2nd ಜೂನ್ ೨೦೧೮

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಮ.ಶ್ರೀ.ಮುರಳಿ ಕೃಷ್ಣ

ಈ ಚಲನಚಿತ್ರದುದ್ದಕ್ಕೂ ನಿರ್ದೇಶಕ ಗ್ರ್ಯೆಝರ್ ನವಿರಾಗಿ ಪ್ರೇಮವನ್ನು ಬಿಂಬಿಸಿದ್ದಾರೆ. ಅದರಲ್ಲಿ ಸಹಜತೆ ಅಂತರ್ಗತವಾಗಿದೆ. ಒಂದೆಡೆ ಪ್ರಿಯಕರನನ್ನು ಕಳೆದುಕೊಂಡ ಥಾಮಸ್, ಇನ್ನೊಂದೆಡೆ ಪತಿವಿಯೋಗ ಹೊಂದಿದ ಅನತ್, ಇಬ್ಬರೂ ಸಮಾನದುಃಖಿಗಳೇ.

ಮಾನವ ಸಂಬಂಧ ಗಳದ್ದು ಸಂಕೀರ್ಣ ಜಗತ್ತು. ಸಂಬಂಧಗಳ ಸ್ವರೂಪಗಳ ಬಗೆಗೆ ‘ಇದಮಿತ್ಥಂ’ ಎಂದು ಹೇಳುವುದಕ್ಕೆ ಸಾಧ್ಯವೇ? ಕೆಲವು ಚಲನಚಿತ್ರಗಳಲ್ಲಿ ಈ ವಿಷಯದ ನಾನಾ ಆಯಾಮಗಳು ಸಮರ್ಥ ವಾಗಿ ಅನಾವರಣ ಗೊಳ್ಳುತ್ತಿ ರುತ್ತವೆ. ಫೆಬ್ರುವರಿ 2018ರ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ 10ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಂಡ ‘ದಿ ಕೇಕ್‍ಮೇಕರ್’ ಎಂಬ 104 ನಿಮಿಷಗಳ, ಜರ್ಮನ್ ಮತ್ತು ಹೀಬ್ರ್ಯೂ ಭಾಷೆಯ, ಒಫಿರ್ ರೌಲ್ ಗ್ರೈಝರ್ ನಿರ್ದೇಶನದ (ಇವರೇ ಚಿತ್ರಕಥೆಯನ್ನು ಬರೆದಿದ್ದಾರೆ) ಚಲನಚಿತ್ರ ಇದಕ್ಕೆ ಒಂದು ಉತ್ತಮ ಉದಾಹರಣೆ.

ಈ ಚಲನಚಿತ್ರದ ಕಥೆಯ ಸಾರಾಂಶ ಹೀಗಿದೆ: ಬರ್ಲಿನ್‍ಗೆ ಆಗಾಗ್ಗೆ ವ್ಯಾಪಾರದ ನಿಮಿತ್ತ ಭೇಟಿ ನೀಡುತ್ತಿರುತ್ತಾನೆ ಜೆರುಸೆಲಾಂನ ಒರೆನ್ (ನಟ ರಾಯ್ ಮಿಲ್ಲರ್). ಆತನಿಗೆ ಬರ್ಲಿನ್‍ನ ಕೆಫೆಯೊಂದರ ಥಾಮಸ್ (ನಟ ಟಿಮ್ ಕಲ್ಕಾಫ್) ತಯಾರಿಸುವ ಕೇಕುಗಳು ಮತ್ತು ಇತರ ಪೇಸ್ಟರಿ ಖಾದ್ಯಗಳೆಂದರೆ ಪಂಚಪ್ರಾಣ. ಈ ಭೇಟಿ ಗಳ ಮೂಲಕವೇ ಅವರ ನಡುವೆ ಅನುರಾಗ ಮೂಡುತ್ತದೆ. ಆದರೆ ಒರೆನ್‍ಗೆ ಜೆರುಸೆಲಾಂನಲ್ಲಿ ಮಡದಿ ಮತ್ತು ಒಬ್ಬ ಸಣ್ಣ ವಯಸ್ಸಿನ ಮಗ ಇರುತ್ತಾರೆ. ಆತನ ಮಡದಿಗೆ ತನ್ನ ಗಂಡನ ಸಲಿಂಗ ಸಂಬಂಧದ ಸುಳಿವಿರುವುದಿಲ್ಲ. ಹೀಗಿರಬೇಕಾದರೇ, ಒರೆನ್ ಒಮ್ಮೆ ಜೆರುಸೆಲಾಂಗೆ ತೆರಳುತ್ತಾನೆ.

ದಿನಗಳು ಕಳೆದರೂ, ಆತ ಬರ್ಲಿನ್‍ಗೆ ಭೇಟಿ ನೀಡುವುದಿಲ್ಲ. ಆತನ ಕಂಪನಿಯ ಕಛೇರಿಯನ್ನು ಸಂಪರ್ಕಿಸಿದಾಗ, ಒರೆನ್ ಜೆರುಸೆಲಾಂನಲ್ಲಿ ಅಪಘಾತವೊಂದರಲ್ಲಿ ಅಸುನೀಗಿದ ವರ್ತಮಾನ ಥಾಮಸ್‍ನಿಗೆ ದೊರಕುತ್ತದೆ. ಅತ ತನ್ನ ಪ್ರೇಮಿಯ ಸಂಸಾರವನ್ನು ಕಾಣಲು ಜೆರುಸೆಲಾಂಗೆ ತೆರಳುತ್ತಾನೆ. ಆ ಸಮಯದಲ್ಲಿ ಒರೆನ್‍ನ ಮಡದಿ ಅನತ್(ನಟಿ ಸಾರಾ ಅಡ್ಲರ್) ಪುನರಾರಂಭಿಸಿದ್ದ ಕೆಫೆಗೆ ಹೋಗುತ್ತಾನೆ. ಆಲ್ಲಿ ಏನಾದರೂ ಕೆಲಸ ಮಾಡುವುದಕ್ಕೆ ಆಸ್ಪದವಿದೆಯೇ ಎಂದು ಕೇಳುತ್ತಾನೆ. ಮೊದಲು ನಿರಾಕರಿಸುವ ಅನತ್ ನಂತರ ಪಾತ್ರೆಗಳನ್ನು ತೊಳೆಯುವ ಕೆಲಸಕ್ಕೆ ಆತನನ್ನು ನಿಯೋಜಿಸುತ್ತಾಳೆ. ಆಕೆಯ ಮೈದುನ, ಸಂಪ್ರದಾಯವಾದಿ ಮೊಟ್ಟಿ(ನಟ ಝೋಹರ್ ಸ್ಟ್ರಾಸ್) ಥಾಮಸ್‍ಗೆ ಮನೆಯೊಂದನ್ನು ಗೊತ್ತುಮಾಡಿಕೊಡುತ್ತಾನೆ.

ಅನತ್‍ನ ಮಗನ ಹುಟ್ಟಿದ ಹಬ್ಬದ ಸಂದರ್ಭದಲ್ಲಿ ಥಾಮಸ್ ತನ್ನ ಪೇಸ್ಟರಿ ಕಲೆಯನ್ನು ಪ್ರದರ್ಶಿಸುತ್ತಾನೆ. ಆದರೆ ಇದನ್ನರಿತ ಮೊಟ್ಟಿ, ಕೋಶರ್ (ಇದು ಜ್ಯೂಗಳ ವಿಶಿಷ್ಟ ಹಾಗೂ ವಿವಾದಾಸ್ಪದ ಆಹಾರ ಪದ್ಧತಿ. ಇತರ ಧರ್ಮಿಯರು ಜ್ಯೂಗಳು ಬಳಸುವ ಒಲೆಗಳನ್ನು ಉಪಯೋಗಿಸುವಂತಿಲ್ಲ. ಅಂದರೆ ಬೇಯಿಸುವುದು, ಸುಡುವುದು ಇತ್ಯಾದಿ ಅಡುಗೆಗೆ ಸಂಬಂಧಿಸಿದ ಕಾರ್ಯಗಳು ನಿಷಿದ್ಧ. ಆದರೆ ತಿಂಡಿತಿನಿಸುಗಳ ತಯಾರಿಕೆಯ ಇತರ ಹಂತಗಳಲ್ಲಿ ಅವರು ಭಾಗಿ ಯಾಗಬಹುದು. ಆದರೆ ಇದನ್ನು ಆಚರಿಸದ ಜ್ಯೂಗಳೂ ಇದ್ದಾರೆ.) ಪದ್ಧತಿಗೆ ಅಪಚಾರವಾಯಿತೆಂದು ಕ್ಯಾತೆ ತೆಗೆಯುತ್ತಾನೆ. ಅನತ್‍ಗೆ ಇಂತಹ ಆಚರಣೆಗಳಲ್ಲಿ ನಂಬಿಕೆ ಇರುವುದಿಲ್ಲ. ನಂತರ ಥಾಮಸ್ ತಯಾರಿಸಿದ ನಾನಾ ಪೇಸ್ಟ್ರಿಗಳು ಹೆಚ್ಚು ಗ್ರಾಹಕರನ್ನು ಸೆಳೆಯುತ್ತವೆ. ಅನತ್‍ಳ ವ್ಯಾಪಾರ ವೃದ್ಧಿಸುತ್ತದೆ. ಥಾಮಸ್ ಆಕೆಯ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅನತ್‍ಳಿಗೆ ಮೊಟ್ಟಿಯ ಅನಪೇಕ್ಷಿತ ಮಧ್ಯಪ್ರವೇಶಗಳು ಕಿರಿಕಿರಿಯನ್ನುಂಟುಮಾಡುತ್ತವೆ. ಆಕೆ ಆತನಿಗೆ ತನ್ನ ಅಸಮಾಧಾನವನ್ನು ತಿಳಿಸುತ್ತಾಳೆ. ಬರುಬರುತ್ತ ಅನತ್‍ಳಿಗೆ ಥಾಮಸ್‍ನ ಮೇಲೆ ಪ್ರೇಮಾಂಕುರವಾಗುತ್ತದೆ. ಕೊನೆಯಲ್ಲಿ ಅನತ್‍ಳಿಗೆ ತನ್ನ ಗತಿಸಿದ ಗಂಡ ಮತ್ತು ಥಾಮಸ್‍ರ ನಡುವೆ ಇದ್ದ ಸಂಬಂಧದ ಅರಿವಾಗುತ್ತದೆ. ಇದರಿಂದ ಆಕೆ ವಿಚಲಿತಳಾಗುತ್ತಾಳೆ. ಕೆಲವೇ ಗಂಟೆಗಳಲ್ಲಿ ಥಾಮಸ್ ತನ್ನ ಗಂಟುಮೂಟೆ ಕಟ್ಟಿಕೊಂಡು ಜೆರುಸೆಲಾಂನ್ನು ತೊರೆಯುವ ಸಂದರ್ಭ ಬರುತ್ತದೆ. ಕೆಲ ಸಮಯದ ನಂತರ ಆಕೆ ಬರ್ಲಿನ್‍ಗೆ ಪಯಣ ಬೆಳೆಸುತ್ತಾಳೆ...

ಈ ಚಲನಚಿತ್ರದುದ್ದಕ್ಕೂ ನಿರ್ದೇಶಕ ಗ್ರ್ಯೆಝರ್ ನವಿರಾಗಿ ಪ್ರೇಮವನ್ನು ಬಿಂಬಿಸಿದ್ದಾರೆ. ಅದರಲ್ಲಿ ಸಹಜತೆ ಅಂತರ್ಗತವಾಗಿದೆ. ಒಂದೆಡೆ ಪ್ರಿಯಕರನನ್ನು ಕಳೆದುಕೊಂಡ ಥಾಮಸ್, ಇನ್ನೊಂದೆಡೆ ಪತಿವಿಯೋಗ ಹೊಂದಿದ ಅನತ್, ಇಬ್ಬರೂ ಸಮಾನದುಃಖಿಗಳೇ. ಪ್ರೇಮಕ್ಕೆ ಸಂಬಂಧಗಳ ಸಂಕುಚಿತ ಸಂಕೋಲೆ ಬೇಕೇ ಎನ್ನುವ ಪ್ರಶ್ನೆಯನ್ನು ಬಹಳ ಮಾರ್ಮಿಕವಾಗಿ ಮುಂದಿಡುತ್ತಾನೆ ನಿರ್ದೇಶಕ ಗ್ರೆಝಿಯರ್. ಇಲ್ಲಿನ ಪ್ರಧಾನ ಪಾತ್ರಗಳು ಲಿಂಗತ್ವ, ಧರ್ಮ, ಅಸ್ಮಿತೆ ಮುಂತಾದ ಚೌಕಟ್ಟುಗಳಿಗೆ ಒಳಪಡುವುದಿಲ್ಲ. ಚಲನಚಿತ್ರದಾದ್ಯಂತ ಥಾಮಸ್ ತೀರ ಕಡಿಮೆ ಮಾತನಾಡುತ್ತಾನೆ. ಆದರೆ ದೀರ್ಘ ನೋಟಗಳ ಮೂಲಕ ಆತ ತನ್ನ ಭಾವಲೋಕದ ಪ್ರೇಮ, ದುಃಖ, ಆತಂಕ, ನೋವು, ತಾದಾತ್ಮ್ಯಾನುಭೂತಿ(ಎಂಪಥಿ)ಗಳನ್ನು ಸಮರ್ಥವಾಗಿ ದಾಟಿಸುತ್ತಾನೆ.

ಥಾಮಸ್ ಮತ್ತು ಅನತ್ ಮಧ್ಯೆ ಚಿಗುರೊಡೆಯುವ ಪ್ರೇಮ ಸಾವಧಾನವಾಗಿ ಸಾಗುತ್ತದೆ. ಆತ ಹಿಟ್ಟನ್ನು ನಾದುವ ಪರಿ ಕಲಾತ್ಮಕವಾಗಿ ಮೂಡಿಬಂದಿದೆ. ಅದು ವಿಶೇಷಾರ್ಥಗಳನ್ನು ಸಾರುತ್ತಿದೆಯೇನೋ ಎಂದೆನಿಸುತ್ತದೆ! ಇದು ಥಾಮಸ್ ಮತ್ತು ಅನತ್‍ಳ ಮನಗಳಲ್ಲಿ ಮೂಡುವ ಅಷ್ಟರಸಗಳ ಭಾವನೆಗಳ ಮಥನದ ಒಂದು ಮೆಟಫರ್ ಎಂದು ಭಾವಿಸಬಹುದು. ನಾಲಿಗೆಯಲ್ಲಿ ನೀರೂರುವಂತೆ ತೋರುವ ಕೇಕುಗಳು, ತರಾವರಿ ಬಿಸ್ಕತ್ತುಗಳು... ಅಬ್ಬಾ! ದೊಡ್ಡ ಬ್ಲಾಕ್ ಫಾರೆಸ್ಟ್ ಕೇಕ್ ಬೀರುವ ಸಮ್ಮೋಹನವಂತೂ.. ಆಹಾ!

ಇವೆಲ್ಲದರ ನಡುವೆ ಜನಾಂಗವಾದದ ರಾಜಕೀಯವೂ ಒಮ್ಮೊಮ್ಮೆ ತಲೆಎತ್ತುವುದನ್ನು ಗಮನಿಸಬಹುದು. ಆದರೆ ಅದು ಪ್ರೇಮದ ಎದುರು ಕುಬ್ಜವಾಗುತ್ತದೆ! ಇಲ್ಲಿ ಸೆಕ್ಯುಲರಿಸಂನ ಎಳೆಯಿರುವುದನ್ನೂ ಗಮನಿಸಬಹದು. ಪಾತ್ರಧಾರಿಗಳ ಆಂತರ್ಯವನ್ನು ಅರಿಯುವಂತೆ ‘ಝೂಮ್ ಇನ್’ ತಂತ್ರವನ್ನು ಸಮರ್ಪಕವಾಗಿ ಸಿನಿಮೆಟೋಗ್ರಾಫರ್ ಓಮ್ರಿ ಅಲೋನಿ ದುಡಿಸಿಕೊಂಡಿದ್ದಾರೆ. ಅಲ್ಲದೆ ಬಣ್ಣ ಮತ್ತು ಬೆಳಕನ್ನು ಸಹ ಭಾವನೆಗಳಿಗೆ ಸರಿಹೊಂದುವಂತೆ ಸಂಯೋಜಿಸಲಾಗಿದೆ. ಸಂಗೀತ ನಿರ್ದೇಶಕ ಡಾಮಿನಿಕ್ ಚಾರ್‍ಪೆಂಟಿಯರ್‍ನ ಪಿಯಾನೊ ಬಳಕೆ ಪ್ರಧಾನ ಪಾತ್ರಧಾರಿಗಳ ಮೂಡುಗಳಿಗೆ ಪೂರಕವಾಗಿದೆ.

ಈ ಚಲನಚಿತ್ರದ ಟೈಟಲ್ ಕಾರ್ಡ್‍ನಲ್ಲೇ ರೈಲು ಚಲಿಸುವ ಶಾಟ್ ಇದೆ. ಇದು ಜೀವನದ ಹಾದಿಯನ್ನು ಸೂಚಿಸುವ ಚಲನಚಿತ್ರವಾಗಿ ರಬಹುದೇನೋ ಎಂಬ ಭಾವನೆಯನ್ನು ವೀಕ್ಷಕರಲ್ಲಿ ಮೂಡಿಸುತ್ತದೆ. ಇದು ಓಪನ್—ಎಂಡಡ್ ಸಿನಿಮಾ. ಜೆರುಸೆಲಾಂಗೆ ಥಾಮಸ್ ಪ್ರಯಾಣವನ್ನು ಬೆಳೆಸುವಾಗ ಹಾಗೂ ಅಲ್ಲೇ ನೆಲೆ ನಿಲ್ಲುವಾಗ ಆತ ಬರ್ಲಿನ್‍ನಲ್ಲಿರುವ ತನ್ನ ಕೆಫೆಯನ್ನು ಮುಚ್ಚಿರುತ್ತಾನೆಯೇ? ಚಲನ ಚಿತ್ರದ ಅಂತ್ಯದಲ್ಲಿ ಬರ್ಲಿನ್‍ನ ಥಾಮಸ್‍ನ ಕೆಫೆಗೆ ಆಗಮಿಸುವ ಅನತ್‍ಗೆ ಆತನ ಪ್ರತಿಕ್ರಿಯೆಗೆ ಹೇಗೆ ಸ್ಪಂದಿಸುತ್ತಾಳೆ ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಇದು ನಿರ್ದೇಶಕ ಗ್ರ್ಯೆಝರ್‍ನ ಚೊಚ್ಚಲ ಪ್ರಯತ್ನ. ಸಾಮಾನ್ಯ ವಾಗಿ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಇಂತಹ ಕಥನ ಮೆಲೋಡ್ರಾಮ ವಾಗುವುದೇ ಜಾಸ್ತಿ. ಆದರೆ ಈ ಚಲನಚಿತ್ರದಲ್ಲಿ ಒಂದೆರಡು ಪ್ರಸಂಗಗಳನ್ನು ಹೊರತುಪಡಿಸಿ (ಇಲ್ಲೂ ಅತಿರೇಕಗಳಿಲ್ಲ), ಇತರ ಸಂದರ್ಭಗಳಲ್ಲಿ ಕ್ರುದ್ಧರಾಗಿ, ಕಿರುಚಾಟ ನಡೆಸಲು ಕಾರಣಗಳಿದ್ದರೂ, ಪಾತ್ರಧಾರಿಗಳು ಹಾಗೆ ನಟಿಸಿಲ್ಲ. ಇದು ನಿರ್ದೇಶಕ ಕೌಶಲದಿಂದ ಸಿನಿ ಮಾಧ್ಯಮವನ್ನು ಬಳಸಿಕೊಂಡಿರುವ ರೀತಿಯನ್ನು ತೋರಿಸುತ್ತದೆ. 2017ರಲ್ಲಿ ತಯಾರಾದ ಈ ಚಲನಚಿತ್ರ ಕಾರ್‍ಲೋವಿ ವಾರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಕುಮೆನಿಕಲ್ ಜ್ಯೂರಿ ಪ್ರಶಸ್ತಿಯನ್ನು ಪಡೆದಿದೆ.

* ಲೇಖಕರು ಬ್ಯಾಂಕ್ ನೌಕರರ ಚಳವಳಿಯ ಸಕ್ರಿಯ ಕಾರ್ಯಕರ್ತರು. ಸಾಹಿತ್ಯ, ಸಂಗೀತ, ಸಿನಿಮಾ, ಅನುವಾದ, ಚಾರಣ ಇವರ ಆಸಕ್ತಿಯ ಕ್ಷೇತ್ರಗಳು.

ಡಾ.ಜಗದೀಶ ಕೆರೆನಳ್ಳಿ

ಜನ್ನನ ಯಶೋಧರ ಚರಿತೆಯಲ್ಲಿ ಪರಿಸರ ವರ್ಣನೆ

ಜುಲೈ ೨೦೧೮

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

ಜುಲೈ ೨೦೧೮

ನನ್ನ ಕ್ಲಿಕ್

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

ಜುಲೈ ೨೦೧೮

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

ಜುಲೈ ೨೦೧೮

ಮಂಜುನಾಥ್ ಲತಾ

ಕನ್ನಡ ಸಿನಿಮಾ: ಹೊಸ ಹರಿವು, ಅರಿವು

ಜುಲೈ ೨೦೧೮

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

ಜುಲೈ ೨೦೧೮

ಡಾ.ವಿನಯಾ ಒಕ್ಕುಂದ

ಲಕ್ಷ್ಮೀಶನ ಜೈಮಿನಿ ಭಾರತ ಸೀತಾ ಪರಿತ್ಯಾಗ

ಜೂನ್ ೨೦೧೮

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

ಜೂನ್ ೨೦೧೮

ನನ್ನ ಕ್ಲಿಕ್

ಜೂನ್ ೨೦೧೮

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

ಜೂನ್ ೨೦೧೮

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

ಜೂನ್ ೨೦೧೮

ಮ.ಶ್ರೀ.ಮುರಳಿ ಕೃಷ್ಣ

ಸಂಬಂಧಗಳ ನವಿರು ನಿರೂಪಣೆ ದಿ ಕೇಕ್‍ಮೇಕರ್

ಜೂನ್ ೨೦೧೮

ಬಾಲಚಂದ್ರ ಬಿ.ಎನ್.

ಕರುನಾಡ ಕದನ

ಜೂನ್ ೨೦೧೮

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

ಮೇ ೨೦೧೮

ಆರಿಫ್ ರಾಜಾ

...ಇದೀಗ ಎರಡು ನಿಮಿಷವಾಯಿತು!

ಮೇ ೨೦೧೮

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

ಮೇ ೨೦೧೮

ನನ್ನ ಕ್ಲಿಕ್

ಮೇ ೨೦೧೮

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

ಮೇ ೨೦೧೮

ಪ್ರಸಾದ್ ನಾಯ್ಕ್

ಕ್ವೀನ್ ಆಫ್ ಕಟ್ವೆ ಕೊಂಪೆಯಲ್ಲರಳಿದ ಕಮಲ

ಮೇ ೨೦೧೮

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

ಮೇ ೨೦೧೮

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

ಎಪ್ರಿಲ್ ೨೦೧೮

ಉಮಾ ಎಚ್. ಎಂ.

ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’

ಎಪ್ರಿಲ್ ೨೦೧೮

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

ಎಪ್ರಿಲ್ ೨೦೧೮

ವೈಲೆಟ್ ಪಿಂಟೊ

ಸ್ವಗತ (ಕವಿತೆ)

ಎಪ್ರಿಲ್ ೨೦೧೮

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

ಎಪ್ರಿಲ್ ೨೦೧೮

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

ಮಾರ್ಚ್ ೨೦೧೮

ನನ್ನ ಕ್ಲಿಕ್

ಮಾರ್ಚ್ ೨೦೧೮

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

ಮಾರ್ಚ್ ೨೦೧೮

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

ಮಾರ್ಚ್ ೨೦೧೮

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

ಮಾರ್ಚ್ ೨೦೧೮

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

ಮಾರ್ಚ್ ೨೦೧೮

ಸಾಬೂನು ಚಾಲಿತ ಬೋಟ್

ಮಾರ್ಚ್ ೨೦೧೮

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

ಫೆಬ್ರವರಿ ೨೦೧೮

ನನ್ನ ಕ್ಲಿಕ್

ಫೆಬ್ರವರಿ ೨೦೧೮

ಕಟ್ಟ ಕಡೆಯ ಗೆರೆಯ ಮೇಲೆ

ಫೆಬ್ರವರಿ ೨೦೧೮

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

ಫೆಬ್ರವರಿ ೨೦೧೮

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

ಫೆಬ್ರವರಿ ೨೦೧೮

ಬಣ್ಣ ಬದಲಿಸುವ ಹೂವು

ಫೆಬ್ರವರಿ ೨೦೧೮