2nd ಎಪ್ರಿಲ್ ೨೦೧೮

ಆಂಧ್ರಪ್ರದೇಶ ಬೇಡುತ್ತಿರುವ ಸ್ಪೆಶಲ್ ಸ್ಟೇಟಸ್’

ಆದಾಯ ತೆರಿಗೆ ಕಾನೂನಿನಲ್ಲಿಯ ಸೆಕ್ಷನ್ 80ಐಸಿ ಪ್ರಾವಿಧಾನವೇ ಈ ಸ್ಪೆಶಲ್ ಸ್ಟೇಟಸ್. ಈ ಕಾನೂನಿನಂತೆ ಹತ್ತು ವರ್ಷಗಳ ಕಾಲ ಈ ಸೆಕ್ಷನ್ ಅಡಿ ಗುರುತಿಸಲ್ಪಟ್ಟ ರಾಜ್ಯಗಳಲ್ಲಿ ಸ್ಥಾಪಿತವಾದ ಯಾವುದೇ ಉದ್ದಿಮೆಯ ಲಾಭದ ಮೇಲೆ ಯಾವುದೇ ಆದಾಯ ತೆರಿಗೆಯಿರುವುದಿಲ್ಲ.

ಕಳೆದ ಒಂದು ತಿಂಗಳಿನಿಂದ ಆಂಧ್ರಪ್ರದೇಶದ ರಾಜಕೀಯ ಪಕ್ಷಗಳು `ಸ್ಪೆಶಲ್ ಸ್ಟೇಟಸ್’ ಎಂಬ ಬೇಡಿಕೆಯನ್ನು ಮುಂದೊಡ್ಡಿ ಗಲಭೆಯೆಬ್ಬಿಸಿವೆ. ಮೊದಲು ವೈಎಸ್ಸಾರ್ ಕಾಂಗ್ರೆಸ್ಸಿನ ಜಗನ್ಮೋಹನರೆಡ್ಡಿ ಆಂಧ್ರಕ್ಕೆ `ಸ್ಪೆಶಲ್ ಸ್ಟೇಟಸ್’ ನೀಡಲಾಗದಿದ್ದರೆ ತಮ್ಮ ಲೋಕಸಭಾ ಸದಸ್ಯರಿಂದ ರಾಜೀನಾಮೆ ಕೊಡಿಸುವ ಬೆದರಿಕೆ ಇಟ್ಟಿದ್ದರು. ಆಂಧ್ರದಲ್ಲಿ ಸಾವಿರಾರು ಕಿಲೋಮೀಟರ್‍ಗಳ ಪಾದಯಾತ್ರೆ ಮಾಡಿ ಜಗನ್ ರೆಡ್ಡಿ ಮುಂದಿನ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡುರವರಿಗೆ ತೀವ್ರ ರಾಜಕೀಯ ಸವಾಲು ಒಡ್ಡಿದ್ದರು. ಇದರಿಂದ ಬೆದರಿದಂತೆ ಕಂಡಿರುವ ನಾಯ್ಡು, ಆಂಧ್ರಪ್ರದೇಶಕ್ಕೆ `ಸ್ಪೆಶಲ್ ಸ್ಟೇಟಸ್’ ಬೇಕೇಬೇಕೆಂದು ಕೇಂದ್ರಕ್ಕೆ ದುಂಬಾಲು ಬಿದ್ದರು. ಆದರೆ ಕೇಂದ್ರವು `ಸ್ಪೆಶಲ್ ಸ್ಟೇಟಸ್’ ನೀಡಲಾಗುವುದಿಲ್ಲವೆಂದು ಹೇಳಿದ ನಂತರ ಮೊದಲು ಕೇಂದ್ರ ಮಂತ್ರಿಮಂಡಲದಿಂದ ತಮ್ಮಿಬ್ಬರು ಮಂತ್ರಿಗಳನ್ನು ಹಿಂದೆಗೆದು ನಂತರದಲ್ಲಿ ಎನ್‍ಡಿಎನಿಂದಲೂ ತಮ್ಮ ಪಕ್ಷದ ಸದಸ್ಯತ್ವವನ್ನು ಕಡಿದುಕೊಂಡರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಹುಮತ ಹೊಂದಿರುವ ಕೇಂದ್ರದ ಸರ್ಕಾರವನ್ನೇ ಬೀಳಿಸಲೋಸ್ಕರ ಅವಿಶ್ವಾಸ ನಿರ್ಣಯವನ್ನೂ ಮಂಡಿಸಿದ್ದಾರೆ.

ಇದೀಗ ಆಂಧ್ರದಂತೆ ಬಿಹಾರ ತನಗೂ ಸ್ಪೆಶಲ್ ಸ್ಟೇಟಸ್ ಬೇಕೆಂದು ಬೇಡಿಕೆಯಿಟ್ಟಿದೆ. ಆದರೆ ಇಲ್ಲಿಯವರೆಗೆ ಕೇವಲ ಈಶಾನ್ಯ ಭಾರತದ ಗುಡ್ಡಗಾಡು ರಾಜ್ಯಗಳಿಗೆ ಮಾತ್ರ `ಸ್ಪೆಶಲ್ ಸ್ಟೇಟಸ್’ ನೀಡಲಾಗಿದೆ. ಹಾಗಾದರೆ ಈ `ಸ್ಪೆಶಲ್ ಸ್ಟೇಟಸ್’ ಎಂದರೇನು?

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಆದಾಯ ತೆರಿಗೆ ಕಾನೂನಿನಲ್ಲಿಯ ಸೆಕ್ಷನ್ 80ಐಸಿ ಪ್ರಾವಿಧಾನವೇ ಈ ಸ್ಪೆಶಲ್ ಸ್ಟೇಟಸ್. ಈ ಕಾನೂನಿನಂತೆ ಹತ್ತು ವರ್ಷಗಳ ಕಾಲ ಈ ಸೆಕ್ಷನ್ ಅಡಿ ಗುರುತಿಸಲ್ಪಟ್ಟ ರಾಜ್ಯಗಳಲ್ಲಿ ಸ್ಥಾಪಿತವಾದ ಯಾವುದೇ ಉದ್ದಿಮೆಯ ಲಾಭದ ಮೇಲೆ ಯಾವುದೇ ಆದಾಯ ತೆರಿಗೆಯಿರುವುದಿಲ್ಲ. ಜೊತೆಯಲ್ಲಿ ಈ ಉದ್ದಿಮೆಗಳಿಗೆ ಹಿಂದೆ ಆಯಾ ರಾಜ್ಯಗಳಲ್ಲಿ ವ್ಯಾಟ್ ತೆರಿಗೆಯಿಂದಲೂ ವಿನಾಯಿತಿ ನೀಡಲಾಗುತ್ತಿತ್ತು. ಹೀಗೆ ಈ `ಸ್ಪೆಶಲ್ ಸ್ಟೇಟಸ್’ ಹೊಂದಿರುವ ರಾಜ್ಯಗಳ ಉದ್ದಿಮೆಗಳಿಗೆ ತೆರಿಗೆ ರಜಾ ನೀಡಲಾಗುತ್ತಿತ್ತು.

ಹಲವಾರು ಉದ್ದಿಮೆಗಳಲ್ಲಿ ವಹಿವಾಟಿನ ಶೇಕಡಾವಾರು ಲಾಭಾಂಶ ಕೇವಲ ಎರಡು—ಮೂರು ಪರ್ಸೆಂಟೇಜ್ ಮಾತ್ರ ಇರುತ್ತದೆ. ನೂರಾರು ಕೋಟಿ ವಹಿವಾಟು ಮಾಡಿದರೂ ಒಂದೆರಡು ಕೋಟಿ ಲಾಭ ಗಳಿಸುವುದು ಕಷ್ಟವಿರುತ್ತದೆ. ಅಂತಹ ಸಮಯದಲ್ಲಿ ಸರ್ಕಾರಕ್ಕೆ ಕಟ್ಟಬೇಕಿರುವ ತೆರಿಗೆಯನ್ನು ಉಳಿಸಿದರೆ ಸಾಕು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಳಿವು—ಉಳಿವಿನ ನಿರ್ಧಾರವಾಗುತ್ತದೆ. ಈ ರೀತಿಯಲ್ಲಿ ವಿಶೇಷ ತೆರಿಗೆ ರಿಯಾಯಿತಿಯನ್ನು ಪಡೆಯುವ ಉದ್ಯಮಗಳು ಬೇರೆಲ್ಲ ಉದ್ಯಮಗಳನ್ನು ಹಿಂದಿಕ್ಕುತ್ತವೆ.

ಆಂಧ್ರಪ್ರದೇಶಕ್ಕೆ ಈ `ಸ್ಪೆಶಲ್ ಸ್ಟೇಟಸ್’ ನೀಡಿದರೆ ಬೆಂಗಳೂರಿನ ನೂರಾರು ಉದ್ಯಮಗಳು ಆಂಧ್ರ ಗಡಿಯ ಹಿಂದೂಪುರಕ್ಕೆ ಧಾವಿಸುತ್ತವೆ. ಚೆನ್ನೈನ ಉದ್ಯಮಗಳು ಶ್ರೀಸಿಟಿಗೋ—ನಾಗಲಾಪುರಕ್ಕೋ ರವಾನೆಯಾಗುತ್ತವೆ. ಒರಿಸ್ಸಾದ ಕಾರ್ಖಾನೆಗಳು ಶ್ರೀಕಾಕುಲಂಗೆ ಗಂಟುಮೂಟೆ ಕಟ್ಟುತ್ತವೆ. ಆಂಧ್ರದ ಉದ್ದಿಮೆ—ಕಾರ್ಖಾನೆಗಳ ಮುಂದೆ ನೆರೆಹೊರೆಯ ರಾಜ್ಯಗಳ ಉದ್ದಿಮೆಗಳು ಸೊರಗುತ್ತವೆ.

ಅತೀವ ಒತ್ತಡದ ನಡುವೆಯೂ ಕೇಂದ್ರ ಸರ್ಕಾರ ಆಂಧ್ರಪ್ರದೇಶಕ್ಕೆ `ಸ್ಪೆಶಲ್ ಸ್ಟೇಟಸ್’ ನೀಡದಿರುವ ನಿರ್ಧಾರದ ಹಿಂದೆ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧಾತ್ಮಕ ವಾತಾವರಣ ಇರಬೇಕೆಂಬ ಆಶಯವಿದೆ. ಈ ನಿರ್ಧಾರವನ್ನು ಬೆಂಬಲಿಸಬೇಕಾದ ಕರ್ನಾಟಕ, ತಮಿಳುನಾಡು ಮತ್ತು ಇತರೆ ನೆರೆಹೊರೆಯ ರಾಜ್ಯಗಳು ಸುಮ್ಮನಿರುವುದರ ಹಿಂದೆ ಕೇವಲ ಪಕ್ಷರಾಜಕೀಯವಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಆದರೆ ತಾವು 2019ರಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಆಂಧ್ರಕ್ಕೆ `ಸ್ಪೆಶಲ್ ಸ್ಟೇಟಸ್’ ನೀಡುವೆನೆಂದ ರಾಹುಲ್ ಗಾಂಧಿಯ ಪಕ್ಷವನ್ನು ಕರ್ನಾಟಕ ಬೆಂಬಲಿಸಬೇಕೇ ಎಂಬ ವಿಷಯವೂ ಕುತೂಹಲಕರವಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮