2nd July 2018

ಡುಂಡುಭ ವಿಲಾಪ

ಡಾ.ಧರಣಿದೇವಿ ಮಾಲಗತ್ತಿ

ಹೆಂಡತಿಗೆ ಕಚ್ಚಿದ ಹಾವುಗಳ ವಿರುದ್ಧ
ದಂಡ ಹಿಡಿದು ನಿಂತಿದ್ದ ರುರು
ಎತ್ತಿದ ದೊಣ್ಣೆ ಅಪ್ಪಳಿಸುವ ಮುನ್ನ
ತೇಲಿ ಬಂತು ಕ್ಷೀಣವಾಗಿ ಡುಂಡುಭದ ಗೋಳು

ನಾವು ಕಚ್ಚುವವರಲ್ಲ
ಕಚ್ಚಿದರೂ ವಿಷವಿಲ್ಲ
ಒಳ್ಳೆಗೆ ವಿಷವಿದ್ದರೇನು?
ಮಾತು ಕೇಳಿಯೇ ಇರುತ್ತಿ ನೀನು

ನೀರ ಅಲೆಯಲ್ಲಿ ಅಲೆಯಾಗಿ ಚರಿಸುವ
ಹಾವುಗಳು ನಾವು - ಬಿಲ ಉಂಟು
ಎಲ್ಲ ಹಾವುಗಳ ಕಷ್ಟವೂ

ಸತ್ತ ಹಾವನ್ನೂ ಹೊಡೆವವರ ಮಧ್ಯೆ
ಬಿಡುವುದುಂಟೆ ನಮ್ಮನ್ನು ಹಾಗೆಯೇ
ನಮಗೆಲ್ಲಿ ನಿರ್ಭಯದ ನೆಲೆ - ನಂಬುವುದಿಲ್ಲ ನೀವು!

ಹನ್ನೆರಡು ವರ್ಷದ ಸೇಡು
ಸಾಕುವವನ ಕುಲ ಬಾಂಧವರಲ್ಲ ನಾವು
ನೋಡುವುದಕ್ಕೆ ಹಾಗಿದ್ದೇವೆ -ಅಷ್ಟೆ
ಬಣ್ಣ ಹಾಗಿದೆ - ಚರ್ಮವೂ ಹಾಗೆಯೇ!
ನಾನೆಂದೂ ಹೆದರಿಸಿಲ್ಲ ಯಾರನ್ನೂ
ಕಂಡವರು ನನ್ನದಿರಸಿಗೆ ಹೆದರಿದರೆ
ನಾನೇನು ಮಾಡಲಿ ಹೇಳು?
ದಿರಿಸಿನೊಳಗಿನ ಹೃದಯ ಕಾಣಬಾರದೆ ನೀನು?

ನಿಧಿ ಕಾಯುವವರುಂಟಂತೆ
‘ದಶ’ ಎಂದು ಹೇಳಿಸಿ ಕಾರ್ಕೋಟಕ
ವಿಷ ಇಳಿಸಿ - ಸ್ಪುರದ್ರೂಪಿ ನಳನನ್ನು ಬಾಹುಕನಾಗಿಸಿದವರು

ಭೂಪತಿಯ ಶಯನಕ್ಕೆ ಪಲ್ಲಂಗವಾದವರು
ಹಣ್ಣಿನಲ್ಲಿ ಸಣ್ಣಹುಳುವಿನಂತೆ ವೇಷಮರೆಸಿ
ನೀರಿನ ಕೋಟೆ ದಾಟಿ
ಆಹುತಿ ತೆಗೆದುಕೊಂಡವರೂ -
ಎಲ್ಲವೂ ಪುರಾಣ ಪಳಮೆಯಯ್ಯಾ

ಇಂಥ ವಿದ್ಯೆ ಬಲ್ಲವರಲ್ಲ ನಾವು
ನಂಬುವುದಿಲ್ಲ ನೀವು!
ನಮ್ಮನ್ನು ಅಟ್ಟಿಸುತ್ತೀರಿ

ಬಿಲದಿಂದ ಬಿಲಕ್ಕೆ ಓಡಿಸುತ್ತೀರಿ
ನಿಧಿ ಕಾಯುವವನನ್ನು ಕಾಯಲು ಹಚ್ಚುತ್ತೀರಿ
ಖಾಯಮ್ಮಾಗಿ ಪಟ್ಟಕಟ್ಟುತ್ತೀರಿ -
ಅದೇ ಹುದ್ದೆಯಲ್ಲಿ !
ನನ್ನಂತವನ್ಯಾರೋ ನಿನ್ನಿನಿಯಳ ಕಚ್ಚಿದನೆಂದು
ದಂಡಿಸಲು ನಿಂತಿದ್ದಿಯಲ್ಲಾ
ದಂಡ ಹಿಡಿದು ನಿಂತ ಮಹಾರಾಯಾ
ಯೋಚಿಸು-
ನಿಮ್ಮವರಲ್ಲಿ

ಮೈತುಂಬ ವಿಷವಿರುವವರು ಎಷ್ಟು ಜನ?
ನಾನೋ ಬರಿ ನೀರು ಹಾವು.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018