2nd ಮೇ ೨೦೧೮

ಫೇಸ್‍ಬುಕ್‍ನ ಫೇಸ್‍ಲೆಸ್ ಚಟುವಟಿಕೆಗಳು

ಗೂಗಲ್, ಫೇಸ್‍ಬುಕ್, ಟ್ವಿಟ್ಟರ್‍ನಂತಹ ಸಂಸ್ಥೆಗಳು ಬಳಕೆದಾರರಿಗೆ ಉಚಿತ ಸೇವೆ ನೀಡುತ್ತಿವೆಯೆಂದು ನಾವು ಭಾವಿಸುತ್ತೇವೆ. ಆದರೆ ಈ ಉಚಿತ ಸೇವೆಗಳು ತಮ್ಮ ಬಳಕೆದಾರರನ್ನೇ ಮಾರಾಟದ ವಸ್ತುವನ್ನಾಗಿ ಮಾಡಿವೆ!

ಫೇಸ್‍ಬುಕ್‍ನಲ್ಲಿಯ ಮಾಹಿತಿ ಸೋರಿಕೆ ಹಾಗೂ `ಕೇಂಬ್ರಿಡ್ಜ್ ಅನಲಿಟಿಕ’ದಂತಹ ಸಂಸ್ಥೆಗಳು ಫೇಸ್‍ಬುಕ್ ದತ್ತಾಂಶಗಳನ್ನು ಉಪಯೋಗಿಸಿಕೊಂಡು ಮತದಾರರ ರಾಜಕೀಯ ಆಯ್ಕೆಗಳ ಮೇಲೆ ಪರಿಣಾಮ ಬೀರುವ ಹಾಗೂ ಪ್ರಜಾಪ್ರಭುತ್ವದ ದಿಕ್ಕುದೆಸೆಗಳನ್ನು ನಿರ್ಧರಿಸುವ ಘಟನೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಫೇಸ್‍ಬುಕ್‍ನ ಸ್ಥಾಪಕ ಮಾರ್ಕ್ ಝಕರ್‍ಬರ್ಗ್‍ರವರನ್ನು ಅಮೆರಿಕೆಯ ಸೆನೆಟ್ ಸಮಿತಿ ವಿಚಾರಣೆಗೆ ಕೂಡ ಒಳಪಡಿಸಿದೆ. ಈ ದತ್ತಾಂಶ ಸೋರಿಕೆ ಹಾಗೂ ಮಾಹಿತಿ ಕಳ್ಳತನದ ಬಗ್ಗೆ ತಮ್ಮ ನಾಗರಿಕರನ್ನು ರಕ್ಷಿಸಲು ಕಾನೂನು ಮಾಡುವ ಬಗ್ಗೆಯೂ ಪಾಶ್ಚಿಮಾತ್ಯ ಸಂಸತ್ತುಗಳು ತಲೆ ಕೆಡಿಸಿಕೊಂಡಿವೆ.

ಆದರೆ ಭಾರತದಲ್ಲಿ ಈ ಚರ್ಚೆಯು ಕೇವಲ ರಾಜಕೀಯ ಸ್ವರೂಪ ಪಡೆದುಕೊಂಡು, ಕೇಂಬ್ರಿಡ್ಜ್ ಅನಲಿಟಿಕದ ಸೇವೆಯನ್ನು ಯಾವ ಯಾವ ರಾಜಕೀಯ ಪಕ್ಷಗಳು ಪಡೆದುಕೊಂಡವು ಎಂಬ ವಿವಾದ ಮಾತ್ರ ಚರ್ಚೆಯಲ್ಲಿದೆ. ಮಾಹಿತಿ ಕಳ್ಳತನ ಅಥವಾ ಖಾಸಗಿತನದ ಹಕ್ಕಿನ ಉಲ್ಲಂಘನೆ ಭಾರತದಲ್ಲಿ ಗಂಭೀರವಾಗಿ ಚರ್ಚೆಗೆ ಒಳಪಟ್ಟಿಲ್ಲ. ಇದಕ್ಕೆ ಮಾಹಿತಿ ಸೋರಿಕೆಯಂತಹ ಘಟನೆಯನ್ನು ಗಂಭೀರ ಅಪರಾಧವೆಂದು ನಾವು ಪರಿಗಣಿಸದೇ ಇರುವುದೂ ಹಾಗೂ ನಮ್ಮ ರಾಜಕೀಯ ನಿರ್ಣಯಗಳನ್ನು ಈ ತೆರನಾದ ಪ್ರಚಾರಗಳು ನಿರ್ಧರಿಸಲಾರವು ಎಂಬ ನಮ್ಮ ನಂಬಿಕೆಗಳೇ ಕಾರಣವಾಗಿರಬಹುದು.

ಲಂಡನ್ ಮೂಲದ `ಕೇಂಬ್ರಿಡ್ಜ್ ಅನಲಿಟಿಕ’ ಫೇಸ್‍ಬುಕ್‍ನಲ್ಲಿ ನಾವು ಹಾಕಿರುವ ಪ್ರೊಫೈಲ್ (ವ್ಯಕ್ತಿಚಿತ್ರಣ), ಅಪ್‍ಲೋಡ್‍ಗಳು (ಮಾಹಿತಿ— ಚಿತ್ರ ಬಿಡುಗಡೆ), ಶೇರ್ (ಹಂಚಿಕೆ) ಹಾಗೂ ಲೈಕ್—ಕಾಮೆಂಟ್‍ಗಳ ಮಾಹಿತಿಗಳನ್ನು ವಿಶ್ಲೇಷಣೆ ಮಾಡಿ ನಮ್ಮ ರಾಜಕೀಯ ಒಲವುಗಳನ್ನು ಪಟ್ಟಿಮಾಡುತ್ತವೆ. ಈ ವಿಶ್ಲೇಷಣೆಯ ಆಧಾರದ ಮೇಲೆ ಸೀಮಿತ ಬಳಕೆದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಜಾಹೀರಾತು ಹಾಗೂ ಸುಪ್ತ—ಮನವೊಲಿಕೆಯ ಮಾಹಿತಿಗಳನ್ನು ನೀಡುತ್ತವೆ. ಈ ಮೂಲಕ ನಮ್ಮ ರಾಜಕೀಯ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಪಾತ್ರ ವಹಿಸಲು ಪಕ್ಷಗಳ ಪರವಾಗಿ ಕೆಲಸ ಮಾಡುತ್ತವೆ. ಈಗಾಗಲೇ 5 ಕೋಟಿ ಬಳಕೆದಾರರ ವ್ಯಕ್ತಿಚಿತ್ರಣಗಳನ್ನು ಫೇಸ್‍ಬುಕ್ ಮೂಲದಿಂದ ಪಡೆದಿರುವ ಕೇಂಬ್ರಿಡ್ಜ್ ಅನಲಿಟಿಕ ಕಾಂಗ್ರೆಸ್ ಮತ್ತು ಸಂಯುಕ್ತ ಜನತಾದಳ ಪಕ್ಷಗಳಿಗೆ ತನ್ನ ಸೇವೆಗಳನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದೆ.

ಫೇಸ್‍ಬುಕ್‍ನ ಒಟ್ಟು ಬಳಕೆದಾರರಲ್ಲಿ ಶೇಕಡಾ 11ರಷ್ಟು ಭಾರತೀಯರಿದ್ದಾರೆ. ಈ ಸಂಖ್ಯೆ ದಿನೇದಿನೇ ಬೆಳೆಯುತ್ತಿದ್ದು, ಫೇಸ್‍ಬುಕ್ ಭಾರತೀಯರನ್ನು ತನ್ನ ಅತಿಮುಖ್ಯ ಮಾರುಕಟ್ಟೆಯಾಗಿಯೂ ಪರಿಗಣಿಸಿದೆ. ಭಾರತದಲ್ಲಿ ಕಛೇರಿ ಹಾಗೂ ಸಿಬ್ಬಂದಿ ಹೊಂದಿರುವ ಫೇಸ್‍ಬುಕ್ ತನ್ನ ಜಾಹೀರಾತುಗಳ ಮುಖಾಂತರ ಕೋಟ್ಯಾಂತರ ಹಣಸಂಪಾದನೆಯನ್ನೂ ಮಾಡಿದೆ. ಈ ಕೇಂಬ್ರಿಡ್ಜ್ ಅನಲಿಟಿಕ ತೆರನಾದ ಸಂಸ್ಥೆಗಳಿಗೆ ಫೇಸ್‍ಬುಕ್ ಸಂಸ್ಥೆ ಮಾಹಿತಿ ಮಾರಿದೆಯೇ ಎಂಬುದು ಇನ್ನೂ ತನಿಖೆಯಿಂದ ಹೊರಬರಬೇಕಾಗಿದೆ.

ಗೂಗಲ್, ಫೇಸ್‍ಬುಕ್, ಟ್ವಿಟ್ಟರ್‍ನಂತಹ ಸೇವೆಗಳು ಬಳಕೆದಾರರಿಗೆ ಉಚಿತ ಸೇವೆಗಳನ್ನು ನೀಡುತ್ತಿವೆಯೆಂದು ನಾವು ಭಾವಿಸುತ್ತೇವೆ. ಆದರೆ ಈ ಉಚಿತ ಸೇವೆಗಳು ತಮ್ಮ ಬಳಕೆದಾರರನ್ನೇ ಮಾರಾಟದ ವಸ್ತುವನ್ನಾಗಿ ಮಾಡಿವೆ. ಜಾಹೀರಾತುದಾರರಿಗೆ ಹಾಗೂ ನಿರ್ದಿಷ್ಟ ಬಳಕೆದಾರರನ್ನು ತಲುಪಬಯಸುವ ಹಿತಾಸಕ್ತಿಗಳಿಗೆ ಈ ಜಾಲತಾಣಗಳು ತಮ್ಮ ಬಳಕೆದಾರರ ಮಾಹಿತಿಗಳನ್ನು ಮಾರುತ್ತವೆ. ಆ ಮೂಲಕ ಜಾಹೀರಾತು ಆದಾಯದ ಮೇಲೆ ತಮ್ಮ ವಾಣಿಜ್ಯ ವ್ಯವಸ್ಥೆಯನ್ನು ಕಟ್ಟಿಕೊಂಡಿರುತ್ತವೆ. ಖಾಸಗಿ ಮಾಹಿತಿ ಸೋರಿಕೆ ಆಧಾರದ ಮೇಲೆಯೇ ನಿಂತಿರುವ ಈ ಉದ್ದಿಮೆ ಮಾದರಿಯು ಕಾನೂನು ಪರಿಧಿಯೊಳಗೆ ಇದೆಯೇ ಎಂಬುದನ್ನು ನಾವು ಪರೀಕ್ಷಿಸಬೇಕಿದೆ. ಇದೆಯೆಂದಾದಲ್ಲಿ ಸೂಕ್ತ ಕಾನೂನು ರಚನೆ ಮಾಡಿ ನಮ್ಮ ಖಾಸಗಿತನದ ಹಕ್ಕನ್ನು ರಕ್ಷಿಸಿಕೊಳ್ಳಬೇಕಿದೆ. ಪ್ರಪಂಚದಲ್ಲಿ ಯಾವುದೇ ವಸ್ತು/ಸೇವೆ ಪುಕ್ಕಟೆಯಾಗಿ ದೊರೆಯಲಾರವು ಎಂಬ ಜಾಣನುಡಿಯನ್ನು ಕೂಡಾ ಈ ಘಟನೆಗಳು ಪುಷ್ಟೀಕರಿಸುತ್ತವೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮