯನ್ ಜಿಡಿಪಿಯನ್ನು (ಒಟ್ಟು ದೇಶೀ ಉತ್ಪನ್ನ) ದಾಟಿ ಭಾರತದ ಉತ್ಪನ್ನ $2.597 ಟ್ರಿಲಿಯನ್‍ಗಳಷ್ಟಾಗಿತ್ತು. ಇದೀಗ ಯುನೈಟೆಡ್ ಕಿಂಗ್‍ಡಮ್‍ನ $2.62 ಟ್ರಿಲಿಯನ್ ಉತ್ಪನ್ನಕ್ಕೆ ಕೇವಲ $25 ಬಿಲಿಯನ್‍ಗಳಷ್ಟು ಹಿಂದಿರುವ […]

ಅರವಿಂದ್ ಸುಬ್ರಮಣಿಯನ್ ಅವರ ಕೃಷಿ ಅರ್ಥಶಾಸ್ತ್ರ

ಮೂಲ: ಅರವಿಂದ್ ಸುಬ್ರಮಣಿಯನ್. ಸಂಗ್ರಹಾನುವಾದ: ಡಾ.ಟಿ.ಆರ್.ಚಂದ್ರಶೇಖರ

ಅರವಿಂದ್ ಸುಬ್ರಮಣಿಯನ್ ಅವರ ಹೆಸರು ಈಗ ಭಾರತದ ರಾಜಕೀಯ-ಆರ್ಥಿಕ ವಿದ್ಯಾರ್ಥಿಗಳಿಗೆ ಚಿರಪರಿಚಿತವಾಗಿದೆ. ಅವರು ಎನ್‍ಡಿಎ ಸರ್ಕಾರದಲ್ಲಿ ಮುಖ್ಯ ಹಣಕಾಸು ಸಲಹೆಗಾರರಾಗಿ ನಾಲ್ಕು ವರ್ಷಗಳ ಕಾಲ (ಅಕ್ಟೋಬರ್ 16, 2014 ರಿಂದ ಜೂನ್ 20, 2018) ಕಾರ್ಯನಿರ್ವಹಿಸಿ ಮತ್ತೆ ತಮ್ಮ ಮೂಲ ಸಂಸ್ಥೆಯಾದ ‘ಪೀಟರ್‍ಸನ್ ಇನ್ಸಿಟಿಟ್ಯೂಟ್ ಆಫ್ ಇಂಟರ್‍ನ್ಯಾಷಿನಲ್ ಎಕನಾಮಿಕ್ಸ್’ನಲ್ಲಿ ಹಿರಿಯ ಫೆಲೋ ಆಗಿ ಮತ್ತು ಹಾರ್‍ವರ್ಡ್‍ನ ‘ಕೆನಡಿ ಸ್ಕೂಲ್ ಆಫ್ ಗೌರ್ವನಮೆಂಟ್’ನಲ್ಲಿನ ಪಬ್ಲಿಕ್ ಪಾಲಿಸಿ ವಿಷಯದ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಮುಂದುವರಿಸಿದ್ದಾರೆ. ಅವರು ಕೇಂದ್ರ ಸರ್ಕಾರದ […]

ರೈತ ಚಳವಳಿ ಕುರಿತ ಕೆಲವು ಪುಸ್ತಕಗಳು, ಲೇಖನಗಳು

• ‘ಭಾರತದ ರೈತ ಚಳವಳಿಯ ಇತಿಹಾಸ’ (ಹರಿಕಿಷನ್ ಸಿಂಗ್ ಸುರ್ಜಿತ್) • ‘ಕೃಷ್ಣಯ ನೀರು ರೈತರ ಕಣ್ಣೀರು’ • ‘ಬಿಜಾಪುರದ ಬರಿಗಾಲ ಗಾಂಧಿ ಭೀಮಸಿ ಕಲಾದಗಿ ಅವರ ಜೀವನ ಚರಿತ್ರೆ.’ • ‘ಈಗ ಅಳುವವರೂ ಇಲ್ಲ’ (ಎನ್.ಎಸ್.ಶಂಕರ್) • ‘ಹಸಿರು ಸೇನಾನಿ’ (ಸಂ: ನಟರಾಜ್ ಹುಳಿಯಾರ್) • ‘ಕಾಡತೊರೆಯ ಜಾಡು’ (ಕಡಿದಾಳು ರಾಮಣ್ಣನವರ ಆತ್ಮಕಥೆ) • ‘ಆ ದಶಕ’ (ಇದು ರೈತ ಚಳವಳಿಯನ್ನು ಕುರಿತೇ ಇರುವ ಕೃತಿ) • ‘ಹಳ್ಳಿ ಕಣ್ಣಲ್ಲಿ ಇಂಡಿಯಾ’ (ಸಂ: ಡಾ.ರವಿಕುಮಾರ್ ಬಾಗಿ) […]

ಓಲೈಕೆ ಹೋರಾಟ ನಿಲ್ಲಬೇಕು

ರೈತ ಚಳವಳಿಗಾರರು ಒಗ್ಗಟ್ಟಾಗಿ ರೈತರ ಮತಗಳು ಚುನಾವಣೆಯಲ್ಲಿ ಎಷ್ಟು ಮುಖ್ಯ ಎಂಬುದನ್ನು ರಾಜಕೀಯ ನಾಯಕರಿಗೆ ತೋರಿಸುವ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕು. ಹಿಂದಿನ ರೈತರಿಗೆ ನೆಮ್ಮದಿ, ಸ್ವಾವಲಂಬನೆ, ಸ್ವಾಭಿಮಾನದ ಬದುಕು ಇತ್ತು. ಸ್ವಂತ ಬೀಜ, ಗೊಬ್ಬರ, ನೀರು ಇತ್ಯಾದಿಗೆ ಕೊರತೆ ಇರಲಿಲ್ಲ. ಯಾವುದೇ ಸಾಲಶೂಲ ಇರಲಿಲ್ಲ. ಮನೆಯಲ್ಲಿ ತಾಮ್ರದ ಕೊಡ, ಹಾಂಡ್ಯಾ ಭಾಂಡ್ಯಾ, ಹೆಣ್ಣು ಮತ್ತು ಗಂಡು ಮಕ್ಕಳ ಮೇಲೆ ಆಭರಣಗಳು ಇದ್ದವು. ಅದರೆ ಅವು ಇಂದು ನೇಪಥ್ಯಕ್ಕೆ ಸರಿದಿವೆ. ರೈತರು ಹಸಿರುಕ್ರಾಂತಿ ನೆಪದಲ್ಲಿ ಹೆಚ್ಚು ರಾಸಾಯನಿಕ, ಔಷಧೋಪಚಾರ, […]

‘ದಿನಪತ್ರಿಕೆಗಳ ಓದೇ ಪ್ರೇರಣೆ’

-ಡಾ.ಅರವಿಂದ ಪಟೇಲ್

ಐಪಿಎಸ್ ಅಧಿಕಾರಿ ಆರ್.ಚೇತನ್ ಅವರು ಈಗಾಗಲೇ ತಮ್ಮ ವೃತ್ತಿಬದ್ಧತೆ, ದಕ್ಷತೆಯನ್ನು ಸಾಬೀತುಪಡಿಸಿದ್ದಾರೆ. ಇದೀಗ ಬಳ್ಳಾರಿಯಿಂದ ವರ್ಗಾವಣೆಯಾಗಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿತಪದಗಳು, ಖಚಿತದನಿ, ಕಠಿಣ ನಿರ್ಧಾರ ಅವರ ವ್ಯಕ್ತಿತ್ವದ ವಿಶೇಷ. ಸಮಾಜಮುಖಿ ಪರವಾಗಿ ಅವರ ಕಚೇರಿಯಲ್ಲಿ ನಡೆಸಿದ ಸಂದರ್ಶನ ಇಲ್ಲಿದೆ. ನಿಮ್ಮ ಬಾಲ್ಯದ ಶಿಕ್ಷಣ ಮತ್ತು ಮನೆಯ ವಾತಾವರಣ ಹೇಗಿತ್ತು? ತಂದೆ, ರಂಗಪ್ಪ ಎಂ.ಎ. ಪದವೀಧರರು, ಕೃಷಿಕರು. ತಾಯಿ ಸರೋಜಮ್ಮ. ಹೊನ್ನಾವಳ್ಳಿಯ ಶ್ರೀ ಶಾರದಾ ವಿದ್ಯಾನಿಕೇತನದಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ. ತಿಪಟೂರಿನ […]

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಂದರ್ಶನ

ಸಂದರ್ಶಕರು: ರಹಮತ್ ತರೀಕೆರೆ.

2003ರಲ್ಲಿ ರಹಮತ್ ತರೀಕೆರೆ ಅವರು ಕನ್ನಡ ವಿಶ್ವವಿದ್ಯಾಲಯದ `ಕನ್ನಡ ಅಧ್ಯಯನ’ ಪತ್ರಿಕೆಗೆ ಮಾಡಿದ ನಂಜುಂಡಸ್ವಾಮಿಯವರ ಸಂದರ್ಶನದ ಆಯ್ದ ಪಾಠ (ರೈತ ಚಳವಳಿಯ ಬಗೆಗಿನ ಕೇವಲ ಕಾಲು ಭಾಗದಷ್ಟು) ಇಲ್ಲಿದೆ. (ಲೋಹಿಯಾವಾದ, ಸಮಕಾಲೀನರು, ಕನ್ನಡ ಸಾಹಿತ್ಯ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ನಂಜುಂಡಸ್ವಾಮಿಯವರ ಅಭಿಪ್ರಾಯವುಳ್ಳ ಸಂದರ್ಶನದ ಪೂರ್ಣ ಪಾಠವನ್ನು ಸಮಾಜಮುಖಿ ಅಂತರ್ಜಾಲ ತಾಣದಲ್ಲಿ ಓದಬಹುದು.) ಸೌಜನ್ಯ: ನಟರಾಜ್ ಹುಳಿಯಾರ್ ಅವರು ಸಂಪಾದಿಸಿರುವ ‘ಹಸಿರು ಸೇನಾನಿ’ ಕೃತಿ. ಅಧಿಕಾರ ರಾಜಕಾರಣದ ಬಗ್ಗೆ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳೋದು ಬೇರೆ, ಅಧಿಕಾರ ರಾಜಕಾರಣಕ್ಕೆ […]

ನೈತಿಕ ಕಸುವು ಕಳೆದುಕೊಂಡ ಚಳವಳಿ

-ಪ್ರೊ.ಸಿ.ನರಸಿಂಹಪ್ಪ.

ಈಗಿನ ಬಹುತೇಕ ರೈತ ಸಂಘಟನೆಗಳ ಮುಖಂಡರು ದುಡ್ಡು ಸಂಗ್ರಹಿಸಿಯೇ ಜೀವನ ಮಾಡುತ್ತಿದ್ದಾರೆ. ಹಾಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಪ್ರಾಮಾಣಿಕ ಹೋರಾಟ ಮಾಡುವ ನೈತಿಕತೆಯನ್ನು ಈಗಿರುವ ರೈತ ಸಂಘಟನೆಗಳು ಕಳೆದುಕೊಂಡಿವೆ. ಹೋರಾಟಗಾರರಿಗೆ ಜಾತಿ ಪ್ರಜ್ಞೆಯೂ ಬಂದುಬಿಟ್ಟಿದೆ. ರೈತ ಸಮಸ್ಯೆ ಆಥವಾ ಕೃಷಿ ಸಮಸ್ಯೆ ಅಂದರೆ ಅದರ ಮೂಲ ಭೂಮಿ. ಆ ಬಗ್ಗೆ ಮೊದಲು ಚಳವಳಿ ನಡೆದಿದ್ದು ಕೇರಳದ ಕೈಯೂರಿನಲ್ಲಿ, ಎಡಪಂಥೀಯರಿಂದ. ಅದಾದ ಬಳಿಕ, ಹೆಚ್ಚು ಕಡಿಮೆ ಈ ಘಟನೆಯ ಹಿಂದೆ-ಮುಂದೆ ಗಾಂಧೀಜಿ ನೇತೃತ್ವದಲ್ಲಿ ಬಿಹಾರದ ಚಂಪಾರಣ್ಯ ಸತ್ಯಾಗ್ರಹ […]

ಬ್ರೆಕ್ಸಿಟ್ ಪ್ರಹಸನದ ಅಂತಿಮ ಚರಣ

-ಪುರುಷೋತ್ತಮ ಆಲದಹಳ್ಳಿ

ಯೂರೋಪಿಯನ್ ಒಕ್ಕೂಟದಿಂದ ಯುನೈಟೆಡ್ ಕಿಂಗ್‍ಡಮ್ ಹೊರಬೀಳುವ ಪ್ರಕ್ರಿಯೆಯು ದಿನೇದಿನೇ ಪ್ರಹಸನದ ರೂಪ ಪಡೆಯುತ್ತಿದೆ. ಬ್ರೆಕ್ಸಿಟ್ (ಬ್ರಿಟಿಷ್ + ಎಕ್ಸಿಟ್) ಎಂದು ಕರೆಯಲಾಗುತ್ತಿರುವ ಈ ಪ್ರಹಸನ ಮುಂದಿನ ದಿನಗಳಲ್ಲಿ ಅಸಂಗತ ನಾಟಕಗಳಿಗೆ ಸ್ಫೂರ್ತಿ ಮತ್ತು ವಸ್ತುವಿಷಯ ನೀಡುವಂತಾದಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಈ ಪ್ರಹಸನದ ಪಾತ್ರಧಾರಿಗಳನ್ನು ನಿಮಗೆ ಪರಿಚಯ ಮಾಡಿಕೊಡುವ ಮೊದಲು ನಿಮಗೆ ಕೆಲವು ಐತಿಹಾಸಿಕ ಸಂಗತಿಗಳನ್ನು ತಿಳಿಸಬೇಕಾಗುತ್ತದೆ. ಎರಡನೇ ಮಾಹಾಯುದ್ಧದಲ್ಲಿ ತನ್ನ ‘ಎಂಪೈರ್’ ಕಳೆದುಕೊಂಡ ಬ್ರಿಟನ್, ನಂತರದ ದಿನಗಳಲ್ಲಿ ಸ್ಕಾಟ್‍ಲ್ಯಾಂಡ್, ವೇಲ್ಸ್, ಉತ್ತರ ಐರ್ಲ್ಯಾಂಡ್ ಹಾಗೂ ಬ್ರಿಟನ್ ಒಳಗೊಂಡು ಯುನೈಟೆಡ್ […]

ಮಹಿಳೆಯರ ಕೊಡುಗೆ ಕಡಿಮೆಯಲ್ಲ

-ಕೆ.ಎಸ್.ನಂದಿನಿ ಜಯರಾಂ. ನಿರೂಪಣೆ: ಪಿ.ಕುಸುಮಾ ಆಯರಹಳಿ

ಆಗ ಒಳ್ಳೆಯ ನಾಯಕತ್ವ ಇತ್ತು. ಅದಕ್ಕಿಂತಲೂ ಸಮಸ್ಯೆಯೇ ಸಂಘಟನೆಯ ನಾಯಕನಾಗಿತ್ತು. ಹೋರಾಟಗಾರರಿಗೆ ಸಮುದಾಯದ ಒಳಿತೊಂದೇ ಗುರಿಯಾಗಿತ್ತು. ಈಗ ಹಾಗಿಲ್ಲ. ಸಮಸ್ಯೆ ಹಿಂದೆ ನಿಂತು ಸ್ವಾರ್ಥ ಮುಂದೆ ಹೋಗುತ್ತಿರುವಂತಿದೆ. ರೈತಚಳವಳಿ ಈಗ ಪ್ರಸ್ತುತವೇ? ಅಂತ ಕೇಳಿದರೆ ಈ ಪ್ರಶ್ನೆಯೇ ಅಪ್ರಸ್ತುತ ಅನ್ನುತ್ತೇನೆ ನಾನು. ಯಾವುದೇ ಸಂಘಟನೆ, ಹೋರಾಟ ಶಕ್ತಿಯಾಗಿ ಬೆಳೆಯುವುದರ ಹಿಂದೆ ಅನೇಕರ ತ್ಯಾಗ ಪರಿಶ್ರಮವಿರುತ್ತದೆ. ಇದಕ್ಕೆ ರೈತಚಳವಳಿಯೂ ಹೊರತಲ್ಲ. ನಿಜವಾದ ಹೋರಾಟಗಾರರು ವೈಯಕ್ತಿಕ ಬದುಕನ್ನು ಬದಿಗಿಟ್ಟು, ತಮ್ಮನ್ನೇ ಸುಟ್ಟುಕೊಂಡು ಸಮಾಜಕ್ಕೆ ಬೆಳಕು ಕೊಡುವವರು. ರೈತಸಂಘದಲ್ಲಿ ಅಂತಹವರು ಅನೇಕರಿದ್ದಾರೆ. […]

ರಾಜ್ಯದ ರೈತ ಚಳವಳಿಗಳ ಪ್ರಸ್ತುತತೆ ಮತ್ತು ಸವಾಲುಗಳು

–ಜಿ.ಸಿ.ಬಯ್ಯಾರೆಡ್ಡಿ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಮರಶೀಲ ಹೋರಾಟಗಳಿಂದ ಮಾತ್ರ ನಮ್ಮ ಮುಂದಿರುವ ಸವಾಲುಗಳನ್ನು ಎದುರಿಸಬಹುದಾಗಿದೆ. ನಮ್ಮ `ಶತ್ರು’ವನ್ನು ಪತ್ತೆ ಹಚ್ಚುವುದು ತೀರ ಸಂಕೀರ್ಣವಾಗಿದೆ. ಏಕೆಂದರೆ ನಮ್ಮ `ಶತ್ರು’ ನಮ್ಮ ಗ್ರಾಮದಲ್ಲಿ ಇದ್ದಾನೆ; ಬೆಂಗಳೂರು, ದೆಹಲಿಯಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಇದ್ದಾನೆ. ಹೀಗಾಗಿ `ಶತ್ರು ವರ್ಗ’ವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ರಾಜಕೀಯ ಪ್ರಜ್ಞೆ, ಸೈದ್ಧಾಂತಿಕ ಸ್ಪಷ್ಟತೆಯಿಂದ ಕೂಡಿದ ರೈತ ಹೋರಾಟಗಳಿಂದ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯವಿದೆ. ರಾಜ್ಯದ ರೈತ ಚಳವಳಿಗಳ ಪ್ರಸ್ತುತತೆ ಮತ್ತು ಅವುಗಳ ಮುಂದಿರುವ ಸವಾಲುಗಳನ್ನು ಸರಿಯಾದ ರೀತಿಯಲ್ಲಿ […]

ಇದು ನಮ್ಮ ರೈತ ಸಂಘದ ಕಥೆ!

-ಚಾಮರಸ ಮಾಲಿಪಾಟೀಲ

ರೈತ ಸಂಘದ ಪ್ರಸ್ತುತತೆ ಈಗ ಇದೆ, ಮುಂದಿನ ಪೀಳಿಗೆಗೂ ಬೇಕಿದೆ. ಅದಕ್ಕಾಗಿ ನಮ್ಮಲ್ಲಿ ಯುವಕರ ಮತ್ತು ಮಹಿಳೆಯರ ಸಂಘಟನೆ ಮಾಡಲು ತೀರ್ಮಾನ ಮಾಡಿದ್ದೇವೆ. ಇನ್ನು ಯುವಕರನ್ನು ಸಂಘಟಿಸಿ ಅವರಿಗೆ ಅಧ್ಯಯನ ಶಿಬಿರ ಏರ್ಪಡಿಸುವ ಕೆಲಸ ನಡೆಯುತ್ತಿದೆ. ಆರಂಭಿಕ ಕಾಲದಲ್ಲಿ ರೈತ ಚಳವಳಿಯ ಪರಿಸ್ಥಿತಿ ಭಿನ್ನವಾಗಿತ್ತು. ಆಗಿನ ಸಮಸ್ಯೆಗಳು ಬೇರೆಯಾಗಿದ್ದವು. ರೈತರ ಮೇಲೆ ನಿರಂತರ ದಬ್ಬಾಳಿಕೆ ನಡೀತಿತ್ತು. ಗುಂಡುರಾವ್ ಸರಕಾರ ರೈತರ ಮೇಲೆ ಲೇವಿ ಹಾಕಿತ್ತು. ಈ ನಿಟ್ಟಿನಲ್ಲಿ ಮೊದಲು ಕೆಲವರು ಅಸಂಘಟಿತರಾಗಿ ಹೋರಾಟ ನಡೆಸಿದ್ದರು. ನರಗುಂದ-ನವಲಗುಂದದಲ್ಲಿ ನೀರಾವರಿಗೆ […]

ಆದರ್ಶಗಳಲ್ಲಿ ಅಮರ ಡಾ.ಕೆ.ಮಧುಕರ ಶೆಟ್ಟಿ

-ಕೆ.ಪುಟ್ಟಸ್ವಾಮಿ

ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಮಧುಕರ ಶೆಟ್ಟಿ ಅವರ ಅಕಾಲಿಕ ಸಾವು ನಾಡನ್ನು ಬಹುವಾಗಿ ಕಾಡಿದೆ, ಕಲಕಿದೆ, ಮನಸ್ಸಾಕ್ಷಿ ಮೀಟಿದೆ. ಇಂಥ ಅಪರೂಪದ ವ್ಯಕ್ತಿಯನ್ನು ಚಿಕ್ಕಂದಿನಿಂದಲೂ ಕಂಡ, ಒಡನಾಡಿದ ಹಿರಿಯ ಗೆಳೆಯರು ಇಲ್ಲಿ ಅವರ ವ್ಯಕ್ತಿತ್ವದ ಪದರುಗಳನ್ನು ಅತ್ಯಂತ ಅಂತಃಕರಣದಿಂದ ಬಿಡಿಸಿಟ್ಟಿದ್ದಾರೆ. ತಮ್ಮ ಅನಿರೀಕ್ಷಿತ ನಿರ್ಗಮನದಿಂದ ಹಲವರಲ್ಲಿ ದಿಗ್ಭ್ರಮೆ, ತಳಮಳ ಮತ್ತು ಪಾಪಪ್ರಜ್ಞೆಯನ್ನು ಹುಟ್ಟುಹಾಕಿದ ಡಾ.ಕಾಪು ಮಧುಕರ ಶೆಟ್ಟಿ ಅವರ ಬಗ್ಗೆ ಬರೆಯುವುದೇ ದುಸ್ತರವಾದ ಕಾರ್ಯವೆನಿಸಿದೆ. ಮಧುಕರ ಪತ್ರಕರ್ತ ವಡ್ಡರ್ಸೆ ರಘುರಾಮ […]

ರೈತ ಚಳವಳಿ ಪ್ರಸ್ತುತಗೊಳಿಸುವುದು ಹೇಗೆ?

-ಪದ್ಮರಾಜ ದಂಡಾವತಿ.

ಸಂಘಟನೆಯ ನಾಯಕರ ಅಹಂಕಾರ ಹಾಗೂ ಸರ್ವಾಧಿಕಾರದ ಮನೋಭಾವ, ರೈತ ಸಮುದಾಯದ ಎಲ್ಲ ವರ್ಗಗಳನ್ನು ಒಳ್ಳಗೊಳ್ಳಬೇಕು ಎಂಬ ತಿಳಿವಳಿಕೆ ಅಥವಾ ದೂರದೃಷ್ಟಿಯ ಕೊರತೆ, ಸಂಘಟನೆಯಲ್ಲಿ ತಳ ಸಮುದಾಯಗಳಿಗೆ, ಅಲ್ಪಸಂಖ್ಯಾತರಿಗೆ ದೊರಕದ ಪ್ರಾತಿನಿಧ್ಯ, ಕೆಲವು ರೈತನಾಯಕರಲ್ಲಿ ಹೆಡೆಯೆತ್ತಿದ ರಾಜಕೀಯ ಮಹತ್ವಾಕಾಂಕ್ಷೆ ಹಾಗೂ ಬಿಜೆಪಿಯಂಥ ರಾಜಕೀಯ ನಾಯಕರು ಇಡೀ ರೈತ ಚಳವಳಿಯನ್ನು ಹೈಜಾಕ್ ಮಾಡಿದ್ದು ರೈತ ಚಳವಳಿಯ ಈಗಿನ ದಯನೀಯ ಸ್ಥಿತಿಗೆ ಕಾರಣಗಳು. ನನಗೆ ಇನ್ನೂ ಚೆನ್ನಾಗಿ ನೆನಪು ಇದೆ. ಅದು 80ರ ದಶಕದ ಆರಂಭ ಕಾಲ. ಆಗಷ್ಟೇ ರಾಜ್ಯದಲ್ಲಿ ರಾಮಕೃಷ್ಣ […]

ರೈತರಲ್ಲದ ರೈತರು!

-ಹಿ.ಶಿ.ರಾಮಚಂದ್ರೇಗೌಡ.

ರೈತ ಚಳವಳಿ ಇಂದು ಏಕಾತ್ಮವಾಗಿಲ್ಲ; ಚುನಾವಣೆ ಬಂದಾಗ ಅದು ಜಾತ್ಯಾತ್ಮ ಆಗುತ್ತದೆ. ಚುನಾವಣೆ ಮುಗಿದ ಮೇಲೆ ಸರ್ಕಾರದೊಂದಿಗೆ ಸಂಧಾನ ನಡೆಸುತ್ತದೆ. ಬಹುಸಂಖ್ಯಾತತ್ವ ಮತ್ತು ಜಾತಿಯೆ ಇಂದಿಗೂ ರೈತ ಚಳವಳಿಯ ಶತ್ರುಗಳು. ಇಪ್ಪತ್ತನೇ ಶತಮಾನದ ಎಂಬತ್ತರ ದಶಕದಲ್ಲಿ ರೈತರೆಂಬುವವರು ಬಹುಸಂಖ್ಯಾತರು, ಬಹುತೇಕ ಮೇಲು ಮಧ್ಯಮ ಜಾತಿಯವರು. ಆ ದಶಕದಲ್ಲಿ ಅವರು ಪ್ರಜಾಪ್ರಭುತ್ವವಾದಿ ಸಮಸಮಾಜ ಪರಿಕಲ್ಪನೆಯಲ್ಲಿ ಆದ್ಯತೆಯ ಸ್ಥಾನದಲ್ಲಿ ಇರಲಿಲ್ಲ. ಯಾಕೆಂದರೆ ಅವರು ಕೊನೆಯ ಮನುಷ್ಯರಾಗಿರಲಿಲ್ಲ. ಎಡಪಂಥೀಯ ದೃಷ್ಟಿಯಿಂದ ಕೂಡ ಅವರು ಸ್ಥಾಪಿತ ಹಿತಾಸಕ್ತಿ ಸಮುದಾಯದವರಾಗಿದ್ದರು. ಹಿಂದೂ ನೆಲೆಯಲ್ಲಿ ಕೂಡ […]

ಕರ್ನಾಟಕದ ರೈತ ಚಳವಳಿ: ಎಷ್ಟು ಪ್ರಸ್ತುತ?

ಎಂಬತ್ತರ ದಶಕದ ರೈತ, ಕನ್ನಡ, ದಲಿತ ಚಳವಳಿಗಳು ಬಹುಶಃ ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಕರ್ನಾಟಕ ಕಂಡ ಬಹುದೊಡ್ಡ ಜನಾಂದೋಲನಗಳು. ಆ ಸಂದರ್ಭದ ಈ ಮೂರೂ ಜನಪರ ಚಳವಳಿಗಳ ವ್ಯಾಪಕತೆ, ಪ್ರಭಾವ, ನಾಯಕತ್ವ ‘ಅಭೂತಪೂರ್ವ’ ಪದಕ್ಕೆ ಹತ್ತಿರವಾಗಿದ್ದವು. ಅವು ಮೂಡಿಸಿದ್ದ ಸಂಚಲನ, ಹುಟ್ಟುಹಾಕಿದ್ದ ಜಾಗೃತಿ, ಬೆಳೆಸಿದ ಚಿಂತನಾಕ್ರಮ, ಕಲಿಸಿದ ತರ್ಕಸರಣಿ ನಾಡಿನಾದ್ಯಂತ ಹೊಸ ಅನುಭವ, ಭರವಸೆಗೆ ಕಾರಣವಾಗಿದ್ದವು. ಆಗ ದಲಿತ ಸಂಘಟನೆಯ ಒಂದು ಕರೆಗೆ, ಕನ್ನಡ ಹೋರಾಟಗಾರರ ಕಹಳೆಗೆ, ರೈತ ಸಂಘದ ಗುಡುಗಿಗೆ ಲಕ್ಷಾಂತರ ಜನ ಓಗೊಡುತ್ತಿದ್ದರು. ಅಷ್ಟು ಸಾಕಿತ್ತು; […]

ವಿಜ್ಞಾನ ಕಾಂಗ್ರೆಸ್‍ನಲ್ಲಿ ಅಜ್ಞಾನದ ಆರ್ಭಟ

-ಟಿ.ಆರ್.ಅನಂತರಾಮು

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಒಂದು ಪ್ರಾಚೀನರಿಗೆ ಎಲ್ಲವೂ ತಿಳಿದಿತ್ತು, ಈಗಿನ ವಿಜ್ಞಾನಕ್ಕಿಂತ ಅವರ ಯೋಚನೆಗಳೇ ಇನ್ನೂ ಮುಂದಿದ್ದವು ಎಂದು ಹೇಳುವ ಕಯಾಲಿ. ಇನ್ನೊಂದು ತಾನು ಸಂಶೋಧನೆ ಮಾಡಿ ಇದನ್ನು ಜಗತ್ತಿಗೆ ಹೇಳುತ್ತಿದ್ದೇನೆ ಎಂಬ ಹುಸಿ ಜಂಭ. ಇದರಿಂದ ನಿಜಕ್ಕೂ ಡ್ಯಾಮೇಜ್ ಆಗುವುದು ನಮ್ಮ ಪರಂಪರೆಯಲ್ಲಿ ಬೆಳೆದುಬಂದ ವಿಜ್ಞಾನಕ್ಕೆ! ಪ್ರಮಾಣೀಕರಿಸದೆ ವಿಜ್ಞಾನ ಯಾವುದನ್ನೂ ನಂಬುವುದಿಲ್ಲ. ವಿಜ್ಞಾನದಲ್ಲಿ ಯಾರೂ ದೊಡ್ಡವರಲ್ಲ, ಸಣ್ಣವರೂ ಅಲ್ಲ. `ಶಬ್ದಮಣಿ ದರ್ಪಣ’ದ ಕರ್ತೃ ಕೇಶಿರಾಜನ ಮಾತಿನಲ್ಲಿ `ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೇ’. ಐನ್‍ಸ್ಟೈನ್ ಚಿಂತನೆಗಳನ್ನು […]

ಕಾಲ ಕೊಟ್ಟಿದ್ದು ಕಡಿಮೆಯೇನಲ್ಲ!

ಆಧುನಿಕ ತಂತ್ರಜ್ಞಾನದಿಂದ ನಿತ್ಯನೂತನ ಆವಿಷ್ಕಾರಗಳು ನಡೆಯುತ್ತಿರುವ, ನಮ್ಮ ದೈನಂದಿನ ಬದುಕನ್ನು ಸುಲಲಿತವಾಗಿ ಸಾಗಿಸಲು ಅಗತ್ಯವಿರುವ ಸೌಲಭ್ಯಗಳು ಸುಲಭವಾಗಿ ಸಿಗುವಂತಾಗಿರುವ ನಮ್ಮ ಈ ಕಾಲವನ್ನು ನಾನಂತೂ ಅತ್ಯಂತ ಪ್ರಶಸ್ತ ಮತ್ತು ಅನುಕೂಲಕರ ಎಂದು ಗ್ರಹಿಸುತ್ತೇನೆ. -ಪೂರ್ಣಿಮಾ ಮಾಳಗಿಮನಿ .     ಮಹಾನಗರಗಳಲ್ಲಿ ವಾಸಿಸುತ್ತಿರುವ ಜನರು ಮನೆಯಂಗಳದಲ್ಲಿ ನಿಂತು ಚಂದ್ರ, ತಾರೆಗಳನ್ನು ನಿರುಕಿಸುವುದು ಹಾಗಿರಲಿ, ನೂರು ಮೀಟರು ದೂರದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಮನೆಯ ಮಹಡಿ ಹತ್ತಿದರೂ ಪ್ರಯೋಜನವೇನಿಲ್ಲ ಎಂದು ಮೂಗು ಮುರಿಯುವ ಕಾಲವಿತ್ತು. ಈಗ ಉಪಗ್ರಹಗಳನ್ನು, ಬಾಹ್ಯಾಕಾಶ […]

ಆರ್ಥಿಕತೆ ಆಧಾರದ ಮೀಸಲಾತಿ ಸಂವಿಧಾನದ ಪ್ರಕಾರ ಊರ್ಜಿತವೇ?

-ಡಾ.ಎನ್.ಸತೀಶ್‍ಗೌಡ

ಈಗ ನೀಡುತ್ತಿರುವ ಶೇ.50 ಮೀಸಲಾತಿ ಬಗ್ಗೆ ವೈಜ್ಞಾನಿಕ ಪರಾಮರ್ಶೆ ನಡೆಸುವುದರ ಬದಲು ಭಾರತದ ಸಂಸತ್ತು 124ನೇ ತಿದ್ದುಪಡಿ ಮಸೂದೆ ಮೂಲಕ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಗಳಿಗೆ ಶೇ.10 ಮೀಸಲಾತಿ ನೀಡಲು ಹೊರಟಿದೆ. ಈ ಹಿನ್ನೆಲೆಯಲ್ಲಿ ಹೊಸ ಮೀಸಲಾತಿಯ ಸಾಧ್ಯತೆ, ಸಮಂಜಸತೆ ಹಾಗೂ ಅವಶ್ಯಕತೆಯನ್ನು ಚರ್ಚಿಸಬೇಕಿದೆ. ಭಾರತದಲ್ಲಿ ಹಲವಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಅತಿ ಕಡುಬಡವರಾದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲು ಸಾರ್ವಜನಿಕ ಉದ್ಯೋಗಕ್ಕೆ ಸಂಬಂಧಿಸಿದ ಮೀಸಲಾತಿ […]

ಚುನಾವಣಾ ಭರವಸೆಗಳಿಗೆ ಕಡಿವಾಣ ಹಾಕಬೇಕೇ..?

-ಮೋಹನದಾಸ್

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳೆರಡೂ ಸಾರಾಸಗಟಾಗಿ ಚುನಾವಣಾ ನೀತಿಸಂಹಿತೆಯನ್ನು ಗಾಳಿಗೆ ತೂರಿ ಕೇವಲ ಚುನಾವಣೆ ಗೆಲ್ಲುವ ತಂತ್ರಗಾರಿಕೆಗೆ ಶರಣು ಹೋಗಿದ್ದವು. ಇದಕ್ಕೆ ಪುರಾವೆಯಂತೆ, ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸಾಲಮನ್ನಾ ಮಾಡುವ ಘೋಷಣೆ ಮಾಡಿದ್ದರೂ, ಅದನ್ನು ಜಾರಿಗೆ ತರಲಾಗದ ಎಡವಟ್ಟಿನ ಪರಿಸ್ಥಿತಿಯಲ್ಲಿ ಬಂದುನಿಂತಿದೆ. ಚುನಾವಣೆಯೆಂದರೆ ಮತದಾರರಿಗೆ ಸುಗ್ಗಿ. ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕೆಂಬ ತವಕದಲ್ಲಿ ನಮ್ಮ ರಾಜಕೀಯ ಪಕ್ಷಗಳು ಭರವಸೆಯ ಹೊಳೆಯನ್ನೇ ಹರಿಸುವ ಧಾಟಿಯಲ್ಲಿ ತಮ್ಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ವರ್ಷದಿಂದ ವರ್ಷಕ್ಕೆ ಹಾಗೂ ಚುನಾವಣೆಯಿಂದ […]

ಗ್ರಾಮೀಣ ಗ್ರಂಥಾಲಯ ಓದುಗರಿಗೆ ಕೊಡುಗೆ

ಬದುಕು ಕಟ್ಟಿಕೊಳ್ಳಲು, ಬೌದ್ಧಿಕವಾಗಿ ಬೆಳೆಯಲು ಅಗತ್ಯವಾದ ಮಾಹಿತಿ, ವಿಶ್ಲೇಷಣೆ, ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಹೊತ್ತು ಬರುತ್ತಿರುವ ‘ಸಮಾಜಮುಖಿ’ ಮಾಸಿಕವನ್ನು ನೀವೆಲ್ಲಾ ಗಮನಿಸಿದ್ದೀರಿ. ಅಂತಃಸತ್ವ ಮತ್ತು ಬಾಹ್ಯ ಸ್ವರೂಪ ಎರಡರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಂಡಿರುವ ಈ ಪತ್ರಿಕೆಯನ್ನು ನೀವು ಅಷ್ಟೇ ವಾತ್ಸಲ್ಯದಿಂದ ಬರಮಾಡಿಕೊಡಿರುವಿರಿ. ಸಮಾಜಮುಖಿಗೆ ವರ್ಷ ತುಂಬಿದ ಈ ಸಂದರ್ಭದಲ್ಲಿ ಓದುಗರ ಬಳಗವನ್ನು ವಿಸ್ತರಿಸಿಕೊಳ್ಳುವ ತವಕ ನಮ್ಮದು. ಈ ನಿಟ್ಟಿನಲ್ಲಿ ಹೀಗೊಂದು ಯೋಜನೆಯನ್ನು ನಿಮ್ಮೆದುರು ಮಂಡಿಸುತ್ತಿದ್ದೇವೆ. ಯೋಜನೆಯ ವಿವರ ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ […]