ಚಿಂತನಶೀಲ ಸಮಾಜಮುಖಿ

ಚಿಂತನಶೀಲ ಸಮಾಜಮುಖಿ

ಇದು ಸುಮಾರು ಎರಡೂವರೆ ದಶಕಗಳ ಹಿಂದಿನ ಘಟನೆ. ನಾನಾಗ ಕನ್ನಡದ ಏಕೈಕ ಡೈಜೆಸ್ಟ್ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕೀಯ ತಂಡದಲ್ಲಿದ್ದೆ. ಸುದೀರ್ಘ ಇತಿಹಾಸವಿರುವ ಈ ಪತ್ರಿಕೆಯಲ್ಲಿ ‘ಕಸ್ತೂರಿ ನಡೆದುಬಂದ ದಾರಿ’ ಎಂಬ ಅಂಕಣವಿತ್ತು; ಹಿಂದೆ ಪ್ರಕಟವಾದ ಬರಹವೊಂದನ್ನು ಆಯ್ದು ಹೊಸ ಓದುಗರಿಗಾಗಿ ಪುನರ್ಮುದ್ರಿಸುವುದು ಇದರ ಉದ್ದೇಶ. ನಾನೊಮ್ಮೆ ಪ್ರಥಮ ಬಾರಿ ಕಸ್ತೂರಿಯಲ್ಲಿ ಬೆಳಕುಕಂಡಿದ್ದ ಲಂಕೇಶರ ‘ಸಂಕ್ರಾಂತಿ’ ನಾಟಕವನ್ನು ಈ ಅಂಕಣಕ್ಕಾಗಿ ಆಯ್ದೆ, ಪ್ರಕಟವೂ ಆಯ್ತು. ಇದನ್ನು ಕಂಡ ಲಂಕೇಶ್ ಕೆಂಡಾಮಂಡಲ! ‘ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಈ […]

ಪ್ರವೇಶ

- ಮೋಹನದಾಸ

ಪ್ರಚಲಿತ ಸತ್ಯಗಳನ್ನು ಮತ್ತೊಮ್ಮೆ ಪ್ರಶ್ನೆ ಮಾಡಬೇಕು ಹಾಗೂ ಅಪ್ರಿಯ ವಾಸ್ತವದ ಎಲ್ಲೆಗಳನ್ನು ಮೀರುವ ಪ್ರಯತ್ನ ಮಾಡಬೇಕು. ಮೊದಲಿಗೆ, ನಮ್ಮ ಮನಸ್ಸಿನ ಜೇಡರ ಬಲೆಗಳನ್ನು ಕಿತ್ತು ಒಗೆದು ಹೊಸದಾಗಿ ಚಿಂತಿಸುವ ನಿರ್ಧಾರಕ್ಕೆ ಬರಬೇಕು. ಈ ದಿಕ್ಕಿನಲ್ಲಿನ ಕೆಲವು ಚಿಂತನೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ. ಮುಂದೆ ನಿಮ್ಮ ಸರದಿ.    

ಮೊಬೈಲು ಪುರಾಣ

-ಪ. ರಾಮಕೃಷ್ಣ ಶಾಸ್ತ್ರಿ.

ಒಂದು ಹುಡುಗಿಗೂ ಹುಡುಗನಿಗೂ ಪ್ರಣಯಾಂಕುರವಾದರೆ ಎಲ್ಲರಿಗಿಂತ ಹೆಚ್ಚು ಸಂತಸ ಪಡುವವರು ಖಂಡಿತ ಅವರೂ ಅಲ್ಲ, ಅವರ ಹೆತ್ತವರೂ ಅಲ್ಲ. ಮೊಬೈಲ್ ಕಂಪೆನಿಗಳು, ಇಂಟರ್‍ನೆಟ್ ದಾತಾರರು! ಪ್ರಾತಃ ಸ್ಮರಾಮಿ ಮೊಬೈಲು ಫೋನುಂ ಅಂಗುಷ್ಠೇ ಸ್ಕ್ರೀನು ತೀಡನಂ ನೋಟಿಫಿಕೇಷನು ವಿಹಾರಾರ್ಥೇ ಪ್ರಭಾತೇ ಮೊಬೈಲು ದರ್ಶನಂ          1 ಮೊಬೈಲು ಮೇ ವಸತೇ ಫೋರ್-ಜೀ ಸರ್ವತಂ ನೆಟ್‍ವರ್ಕ್‍ಂ ಮಂಡಲೇ ದ್ವಿತೀಯ ಪತ್ನೀ ನಮಸ್ತುಭ್ಯಂ ಪ್ರಥಮ ಪತ್ನೀ ಕ್ಷಮಸ್ವಮೇ                […]

ಮೈಸೂರು `ಬಹುರೂಪಿ’ಯ ನಿಜರೂಪ !

-ಚಿನ್ನಸ್ವಾಮಿ ವಡ್ಡಗೆರೆ.

ಮೈಸೂರಿನ ‘ಬಹುರೂಪಿ’ ನಾಟಕೋತ್ಸವ ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಂಡು ನೀರಸವಾಗುತ್ತಿದೆ. ‘ಬಟ್ಟೆ, ತಿಂಡಿ, ಕರಕುಶಲ ವಸ್ತುಗಳ ಮೇಳ, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಜನರನ್ನು ಆಕರ್ಷಿಸುವ `ಸಹರಾ’ ವಸ್ತುಪ್ರದರ್ಶನದಂತೆ, ಅವರೆಕಾಯಿ ಮೇಳದಂತೆ ಆಗುತ್ತಿದೆ’ ಎನ್ನುವುದು ಬಹುತೇಕ ಪ್ರಜ್ಞಾವಂತ ರಂಗಕರ್ಮಿಗಳ ಅಳಲು. ರಂಗಾಯಣ 2020ರ ವೇಳೆಗೆ ನಡೆಸುವ 20ನೇ `ಬಹುರೂಪಿ’ಯನ್ನು ಅರ್ಥಪೂರ್ಣವಾಗಿ ಆಚರಿಸಲಿ, ಗುಣಮಟ್ಟದ ನಾಟಕಗಳನ್ನು ತರುವ ಮೂಲಕ ಮತ್ತೆ ರಂಗಾಯಣಕ್ಕೆ ಮೆರುಗು ನೀಡಲಿ ಎನ್ನುವ ಆಶಯ ಹೊತ್ತಿದೆ ಈ ಲೇಖನ. ಮೈಸೂರಿನ ರಂಗಾಯಣ `ಲಿಂಗ ಸಮಾನತೆ’ ಪರಿಕಲ್ಪನೆ […]

ಕನ್ನಡ ಚಿತ್ರರಂಗದ ಸಾಮರ್ಥ್ಯಕ್ಕೆ ಕನ್ನಡಿ ಕೆ.ಜಿ.ಎಫ್.

-ಆನಂದರಾಜೇ ಅರಸ್

ಕೆ.ಜಿ.ಎಫ್. ಒಳ್ಳೆಯ ಚಿತ್ರವೇ? ವಿಭಿನ್ನ ಚಿತ್ರವೇ? ಮಹಾನ್ ಚಿತ್ರವೇ? ಥಟ್ಟನೆ ಹೌದೆನ್ನುವುದು ಕಷ್ಟ. ಆದರೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳ ಭಾಷೆಗಳಲ್ಲಿ ಏಕ ಕಾಲದಲ್ಲಿ ತೆರೆ ಕಂಡು ಕನ್ನಡ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿರುವ ಈ ಚಿತ್ರ ಕನ್ನಡ ಚಿತ್ರರಂಗದ ಮೇಲೆ ಬೀರಿರುವ ಪರಿಣಾಮ ಅಗಾಧ. ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕನ್ನಡಿಗರಿಗೆ ಅರಗಿಸಿಕೊಳ್ಳಲಾಗದಷ್ಟು ಹೆಮ್ಮೆ ತಂದಿದೆ. ಹಿಂದಿ, ತಮಿಳು… ಚಿತ್ರಗಳಿಗೆ ಸಮನಾಗಿ ತೊಡೆತಟ್ಟಿ ನಿಂತು, ಕೇವಲ 18 ದಿನಗಳಲ್ಲಿ ಗಳಿಕೆಯಲ್ಲಿ […]

ಕಣ್ಮರೆಯ ಅಂಚಿನಲ್ಲಿ ಕಣ್ಣಾಮುಚ್ಚಾಲೆ

-ಕೆ.ವಿ.ಪರಮೇಶ್.

ರಾಜಾಶ್ರಯದಲ್ಲಿ ಈ ಆಟವನ್ನು ತಮ್ಮ ಮಕ್ಕಳಿಗೆ ಯುದ್ಧಕಲೆಯೆಂದೇ ಕಲಿಸಲಾಗುತ್ತಿತ್ತು ಎನ್ನುವುದು ವಿಶೇಷ. ಅಂದರೆ ಕತ್ತಲಲ್ಲಿ ನಿರ್ದಿಷ್ಟ ಜಾಗವನ್ನು ಗುರುತಿಸುವ ಕಲೆ ಮತ್ತು ಗ್ರಹಣ ಶಕ್ತಿಯಿಂದಲೇ ಎದುರಾಳಿಯನ್ನು ಪತ್ತೆಹಚ್ಚುವ ಕಲೆ. ಬಳಿಕ ಸಾರ್ವತ್ರಿಕವಾಗಿ ಆಡುವ ಸಂದರ್ಭಗಳಲ್ಲಿಯೂ ಮಕ್ಕಳು ಚುರುಕು ಮತ್ತು ಚಾಣಾಕ್ಷಮತಿಯಾಗಲಿ ಎನ್ನುವ ಕಾರಣಕ್ಕೆ ಆಡಿಸುವುದಿದೆ. ಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನಮೂಟೆ ಉರುಳೇ ಹೋಯ್ತು ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ ನಿಮ್ಮಯ ಹಕ್ಕಿ ಬಚ್ಚಿಕೊಳ್ಳಿ…..ಕೂವಾ… ಇದನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೇವೆ. ಜೊತೆಗೆ ಇಂತಹದ್ದೊಂದು ಮನರಂಜನೆಯ ಆಟವನ್ನು ಆಡಿರಲಿಕ್ಕೂ ಸಾಕು. ಆದ್ರೆ […]

ಎದೆಯೊಳಗೊಂದು ಹೂವ ಮಾಲೆ

-ರೇಣುಕಾ ರಮಾನಂದ, ಅಂಕೋಲ.

ಈ ಮಳೆಯಲ್ಲಿ ಹೀಗೆ ನೆಂದರೆ ಸುಡುವ ವಿರಹದುರಿ ಒಂದಷ್ಟು ಹೊತ್ತು ಕಡಿಮೆಯಾಗಬಹುದೆಂದುಕೊಂಡಿದ್ದೆ ಹೆಚ್ಚಾಗಿ ಇನ್ನಷ್ಟು ಬಯಸಿತು ಅವನನ್ನು ಎದೆಯೊಳಗೇನೋ ಹಿತದ ಅಮಲು ಮುಟ್ಟಿಲ್ಲ ಇನ್ನೂ… ಬರೀ ನೋಡಿದ್ದಷ್ಟೇ ಮಾಯಾಜಾಲದ ಹುಡುಗ ಯಾವಾಗ ಒಳಗೆ ಲಗ್ಗೆ ಹಾಕಿದನೋ ಗೊತ್ತಾಗಲೇ ಇಲ್ಲ ಅದೋ ಆ ಕಲ್ಲ ಮೇಲಿನ ಎರಡೆಸಳು ಹುಲ್ಲಿನ ತುದಿಯಲ್ಲಿ ಮಳೆಬಿಂದುವಾಗಿ ಈ ತನಕ ನಿಂತಿದ್ದ ಹತ್ತಿರ ಹೋಗಿ ತಡವಿದರೆ ಅಂಟಿಕೊಂಡು ಬಿಡಲಾರೆ ಎಂದು ಒಳಗೆ ಬಂದುಬಿಟ್ಟ ಸಾವಿರದೊಂದು ನಕ್ಷತ್ರಗಳು ಧಿಗ್ಗನೆ ಪ್ರಕಾಶಿಸಿಬಿಡುತ್ತವೆ ನನ್ನ ಕಂಡೊಡನೆ ಅವನ ಕಣ್ಣಲ್ಲಿ […]

ಹೆಂಡತಿ ಮತ್ತು ಗೆಳತಿ

ಮರಾಠಿ ಮೂಲ: ಸುರೇಶ ಕುಲಕರ್ಣಿ ಕನ್ನಡಕ್ಕೆ: ಸಪ್ನಾ ಕಟ್ಟಿ, ಪುಣೆ.

ಗೆಳತಿ ಪ್ರೇಯಸಿಯಾಗುವುದು ಮುಂದೆ ಪ್ರೇಯಸಿ ಪತ್ನಿಯಾಗುವುದು ಸರಳ. ಆದರೆ ಒಮ್ಮೆ ಪತ್ನಿಯಾದಳೆಂದರೆ ಅವಳನ್ನು ಮತ್ತೊಮ್ಮೆ ಗೆಳತಿ ಮಾಡೋದು ಏನದಲ್ಲಾ ಆದು ಮಾತ್ರ ಬಹಳ ಕಠಿಣವಿದೆ ನೋಡ್ರಿ! ಎರಡು ಗಟ್ಟಿ ಹೆರಳು ಹಾಕಿಕೊಂಡು ಜೋಡೀಲೇ ಶಾಲೆಗೆ ಬರುವ ಬಾಜು ಮನಿ ಹುಡುಗಿ ನಿಮ್ಮಿ ಒಮ್ಮಿಂದೊಮ್ಮೆಲೆ ಸುಂದರ ಪೋನಿಟೇಲಧಾರಿಯಾಗಿ ಬರುತ್ತಾಳೆ. “ಏ ನೀವು ಗಂಡು ಹುಡುಗೂರೆಲ್ಲಾ ನಿಮ್ಮಷ್ಟಕ್ಕ ನೀವು ಹಿಂದ ಆಡಿಕೋ ಹೋಗ್ರಿ” ಎಂದು ಹೈಕಳನ್ನು ನಿತ್ಯ ಹಿಂದಿನ ಬಯಲಿಗೆ ಅಟ್ಟುವವಳು ತಾನೇ ಸ್ವತಃ ದೂರದೂರ ನಿಲ್ಲಲಾರಂಭಿಸಿದ್ದಾಳೆ. ಮೊನ್ನೆ ಮೊನ್ನೆಯವರೆಗೂ […]

ನನ್ನ ಕ್ಲಿಕ್ಸ್

ಪಟ್ಟೆತಲೆ ಹೆಬ್ಬಾತು ಚುಮುಚುಮು ಚಳಿಗಾಲದಲ್ಲಿ ಮಧ್ಯ ಏಶಿಯಾದಿಂದ ಹೊರಟು ದಕ್ಷಿಣ ಭಾರತ ದಿಕ್ಕಿಗೆ ರೆಕ್ಕೆ ಬಡಿಯುತ್ತದೆ ಈ ಪಕ್ಷಿ. ಇದರ ಹಾರಾಟ ಸುಮಾರು 9300 ಮೀಟರು ಎತ್ತರದಲ್ಲಿ. ಗದಗ ಜಿಲ್ಲೆಯ ಮಾಗಡಿ ಕೆರೆಗೆ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನಾಲ್ಕರಿಂದ ಐದು ಸಾವಿರ ಪಟ್ಟೆತಲೆ ಹೆಬ್ಬಾತುಗಳು ವಲಸೆ ಬರುವುದು ವಿಶೇಷ. ಇವು ಎಪ್ರಿಲ್-ಮೇ ತಿಂಗಳಲ್ಲಿ ಅತಿ ಎತ್ತರದ ಪ್ರದೇಶಗಳಾದ ಲಡಾಕ್ ಮತ್ತು ಮಂಗೋಲಿಯಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಕ್ಯಾಮೆರಾ: ನಿಕಾನ್ ಡಿ500, ಮಸೂರ: 500 ಎಂ.ಎಂ., ಎ-5.6, ಎಸ್-500, ಐ.ಎಸ್.ಓ.-400. […]

ಊರುಬಿಟ್ಟು ಕಟ್ಟಿಕೊಂಡ ಬದುಕು

-ಭಾರತಿ ಹೆಗ್ಡೆ

ಮೊದಲನೇ ಸಲ ಊರು ಬಿಡುವಾಗ ಅಣ್ಣ ನಮ್ಮ ಜೊತೆಯಲ್ಲಿರಲಿಲ್ಲ. ಎರಡನೇ ಸಲ ಊರು ಬಿಡುವಾಗ ಅಪ್ಪ ಇರಲಿಲ್ಲ; ಅಣ್ಣನೇ ಅಪ್ಪನಾಗಿದ್ದ. ಮೊದಲು ನಾವಿದ್ದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಂಜಗಾರಿನಲ್ಲಿ. ಆಗ ನಾನು ತೀರಾ ಸಣ್ಣವಳೇ ಇದ್ದೆ. ಅಪ್ಪ ಅಲ್ಲಿ ಪಾಠಶಾಲೆಯಲ್ಲಿ ಮಾಸ್ತರಾಗಿದ್ದ. ಉದ್ದ ಪಡಸಾಲೆಯಂಥ ಆ ಮನೆ, ಎದುರಿಗೆ ದೇವಸ್ಥಾನದಂತೆ ಇರುವ ಪಾಠಶಾಲೆ, ಸ್ವಲ್ಪಸ್ವಲ್ಪ ಮಸುಕಾದ ನೆನಪುಗಳು ಅವೆಲ್ಲ. ಹಾಗಾಗಿ ಬಾಲ್ಯ ಕಳೆದ ಸದಾ ನನ್ನೊಳಗೆ ಕಾಡುವುದು ಎರಡು ಊರು. ಒಂದು ಚಿಕ್ಕಂದಿನಲ್ಲಿ ಓಡಾಡಿದ ತಾರುಗೋಡು […]

ನಾಗವರ್ಮನ ಕರ್ಣಾಟಕ ಕಾದಂಬರಿ ಯುವಮನಗಳ ವಿಕಾರಗಳಿಗೆ ಕನ್ನಡಿ

-ಡಾ.ಚಂದ್ರಕಲಾ ಹೆಚ್.ಆರ್.

ಪ್ರಾಚೀನ ಕನ್ನಡ ಕವಿಗಳಲ್ಲಿ ನಾಗವರ್ಮ ಒಬ್ಬ ಮಹತ್ವದ ಕವಿ. ಕನ್ನಡ ಕಾವ್ಯಲೋಕದಲ್ಲಿ ಲೌಕಿಕ ನೆಲೆಯನ್ನು ಅರಸುವವರಿಗೆ ಒಂದು ಅದ್ಭುತ ಪ್ರಣಯ ಕಾವ್ಯವನ್ನಿತ್ತವನು. ಬಹುಶಃ ಈ ಪ್ರಣಯ ಕಾವ್ಯದ ಪ್ರಭಾವದಿಂದಲೇ ಜನ್ನನ ಯಶೋಧರ ಚರಿತೆ ರಚನೆಯಾಗಿದ್ದಿರಬಹುದು. ಕನ್ನಡದಲ್ಲಿ ಬರೆದ ನಾಗವರ್ಮನ ಕಾದಂಬರಿಯ ನವಿರಾದ ಓದು ಓದುಗರಿಗೆ ಸಾಕಷ್ಟು ಜಿಜ್ಞಾಸೆಗಳನ್ನು ತಂದೊಡ್ಡುತ್ತದೆ. ಇದರ ಅನಿವಾರ್ಯತೆಯೂ ಅವಶ್ಯವಾಗಿದೆ. ಕನ್ನಡ ಕವಿಗಳಲ್ಲಿ ಕೆಲವರು ಮುಖ್ಯವಾಗಿ ಚಂಪೂಕಾವ್ಯ ಲೇಖಕರು ಸ್ವಪರಿಚಯದ ವಿಸ್ತಾರತೆಗೆ ಆದ್ಯತೆ ನೀಡಿದ್ದರೆ, ನಾಗವರ್ಮನಂತೂ ಸ್ವವಿಷಯವನ್ನು ಹೇಳಿಕೊಳ್ಳುವುದಿರಲಿ, ದೇವತಾಸ್ತೋತ್ರ, ಕಾವ್ಯವಿಚಾರವನ್ನು ಸಂಗ್ರಹವಾಗಿ ಮಾಡಿದ್ದಾನೆ. […]

ಮಹಿಳಾ ಸಂವೇದನೆಗೆ ಬೂಕರ್ ಪ್ರಶಸ್ತಿ

-ಪರಮೇಶ್ವರಯ್ಯ ಸೊಪ್ಪಿಮಠ

ಅನಾ ಬನ್ರ್ಸ್ ತಾನು ಬರಹಗಾರ್ತಿಯಾಗುವ ಕನಸನ್ನೇನು ಕಂಡವರಲ್ಲ. ಆದರೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆ ಓದು ಬರವಣಿಗೆಗೆ ನೆರವಾಯಿತು. ಈಕೆ ಪ್ರತಿಷ್ಠಿತ `ಮ್ಯಾನ್ ಬೂಕರ್’ ಪ್ರಶಸ್ತಿ ಪಡೆದ ಉತ್ತರ ಐರ್ಲೆಂಡ್‍ನ ಮೊದಲ ಸಾಹಿತಿ. ಕಣ್ಣೆದುರು ನಡೆಯುತ್ತಿರುವ ಹಿಂಸಾಚಾರ, ಲೈಂಗಿಕ ಶೋಷಣೆ, ಸೈನಿಕರ ಅಟ್ಟಹಾಸದ ವಾತಾವರಣ ಸಹಿಸಿಕೊಳ್ಳಲಾಗುತ್ತಿಲ್ಲ. ಪ್ರತಿರೋಧ ವ್ಯಕ್ತಪಡಿಸುವಷ್ಟು ದೊಡ್ಡ ಶಕ್ತಿಯೂ ಅವರ ಬಳಿ ಇಲ್ಲ. ಅದರಿಂದಾಗುವ ದುಷ್ಟಪರಿಣಾಮಗಳನ್ನು ಸಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ತಮ್ಮ ಮನದೊಳಗೆ ಕುದಿಯುತ್ತಿದ್ದ ಅಪಾರ ವೇದನೆಗಳನ್ನು ಹೊರಹಾಕಲು ಅವರು ಇಚ್ಛಿಸಿದ್ದು ಅಕ್ಷರಗಳ ಮೂಲಕ. […]

ಮತ್ತೆ ಬಾಂಗ್ಲಾ ಬಾದಶಹಾ ಆದ ಶೇಖ್ ಹಸೀನಾ

-ಚಾಣಕ್ಯ

ಕಳೆದ ಕೆಲವು ವರ್ಷಗಳಲ್ಲಿ ಶೇಖ್ ಹಸೀನಾ ನೇತೃತ್ವದಲ್ಲಿ ಬಾಂಗ್ಲಾ ಅಭೂತಪೂರ್ವ ಆರ್ಥಿಕ ಪ್ರಗತಿ ಕಂಡಿದೆ. ಬಾಂಗ್ಲಾದ ತಲಾ ಆದಾಯ $1516 ಇದ್ದು 2020ರವರೆಗೆ ಇದು ಭಾರತದ ತಲಾ ಆದಾಯ ($1940) ಮೀರಿಸುವ ಸಾಧ್ಯತೆಯಿದೆ. 2018ರ ಡಿಸೆಂಬರ್  30ರಂದು ನಡೆದ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಮುಖಂಡತ್ವದ ಅವಾಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ಗ್ರ್ಯಾಂಡ್ ಅಲೆಯನ್ಸ್ ಹೆಸರಿನಲ್ಲಿ ಅವಾಮಿ ಲೀಗ್ ತನ್ನ ಮಿತ್ರ ಪಕ್ಷಳೊಂದಿಗೆ ಒಕ್ಕೂಟ ರಚಿಸಿಕೊಂಡು ಸ್ಪರ್ಧೆಯ 300 ಕ್ಷೇತ್ರಗಳಲ್ಲಿ 257 ಸ್ಥಾನ ಗಳಿಸಿಕೊಂಡು […]

ಹೊಸ ಪುಸ್ತಕ

ರಕ್ತ ಸಿಕ್ತ ರತ್ನ ಡಾ.ಕೆ.ಎನ್.ಗಣೇಶಯ್ಯ ಪುಟ: 384, ಬೆಲೆ: ರೂ.350 ಇದೊಂದು ರೋಚಕ ಕಾದಂಬರಿ. ಲಂಡನ್ ಪತ್ರಕರ್ತೆ ಮೇರಿ ಬರ್ಮಾ ದೇಶದ ಭಾಗನ್‍ನಲ್ಲಿನ ಪಗೋಡಗಳ ನಡುವೆ ತನ್ನ ಕುಟುಂಬದ ರಹಸ್ಯ ವಸ್ತುವನ್ನು ಹುಡುಕಲು ಒಂದು ರಾತ್ರಿ ಕದ್ದು ಡ್ರೋನ್ ಹಾರಿಸುವುದು, ಆಗ ಅಕೆಯ ಮೇಲೆ ನಡೆಯುವ ಗುಂಡಿನ ದಾಳಿ, ಇದಕ್ಕೆ ಹೆದರಿ ಆಕೆ ಭಾರತದ ರತ್ನಗಿರಿಗೆ ಬರುವುದು, ಅಲ್ಲೂ ನಡೆಯುವ ಕೊಲೆ ಯತ್ನ, ಇದೇ ವೇಳೆ ಮೇರಿಯ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮಾದ ಬೌದ್ಧ ಗುರು ತನ್ನ […]

ಚೀನಾದ ಪ್ರಗತಿದರ ಹಿಂದಿಕ್ಕಿದ ಭಾರತ

-ಮೋಹನದಾಸ್

ಜಿಎಸ್‍ಟಿ ಮತ್ತು ನೋಟು ಅಮಾನ್ಯೀಕರಣಗಳ ತಾತ್ಕಾಲಿಕ ಹಿನ್ನಡೆಯನ್ನು ಮೆಟ್ಟಿ ಭಾರತದ ಆರ್ಥಿಕ ಪ್ರಗತಿ ಮುನ್ನುಗ್ಗುತ್ತಿದ್ದರೆ, ಚೀನಾದ ಪ್ರಗತಿ ವರ್ಷದಿಂದ ವರ್ಷಕ್ಕೆ ಕುಂಟುತ್ತಿದೆ. ಕಳೆದ ವರ್ಷ ಭಾರತದ ಅಭಿವೃದ್ಧಿ ಶೇಕಡಾ 7.3 ರಷ್ಟಿದ್ದರೆ 2019ರಲ್ಲಿ 7.44 ರಷ್ಟಿರುವುದೆಂದು ಅಂದಾಜಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಚೀನಾದ ಆರ್ಥಿಕ ಬೆಳವಣಿಗೆಯ ದರ ಶೇಕಡಾ 6.6ರಿಂದ 2019ರಲ್ಲಿ ಶೇಕಡಾ 6.2ಕ್ಕೆ ಇಳಿಯಲಿದೆ ಎಂದು ಆರ್ಥಿಕ ಪಂಡಿತರು ಅಂದಾಜು ಮಾಡಿದ್ದಾರೆ. 2018ರ ಕಡೆಯ ಮೂರು ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಚೀನಾದ ಬೆಳವಣಿಗೆ ಶೇಕಡಾ 6.4ಕ್ಕೆ […]

ಹುಯೆನ್ ತ್ಸಾಂಗ್ ಹಾದಿಯ ‘ಶುಷ್ಕ ಆಕಾಶದಡಿಯ ಹತ್ತು ಸಾವಿರ ಮೈಲಿಗಳು!’

-ರವಿ ಹಂಜ್.

ಸನ್ ಶೂಯನ್ ಎಂಬ ಚೀನಿ ಮಹಿಳೆ ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಹುಯೆನ್ ತ್ಸಾಂಗನು ಸಾಗಿದ್ದ ಹಾದಿಯಲ್ಲಿ ನಡೆದೇಬಿಟ್ಟಳು. ಹೀಗೆ ಆರಂಭವಾದ ಆಕೆಯ ಪಯಣ, ಇಂದಿನ ಚೈನಾ, ಅಪಾಯಕಾರಿ ಅಫ್ಗನಿಸ್ತಾನ್, ಬಿಗುವಿನ ಪಾಕಿಸ್ತಾನ, ನಿರಾಳವೆನಿಸುವ ಭಾರತಗಳ ಚಿತ್ರಣಗಳು ಕಮ್ಯುನಿಸ್ಟ್ ನಾಡಿನಿಂದ ಪ್ರಜಾಪ್ರಭುತ್ವದಧಿಪತ್ಯ, ಪ್ರಾಪಂಚಿಕತೆಯಿಂದ ಪಾರಮಾರ್ಥದೆಡೆಯ ಮಹಾಪಯಣವೆನಿಸಿಬಿಡುತ್ತದೆ. ಆ ಪಯಣದ ಅದ್ಭುತ ನಿರೂಪಣೆಯೇ ‘ಟೆನ್ ಥೌಸಂಡ್ ಮೈಲ್ಸ್ ವಿತೌಟ್ ಎ ಕ್ಲೌಡ್’ ಕೃತಿ. ಒಮ್ಮೊಮ್ಮೆ ಜೀವನದ ತಿರುವುಗಳು ಹೀಗೆಯೂ ಘಟಿಸಿಬಿಡುತ್ತವೆ. ಹತ್ತು ವರ್ಷಗಳ ಹಿಂದೆ ಬ್ಲಾಗು, ಪೋರ್ಟಲ್ […]

‘ಸಂವಿಧಾನ ಓದು’ ಅಭಿಯಾನ

-ಡಾ.ವಿಠ್ಠಲ ಭಂಡಾರಿ ಕೆರೆಕೋಣ.

‘ಸಂವಿಧಾನ ಓದು: ವಿದ್ಯಾರ್ಥಿಗಳೆಡೆ ಸಂವಿಧಾನ ನಡೆ’ ಅಭಿಯಾನವನ್ನು ಸಹಯಾನ (ಡಾ.ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು ಸಮುದಾಯ ಕರ್ನಾಟಕ ನಾಡಿನ ಎಲ್ಲಾ ಸಹೋದರ ಸಂಘಟನೆಗಳ ನೆರವಿನೊಂದಿಗೆ ಪ್ರಾರಂಭಿಸಿದೆ. ಈ ಅಭಿಯಾನ ಇಂದು ಪುಸ್ತಕ ಮುದ್ರಣದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸುತ್ತಿದೆ. ಮೊದಲ ಮುದ್ರಣ ಲೋಕಾರ್ಪಣೆಗೊಂಡು 4 ತಿಂಗಳೊಳಗೆ 25 ಮುದ್ರಣದೊಂದಿಗೆ 50,000 ಪ್ರತಿಗಳು ಹೊರಬಂದಿದೆ. ನವೆಂಬರ್ ತಿಂಗಳಿಗೆ ಇನ್ನೂ 20 ಸಾವಿರ ಪುಸ್ತಕ ಮುದ್ರಣಗೊಳ್ಳುತ್ತಿವೆ. ವಿಶ್ವಮಾನ್ಯತೆಯನ್ನು ಪಡೆದ ಭಾರತದ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ […]

ಇ-ಜ್ಞಾನ

-ಟಿ.ಜಿ.ಶ್ರೀನಿಧಿ

ಟೆಕ್ ಸುದ್ದಿ ಮೊಬೈಲ್ ಫೋನ್ ಪರದೆಯ ಗಾತ್ರವನ್ನು ಸಾಧ್ಯವಾದಷ್ಟೂ ದೊಡ್ಡದಾಗಿಸುವ ಪ್ರಯತ್ನದ ಫಲವಾಗಿ ಮೇಲ್ತುದಿಯಲ್ಲಿ ಕಚ್ಚುಮಾಡಿರುವ ವಿನ್ಯಾಸದ ಪರದೆಗಳನ್ನು (ನಾಚ್ ಡಿಸ್‍ಪ್ಲೇ) ಪರಿಚಯಿಸಲಾಗಿತ್ತು. ಈ ವಿನ್ಯಾಸ ಸಾಮಾನ್ಯ ಬಳಕೆದಾರರನ್ನು ಪೂರ್ಣವಾಗಿ ತಲುಪುವ ಮೊದಲೇ ಇನ್ನೊಂದು ಹೊಸಬಗೆಯ ವಿನ್ಯಾಸ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಸೆಲ್ಫಿ ಕ್ಯಾಮೆರಾ ಹೊರತುಪಡಿಸಿ ಬೇರೆಲ್ಲ ಭಾಗಗಳನ್ನೂ ಟಚ್‍ಸ್ಕ್ರೀನ್ ಪರದೆಯ ಒಳಭಾಗದಲ್ಲೇ ಅಡಕಗೊಳಿಸಿರುವುದು ಈ ವಿನ್ಯಾಸದ ವೈಶಿಷ್ಟ್ಯ. ಸೆಲ್ಫಿ ಕ್ಯಾಮೆರಾಗೆ ಪರದೆಯ ಮೇಲ್ತುದಿಯಲ್ಲೇ ಸಣ್ಣದೊಂದು ರಂಧ್ರವನ್ನು ಕೊರೆಯಲಾಗಿದೆ. ಇದು ಕಾಗದದ ಮೇಲೆ ಪಂಚಿಂಗ್ ಯಂತ್ರದಿಂದ ಮಾಡಿದ ರಂಧ್ರದಂತೆಯೇ […]

ಜೀವನೋದ್ದೇಶದ ಮಹತ್ವ

-ಮಂಜುನಾಥ ಡಿ.ಎಸ್.

ಇಪ್ಪತ್ತು ವರ್ಷಗಳ ಕಾಪೆರ್ರೇಟ್ ಅನುಭವದ ಹಿನ್ನೆಲೆಯುಳ್ಳ ಕೃಷ್ಣ ಗಣೇಶ್ ಸಾಮಾಜಿಕ ಬದಲಾವಣೆ ಉಂಟುಮಾಡಲು ಇಚ್ಛಿಸುವ ಯುವ ಪೀಳಿಗೆಗೆ ದಾರಿದೀಪವಾಗಲೆಂಬ ಉದ್ದೇಶ ಈ ಕೃತಿಗಿದೆ. ಲೇಖಕರು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಹದಿನಾರು ಸಾಧಕರ ಯಶಸ್ಸಿನ ಹಾದಿಯನ್ನು ‘ದಿ ಪವರ್ ಆಫ್ ಪರ್ಪಸ್ ಇನ್ ಲೈಫ್ ‘ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕಕ್ಕೆ ಭಾರತೀಯ ಸಾಧಕರನ್ನೇ ಆಯ್ಕೆ ಮಾಡಿಕೊಂಡ ಕಾರಣವನ್ನು ಸ್ಪಷ್ಟಪಡಿಸಿದ್ದಾರೆ. ವಹಿವಾಟು ನಡೆಸಲು ಸುಲಭವೆನಿಸುವ ದೇಶಗಳ ಪಟ್ಟಿಯನ್ನು ವಿಶ್ವಬ್ಯಾಂಕ್ ಸಮೀಕ್ಷೆಗಳ ನೆರವಿನಿಂದ ಸಿದ್ಧಪಡಿಸುತ್ತದೆ. 183 ದೇಶಗಳನ್ನೊಳಗೊಂಡ ಇಂತಹ […]

ವಿಜ್ಞಾನಿ ಸ್ಟೀಫನ್ ಹಾಕಿಂಗರ ‘ಮಹತ್ವದ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು’

-ಡಾ.ಸುಧಾ ಶೆಣೈ.

ಈ ಕೃತಿಯಲ್ಲಿನ ಹಾಕಿಂಗರ ಲೇಖನಗಳು ವಿಜ್ಞಾನದ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಇತರ ಪುಸ್ತಕಪ್ರಿಯರನ್ನೂ ಆಕರ್ಷಿಸುವ ಶ್ಯೆಲಿಯಲ್ಲಿ ಇವೆ. ವಿಜ್ಞಾನವಷ್ಟೇ ಅಲ್ಲದೆ ಹಾಕಿಂಗರ ರಾಜಕೀಯದ ಜ್ಞಾನ, ಚಲನಚಿತ್ರ-ಸಾಹಿತ್ಯಗಳ ಬಗೆಗಿನ ಒಲವು… ಹೀಗೆ ಅವರ ಬಹುಮುಖೀ ಆಸಕ್ತಿಗಳು ಅತೀವ ಅಚ್ಚರಿ ಮೂಡಿಸುತ್ತವೆ. ಮಹತ್ವದ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರಗಳು (Brief Answers to the Big Questions) ಎಂಬ ಕುತೂಹಲ ಮೂಡಿಸುವ ಶೀರ್ಷಿಕೆಯನ್ನು ಹೊಂದಿದ ಈ ಕೃತಿ ಜಗದ್ವಿಖ್ಯಾತ ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗರ ಜನಪ್ರಿಯ ವಿಜ್ಞಾನ ಪುಸ್ತಕಗಳ ಸರಣಿಯಲ್ಲಿ ಕೊನೆಯದು. ವಿಶ್ವವಿಜ್ಞಾನದಲ್ಲಿ […]

1 2 3 6