2nd ಜೂನ್ ೨೦೧೮

ಉನ್ನತ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಮೂರು ಬಿಕ್ಕಟ್ಟುಗಳು

ಈ ಸಂಚಿಕೆ ಹೊರಬರುವಷ್ಟರಲ್ಲಿ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಹೊಸ ಸಚಿವರು ಬಂದಿರುತ್ತಾರೆ. ಕರ್ನಾಟಕದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಎದುರಿಸುತ್ತಿರುವ ಸವಾಲುಗಳನ್ನು ಅವರು ಗಂಭೀರವಾಗಿ ಪರಿಗಣಿಸುವುದಾದರೆ, ಅವರು ಯಾವ ಸಮಸ್ಯೆಗಳನ್ನು ಗಮನಿಸಬೇಕು? ನನ್ನ ದೃಷ್ಟಿಯಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳು ಮೂರು ಮುಖ್ಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟುಗಳು ಭಾರತದೆಲ್ಲೆಡೆ ಕಾಣುತ್ತವೆ ಎಂದರೂ ತಪ್ಪಾಗದು.

ನಾವು ಗುರುತಿಸಬೇಕಾಗಿರುವ ಮೊದಲನೆಯ ಬಿಕ್ಕಟ್ಟು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದು ಕಾಣುವ ನೈತಿಕ ಅಧಃಪತನ. ಪತ್ರಿಕೆಗಳ ಮುಖಪುಟಗಳಲ್ಲಿ ಸುದ್ದಿಯಾಗುವ ಭ್ರಷ್ಟಾಚಾರ ಮತ್ತು ನಿಯಮಗಳ ಉಲ್ಲಂಘನೆ ಈ ನೈತಿಕ ಅಧಃಪತನದ ಒಂದು ಸಣ್ಣಭಾಗ ಮಾತ್ರ. ನಮ್ಮ ವಿಶ್ವವಿದ್ಯಾನಿಲಯಗಳು ಪ್ರಜಾಸತ್ತಾತ್ಮಕ ನಡವಳಿಕೆಗಳಿಲ್ಲದ, ಶ್ರೇಣೀಕೃತ ಸಂಸ್ಥೆಗಳಾಗಿವೆ. ಸಮಾನತೆ, ಸ್ವಾಯತ್ತತೆ, ಪಾರದರ್ಶಕತೆ ಮತ್ತು ಸಾಮಾಜಿಕ ಬದ್ದತೆಗಳು ಇಂದು ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕಣ್ಮರೆಯಾಗಿರುವ ಮೌಲ್ಯಗಳು. ಜಾತಿ, ಸ್ವಜನಪಕ್ಷಪಾತಗಳು ವಿಶ್ವವಿದ್ಯಾನಿಲಯಗಳೊಳಗಿನ ಸಾಮಾಜಿಕ ಸಂಬಂಧಗಳನ್ನು ನಿರ್ಧರಿಸುತ್ತವೆ. ಸೈದ್ಧಾಂತಿಕ ನೆಲೆಗಟ್ಟಿನ ಚಿಂತನೆ, ಬೋಧನೆ, ಸಾಮಾಜೀಕರಣಗಳಿಗಿಂತ ಜಾತಿ ಆಧಾರಿತ ಚಟುವಟಿಕೆಗಳು ಹೆಚ್ಚಿವೆ. ವಿದ್ಯಾರ್ಥಿಗಳನ್ನು ಬೆಳೆಸುವುದು, ಸಂಶೋಧನಾ ಯೋಜನಾ ತಂಡಗಳನ್ನು ಕಟ್ಟುವುದು, ಸಂಸ್ಥೆಯೊಳಗಣ ಸ್ನೇಹ ಸಂಬಂಧಗಳು ಎಲ್ಲವೂ ಜಾತಿಯ ಆಧಾರದ ಮೇಲೆಯೇ ನಡೆಯುತ್ತವೆ. ಇದನ್ನು ಮೀರಲು ದೃಢ ನೈತಿಕತೆ ಮತ್ತು ವೃತ್ತಿಪರತೆಗಳನ್ನು ಆಧರಿಸಿದ ಹೊಸ ನಾಗರಿಕ ಸಂಸ್ಕೃತಿಯ ಅಗತ್ಯವಿದೆ.

ಸಚಿವರು ಗಮನಿಸಬೇಕಿರುವ ಎರಡನೆಯ ಬಿಕ್ಕಟ್ಟು ಶೈಕ್ಷಣಿಕವಾದುದು. ಕಳೆದ ಆರು ವರ್ಷಗಳ ನನ್ನ ಅನುಭವದಲ್ಲಿ ವಿಶ್ವವಿದ್ಯಾನಿಲಯಗಳು ನಡೆಸುವ ಯಾವ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಶೈಕ್ಷಣಿಕ ಗುರಿಗಳೇನು ಎನ್ನುವುದರ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಪಾಲುದಾರರಾಗಿರುವ ಯಾರಿಗೂ ಸ್ಪಷ್ಟತೆಯಿಲ್ಲ. ಇಂದು ಬಿ.ಎ. ಅಥವಾ ಎಂ.ಎ. ಪದವಿ ಕಾರ್ಯಕ್ರಮಗಳು ಅನುಪಯುಕ್ತವಾಗುತ್ತಿದ್ದರೆ, ಅದಕ್ಕೆ ಶೈಕ್ಷಣಿಕ ಗುರಿಗಳ ಅಸ್ಪಷ್ಟತೆಯೇ ಕಾರಣ. ಈ ಶೈಕ್ಷಣಿಕ ಬಿಕ್ಕಟ್ಟು ನಮಗೆ ಇನ್ನೊಂದು ರೀತಿಯಲ್ಲಿಯೂ ಕಾಣಸಿಗುತ್ತದೆ. ಸಮಾಜವಿಜ್ಞಾನಗಳು ಮತ್ತು ಮಾನವಿಕ ವಿಜ್ಞಾನಗಳ ಸಂದರ್ಭದಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಕಲಿಸುವ ಜ್ಞಾನಶಿಸ್ತುಗಳಿಗೂ ಪ್ರಪಂಚದ ಬೇರೆ ಭಾಗಗಳಲ್ಲಿ ಅದೇ ಹೆಸರಿನಲ್ಲಿ ಕಲಿಸುವ ವಿಷಯಗಳಿಗೂ ಅಪಾರವಾದ ಅಂತರವಿದೆ. ನನ್ನ ಅನುಭವದಲ್ಲಿ ನಾವು ಕಲಿಸುವ ಇತಿಹಾಸವನ್ನು ಇತಿಹಾಸವೆಂದು ಬೇರೆ ಯಾರೂ ಕರೆಯುವುದಿಲ್ಲ.

ಹೀಗಾಗಿ ಕರ್ನಾಟಕದ ವಿದ್ಯಾರ್ಥಿಯೊಬ್ಬ, ಎಷ್ಟೆ ಪ್ರತಿಭಾವಂತನಾದರೂ ಸಹ, ತನ್ನ ವಿಷಯದ ಪ್ರಾಥಮಿಕ ವಿಷಯಗಳನ್ನು ಕಲಿತಿರುವುದಿಲ್ಲ. ಆ ವಿಷಯಗಳ ಬಗ್ಗೆ ಬಂದಿರುವ ಸಂಶೋಧನಾ ಕೃತಿಗಳನ್ನು ಓದುವ, ವಿಮರ್ಶಿಸುವ ಸಾಮಥ್ರ್ಯವನ್ನು ಪಡೆದಿರುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನಗಳ ವಿಷಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮಕ್ಕೂ ಜಾಗತಿಕ ಪಠ್ಯಕ್ರಮಕ್ಕೂ ಅಂತರ ಕಡಿಮೆಯಿದೆ ಎನ್ನುವುದು ನಿಜ. ಆದರೆ ಈ ವಿಷಯಗಳಲ್ಲಿಯೂ ಹೊಸಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣ ನೀಡುವ ಶಕ್ತಿಯನ್ನು ನಾವು ಪಡೆದಿಲ್ಲ.

ಮೂರನೆಯ ಬಿಕ್ಕಟ್ಟು ಸಂಶೋಧನೆ ಮತ್ತು ಹೊಸ ಜ್ಞಾನಸೃಷ್ಟಿಗೆ ಸಂಬಂಧಿಸಿದುದು. ನಮ್ಮ ವಿಶ್ವವಿದ್ಯಾನಿಲಯಗಳು ಎಂದಿಗೂ ಮಹತ್ವದ ಜ್ಞಾನಸೃಷ್ಟಿಯ ಕೇಂದ್ರಗಳಾಗಿರಲಿಲ್ಲ. ಆದರೆ ನಮಗೆ ಸ್ವಲ್ಪವಾದರೂ ಸಂಶೋಧನಾ ಸಾಮಥ್ರ್ಯವಿತ್ತು.

1980ರ ದಶಕದಿಂದಲಿಂತೂ ಆ ಬಗ್ಗೆ ಯಾವುದೆ ವಿಶ್ವಾಸದಿಂದ ಮಾತನಾಡುವಂತಿಲ್ಲ. ನೂರಾರು ಸಂಶೋಧನಾ ಪ್ರಬಂಧಗಳು, ಸಾವಿರಾರು ಪುಸ್ತಕಗಳು ಪ್ರತಿವರ್ಷ ಪ್ರಕಟವಾದರೂ ಅವುಗಳು ಕನಿಷ್ಠ ಸಾಧಾರಣ ಗುಣಮಟ್ಟದವು ಸಹ ಅಲ್ಲ. ಇವುಗಳಿಂದ ಸಾಮಾಜಿಕವಾಗಿ ಉಪಯುಕ್ತ ಜ್ಞಾನ ಮತ್ತು ತಂತ್ರಜ್ಞಾನಗಳು ಹೊರಬರುತ್ತಿಲ್ಲ. ನಮ್ಮ ಈ ಬಿಕ್ಕಟ್ಟು ಕೇವಲ ಹೊಸಜ್ಞಾನ ಸೃಷ್ಟಿಗೆ ಸಂಬಂಧಿಸಿದುದು ಮಾತ್ರವಾಗಿ ಉಳಿದಿಲ್ಲ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನು ಅರಿಯುವ, ಅವುಗಳಿಗೆ ಸ್ಪಂದಿಸುವ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ.

ಈ ಬಿಕ್ಕಟ್ಟುಗಳಿಗೆ ಸುಲಭ ಪರಿಹಾರಗಳಿಲ್ಲ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಅಧ್ಯಯನ ಮತ್ತು ಕೆಲಸ ಮಾಡಿ ಅನುಭವವಿರುವ ವಿಷಯಜ್ಞಾನ ಮತ್ತು ವೃತ್ತಿಪರತೆಗಳೆರಡನ್ನೂ ಬಲ್ಲ ಹೊಸಬರನ್ನು ನಮ್ಮ ವಿಶ್ವವಿದ್ಯಾನಿಲಯಗಳ ಒಳಗೆ ತರಬೇಕು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮