2nd ಎಪ್ರಿಲ್ ೨೦೧೮

ಚೀನಾದ ಆಜೀವ ಅಧ್ಯಕ್ಷ!
ಕ್ಸಿ ಜಿನ್‍ಪಿಂಗ್

ಚೀನಾದ ಚಕ್ರವರ್ತಿಯಾಗಿ ಮುಕುಟ ಧರಿಸಿರುವ ಕ್ಸಿ ಜಿನ್‍ಪಿಂಗ್ ಮುಂದಿನ ವರ್ಷಗಳಲ್ಲಿ ತಮ್ಮ ಸರ್ವಾಧಿಕಾರಿ ಶಕ್ತಿಯಿಂದ ಹೇಗೆ ಜಾಗತಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಾರೋ ಎಂದು ಕಾದುನೋಡಬೇಕಿದೆ.

ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಇದೀಗ ತಮ್ಮನ್ನು ತಾವೇ ಆಜೀವಪರ್ಯಂತ ಅಧ್ಯಕ್ಷಗಾದಿಗೆ ನೇಮಿಸಿಕೊಂಡಿದ್ದಾರೆ. ಇದುವರೆಗೆ ಇದ್ದ ಸಾಂವಿಧಾನಿಕ ಕಾನೂನಿನ ಪ್ರಕಾರ ಚೀನಾದ ಅಧ್ಯಕ್ಷ ಹುದ್ದೆ ಐದು ವರ್ಷಗಳ ಎರಡು ಅವಧಿಯವರೆಗೆ ಸೀಮಿತವಾಗಿತ್ತು. 2013ರಲ್ಲಿ ಅಧ್ಯಕ್ಷರಾಗಿದ್ದ ಕ್ಸಿ ಜಿನ್‍ಪಿಂಗ್ 2018ರಲ್ಲಿ ತಮ್ಮ ಮೊದಲ ಅವಧಿಯನ್ನು ಮುಗಿಸಿ ಎರಡನೆಯ ಅವಧಿಗೆ ಚುನಾಯಿತರಾಗಿದ್ದರು. ಈ ಮಧ್ಯೆ ಅಧ್ಯಕ್ಷಗಾದಿಯ ಮೇಲೆ ವಿಧಿಸಿದ್ದ ಐದು ವರ್ಷಗಳ ಎರಡು ಅವಧಿಯ ಮಿತಿಯನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿಯ ಶಿಫಾರಸಿನ ಮೇಲೆ ಚೀನಾ ರಾಷ್ಟ್ರೀಯ ಕಾಂಗ್ರೆಸ್ ತೆಗೆದು ಹಾಕಿದೆ. ಅದರಂತೆ ಕ್ಸಿ ಜಿನ್‍ಪಿಂಗ್ ತಮ್ಮ ಜೀವಿತಾವಧಿಯವರೆಗೆ ಚೀನಾದ ಅಧ್ಯಕ್ಷರಾಗಿ ಮುಂದುವರೆಯಬಹುದಾಗಿದೆ.

ಇದಕ್ಕೆ ಮೊದಲು ಕ್ಸಿ ಜಿನ್‍ಪಿಂಗ್‍ರವರ ರಾಜಕೀಯ ಚಿಂತನೆಗಳನ್ನು ಚೀನಾದ ಕಮ್ಯುನಿಸ್ಟ್ ಪಕ್ಷದ ಉದಾತ್ತ ಆದರ್ಶದ ಸಿದ್ಧಾಂತಗಳಲ್ಲಿ ಒಂದಾಗಿ ಸೇರಿಸಲಾಗಿತ್ತು. ಕ್ಸಿ ಚೀನಾದ ಏಕಮಾತ್ರ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಕಮ್ಯುನಿಸ್ಟ್ ಪಕ್ಷಗಳಲ್ಲಿ ಈ `ಜನರಲ್ ಸೆಕ್ರೆಟರಿ’ ಹುದ್ದೆಯೇ ಅತ್ಯಂತ ನಿರ್ಣಾಯಕ ಹುದ್ದೆಯಾಗಿದ್ದು, ಕ್ಸಿ ಜಿನ್‍ಪಿಂಗ್ ಈ ಪದವಿಯಲ್ಲಿ ಕೂಡಾ ಜೀವಿತಾವಧಿಯವರೆಗೂ ಇರಬಹುದಾಗಿದೆ.

ಆಧುನಿಕ ಚೀನಾದ ನಿರ್ಮಾತೃ ಮಾವೋ ಜೆಡಾಂಗ್ ಕೂಡಾ ಆಜೀವ ಪರ್ಯಂತ ಚೀನಾದ ಛೇರ್‍ಮನ್ ಆಗಿದ್ದರು. ಆಗ ಭಾರತೀಯ ಕಮ್ಯುನಿಸ್ಟ್ ಪಕ್ಷಗಳು `ಚೀನಾದ ಛೇರ್‍ಮನ್ ನಮ್ಮ ಛೇರ್‍ಮನ್’ ಎಂಬ ಘೋಷಣೆಗಳನ್ನೂ ಕೂಗಿದ್ದರು. ಆದರೆ 1962ರ ಭಾರತ—ಚೀನಾ ಯುದ್ಧದ ನಂತರದಲ್ಲಿ ಚೀನಾದ ಕಮ್ಯುನಿಸ್ಟ್ ಪಕ್ಷದ ಆಕರ್ಷಣೆ ಭಾರತದಲ್ಲಿ ಕ್ರಮೇಣ ಕಡಿಮೆಯಾಗಿತ್ತು.

ಮಾವೋ ಜೆಡಾಂಗ್ ನಿಧನದ ನಂತರ ಚೀನಾದ ಅಧ್ಯಕ್ಷರಾದ ಡೆಂಗ್ ಕ್ಸಿಯವೋ ಪಿಂಗ್ ಚೀನಾದಲ್ಲಿ ಆರ್ಥಿಕ ಸುಧಾರಣೆ ಹಾಗೂ ಖಾಸಗಿ ಹೂಡಿಕೆಯನ್ನು ಪರಿಚಯಿಸಿದ್ದರು. ಈ ಸುಧಾರಣೆಯ ಪ್ರಭಾವದಲ್ಲಿ 1980ರಿಂದ ಚೀನಾ ಅಪ್ರತಿಮ ಆರ್ಥಿಕ ಪ್ರಗತಿಯನ್ನೂ ಕಂಡಿತ್ತು. ಇದರ ಜೊತೆಗೆ ಚೀನಾದಲ್ಲಿ ಭ್ರಷ್ಟಾಚಾರ ಕೂಡಾ ತಲೆಯೆತ್ತಿ ಕಮ್ಯುನಿಸ್ಟ್ ಸಿದ್ಧಾಂತವನ್ನೇ ಮರೆಮಾಚುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು. ಡೆಂಗ್‍ರವರ ನಂತರ ಅಧ್ಯಕ್ಷರಾದ ಜಿಯಾಂಗ್ ಜೆಮಿನ್ ಹಾಗೂ ಹೂ ಜಿನ್‍ಟಾವೋರವರು ಐದು ವರ್ಷಗಳ ಎರಡು ಅವಧಿಯವರೆಗೆ ಮಾತ್ರ ಅಧ್ಯಕ್ಷರಾಗಿದ್ದರು. ಆದರೆ 2013ರಲ್ಲಿ ಅಧ್ಯಕ್ಷರಾದ ಕ್ಸಿ ಜಿನ್‍ಪಿಂಗ್ ಭ್ರಷ್ಟಾಚಾರದ ವಿರುದ್ಧ ಹೋರಾಡುವ ನೆಪದಲ್ಲಿ ತಮ್ಮ ಎಲ್ಲಾ ರಾಜಕೀಯ ಎದುರಾಳಿಗಳನ್ನು ಮೂಲೆಗುಂಪು ಮಾಡಿ ಇದೀಗ ಜೀವಿತಾವಧಿಯವರೆಗೆ ಅಧ್ಯಕ್ಷಗಾದಿಯ ಮೇಲೆ ತಮ್ಮ ಹಕ್ಕು ಸಾಧಿಸಿದ್ದಾರೆ. 64ರ ಹರೆಯದ ಕ್ಸಿ 2032 ರವರೆಗಾದರೂ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಚೀನಾದ ಮಿಲಿಟರಿ ಸಾಮಥ್ರ್ಯವನ್ನು ಹೆಚ್ಚಿಸುವ ಬಗ್ಗೆ ಹೆಚ್ಚು ಗಮನ ಹರಿಸಿರುವ ಕ್ಸಿ ಜಿನ್‍ಪಿಂಗ್ ದಕ್ಷಿಣ ಚೀನಾ ಸಮುದ್ರದ ವಿವಾದಿತ ಪ್ರದೇಶದಲ್ಲಿ ಚೀನಾದ ಸಾರ್ವಭೌಮತ್ವ ಸಾಧಿಸಲು ಹೊರಟಿದ್ದಾರೆ. ತಟಸ್ಥ ಹಾಗೂ ಅಂತರರಾಷ್ಟ್ರೀಯ ಸಮುದ್ರ ವಲಯದಲ್ಲಿ ಚೀನಾದ ಅಧಿಪತ್ಯ ಸಾಧಿಸಿ ಫಿಲಿಪ್ಪೀನ್ಸ್ ಹಾಗೂ ವಿಯೆಟ್ನಾಂ ದೇಶಗಳಿಂದ ಸಮುದ್ರದಾಳದ ಸಂಪತ್ತನ್ನು ಕಸಿಯುವ ಹುನ್ನಾರದಲ್ಲಿದ್ದಾರೆ. ಇದನ್ನು ವಿರೋಧಿಸುತ್ತಿರುವ ಜಾಗತಿಕ ಮಿಲಿಟರಿ ಶಕ್ತಿಗಳಾದ ಅಮೆರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳನ್ನು ಹೂಂಕರಿಸಿ ಹೆದರಿಸುವಷ್ಟು ಮಟ್ಟಿಗೆ ದಾಷ್ಟ್ರ್ಯ ತೋರುತ್ತಿದ್ದಾರೆ. ಪಶ್ಚಿಮದ ಏಷ್ಯಾ ದೇಶಗಳ ಯಜಮಾನಿಕೆ ಪಡೆಯಲು ಬೆಲ್ಟ್ ಹಾಗೂ ರೋಡ್ ಇನಿಶಿಯೇಟಿವ್ ಎಂಬ ಬೃಹತ್ ಯೋಜನೆಯಡಿ ಏಷ್ಯಾ—ಯೂರೋಪ್ ಆದ್ಯಂತ ಆರ್ಥಿಕ ಕಾರಿಡಾರ್ ಕಟ್ಟುವ ಯೋಜನೆಯನ್ನೂ ಕ್ಸಿ ಜಿನ್‍ಪಿಂಗ್ ಹಾಕಿದ್ದಾರೆ. ಈ ಯೋಜನೆಯಿಂದ ಚೀನಾದ ಸರಕುಗಳಿಗೆ ನೇರವಾಗಿ ಕೊಲ್ಲಿ ರಾಷ್ಟ್ರಗಳ ಹಾಗೂ ಸೂಯಜ್ ಕಾಲುವೆಯ ಮೂಲಕ ಸುಗಮ ಸಂಚಾರ ಲಭ್ಯವಾಗಲಿದೆ.

ಚೀನಾದ ಚಕ್ರವರ್ತಿಯಾಗಿ ಮುಕುಟ ಧರಿಸಿರುವ ಕ್ಸಿ ಜಿನ್‍ಪಿಂಗ್ ಮುಂದಿನ ವರ್ಷಗಳಲ್ಲಿ ತಮ್ಮ ಸರ್ವಾಧಿಕಾರಿ ಶಕ್ತಿಯಿಂದ ಹೇಗೆ ಜಾಗತಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತಾರೋ ಎಂದು ಕಾದುನೋಡಬೇಕಿದೆ. ಕ್ಸಿಯವರ ಈ ಆಜೀವಪದಗ್ರಹಣ ಭಾರತದ ವಿದೇಶಾಂಗ ಇಲಾಖೆ ಹಾಗೂ ಸೈನ್ಯಗಳ ನಿದ್ದೆಗೆಡಿಸಿರುವುದಂತೂ ಖಚಿತವೆಂದು ಹೇಳಲಾಗುತ್ತಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮