2nd ಮೇ ೨೦೧೮

ದೇಸಿ ಕನ್ನಡ ಪರಂಪರೆ

ಪ್ರೊ.ಶಿವರಾಮಯ್ಯ

ದೇಸಿ ಪರಂಪರೆಯು ಕನ್ನಡದಲ್ಲಿ ಹುಟ್ಟಿ ಬೆಳೆದು ವಿಕಾಸಗೊಂಡ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ಒಪ್ಪವಾಗಿ ಕಟ್ಟಿಕೊಟ್ಟಿದ್ದಾರೆ.

ಸಾ ಹಿತ್ಯ ಸಂಗೀತ ನೃತ್ಯ ಶಿಲ್ಪಾದಿ ಕಲೆಗಳು ದೇಸಿಯಲ್ಲಿ ಪೊಕ್ಕು ಮಾರ್ಗದಲ್ಲಿ ಪೊರಮಡದಿದ್ದರೆ ಅವುಗಳಿಗೆ ತನಿ ಬನಿ ತ್ರಾಣ ಪ್ರಾಣ ಇರಲಾರದು, ಬರಲಾರದು. ದೇಸಿ ಎಂಬುದು ಕರೆಂಟ್ ಇದ್ದ ಹಾಗೆ; ಅದು ಮಾರ್ಗವೆಂಬ ತಂತಿಯಲ್ಲಿ ಪ್ರವಹಿಸದಿದ್ದರೆ ಆ ತಂತಿ ಕೇವಲ ಲೋಹದ ತುಂಡು ಅಷ್ಟೇ. ಇದನ್ನರಿತ ಪಂಪನಂತಹ ಸೃಜನಶೀಲ ಕವಿಗಳು `ದೇಸಿಯೊಳ್ ಪುಗುವ ಪೊಕ್ಕ ಮಾರ್ಗದೊಳೆ ತಳ್ವ’ ಕಲೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆದ್ದರಿಂದಲೇ ಇವರ ಕೃತಿಗಳು ಕಾಲದೇಶವನ್ನು ದಾಟಿ ಉಳಿದುಬಂದಿವೆ. ಇದನ್ನೇ ಕನ್ನಡದ ಕಟ್ಟಾಳು ಬಿ.ಎಂ.ಶ್ರೀ.ಯವರು ಜನವಾಣಿ ಬೇರು ಕವಿವಾಣಿ ಹೂವು ಎಂದು ಕರೆದದ್ದು.

ಆದರೆ ಕೆಲವು ವಿದ್ವತ್ ಕವಿಗಳು ದೇಸಿಯನ್ನು ನಿರ್ಲಕ್ಷಿಸಿ ಕೇವಲ ಮಾರ್ಗಕ್ಕೆ ಮಣೆ ಹಾಕಿದರು. ಕಾವ್ಯಕೃತಿ ಎಂದರೆ ಪಂಡಿತರು ವಿವಿಧ ಕಳಾ ಪಂಡಿತರು ಕೇಳತಕ್ಕಂತಿರಬೇಕು; ಅದಿಲ್ಲವಾಗಿ ಕ್ಷಿತಿಯಲ್ಲಿ ಕಂಡಕಂಡವರೆಲ್ಲ ಕಾವ್ಯ ಹೇಳುವುದಾದರೆ ಅದೇನು ಗೊರವರ `ಡುಂಡುಂಚಿ’(ಸೋರೆ ಬುರುಡೆ ವಾದ್ಯ)ಯೇ? ಬೀದಿವರಿಯೆ ಬೀರನ ಕತೆಯೇ? ಎಂದು ತಾತ್ಸಾರದಿಂದ ತೆಗಳಿ, ಜನಪದ ಕವಿಗಳು ಕುರಿತೋದದೆಯೂ ಕಾವ್ಯ ಪ್ರಯೋಗ ಪರಿಣತಮತಿಗಳಾಗಿದ್ದರು ಎಂಬುದನ್ನು ಅಲ್ಲಗಳೆದಿದ್ದಾರೆ. ಹಿ.ಚಿ.ಬೋರಲಿಂಗಯ್ಯನವರು ತಮ್ಮ ‘ದೇಸಿ ಕನ್ನಡ ಪರಂಪರೆ’ ಎಂಬ ಈ ಪುಸ್ತಕದಲ್ಲಿ `ನಮ್ಮ ಪಂಡಿತ ಕವಿಗಳು ಮತ್ತು ಲಾಕ್ಷಣಿಕರ ದೃಷ್ಟಿಯಲ್ಲಿ ಜನಪದ ಕಾವ್ಯ ಮತ್ತು ಹಾಡುಗಾರರು ಲೆಕ್ಕಕ್ಕೆ ಇಲ್ಲದವರಾಗಿದ್ದರು. ಬಹುಶಃ ಸಾಮಾನ್ಯ ಜನತೆಯ ಪ್ರತಿನಿಧಿಗಳಂತಿದ್ದ ಈ ಬೀದಿಯ ಕಲಾವಿದರು ಅಸ್ಪೃಶ್ಯರು ಮತ್ತು ಶೂದ್ರ ವರ್ಗದವರಾಗಿದ್ದು ಮುಟ್ಟಬಾರದವರು ಮತ್ತು ನೋಡಬಾರದವರು ಆಗಿದ್ದುದೇ ಈ ರೀತಿಯ ಅನಾದರಕ್ಕೆ ಕಾರಣವೂ ಇರಬಹುದು. ಭಾರತದಲ್ಲಿದ್ದ ಜಾತಿ ವ್ಯವಸ್ಥೆಯ ಈ ಕ್ರೂರ ಸ್ವರೂಪ ನಮ್ಮ ಸಾಂಸ್ಕೃತಿಕ ಚರಿತ್ರೆಯಲ್ಲಿ ಯಾವ ರೀತಿಯ ತಾರತಮ್ಯ ತೋರಿದೆ ಎಂಬುದಕ್ಕೆ ಇದೊಂದು ಉದಾಹರಣೆ’ ಎನ್ನುತ್ತಾರೆ [ದೇಸಿ ಕನ್ನಡ ಪರಂಪರೆ. ಪುಟ.6].

ಆದರೆ ಹೀಗೆ ಗರ್ವಿಸಿ ಬರೆದ ಪಂಡಿತ ಕವಿಗಳ ಕೃತಿಗಳು ಬಹಳ ಕಾಲ ಬಾಳದೆ ಅಲ್ಪಾಯುವಾದವು ಎಂಬುದು ತಿಳಿದ ವಿಚಾರ. ಅಂಗಡಿಯೊಳಗೆ ಝಣಣ, ಗುಡಿಯೊಳಗೆ ಢಣಣ, ಮಹಡಿಯೊಳಗೆ ತನನ ಎಂದು ಕಾಂಚನವೆಂಬ ಮಯಾಮೃಗದ ಬೆನ್ನು ಹತ್ತಿದ ಮಾರ್ಗ ಕಲೆಗಳು ದೇಸಿ ಕಲೆಗಳಂತೆ ಬಹುಕಾಲ ಬಾಳಿ ಬದುಕಲಾರವು. ಆದರೆ ನಮ್ಮ ಜನಪದರು ಮಾತ್ರ `ಅಳಿದೊಡಂ ಉಳಿದೊಡಂ ಬಟ್ಟೆದೋರಿಪ ಕತೆಯಾದೊಡೈಸೆ’ ಎಂದು ಆಡಿ ಪಾಡಿ ಮಾತಾಡಿ ನೋಡಿ ದಣಿಯರು. `ಆದಾವು ನಮ್ಮ ಜೋಳ ಉಳಿದಾವು ನಮ್ಮ ಹಾಡ’ ಎಂದು ಹಾಡುತ್ತಾ ಬಾಳರಾಗಿ ಬೀಸಿಕೊಂಡರು. ಜಾಗತಿಕವಾಗಿ ಎಲ್ಲ ದೇಶ ಎಲ್ಲ ಭಾಷೆಗಳಿಗೂ ಈ ಮಾತು ಸಲ್ಲುತ್ತದೆ.

ಪ್ರಸ್ತುತ ಹಿ.ಚಿ.ಬೋರಲಿಂಗಯ್ಯನವರು ಈ ದೇಸಿ ಪರಂಪರೆಯು ಕನ್ನಡದಲ್ಲಿ ಹುಟ್ಟಿ ಬೆಳೆದು ವಿಕಾಸಗೊಂಡ ಬಗೆಯನ್ನು ತಮ್ಮ `ದೇಸಿ ಕನ್ನಡ ಪರಂಪರೆ’ ಪುಸ್ತಕದಲ್ಲಿ ಒಪ್ಪವಾಗಿ ಕಟ್ಟಿ ಕೊಡುತ್ತಾರೆ. ಇವರ ಓದಿನ ಅರಿವು ಆಳವೂ ವಿಸ್ತಾರವೂ ಆಗಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಹಾಗೂ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಕಳೆದ ಮೂವತ್ತು ವರ್ಷಗಳಿಂದ ದುಡಿದ ಈ ಲೇಖಕರು ಗ್ರಾಮ ದೇವತೆ ಉಜ್ಜನಿ ಚೌಡಮ್ಮನನ್ನು ಕುರಿತು ಸಂಪ್ರಬಂಧ ಮಂಡಿಸಿದವರು. ಗಿರಿಜನ ನಾಡಿಗೆ ಪಯಣ, ಕಾಡು ಕಾಂಕ್ರೀಟ್ ಮತ್ತು ಜಾನಪದ, ವಿಸ್ಮೃತಿ ಮತ್ತು ಸಂಸ್ಕೃತಿ ಮುಂತಾದ ಪುಸ್ತಕಗಳನ್ನಲ್ಲದೆ `ಕರ್ನಾಟಕ ಜಾನಪದ ಕಲೆಗಳ ಕೋಶ’ಕ್ಕೆ ಸಂಪಾದಕರಾಗಿದ್ದವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಉಪ ಕುಲಪತಿಗಳಾಗಿ ಅನುಭವವುಳ್ಳವರು.

ಪ್ರಸ್ತುತ `ದೇಸಿ ಕನ್ನಡ ಪರಂಪರೆ’ ಕೃತಿಯಲ್ಲಿ ಕನ್ನಡದೊಳ್ ಭಾವಿಸಿದ ಜನಪದ ಕನ್ನಡದ ಆದಿ ಪ್ರಜ್ಞೆಯ ರೂಪಕಗಳು; ದೇಸಿ ಕಥನ ಪರಂಪರೆ ಮತ್ತು ಕನ್ನಡ ಮನಸ್ಸು; ಕನ್ನಡದ ಅಪೂರ್ವ ಶಕ್ತಿ; ಜನಪದ ಮಹಾ ಕಾವ್ಯ; ಕಾವ್ಯೇಷು ನಾಟಕಂ ರಮ್ಯಂ ಮುಂತಾಗಿ ಆರು ಅಧ್ಯಾಯಗಳಿವೆ. ಇವುಗಳಲ್ಲಿ ನಾಲ್ಕಾರು ಉಪವಿಭಾಗಗಳಿವೆ. ತಮಿಳಿನ ಸಂಗಂ ಸಾಹಿತ್ಯದ ಜನಪದೀಯತೆ ಮೊದಲುಗೊಂಡು ನಮ್ಮಲ್ಲಿನ ತಾಳಮದ್ದಲೆ ಬಯಲಾಟಗಳವೆರೆಗಿನ ಜಾನಪದ ಕಥೆ. ಕಾವ್ಯ, ಮಹಾಕಾವ್ಯ, ನಾಟಕಗಳನ್ನು ಕುರಿತು ಪ್ರೀತ್ಯಾದರಗಳಿಂದ ಮನಂಬುಗುವಂತೆ ಇಲ್ಲಿ ವ್ಯಾಖ್ಯಾನಿಸುತ್ತಾರೆ. ಇಂದಿಗೂ ಭೂಮಿ ಮತ್ತು ವಸತಿಗೂ ದಿಕ್ಕು ಕಾಣದೆ, ಭೂಮಿತಾಯಿ ಹಾಸಿಗೆ ಆಕಾಶವೆ ಮೇಲೆ ಹೊದಿಕೆ ಎಂಬ ಜಗದಗಲ ಮುಗಿಲಗಲ ಮನದಿಂದ ಹಾಡು ಕಟ್ಟಿ ಹಾಡುವ, ಕುಣಿಯುವ, ಚಂಪೂ ರೂಪದಲ್ಲಿ ಕಥನ ಮಾಡುವ ಎಷ್ಟೇಷ್ಟೋ ಅಲೆಮಾರಿ ಜಾತಿ ಜನಾಂಗಗಳ ಜೀವನಗಾಥೆಯನ್ನಿಲ್ಲಿ ಪರಿಚಯಿಸುತ್ತಾರೆ. ಶಿಷ್ಟರು ಹೇಳುವ ಬ್ರಹ್ಮಸೃಷ್ಟಿಗೆ ಪರ್ಯಾಯವಾಗಿ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಹೇಳುವ ವಿಭೂತಿ ಗಟ್ಟಿ ಒಡೆದು ಸೃಷ್ಟಿ ಆರಂಭಗೊಂಡಿತು ಎಂಬ ಕತೆಯನ್ನು ಪರಿಚಯಿಸುತ್ತಾರೆ. ಶಿಷ್ಟರ ಬ್ರಹ್ಮಸೃಷ್ಟಿಯ ಪುರಾಣ ಕಲ್ಪನೆ ಎಂತೋ ಅಂತೆಯೇ ಲೋಗರ ಸೃಷ್ಟಿ ಪುರಾಣಗಳೂ ಘನ ಗಂಭೀರವಾದುವು ಎಂಬುದನ್ನು ಡಾ.ಹಿ.ಚಿ.ಬೋರಲಿಂಗಯ್ಯನವರು ವಿದ್ವತ್ ಜನರ ತಿಳಿವಿಗೆ ತರುತ್ತಾರೆ. ಈ ಬಗೆಯ ಶಿಸ್ತುಬದ್ಧ ಸಂಶೋಧನೆ ಕೈಗೊಂಡ ಲೇಖಕರು ಅಭಿನಂದನಾರ್ಹರು.

(ಪುಸ್ತಕ ವಿವರ: ದೇಸಿ ಕನ್ನಡ ಪರಂಪರೆ, ಹಿ.ಚಿ.ಬೋರಲಿಂಗಯ್ಯ, ಪ್ರಸಾರಾಂಗ, ಕನ್ನಡ ವಿ.ವಿ., ಹಂಪಿ, ಪುಟ: 342, ಬೆಲೆ: ರೂ.260, ಮುದ್ರಣ: 2016)

ಪ್ರೊ.ಶಿವರಾಮಯ್ಯ

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮