2nd ಜುಲೈ ೨೦೧೮

ವಿಶ್ವಕಪ್ ಫುಟ್‍ಬಾಲ್‍ಗೆ ಭ್ರಷ್ಟತೆ ಲೇಪ!

ಫೀಫಾದ ಭ್ರಷ್ಟತೆಗೆ ತಡೆಹಾಕಲು ಅಮೆರಿಕಾದ ತನಿಖಾ ಏಜೆನ್ಸಿ ಎ¥sóï.ಬಿ.ಐ. ಕೈಹಾಕಿದೆ. ಇಲ್ಲಿ ತಮಾಷೆಯೆಂದರೆ ತನಿಖೆಗೆ ಸಹಾಯ ಮಾಡುತ್ತಿರುವವರು ಸಹ ಇಂತಹ ಭ್ರಷ್ಟರೆ. ಇದು ಸುಂದರ ಕ್ರೀಡೆಯೊಂದರ ಕೊಳಕು ಮುಖ.

ಪ್ರಪಂಚದ ಅತ್ಯಂತ ಜನಪ್ರಿಯ ಕ್ರೀಡಾಸ್ಪರ್ಧೆಯಾದ ಫುಟ್‍ಬಾಲ್ ವಿಶ್ವಕಪ್ ರಷ್ಯಾದಲ್ಲಿ ಇದೀಗ ನಡೆಯುತ್ತಿದೆ. ಕೇವಲ 32 ದೇಶಗಳ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಸಹ, ವಿಶ್ವಕಪ್ ಶುರುವಾಗುತ್ತಿದ್ದಂತೆ ಜಗತ್ತಿನಾದ್ಯಂತ ಫುಟ್‍ಬಾಲ್ ಜ್ವರ ಪ್ರಾರಂಭವಾಗಿಬಿಡುತ್ತದೆ. ಒಲಿಂಪಿಕ್ಸ್ ಸ್ಪರ್ಧೆಗಳಂತೆಯೇ ವಿಶ್ವಕಪ್ ಸಹ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಆದರೆ ಈ ಸ್ಪರ್ಧೆಯ ಉತ್ಕಟತೆಯೇ ಬೇರೆ. ಫುಟ್‍ಬಾಲ್ ಪ್ರೇಮಿಗಳು ಎಲ್ಲೆಡೆಯಿಂದ ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಹೋಗುತ್ತಾರೆ. ಇಂತಹವರ ಪೈಕಿ ಈ ವರ್ಷ ನಮ್ಮ ಗಮನ ಸೆಳೆಯುತ್ತಿರುವವನು ಸ್ಪೇನಿನ ವಲೆನ್ಸಿಯಾ ನಗರದ ಒಬ್ಬ ಫುಟ್‍ಬಾಲ್ ಪ್ರೇಮಿ. ಅವನು ಸುಮಾರು 6,000 ಕಿಲೋಮೀಟರ್ ದೂರದ ದಾರಿಯನ್ನು 74 ದಿನಗಳ ಕಾಲ ಸೈಕಲ್ ಮೂಲಕ ಕ್ರಮಿಸಿ, ಮಾಸ್ಕೊ ನಗರವನ್ನು ತಲುಪಿದ್ದಾನಂತೆ. ಅವನ ಬಳಿ ಯಾವ ಪಂದ್ಯಕ್ಕೂ ಟಿಕೆಟ್ ಇಲ್ಲ, ಉಳಿಯುವ ವ್ಯವಸ್ಥೆಯೂ ಇರಲಿಲ್ಲ. ಅವನ ಕಥೆಯನ್ನು ಕೇಳಿದ ಪುಣ್ಯಾತ್ಮರೊಬ್ಬರು ತಮ್ಮ ಮನೆಯಲ್ಲಿ ಒಂದು ಕೊಠಡಿಯನ್ನು ನೀಡಿದ್ದಾರೆ ಎಂದು ಇ.ಎಸ್.ಪಿ.ಎನ್. ವರದಿ ಮಾಡಿದೆ.

ಗುಂಪು ಹಂತದ ಮೊದಲ ಎರಡು ಸುತ್ತಿನ ಪಂದ್ಯಗಳು ಮುಗಿಯುವ ಹೊತ್ತಿಗೆ ಕೆಲವು ಸಂಗತಿಗಳು ಸ್ಪಷ್ಟವಾಗುತ್ತಿದೆ.

ಮೊದಲಿಗೆ, ರಷ್ಯನ್ನರ ಆತಿಥ್ಯ ಮತ್ತು ಕ್ರೀಡಾಂಗಣಗಳ ವ್ಯವಸ್ಥೆ ನಿರೀಕ್ಷೆಗೂ ಮೀರಿ ಚೆನ್ನಾಗಿವೆ. ರಷ್ಯನ್ನರ ಸ್ನೇಹಮನೋಭಾವ ಮತ್ತು ಸನ್ನಡತೆಗೆ ವಿದೇಶಿ ಪ್ರವಾಸಿಗರು ಮಾರುಹೋಗಿದ್ದಾರೆ. ಮಿಗಿಲಾಗಿ, ಪಂದ್ಯಗಳು ನಡೆಯುತ್ತಿರುವ ನಗರಗಳಲ್ಲಿ ಸುರಕ್ಷಿತವಾದ ವಾತಾವರಣವಿರುವುದು ಆಶ್ಚರ್ಯವನ್ನು ಮೂಡಿಸಿದೆ. ರಷ್ಯಾದ ಪ್ರಮುಖ ನಗರಗಳಲ್ಲಿ ಮಾಫಿûಯಾದ ಪ್ರಭಾವವಿರುವುದು ಮತ್ತು ಪೊಲೀಸರಗಿಂತ ಅಪರಾಧಿಗಳೆ ರಸ್ತೆಗಳನ್ನು ನಿಯಂತ್ರಿಸುತ್ತಾರೆ ಎನ್ನುವುದು ಹೊಸ ಸಂಗತಿಯೇನಲ್ಲ. ರಷ್ಯಾಕ್ಕೆ ಹೋಗುವ ಪ್ರವಾಸಿಗರಿಗೆ ದರೋಡೆಗೊಳಗಾಗದೆ ಹೇಗೆ ಹೊರಬರುವುದು ಎನ್ನುವುದನ್ನು ತಿಳಿಸುವ ಮಾರ್ಗದರ್ಶಿ ಪುಸ್ತಕಗಳು ಕಡಿಮೆಯೇನಿಲ್ಲ.

ರಷ್ಯನ್ನರ ಆತಿಥ್ಯಕ್ಕಿಂತಲೂ ಸೊಗಸಾಗಿರುವುದು ರಷ್ಯಾ ತಂಡದ ಪ್ರದರ್ಶನ. ಪಂದ್ಯಾವಳಿ ಪ್ರಾರಂಭವಾಗುವುದಕ್ಕೆ ಮೊದಲು ರಷ್ಯಾ ತಂಡವು ಅಷ್ಟೇನು ಚೆನ್ನಾಗಿ ಆಡುವ ನಿರೀಕ್ಷೆಯಿರಲಿಲ್ಲ. ಆದರೂ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಜಯಗಳಿಸುವುದರ ಜೊತೆಗೆ ಎಂಟು ಗೋಲುಗಳನ್ನು ಹೊಡೆದು ತುಂಬ ಆಕರ್ಷಣೀಯ ಶೈಲಿಯನ್ನೂ ಆತಿಥೇಯ ತಂಡವು ಪ್ರದರ್ಶಿಸಿದೆ. ಹಾಗೂ ಎರಡನೆಯ ಸುತ್ತನ್ನು ಪ್ರವೇಶಿಸಿದೆ.

ಎರಡನೆಯದಾಗಿ, ಮೊದಲ ಹಂತದ ಗುಂಪಿನ ಪಂದ್ಯಗಳಲ್ಲಿ ಪಂದ್ಯಾವಳಿಯನ್ನು ಗೆಲ್ಲುವ ನಿರೀಕ್ಷೆಯನ್ನು ಹೊಂದಿದ್ದ ಬಹುತೇಕ ತಂಡಗಳು ಅಷ್ಟೇನು ಚೆನ್ನಾಗಿ ಆಡಿಲ್ಲ. ಹಿಂದಿನ ಬಾರಿಯ ವಿಜೇತ ಜರ್ಮನಿ ತಂಡವು ಸೋಲನ್ನು ಅನುಭವಿಸಿದರೆ, ದಕ್ಷಿಣ ಅಮೆರಿಕಾದ ಎರಡು ಫುಟ್‍ಬಾಲ್ ಶಕ್ತಿಕೇಂದ್ರಗಳಾದ ಬ್ರೆಜಿಲ್ ಮತ್ತು ಅರ್ಜೆಂಟೀನಾಗಳು ಅಷ್ಟೇನು ಉತ್ತಮ ಪ್ರದರ್ಶನ ನೀಡಿಲ್ಲ. ಬ್ರೆಜಿಲ್ ಗುಂಪಿನ ಹಂತದಿಂದ ಹೊರಬರುವ ಆಶಾಭಾವನೆಯನ್ನಾದರೂ ಹೊಂದಿದೆ. ಆದರೆ ಅತ್ಯಂತ ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಅರ್ಜೆಂಟೀನಾ ಬಹುತೇಕ ಈ ವಿಶ್ವಕಪ್‍ನಿಂದ ಹೊರಬಿದ್ದಿದೆ. ¥sóÁ್ರನ್ಸ್, ಸ್ಪೇನ್ ಮತ್ತು ಇಂಗ್ಲೆಂಡುಗಳ ಪ್ರದರ್ಶನ ಅಷ್ಟೇನು ಚೆನ್ನಾಗಿಲ್ಲ. ಹೀಗೆ ಕೆಲವು ಆಶ್ಚರ್ಯ ಮೂಡಿಸುವ ಫಲಿತಾಂಶಗಳು ಈಗಾಗಲೆ ಹೊರಹೊಮ್ಮಿವೆ. ಮೆಕ್ಸಿಕೊ ಮತ್ತು ಬೆಲ್ಜಿಯಮ್ ತಂಡಗಳು ಈ ಪಂದ್ಯಾವಳಿಯಲ್ಲಿ ಯಶಸ್ಸು ಗಳಿಸಬಲ್ಲ ತಂಡಗಳಾಗಿ ಕಾಣುತ್ತಿವೆ.

ಮೂರನೆಯದಾಗಿ, ಲಯೊನೆಲ್ ಮೆಸ್ಸಿ (ಅರ್ಜೆಂಟೀನಾ), ಕ್ರಿಶ್ಚಿಯಾನೊ ರೊನಾಲ್ಡೊ(ಪೋರ್ಚುಗಲ್) ಮತ್ತು ಮೊಹಮದ್ ಸಾಲಾ (ಈಜಪ್ಟ್) ಇವರಂತೆ ಒಬ್ಬ ಸೂಪರಸ್ಟಾರ್ ಇರುವ ತಂಡಗಳು ಅಷ್ಟೇನು ಒಳ್ಳೆಯ ಪ್ರದರ್ಶನ ನೀಡುತ್ತಿಲ್ಲ. ಇಂತಹ ಅದ್ಭುತ ಪ್ರತಿಭೆಗಳು ಅನಿರೀಕ್ಷಿತ ತಿರುವುಗಳನ್ನು ನೀಡುವ ಶಕ್ತಿಯನ್ನು ಹೊಂದಿರುತ್ತವೆ. ಆದರೆ ಇಡೀ ತಂಡವು ಗೆಲುವಿಗಾಗಿ ಅವರನ್ನೆ ಕಾಯಲು ಸಾಧ್ಯವಿಲ್ಲ. ಏಕೆಂದರೆ ಫುಟ್‍ಬಾಲ್ ಒಂದು ತಂಡವಾಗಿಯೇ ಆಡಬೇಕಾದ ಕ್ರೀಡೆ. ಈ ಪಾಠವನ್ನು ಮತ್ತೊಮ್ಮೆ ಈ ವಿಶ್ವಕಪ್‍ನಲ್ಲಿ ಅರ್ಜೆಂಟೀನಾದಂತಹ ಹಲವಾರು ತಂಡಗಳು ಕಲಿಯುತ್ತಿವೆ.

ವಿಶ್ವಕಪ್ ನೋಡುತ್ತ, ಆನಂದಿಸುತ್ತಿರುವಾಗಲೆ ಮತ್ತೊಂದು ಅಂಶವನ್ನು ಮರೆಯುವಂತಿಲ್ಲ. ಫುಟ್‍ಬಾಲ್‍ನ್ನು ಸಾಮಾನ್ಯವಾಗಿ ಸುಂದರ ಕ್ರೀಡೆಯೆಂದೆ ಸಂಬೋಧಿಸುವುದು ಪರಿಪಾಠವಿದೆ. ಆದರೆ ಫುಟ್‍ಬಾಲಿಗೆ, ಅದರಲ್ಲಿಯೂ ವಿಶ್ವಕಪ್ ಸಂಘಟಿಸುವ ಹಿನ್ನೆಲೆಯಲ್ಲಿ ಒಂದು ದೊಡ್ಡ ಕಳಂಕ, ಕಪ್ಪುಚುಕ್ಕಿಯೂ ಇದೆ. ಫುಟ್‍ಬಾಲ್ ಕ್ರೀಡೆಯನ್ನು ಜಾಗತಿಕವಾಗಿ ನಡೆಸುವ ಫಿûೀ¥sóÁ ಅತ್ಯಂತ ಭ್ರಷ್ಟ ಕ್ರೀಡಾ ಸಂಘಟನೆಗಳಲ್ಲೊಂದು. ಅದರಲ್ಲಿಯೂ ಇತ್ತೀಚಿನ ದಶಕಗಳಲ್ಲಿ ವಿಶ್ವಕಪ್ ಅನ್ನು ನಡೆಸುವ ಅವಕಾಶ ಪಡೆದಿರುವ ದೇಶಗಳೆಲ್ಲವೂ ಮತದಾನದ ಹಕ್ಕನ್ನು ಹೊಂದಿರುವ ರಾಷ್ಟ್ರೀಯ ¥sóÉಡರೇಷನ್ನುಗಳ ಪದಾಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎನ್ನುವ ಸಾಕಷ್ಟು ಪುರಾವೆಯಿರುವ ಆರೋಪಗಳಿವೆ.

ವಿಶ್ವಕಪ್ ನಡೆಸುವ ಅವಕಾಶವನ್ನು ಪಡೆಯುವುದು ಪ್ರತಿಷ್ಠೆಯ ವಿಷಯ. ಅವಕಾಶ ಪಡೆದ ದೇಶಗಳ ನಾಯಕರು ಒಳ್ಳೆಯ ಪ್ರಚಾರ ಪಡೆಯುವ ಸಂದರ್ಭ ಸಹ. ಈ ಬಾರಿ ಅಂತಹ ಸುವರ್ಣಾವಕಾಶವನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ನರಿಗೆ ದೊರಕಿದೆ. ಎರಡು ದಶಕಗಳಿಂದಲೂ ರಷ್ಯಾವನ್ನು ಸರ್ವಾಧಿಕಾರಿಯಂತೆಯೇ ಆಳುತ್ತಿರುವ ಪುಟಿನ್ ವಿಶ್ವಕಪ್ ಸಂದರ್ಭದಲ್ಲಿ ಎಲ್ಲರ ಟೆಲಿವಿಷನ್ ಪರದೆಯ ಮೇಲೆ ಮಿಂಚುತ್ತಿದ್ದಾರೆ.

ಅಂತೆಯೆ 2022ರ ವಿಶ್ವಕಪ್‍ನ ಆತಿಥೇಯ ದೇಶ ಪಶ್ಚಿಮ ಏಷ್ಯಾದ ಪೆಟ್ರೋಲಿಯಮ್ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಕೊಲ್ಲಿ ರಾಷ್ಟ್ರಗಳಲ್ಲೊಂದಾದ ಖತಾರ್. ಪ್ರಪಂಚದಲ್ಲಿಯೇ ಮೂರನೆಯ ಅತಿ ಹೆಚ್ಚು ನೈಸರ್ಗಿಕ ತೈಲ ಮತ್ತು ಗ್ಯಾಸ್ ಸಂಪನ್ಮೂಲಗಳನ್ನು ಹೊಂದಿರುವ ಖತಾರ್ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ತಲಾ ಆದಾಯವನ್ನು ಹೊಂದಿರುವ ದೇಶ. ಇಲ್ಲಿರುವ ಜನರ ಸಂಖ್ಯೆ ಬೆಂಗಳೂರು ನಗರದ ಕಾಲುಭಾಗದಷ್ಟು, ಅಂದರೆ ಸುಮಾರು 26 ಲಕ್ಷದಷ್ಟು. ಇವರ ಪೈಕಿ ಖತಾರಿನವರೆ ಕೇವಲ 3 ಲಕ್ಷ ಜನರು ಮತ್ತು ಮಿಕ್ಕ 23 ಲಕ್ಷದಷ್ಟು ಜನ ಅಲ್ಲಿ ಕೆಲಸ ಮಾಡಲೆಂದು ಬಂದಿರುವ ಹೊರಗಿನವರು.

ಖತಾರ್ ಸಹ ಲಂಚ ನೀಡಿ ವಿಶ್ವಕಪ್ ಆತಿಥ್ಯದ ಅವಕಾಶ ಪಡೆದಿದೆ ಎನ್ನುವ ಗಂಭೀರ, ಪುರಾವೆಸಹಿತ ಆರೋಪಗಳಿವೆ. ಪ್ರತಿವಾರವೂ ಸುಮಾರು 500 ಮಿಲಿಯನ್ ಡಾಲರುಗಳನ್ನು (ರೂ.3,500 ಕೋಟಿ) ವಿಶ್ವಕಪ್ ನಡೆಸಲು ಸಜ್ಜಾಗಲು ಖತಾರ್ ಖರ್ಚು ಮಾಡುತ್ತಿದೆ. ಈ ಪ್ರಮಾಣದಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಕೆಲಸ ನಡೆಯಲಿದೆ ಎನ್ನಲಾಗುತ್ತಿದೆ. ಒಟ್ಟು ಸುಮಾರು 200 ಬಿಲಿಯನ್ ಡಾಲರುಗಳು (ಸುಮಾರು ಏಳು ಲಕ್ಷ ಕೋಟಿ ರೂಪಾಯಿಗಳು) ಖತಾರಿಗೆ ಬೇಕಾಗಬಹುದು ಎನ್ನುವ ಅಂದಾಜಿದೆ. ಇಷ್ಟೆಲ್ಲ ಹಣವೇಕೆ ಎನ್ನುತ್ತೀರಾ. ವಿಶ್ವಕಪ್ ನಡೆಯುವ ಜೂನ್-ಜುಲೈ ತಿಂಗಳುಗಳಲ್ಲಿ ಅತಿ ಹೆಚ್ಚು ಬಿಸಿಲು ಇಲ್ಲಿರುತ್ತದೆ. ಹಾಗಾಗಿ ಹವಾನಿಯಂತ್ರಿತ ಕ್ರೀಡಾಂಗಣಗಳು, ಹೋಟೆಲುಗಳು, ರೈಲುವ್ಯವಸ್ಥೆ ಮತ್ತು ವಿಮಾನ ನಿಲ್ದಾಣಗಳನ್ನು ಕಟ್ಟಬೇಕು. ಇಷ್ಟು ಹಣ ವ್ಯಯಿಸಲು ಸಿದ್ಧರಿರುವವರಿಗೆ ಆತಿಥ್ಯದ ಅವಕಾಶ ಪಡೆಯಲು ಹೆಚ್ಚೆಂದರೆ ಒಂದು ದಿನದ ಖರ್ಚಿನ ಹಣವನ್ನು ಲಂಚವಾಗಿ ನೀಡಿದರೆ ಸಾಕು ಅನಿಸಿದರೆ ತಪ್ಪೇ.

ಫಿûೀ¥sóÁದ ಭ್ರಷ್ಟತೆಯ ಕತೆಗಳಿಗೆ ಕಡೆಯಿಲ್ಲ. 1974ರಿಂದ 1998ರವರಗೆ ಅದರ ಅಧ್ಯಕ್ಷನಾಗಿದ್ದ ಬ್ರೆಜಿಲ್‍ನ ಉದ್ಯಮಿ ಹ್ಯಾವಲಾಂಗ್ ಫಿûೀ¥sóÁದಲ್ಲಿ ಲಂಚದ ಸಂಸ್ಕೃತಿಯನ್ನು ಹುಟ್ಟುಹಾಕಿದವರು. ಅವರೂ ಸ್ವತಃ ಹಣ ತೆಗೆದುಕೊಂಡು, ಇತರ ಫಿûೀ¥sóÁ ಸದಸ್ಯ ರಾಷ್ಟ್ರಗಳ ಫುಟ್‍ಬಾಲ್ ¥sóÉಡರೇಷನ್ ಪದಾಧಿಕಾರಿಗಳಿಗೂ ಆ ಅವಕಾಶ ಒದಗಿಸಿದರು. ಅವರ ಉತ್ತರಾಧಿಕಾರಿಯಾದ ಸೆಪ್ ಬ್ಲಾಟರ್ ಇನ್ನಷ್ಟು ಭ್ರಷ್ಟತೆಯನ್ನು ಬೆಳಸಿದರು. ತನ್ನ ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಫಿûೀ¥sóÁದ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಹಂಚಿದರು. ಈ ಭ್ರಷ್ಟ ಸಂಸ್ಕೃತಿಯು ಫುಟ್‍ಬಾಲ್ ಆಡಳಿತಕ್ಕೆ ಕೈಹಾಕಿದ ಕೆಲವು ಅತ್ಯುತ್ತಮ ಕ್ರೀಡಾಪಟುಗಳನ್ನೂ ಆಹುತಿ ತೆಗೆದುಕೊಂಡಿತು. ಉದಾಹರಣೆಗೆ ಜರ್ಮನಿಯ ಬೆಕೆನಬಾವರ್ ಮತ್ತು ¥sóÁ್ರನ್ಸಿನ ಪ್ಲಾಟಿನಿ ಫುಟ್‍ಬಾಲಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಇರುವವರು. ಅವರ ಮೇಲೂ ಈಗ ಗಂಭೀರ ಆರೋಪಗಳಿವೆ.

ಫಿûೀ¥sóÁದ ಭ್ರಷ್ಟತೆಗೆ ತಡೆಹಾಕಲು ಅಮೆರಿಕಾದ ತನಿಖಾ ಏಜೆನ್ಸಿ ಎ¥sóï.ಬಿ.ಐ. ಕೈಹಾಕಿದೆ. ಇಲ್ಲಿ ತಮಾಷೆಯೆಂದರೆ ತನಿಖೆಗೆ ಸಹಾಯ ಮಾಡುತ್ತಿರುವವರು ಸಹ ಇಂತಹ ಭ್ರಷ್ಟರೆ. ಅಮೆರಿಕಾದ ಚಕ್ ಬ್ಲೇಜರ್ ಎಂಬ ಫಿûೀ¥sóÁ ಪದಾಧಿಕಾರಿ ಒಂದು ಕಾಲದಲ್ಲಿ ತನ್ನ ಬೆಕ್ಕುಗಳಿಗಾಗಿ ನ್ಯೂಯಾರ್ಕಿನ ಟ್ರಂಪ್ ಟವರಿನಲ್ಲಿ ಒಂದು ಅಪಾರ್ಟಮೆಂಟನ್ನು ಫಿûೀ¥sóÁದ ವೆಚ್ಚದಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದವನು. ಈಗ ಆತನೆ ಫಿûೀ¥sóÁದ ಇತರರ ಅತೀವ ಭ್ರಷ್ಟತೆಗೆ, ಮುಖಕ್ಕೆ ರಾಚುವ ಲಂಚಕೋರತನಕ್ಕೆ ಹೆದರಿ ಎ¥sóï.ಬಿ.ಐ.ಗೆ ಮಾಹಿತಿ ನೀಡುತ್ತಿದ್ದಾನಂತೆ. ಆತನಿಗೆ ಭಯ ಹುಟ್ಟಿದ್ದು ಏಕೆಂದರೆ ಮಿತಿಮೀರಿದ ಭ್ರಷ್ಟತೆ ಒಂದಲ್ಲ ಒಂದು ದಿನ ಬೆಳಕಿಗೆ ಬರುತ್ತದೆ, ಆಗ ತನ್ನಂತಹವರು ಈಗ ಲಾಭ ಪಡೆಯುತ್ತಿರುವ ವ್ಯವಸ್ಥೆಯೂ ಕುಸಿಯಬಹುದು ಎನ್ನುವ ಆತಂಕ.

ಇದು ಸುಂದರ ಕ್ರೀಡೆಯೊಂದರ ಕೊಳಕು ಮುಖ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮