2nd ಜುಲೈ ೨೦೧೮

ಟೆಕ್ ಡ್ರೀಮರ್ಸ್ ಓದಲೇಬೇಕಾದ
‘ಹಿಟ್ ರಿಫ್ರೆಶ್’

ಮೋಹನದಾಸ್

ಭಾರತದಲ್ಲಿ ಹುಟ್ಟಿ, ಬೆಳೆದು, ಓದಿ ನಂತರ ಅಮೆರಿಕೆಯ ವಾತಾವರಣಕ್ಕೆ ಒಗ್ಗಿಕೊಂಡು ಯಶಸ್ಸು ಕಂಡ ಸತ್ಯ ನದೆಲ್ಲ ತಮ್ಮ ಬದುಕಿನ ಪಯಣವನ್ನು ಈ ಪುಸ್ತಕದಲ್ಲಿ ಅತ್ಯಂತ ವಿಶಾದವಾಗಿ ತೆರೆದಿಟ್ಟಿದ್ದಾರೆ.

ಡಿಸೆಂಬರ್ 1992ರಲ್ಲಿ ಅಂದಿನ ಕ್ಯಾಬಿನೆಟ್ ಸೆಕ್ರೆಟರಿ ಯುಗಾಂಧರ್‍ರವರು ತಮ್ಮ ಮಗನ ಮದುವೆಯನ್ನು ದೆಹಲಿಯಲ್ಲಿ ಆಯೋಜಿಸಿರುತ್ತಾರೆ. ತಮ್ಮ ಅತಿಥಿಗಳಿಗೆ ಅನಗತ್ಯವಾಗಿ ಸೆಕ್ಯುರಿಟಿ ಕಿರಿಕಿರಿಯಾಗಬಾರದೆಂದು ತಮ್ಮ ಬಾಸ್, ಪ್ರಧಾನಿ ಪಿ.ವಿ.ನರಸಿಂಹರಾವ್‍ರವರನ್ನು ಕರೆಯುವ ಗೋಜಿಗೆ ಹೋಗಿರುವುದಿಲ್ಲ. ತಮಗೆ ಆಹ್ವಾನವಿಲ್ಲದ್ದನ್ನು ಕಂಡೂ ನರಸಿಂಹರಾವ್ ಸಮಾರಂಭಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸುತ್ತಾರೆ. ಅಂದಿನ ಮದುವೆಯಲ್ಲಿ ವರನಾಗಿದ್ದವರು ಸತ್ಯ ನದೆಲ್ಲ, ಇಂದಿನ ಮೈಕ್ರೋಸಾಫ್ಟ್ ಕಂಪನಿಯ ಸಿಇಓ.

ಸತ್ಯ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ವಿಫಲರಾಗಿ ಮಣಿಪಾಲದ ಎಮ್‍ಐಟಿಯಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದರು. ನಂತರ ಅಮೆರಿಕೆಯ ಸಾಮನ್ಯ ವಿಶ್ವವಿದ್ಯಾನಿಲಯವೊಂದರಲ್ಲಿ ಸ್ನಾತಕೋತ್ತರ ಪದವಿ ಪಡೆದು 1992ರಲ್ಲಿ ಮೈಕ್ರೋಸಾಫ್ಟ್ ಕಂಪನಿ ಸೇರುತ್ತಾರೆ. ಟೆಕ್ ಪ್ರಪಂಚದಲ್ಲಿ ದಂತಕಥೆಯಾಗಿರುವ ಬಿಲ್‍ಗೇಟ್ಸ್‍ರವರಿಂದ ಸ್ಥಾಪಿತವಾದ ಮೈಕ್ರೋಸಾಫ್ಟ್, ವಿಶ್ವಕ್ಕೆ ಅಮೂಲ್ಯವಾದ ‘ವಿಂಡೋಸ್ ಆಪರೇಟಿಂಗ್ ಸಿಸ್ಟಮ್’ ಕೊಡುಗೆ ನೀಡಿರುತ್ತದೆ. ಕಂಪ್ಯೂಟರ್ ಒಂದರ ಜೀವಾಳವಾಗಿರುವ ಈ ತಾಂತ್ರಿಕತೆಯ ಯಶಸ್ಸಿನಲ್ಲಿ ಕಂಪನಿಯು ‘ಎಂಎಸ್ ಆಫೀಸ್’ ಮತ್ತಿತರ ಅಸಾಧಾರಣ ಜನಪ್ರಿಯ ತಂತ್ರಾಶಗಳನ್ನು ಮಾರುಕಟ್ಟೆಗೆ ಬಿಡುತ್ತದೆ.

ಬಿಲ್‍ಗೇಟ್ಸ್ 2000ನೆಯ ಇಸವಿಯವರೆಗೆ ಮೈಕ್ರೋಸಾಫ್ಟ್ ಮುನ್ನಡೆಸಿ ತಮ್ಮ ಗೆಳೆಯ-ಸಹೋದ್ಯೋಗಿ ಸ್ಟೀವ್ ಬಾಲ್ಮರ್‍ಗೆ ಕಂಪನಿ ನಡೆಸಲು ಬಿಟ್ಟುಕೊಡುತ್ತಾರೆ. ಸ್ಟೀವ್ ನೇತೃತ್ವದಲ್ಲಿ ಕಂಪನಿಯ ಗಳಿಕೆಯು ಕಡಿಮೆಯಾಗದಿದ್ದರೂ ಗೂಗಲ್, ಯಾಹೂ, ಅಮೆಝಾನ್, ಇಂಟೆಲ್ ಮತ್ತಿತರ ಕಂಪನಿಗಳ ಹೋಲಿಕೆಯಲ್ಲಿ ನಿಸ್ತೇಜವಾದಂತೆ ಕಂಡುಬರುತ್ತದೆ. ನಂತರ ಫೆಬ್ರವರಿ 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಅತಿಮುಖ್ಯ ಸಿಇಓ ಪದವಿಗೆ ಬಿಲ್‍ಗೇಟ್ಸ್ ಮತ್ತು ಸ್ಟೀವ್ ಬಾಲ್ಮರ್ ಒಟ್ಟಾಗಿ ಸತ್ಯ ನದೆಲ್ಲ ಅವರನ್ನು ಆಯ್ಕೆ ಮಾಡುತ್ತಾರೆ. ಅಲ್ಲಿಯವರೆಗೆ ಭಾರತೀಯ ಸಂಜಾತನೊಬ್ಬನಿಗೆ ದೊರೆತ ಅತಿಮೌಲ್ಯದ ಹುದ್ದೆಯೆಂದು ವಿಶ್ವಾದ್ಯಂತ ಪ್ರಚಾರ ಸಿಗುತ್ತದೆ. ನಂತರದ ದಿನಗಳಲ್ಲಿ ಸತ್ಯ ನದೆಲ್ಲ ಮೈಕ್ರೋಸಾಫ್ಟ್ ಎಂಬ ಬೃಹತ್ ಕಂಪನಿಯ ಗಳಿಕೆಯ ಸಾಮಥ್ರ್ಯವನ್ನು ಹೆಚ್ಚಿಸಲು ಅನೇಕಾನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಇವುಗಳಲ್ಲಿ ನೋಕಿಯಾ ಕಂಪನಿಯನ್ನು ಕೊಳ್ಳುವುದು ಮತ್ತು ಹಲವಾರು ಕಂಪನಿಗಳ ಜೊತೆ ಸಹಭಾಗಿತ್ವದ ಯೋಜನೆಗಳೂ ಕೂಡಿರುತ್ತವೆ. ಮೈಕ್ರೋಸಾಫ್ಟ್ ಕಂಪನಿ 1990ರ ದಶಕದ ಏಕಮೇವಾಧಿಪತ್ಯ ಸ್ಥಾಪಿಸಲಾಗದಿದ್ದರೂ ಅಮೆರಿಕೆಯ ಸಾಫ್ಟ್‍ವೇರ್ ಕ್ಷೇತ್ರದ ದೈತ್ಯನಾಗಿ ಮುಂದುವರೆಯುತ್ತದೆ.

ಭಾರತದಲ್ಲಿ ಹುಟ್ಟಿ, ಬೆಳೆದು, ಓದಿ ನಂತರದಲ್ಲಿ ಅಮೆರಿಕೆಯ ವಾತಾವರಣಕ್ಕೆ ಒಗ್ಗಿಕೊಂಡು ಯಶಸ್ಸು ಕಂಡ ತಮ್ಮ ಬದುಕಿನ ಪಯಣವನ್ನು ಸತ್ಯ ನದೆಲ್ಲ ಈ ‘ಹಿಟ್ ರಿಫ್ರೆಶ್’ ಎಂಬ ಪುಸ್ತಕದಲ್ಲಿ ಅತ್ಯಂತ ವಿಶದವಾಗಿ ತೆರೆದಿಟ್ಟಿದ್ದಾರೆ. ಬುದ್ದಿಮಾಂಧ್ಯ ಮಗುವೊಂದರ ತಂದೆಯೂ ಆಗಿರುವ ಸತ್ಯ ಅಮೆರಿಕದಲ್ಲಿನ ತಮ್ಮ ಜೀವನದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. 2014ರ ಸಮಯಕ್ಕೆ ಅವಸಾನದ ಅಂತ್ಯದಲ್ಲಿಯೆಂದು ಎಲ್ಲರೂ ನಂಬಿದ್ದ ಕಂಪನಿಯೊಂದರ ಆತ್ಮ ವಿಮರ್ಶೆ ಮಾಡುತ್ತಾ ಆಧುನಿಕ ಟೆಕ್ ಜಗತ್ತಿನ ಸ್ಪರ್ಧಾಲೋಕದಲ್ಲಿ ಪ್ರಸ್ತುತವಾಗಬೇಕಿರುವ ಜರೂರನ್ನು ಎತ್ತಿ ಹೇಳಿದ್ದಾರೆ. ಸ್ಪರ್ಧೆಯು ಎಷ್ಟೇ ತೀಕ್ಷ್ಣವಾಗಿದ್ದರೂ ಪರಸ್ಪರ ಅನುಭೂತಿ (ಎಂಪಥಿ) ಹೊಂದಿರದ ಉದ್ಯೋಗಿಗಳು ಶ್ರೇಷ್ಠ ಸಂಸ್ಥೆಯೊಂದನ್ನು ಕಟ್ಟಲಾರರು ಎಂಬ ಭಾರತೀಯತೆಯ ಮೌಲ್ಯವನ್ನು ಎತ್ತಿ ಹೇಳುತ್ತಾರೆ.

ಕೃತಿಯ ಆಯ್ದ ಸಾಲುಗಳು

ನಾನು ಮೈಕ್ರೋಸಾಫ್ಟ್‍ನ ಸಿಇಓ ಆಗುತ್ತೇನೆಂಬ ಸುಳಿವು ಸಿಕ್ಕಾಗ ನನ್ನ ಮುಂದಿದ್ದ ಆದ್ಯತೆಗಳಲ್ಲಿ ಅತಿಮುಖ್ಯವಾದವುಗಳೆಂದರೆ, ಮೈಕ್ರೋಸಾಫ್ಟ್ ಕಂಪನಿಯ ಆತ್ಮವನ್ನು ಮತ್ತೆ ಅನ್ವೇಷಿಸುವುದು, ಕಂಪನಿಯ ಗುರಿಗಳನ್ನು ಮತ್ತೆ ವ್ಯಾಖ್ಯಾನಿಸುವುದು ಮತ್ತು ಗ್ರಾಹಕರಿಗೆ ಪೂರಕವಾಗುವಂತೆ ನಮ್ಮ ಉದ್ಯಮದ ಹೆಗ್ಗುರಿಗಳ ರೂಪುರೇಷೆಗಳನ್ನು ಮತ್ತೊಮ್ಮೆ ಹೇಳಿಕೊಳ್ಳುವುದು. ಮೊದಲಿನಿಂದಲೂ ನಮ್ಮ ಕಂಪನಿಯ ವ್ಯಾಪಾರೀ ರಣನೀತಿಯನ್ನು ಸರಿಯಾಗಿ ಕಂಡುಕೊಳ್ಳಬೇಕೆಂಬುದು ನನ್ನ ಬಯಕೆಯಾಗಿತ್ತು. ಆದರೆ ಮ್ಯಾನೇಜ್‍ಮೆಂಟ್ ಗುರು ಪೀಟರ್ ಡ್ರುಕ್ಕರ್ ಹೇಳಿದಂತೆ “ಕಂಪನಿಯೊಂದರ ಸಂಸ್ಕೃತಿಯು (ಕಲ್ಚರ್) ವ್ಯಾಪಾರೀ ರಣನೀತಿ (ಸ್ಟ್ರಾಟೆಜಿ) ಯನ್ನು ಬೆಳಗಿನ ಕಾಫಿ-ತಿಂಡಿಯಂತೆ ಸೇವಿಸಿಬಿಡುತ್ತದೆ”. ಅಂದು ಮೈಕ್ರೋಸಾಫ್ಟ್‍ನ ಹಿರಿಯ ಉದ್ಯೋಗಿಗಳ ಮುಂದೆ ನನ್ನ ಮಾತುಗಳನ್ನು ಮುಗಿಸುತ್ತಾ, ಮೈಕ್ರೋಸಾಫ್ಟ್‍ನ ಸಂಸ್ಕೃತಿಯನ್ನು ಬದಲಿಸುವುದರ ಬಗ್ಗೆ ನಾನು ಎದುರಿಸಬೇಕಾಗಿದ್ದ ಅತ್ಯಂತ ಕಠಿಣ ಸವಾಲಿನ ಬಗ್ಗೆ ಗಮನ ಹರಿಸಿದ್ದೆ....

ಉದ್ಯಮಗಳಲ್ಲಿ ಸಂಸ್ಕೃತಿಯೆನ್ನುವುದು ಒಂದು ಅಸ್ಪಷ್ಟ ಮತ್ತು ಅಮೂರ್ತ ಕಲ್ಪನೆಯಾಗಿದೆ. ಸಾಹಿತ್ಯಿಕ ಸಿದ್ಧಾಂತವಾದಿ ಟೆರ್ರಿ ಈಗಲ್‍ಟನ್ ತನ್ನ ಸೂಕ್ಷ್ಮ ಗ್ರಹಿಕೆಯ ಪುಸ್ತಕ ‘ಕಲ್ಚರ್’ನಲ್ಲಿ ಹೇಳಿದಂತೆ ಸಂಸ್ಕೃತಿಯು ಹಲವು ರೂಪಧಾರಣೆ ಹೊಂದಿದೆ. ಈಗಲ್‍ಟನ್‍ರವರು ಅತ್ಯಂತ ಖಚಿತವಾಗಿ ಉದ್ಯಮಸಂಸ್ಕೃತಿಯ ನಾಲ್ಕು ಆಯಾಮಗಳನ್ನು ಗುರುತಿಸುತ್ತಾರೆ. ಒಂದು ಉದ್ಯಮಕ್ಕೆ ಅಗತ್ಯವಿರುವುದು ಅಲ್ಲಿನ ಮೌಲ್ಯಗಳು, ಪರಂಪರೆಗಳು, ನಂಬಿಕೆಗಳು ಮತ್ತು ಅಲ್ಲಿನ ಪ್ರತಿಯೊಬ್ಬರು ಪಾಲಿಸುವ ಸಾಂಕೇತಿಕ ಪದ್ಧತಿಗಳು. ಸಂಸ್ಕೃತಿಯೆಂದು ನಾವು ಹೇಳುವ ದಿನಂಪ್ರತಿಯ ನಡವಳಿಕೆಗಳು ನಮ್ಮ ಜೀವನವನ್ನು ಅರ್ಥವಾಗಿಸುವ ಹಾಗೂ ಅರ್ಥವಾಗಿಸಿಕೊಳ್ಳುವ ನಿಟ್ಟಿನಲ್ಲಿರುತ್ತವೆ. ಐರ್ಲೆಂಡಿನ ಈಗಲ್‍ಟನ್ ಹೇಳಿದಂತೆ ಅವನ ದೇಶದ ಜನರ ಮನೆಯ ಮುಂದಿನ ಅಂಚೆಪೆಟ್ಟಿಗೆಯು ನಾಗರಿಕತೆಯ ಸಂಕೇತವಾಗಿದ್ದರೆ, ಆ ಎಲ್ಲಾ ಅಂಚೆಪೆಟ್ಟಿಗೆಗಳು ಹಸಿರು ಬಣ್ಣದ್ದಾಗಿರುವುದು ಅವರ ಸಂಸ್ಕೃತಿಯ ಸಂಕೇತವಾಗಿದೆ. ನನ್ನ ಗ್ರಹಿಕೆಯಲ್ಲಿ ಸಂಸ್ಕೃತಿಯೆನ್ನುವುದು ವೈಯಕ್ತಿಕ ಮನಃಸ್ಥಿತಿಗಳನ್ನು ಒಡಗೂಡಿಸಿದ ಒಂದು ಸಂಕೀರ್ಣ ವ್ಯವಸ್ಥೆ. ಇದು ಹೇಗೆ ಒಂದು ಸಂಸ್ಥೆಯು ಆಲೋಚಿಸುತ್ತದೆ ಮತ್ತು ಕಾರ್ಯಗತವಾಗುತ್ತದೆ ಎಂಬುದನ್ನು ತಿಳಿಸುತ್ತದೆ. ಆದರೆ ಈ ಸಂಸ್ಕೃತಿಯನ್ನು ಅಲ್ಲಿನ ಪ್ರತಿಯೊಬ್ಬರೂ ಮೂರ್ತರೂಪಕ್ಕೆ ತರುತ್ತಾರೆ.

ಭಾರತದ, ಅತಿಮುಖ್ಯವಾಗಿ ಬೆಂಗಳೂರಿನ, ಟೆಕ್ ಪ್ರಪಂಚದ ಕನಸುಗಾರರು ಓದಲೇಬೇಕಾದ ಪುಸ್ತಕವಿದು. ಕೇವಲ ತಾಂತ್ರಿಕ ಉದ್ಯೋಗಿಗಳಾಗುವ ಹಂತದಿಂದ ಟೆಕ್ ಲೀಡರ್‍ಗಳಾಗುವ ಮತ್ತು ಸಾಂಸ್ಥಿಕ ಮುಖಂಡರಾಗುವ ಹಾದಿಯಲ್ಲಿ ಬೇಕಿರುವ ಚಲನಶೀಲತೆ ಮತ್ತು ಸಮರ್ಪಣೆ ಈ ಪುಸ್ತಕದಲ್ಲಿ ಢಾಳಾಗಿ ಕಾಣುತ್ತದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡಿ ಓದಿಸಲೇಬೇಕಾದ ಈ ಹೊತ್ತಿಗೆಯಲ್ಲಿ ಭವಿಷ್ಯದ ಕ್ಷೇತ್ರಗಳಾದ ಕೃತಕ ಬುದ್ದಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಮಿಶ್ರಿತ ವಾಸ್ತವ (ಮಿಕ್ಸೆಡ್ ರಿಯಲಿಟಿ) ಮತ್ತು ಬೃಹತ್ ಗಣಕ (ಕ್ವಾಂಟಮ್ ಕಂಪ್ಯೂಟಿಂಗ್) ವಿಧಾನಗಳ ಬಗ್ಗೆ ಅಪಾರ ವಿವರಗಳಿವೆ.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮