2nd ಜುಲೈ ೨೦೧೮

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ
ಕೇರಳ ಹಣಕಾಸು
ಸಚಿವರ ಬಹಿರಂಗ ಪತ್ರ

ಟಿ.ಎಂ.ಥಾಮಸ್ ಐಸಾಕ್
ಕೇರಳದ ಹಣಕಾಸು ಸಚಿವರು

ನನ್ನ ಸಹ ಹಣಕಾಸು ಸಚಿವರೇ,

ರಾಜ್ಯಗಳ ಹಣಕಾಸು ಪರಿಸ್ಥಿತಿಗೆ ಹಣಕಾಸು ಆಯೋಗದ ಹಣವಿತರಣೆಯು ಬಹಳ ಮುಖ್ಯವಾದುದು ಎಂದು ನೀವು ಒಪ್ಪುತ್ತೀರಿ ಎಂದು ನಾನು ಭಾವಿಸಿದ್ದೇನೆ. ನಮ್ಮಲ್ಲಿ ಕೆಲವರು ಮೊದಲು ತಿರುವನಂತಪುರದಲ್ಲಿ ಮತ್ತು ನಂತರ ಆಂಧ್ರಪ್ರದೇಶದ ಅಮರಾವತಿಯಲ್ಲಿ ಭೇಟಿ ಮಾಡಿದ್ದೆವು. ಆಗ ನಡೆದ ಸಭೆಗಳಲ್ಲಿ, ಕೇಂದ್ರ ಸರ್ಕಾರವು ನಿಗದಿ ಪಡಿಸಿರುವ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳ (ಟಮ್ರ್ಸ್ ಆ¥sóï ರೆ¥sóÀರೆನ್ಸ್) ಪರಿಣಾಮವು ಏನಾಗಬಹುದು ಎನ್ನುವುದರ ಬಗ್ಗೆ ನಮ್ಮ ಆತಂಕಗಳನ್ನು ಹಂಚಿಕೊಂಡಿದ್ದೆವು. ಸಂಪನ್ಮೂಲಗಳ ವಿತರಣೆಗೆ ಸಂಬಂಧಿಸಿದ ವಿಚಾರಗಳು ಎಲ್ಲರ ಗಮನ ಸೆಳೆದಿವೆ ಮತ್ತು ಪತ್ರಿಕೆಗಳ ಶೀರ್ಷಿಕೆಗಳಲ್ಲಿ ಕಂಡುಬಂದಿವೆ. ಆದರೆ ಇನ್ನೂ ಮಹತ್ವದ ವಿಚಾರಗಳೆಡೆಗೆ ನಾವು ಗಮನ ಹರಿಸಬೇಕಿದೆ.

ಉಲ್ಲೇಖದ ನಿಯಮಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಮೌಲ್ಯಗಳಿಗೆ ಮತ್ತು ರಾಜ್ಯ ಸರ್ಕಾರಗಳು ಇಂದು ಅನುಭವಿಸುವ ವಿತ್ತೀಯ ಸ್ವಾಯತ್ತತೆಗಳಿಗೆ ಸವಾಲಾಗಿವೆ. ನಾನು ಈ ಪತ್ರವನ್ನು ಬರೆಯುತ್ತಿರುವುದಕ್ಕೆ ಒಂದು ಕಾರಣವೆಂದರೆ ನಮ್ಮ ಆತಂಕಗಳು ಕೇವಲ ಜನಸಂಖ್ಯೆಯ ಆಧಾರ ವರ್ಷವನ್ನು 1971ರಿಂದ 2011ಕ್ಕೆ ಬದಲಿಸಿರುವುದಕ್ಕೆ ಸೀಮಿತವಾಗಿದೆ ಎಂದು ನೀವು ಭಾವಿಸಿರಬಹುದು ಎನ್ನುವುದು. ಈ ಬದಲಾವಣೆಯಿಂದ ಕೇವಲ ದಕ್ಷಿಣ ರಾಜ್ಯಗಳಿಗೆ ಮಾತ್ರ ಹಾನಿಯಾಗುತ್ತಿಲ್ಲ, ಬದಲಿಗೆ ಜನಸಂಖ್ಯೆಯ ಹೆಚ್ಚಳದಲ್ಲಿ ಕಡಿತವಾಗಿರುವ ಎಲ್ಲ ರಾಜ್ಯಗಳಿಗೂ ತೊಂದರೆಯಾಗುತ್ತಿದೆ. ರಾಷ್ಟ್ರದ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಅನುಷ್ಠಾನಗೊಳಿಸಿರುವುದಕ್ಕೆ ನಮ್ಮನ್ನು ಶಿಕ್ಷಿಸಬಾರದು ಎಂದು ನಾವು ಖಂಡಿತವಾಗಿಯೂ ನಮ್ಮ ನ್ಯಾಯಸಮ್ಮತ ವಾದವನ್ನು ಮುಂದಿಡುತ್ತೇವೆ. ಹಣಕಾಸು ಆಯೋಗಕ್ಕೆ ನಾವು ಸಲ್ಲಿಸುವ ಮನವಿ ಪತ್ರದಲ್ಲಿ ನಾವು ಕೇಂದ್ರದ ಸಂಪನ್ಮೂಲಗಳ ಹಂಚಿಕೆಯನ್ನು ಮಾಡಲು ಅತ್ಯುತ್ತಮ ಮಾನದಂಡವೇನು ಎನ್ನುವುದರ ಬಗ್ಗೆ ನಾವು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಅಂತಹ ಕೆಲಸವನ್ನು ಹಿಂದಿನಿಂದಲೂ ನಾವೆಲ್ಲರೂ ಮಾಡುತ್ತಲೆ ಬಂದಿದ್ದೇವೆ. ಆದರೆ ರಾಜ್ಯಗಳ ಹಣಕಾಸು ಸಚಿವರಾದ ನಾವೆಲ್ಲರೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಪನ್ಮೂಲ ಹಂಚಿಕೆಯ ವಿಚಾರದಲ್ಲಿ ಸಮಾನವಾದ ಹಿತಾಸಕ್ತಿಗಳನ್ನು ಹೊಂದಿದ್ದೇವೆ.

ರಾಜಕೀಯ ಕಾರಣಗಳಿಗೋಸ್ಕರ ನಾವು ಎಲ್ಲರೂ ಒಂದಾಗಿ ಇಂದು ನಮ್ಮ ರಾಷ್ಟ್ರೀಯ ಹೊಣೆಗಾರಿಕೆಯಾದ ರಾಜ್ಯಗಳ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ವಿತ್ತೀಯ ಸಂಯುಕ್ತ ತತ್ವ (¥sóÉಡರಲಿಸಮ್)ವನ್ನು ರಕ್ಷಿಸಲು ಹಿಂಜರಿಯುತ್ತಿರಬಹುದು ಎನ್ನುವ ಭಯ ನನ್ನನ್ನು ಕಾಡುತ್ತಿದೆ. ಹಾಗಾಗಿ ರಾಜ್ಯಗಳ ಹಣಕಾಸು ಸಂಪನ್ಮೂಲಗಳನ್ನು ಮತ್ತು ಸ್ವಾಯತ್ತತೆಯ ಮೇಲೆ ಪರಿಣಾಮ ಬೀರಬಲ್ಲ ಉಲ್ಲೇಖದ ನಿಯಮಗಳಲ್ಲಿರುವ ಕೆಲವು ವಿಚಾರಗಳನ್ನು ನಾನು ಇಂದು ಸಾರ್ವಜನಿಕವಾಗಿ ಎತ್ತಲು ಆಶಿಸುತ್ತೇನೆ. ಈ ವಿಚಾರಗಳ ಕುರಿತಾಗಿ ನನ್ನ ಸಹ ಹಣಕಾಸು ಸಚಿವರು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೆ, ಅವರು ಸಹ ಈ ಒಂದು ಸಾರ್ವಜನಿಕ ಚರ್ಚೆಯಲ್ಲಿ ಭಾಗಿಯಾಗುತ್ತಾರೆ ಎಂದು ನಾನು ಆಶಿಸುತ್ತೇನೆ. ನಿಮ್ಮಲ್ಲಿ ಕೆಲವರಾದರೂ ಈ ಕೆಲಸವನ್ನು ಮಾಡುತ್ತೀರಿ ಎನ್ನುವ ಆಶಾವಾದವನ್ನು ನಾನು ಹೊಂದಿದ್ದೇನೆ.

ಮೊದಲಿಗೆ, 14ನೆಯ ಹಣಕಾಸು ಆಯೋಗವು ರಾಜ್ಯಗಳಿಗೆ ನೀಡಿದ ಶೇ.42ರಷ್ಟರ ಪಾಲಿಗಿಂತ ತೆರಿಗೆಯ ಪ್ರಮಾಣವು ಕಡಿಮೆಯಾಗುವುದನ್ನು ಒಪ್ಪುವ ಹಣಕಾಸು ಸಚಿವರು ಯಾರಾದರೂ ಇದ್ದಾರೆಯೆ? ಏಕೆಂದರೆ ಉಲ್ಲೇಖಗಳ ನಿಯಮಗಳು ಇದನ್ನೆ ಮಾಡಲು ಉದ್ದೇಶಿಸಿವೆ. ಹಾಗಿಲ್ಲದಿದ್ದರೆ ಐಟಮ್ 6(4)ರ ಅರ್ಥವಾದರೂ ಏನು? ಭಾರತದ ಇತಿಹಾಸದಲ್ಲಿ ಹಿಂದೆ ಯಾವಾಗಲೂ ಹಣಕಾಸಿನ ಆಯೋಗವೊಂದಕ್ಕೆ ತನ್ನ ಹಿಂದಿನ ಹಣಕಾಸು ಆಯೋಗದ ಹಂಚಿಕೆಯನ್ನು ಮರುಪರಿಶೀಲನೆ ಮಾಡುವಂತೆ ಕೇಳಿಲ್ಲ. ಇಲ್ಲಿ ದತ್ತಾಂಶ (¥sóÁ್ಯಕ್ಟ್)ಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅಗತ್ಯವಿದೆ: 13ನೆಯ ಹಣಕಾಸು ಆಯೋಗವು ನೀಡಿದ 32% ಮತ್ತು 14ನೆಯ ಹಣಕಾಸು ಆಯೋಗವು ಒದಗಿಸಿದ 42%ಗಳಲ್ಲಿ ವ್ಯತ್ಯಾಸವಿದೆ. ಮೊದಲನೆಯದು ಯೋಜಿತವಲ್ಲದ ರೆವಿನ್ಯೂ ಖರ್ಚಿಗೆ (ನಾನ್-ಪ್ಲಾನ್ ರೆವಿನ್ಯೂ ಎಕ್ಸಪೆಂಡಿಚರ್) ಸಂಬಂಧಿಸಿದುದು ಆದರೆ ಎರಡನೆಯದು ಸಂಪೂರ್ಣ ರೆವಿನ್ಯೂ ಖರ್ಚಿಗೆ ಸಂಬಂಧಿಸಿದುದು. ಯೋಜನಾ ಅನುದಾನಗಳನ್ನು ನಿಲ್ಲಿಸಲಾಗಿದೆ. ಮಿಗಿಲಾಗಿ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ಸರ್ಕಾರವು ಹೆಚ್ಚಿಸಿದೆ. ಹಾಗಾಗಿ ರಾಜ್ಯಗಳಿಗೆ ದೊರಕುತ್ತಿದ್ದ ಜಿ.ಡಿ.ಪಿ.ಯ ಒಟ್ಟಾರೆ ಹಂಚಿಕೆಯು ಹೆಚ್ಚುಕಡಿಮೆ ಹಳೆಯ ಪ್ರಮಾಣದಲ್ಲಿಯೇ ಇದೆ. ಜಿ.ಎಸ್.ಟಿ.ಯು ಕೇಂದ್ರ-ರಾಜ್ಯಗಳ ನಡುವಿನ ಹಂಚಿಕೆಯನ್ನು ಮತ್ತಷ್ಟು ಅಸಮಾನಗೊಳಿಸಿದೆ. ಇದಕ್ಕೆ ಕಾರಣವೇನೆಂದರೆ ಈ ತೆರಿಗೆಯನ್ನು 50:50ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಲಾಗುತ್ತಿರುವುದು. ಆದರೆ ಉಲ್ಲೇಖಗಳ ನಿಯಮಗಳಲ್ಲಿ ಜಿ.ಎಸ್.ಟಿ.ಯಿಂದ ಕೇಂದ್ರದ ಸಂಪನ್ಮೂಲಗಳ ಪ್ರಮಾಣ ಕಡಿಮೆಯಾಗಲಿದೆ ಎಂದು ನಿಮಗೆ ಓದಲು ಸಿಗುತ್ತಿದೆ. ಜಿ.ಎಸ್.ಟಿ.ಯ ಅಸಮಾನ ಹಂಚಿಕೆಯೆಂಬ ಕೇಂದ್ರದ ವಾದವು ತಮಾಷೆಯ ವಿಷಯ.

ಎರಡನೆಯದಾಗಿ, ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಯು ಪ್ರತಿಯೊಬ್ಬ ಭಾರತದ ನಾಗರಿಕನಿಗೂ ಹೋಲಿಸಬಹುದಾದ ರೀತಿಯಲ್ಲಿನ ಸಾರ್ವಜನಿಕ ಸೇವೆಗಳು ಮತ್ತು ತೆರಿಗೆ ವ್ಯವಸ್ಥೆಯು ಇರುತ್ತದೆ ಎನ್ನುವುದನ್ನು ಖಾತ್ರಿ ಪಡಿಸುತ್ತದೆ. ಆ ಉದ್ದೇಶಕ್ಕಾಗಿಯೆ ಸಂವಿಧಾನವು ರೆವಿನ್ಯೂ ಕೊರತೆ ಅನುದಾನದ ಸಾಧ್ಯತೆಯನ್ನು ಒದಗಿಸಿದೆ. ಯಾವ ಹಣಕಾಸು ಆಯೋಗವೂ ಸಹ ಇದನ್ನು ಮರುಪರಿಶೀಲನೆ ಮಾಡುವಂತಿಲ್ಲ. ಆದರೆ ಉಲ್ಲೇಖಗಳ ನಿಯಮಗಳ ಐಟಮ್ 5ರಲ್ಲಿ ಹೇಗೆ ಈ ಕೆಳಗಿನ ಅಂಶವನ್ನು ಸೇರಿಸಲಾಗಿದೆ: ‘ಆಯೋಗವು ರೆವಿನ್ಯೂ ಕೊರತೆ ಅನುದಾನಗಳನ್ನು ಒದಗಿಸಬೇಕೆ ಎನ್ನುವುದರ ಬಗ್ಗೆ ಪರೀಕ್ಷಿಸಬಹುದು.’ ಈ ಅಂಶವು ಸಂವಿಧಾನದತ್ತವಾದ ರಾಜ್ಯಗಳ ಹಕ್ಕುಗಳ ಮೇಲಿನ ಆಕ್ರಮಣ ಎನ್ನುವುದನ್ನು ನೀವು ಒಪ್ಪುವುದಿಲ್ಲವೆ?

ಮೂರನೆಯದಾಗಿ, ಉಲ್ಲೇಖಗಳ ನಿಯಮಗಳು ರಾಜ್ಯಗಳು ಸಾಲ ಎತ್ತಬಹುದಾದ ಮೊತ್ತವನ್ನು ರಾಜ್ಯದ ಜಿ.ಡಿ.ಪಿ.ಯ ಶೇ.3ರಿಂದ ಶೇ.1.7ಕ್ಕೆ ಇಳಿಸಲು ಉದ್ದೇಶಿಸಿವೆ. ಈ ಶಿ¥sóÁರಸನ್ನು ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಪರಿಶೀಲನಾ ಸಮಿತಿಯು ಮಾಡಿದೆ.

ನಾವು ಈಗಷ್ಟೆ 14ನೆಯ ಹಣಕಾಸಿನ ಆಯೋಗದಿಂದ ದೊರಕಿರುವ ಸಾಲ ಮಾಡುವ ಹಕ್ಕನ್ನು ಬಳಸಲು ಪ್ರಾರಂಭಿಸಿದ್ದೇವೆ. ಇದನ್ನು ಈಗಲೆ ತಡೆದರೆ, ರಾಜ್ಯಗಳ ಕ್ಯಾಪಿಟಲ್ ಎಕ್ಸಪೆಂಡಿಚರ್ (ಬಂಡವಾಳ ಖರ್ಚು)ನಲ್ಲಿ ಸಾಕಷ್ಟು ಕಡಿತವಾಗುತ್ತದೆ. ಇದಲ್ಲದೆ ಉಲ್ಲೇಖಗಳ ನಿಯಮಗಳಲ್ಲಿ ರಾಜ್ಯಗಳು ಸಾಲ ಪಡೆಯುವದರ ಮೇಲೆ ಯಾವ ಬಗೆಯ ನಿಯಮಗಳನ್ನು ಹೇರಬಹುದು ಎನ್ನುವುದರ ಬಗ್ಗೆ ಚರ್ಚಿಸುವಂತೆ ಹಣಕಾಸು ಆಯೋಗಕ್ಕೆ ಸೂಚನೆ ನೀಡಲಾಗಿದೆ. ಇದುವರೆಗೆ ರಾಜ್ಯದ ಜಿ.ಡಿ.ಪಿ.ಯ ಶೇ.3ರಷ್ಟು ಮಾತ್ರ ಸಾಲ ಮಾಡಬಹುದು ಎನ್ನುವ ಮಿತಿಯ ಹೊರತಾಗಿ ಬೇರಾವ ನಿಯಮಗಳೂ ಇಲ್ಲ. ಹಾಗಾಗಿ ರಾಜ್ಯಗಳ ವಿತ್ತೀಯ ಸ್ವಾತಂತ್ರ್ಯದ ಮೇಲಿನ ಈ ಆಕ್ರಮಣವನ್ನು ನಾವು ತಿರಸ್ಕರಿಸಬೇಕು.

ಕೇರಳದ ಎಡಪಕ್ಷಗಳ ರಂಗದ ಸರ್ಕಾರದಲ್ಲಿ ಹಣಕಾಸು ಸಚಿವರಾದ ಥಾಮಸ್ ಐಸಾಕ್ ಈ ಮುಕ್ತ ಪತ್ರವನ್ನು ಎಲ್ಲ ರಾಜ್ಯಗಳ ಹಣಕಾಸು ಸಚಿವರನ್ನು ಉದ್ದೇಶಿಸಿ ಬರೆದರು. ಈ ಪತ್ರಕ್ಕೆ ಎರಡು ಮುಖ್ಯ ಉದ್ದೇಶಗಳಿವೆ. ಮೊದಲನೆಯದು ದಕ್ಷಿಣದ ರಾಜ್ಯಗಳೆಲ್ಲವೂ ಒಂದಾಗಿ ಮೋದಿ ಸರ್ಕಾರದ ವಿವಾದಾತ್ಮಕ ಕ್ರಮವೊಂದನ್ನು ವಿರೋಧಿಸಿರುತ್ತಿರುವುದು. ಮೋದಿ ಸರ್ಕಾರದ ಈ ಕ್ರಮವು ಕೇಂದ್ರದ ಸಂಪನ್ಮೂಲಗಳನ್ನು ಹಂಚಲು 1971ರ ಜನಸಂಖ್ಯಾಗಣತಿಯ ಬದಲು 2011ರ ಜನಗಣತಿಯನ್ನು ಪರಿಗಣಿಸಲು ಬಯಸುತ್ತದೆ. ರಾಜ್ಯಗಳಿಗೆ ದೊರಕುವ ಅನುದಾನವು ಜನಸಂಖ್ಯೆಯನ್ನು ಅವಲಂಬಿಸಿರುತ್ತದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು. 2011ರ ಜನಗಣತಿಯನ್ನು ಪರಿಗಣಿಸಿದರೆ, ಆಗ ಜನಸಂಖ್ಯಾ ನಿಯಂತ್ರಣ ಮಾಡಿರುವ ದಕ್ಷಿಣದ ರಾಜ್ಯಗಳಿಗೆ ದೊರಕುವ ಅನುದಾನದ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಜನಸಂಖ್ಯಾ ನಿಯಂತ್ರಣವನ್ನು ಮಾಡದಿರುವ ಉತ್ತರದ ಮತ್ತು ಪೂರ್ವದ ರಾಜ್ಯಗಳಿಗೆ ಹೆಚ್ಚು ಅನುದಾನ ದೊರಕುತ್ತದೆ. ಹಾಗಾಗಿ ದಕ್ಷಿಣದ ರಾಜ್ಯಗಳು 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಲು ಒತ್ತಾಯಿಸುತ್ತಿವೆ.

ಎರಡನೆಯದಾಗಿ, 15ನೆಯ ಹಣಕಾಸು ಆಯೋಗವನ್ನು ರಚಿಸಿದ ನಂತರ ಅದಕ್ಕೆ ರೂಪಿಸಿರುವ ಉಲ್ಲೇಖಗಳ ನಿಯಮಗಳು ಅಸಾಂವಿಧಾನಿಕ ಮತ್ತು ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ ಎನ್ನುವ ವಾದವನ್ನು ದಕ್ಷಿಣದ ರಾಜ್ಯಗಳು ಮಾಡುತ್ತಿವೆ. ಐಸಾಕ್ ಇಂತಹ ಒಂದು ವಾದಕ್ಕೆ ಪುಷ್ಟಿ ನೀಡುವ ಅಂಶಗಳನ್ನು ತಮ್ಮ ಲೇಖನದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಗಳ ಹಣಕಾಸು ಪರಿಸ್ಥಿತಿಯ ಚರ್ಚೆಯ ಸಂದರ್ಭದಲ್ಲಿ ಈ ಕೆಲವು ಅಂಶಗಳು ಉಪಯುಕ್ತವಾಗಬಹುದು ಎಂದು ಐಸಾಕರ ಮುಕ್ತ ಪತ್ರವನ್ನು ಪ್ರಕಟಿಸುತ್ತಿದ್ದೇವೆ.

ನಾಲ್ಕನೆಯದಾಗಿ, 14ನೆಯ ಹಣಕಾಸು ಆಯೋಗವು ಆಯೋಗದ ಮೂಲಕ ದೊರಕುವ ಅನುದಾನದ ಬಳಕೆಯಲ್ಲಿ ವಿವೇಚನಾ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಅದನ್ನು ಈಗ ಕಿತ್ತುಹಾಕಲಾಗಿದೆ. ಇದರಿಂದ ಸ್ಪಷ್ಟವಾಗುವುದು ಏನೆಂದರೆ ಕೇಂದ್ರ ಸರ್ಕಾರವು ಹಣಕಾಸು ಆಯೋಗವನ್ನು ಬಳಸಿಕೊಂಡು, ರಾಜ್ಯಗಳಿಗೆ ಷರತ್ತುಬದ್ಧ ಅನುದಾನಗಳನ್ನು ನೀಡುತ್ತ ಆ ಮೂಲಕ ರಾಜ್ಯಗಳ ಮೇಲೆ ನಿಯಮಗಳನ್ನು ಹೇರುತ್ತಿದೆ. ಉಲ್ಲೇಖಗಳ ನಿಯಮಗಳಲ್ಲಿನ ಇಂತಹ ಷರತ್ತುಗಳಲ್ಲಿ ನಾನು ಎಲ್ಲವನ್ನೂ ವಿರೋಧಿಸುತ್ತಿಲ್ಲವಾದರೂ, ಆಯ್ಕೆಯನ್ನು ರಾಜ್ಯಗಳಿಗೆ ಬಿಡಬೇಕೆಂದು ಭಾವಿಸುತ್ತೇನೆ. ಹಾಗೆಯೆ ಜನಪ್ರಿಯ ಯೋಜನೆಗಳ ಬಗೆಗಿನ ಉಲ್ಲೇಖವು ಸಹ ಚುನಾಯಿತ ರಾಜ್ಯಸರ್ಕಾರಗಳ ವಲಯವನ್ನು ಅತಿಕ್ರಮಿಸಿದಂತೆ ಇದೆ ಮತ್ತು ಹಾಗಾಗಿ ಅದನ್ನು ಒಪ್ಪಲು ಅಸಾಧ್ಯ. ಇಂತಹ ಉಲ್ಲೇಖಗಳು ಪ್ರಜಾಸತ್ತೆಯ ಸಂಪ್ರದಾಯಗಳಿಗೆ ವಿರೋಧಿಯಲ್ಲವೆ?

ಈಗ ನನ್ನ ಪ್ರಾರ್ಥನೆಯೆಂದರೆ ಸಂವಿಧಾನವನ್ನು ಮತ್ತು ರಾಜ್ಯಗಳ ಹಕ್ಕುಗಳನ್ನು ಎತ್ತಿಹಿಡಿಯಲು ಎಲ್ಲರೂ ಒಂದಾಗಿ ಕೈಜೋಡಿಸಬೇಕು ಎನ್ನುವುದು. ಆ ಮೂಲಕ ಭಾರತದ ವಿತ್ತೀಯ ಸಂಯುಕ್ತ ತತ್ವವನ್ನು ಕಡೆಗಣಿಸುವ ಪ್ರಯತ್ನವನ್ನು ತಡೆಯಬೇಕು. ನಮ್ಮ ಸಂಪನ್ಮೂಲಗಳ ಹಂಚಿಕೆ ಹೇಗಾಗಬೇಕು ಎನ್ನುವುದರ ಬಗ್ಗೆ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ತೊಂದರೆಯಿಲ್ಲ. ನಾವು ನಮ್ಮ ಅಭಿಪ್ರಾಯಗಳನ್ನು ಇಟ್ಟುಕೊಂಡೆ 15ನೆಯ ಹಣಕಾಸು ಆಯೋಗದ ಮುಂದೆ ನಮ್ಮ ಹಕ್ಕುಗಳ ಮಂಡನೆಯನ್ನು ಮಾಡಬಹುದು. ಆದರೆ ರಾಜ್ಯಗಳ ಸಂವಿಧಾನದತ್ತ ಹಕ್ಕುಗಳನ್ನು ರಕ್ಷಿಸಲು ನಮ್ಮ ಜೊತೆಗೆ ಸಹಮತ ಹೊಂದಿರುವವರು ಎಲ್ಲರೂ ಕೈಜೋಡಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ರಾಜಕೀಯ ನಿಷ್ಠೆಗಳು ರಾಜ್ಯಗಳ ಹಕ್ಕುಗಳನ್ನು ಸಂರಕ್ಷಿಸುವ ಪಥದಲ್ಲಿ ಅಡ್ಡ ಬರದಿರಲಿ.

*ಲೇಖಕರು ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿ.ಎ. ಮುಗಿಸಿ ಅನೇಕ ವರ್ಷ ಪತ್ರಕರ್ತರಾಗಿ ದುಡಿದಿದ್ದಾರೆ. ‘ಗೆಳೆಯನಿಗೆ’, ‘ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು’, ‘ಅದಕ್ಕೇ ಇರಬೇಕು’ ಪ್ರಕಟಿತ ಕವನ ಸಂಕಲನಗಳು. ಪ್ರಸ್ತುತ ರಾಣೆಬೆನ್ನೂರು ಬಳಿಯ ಸ್ವಂತ ಊರು ಕೂನಬೇವು ಗ್ರಾಮದಲ್ಲಿ ಸಾವಯವ ಮತ್ತು ಸಾಹಿತ್ಯ ಕೃಷಿಯಲ್ಲಿ ನಿರತರು; ದಿನಪತ್ರಿಕೆಗೆ ಅಂಕಣಕಾರರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮