2nd ಎಪ್ರಿಲ್ ೨೦೧೮

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರ ಮತ್ತು ಖೋಟಾನೋಟು ಚಲಾವಣೆ ಚುನಾವಣಾ ಅಕ್ರಮದ ಮೂಲಗಳಾಗಿವೆ.

ಚುನಾವಣೆಗಳಲ್ಲಿ ಈಗ ಹಣವೊಂದೇ ಅಲ್ಲದೆ ಅದರ ಜೊತೆಗೆ ಜಾತಿಯು ಕೂಡ ತನ್ನ ಪ್ರಭಾವ ಬೀರುತ್ತಿದೆ. ಇದು ದುರ್ದೈವದ ವಿಚಾರ. ರಾಜಕಾರಣಿಗಳು ಜಾತಿಯಲ್ಲೇ ಒಳಜಾತಿ, ಮತ ಹಾಗೂ ಧರ್ಮಗಳನ್ನು ಸೃಷ್ಟಿಸಿಕೊಂಡು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಭ್ರಷ್ಟಾಚಾರಿಗಳನ್ನು ಹೊರಗಟ್ಟಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿಲ್ಲ. ಈಗ ಲೂಟಿಕೋರರೇ ಹೀರೋಗಳಾಗುತ್ತಿದ್ದಾರೆ. ಪ್ರಾಮಾಣಿಕರನ್ನು ಅಪರಾಧಿಗಳಂತೆ ನೋಡುವಂತಹ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಕಾರಣವೆಂದರೆ ಲಂಚ ಎಂಬುದು ಸ್ವೀಕಾರಾರ್ಹವಾಗಿಬಿಟ್ಟಿದೆ. ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು. ಎಕೆಂದರೆ ವೇಶ್ಯೆಯರ ಮನಸ್ಸು ಕೆಟ್ಟಿರುವುದಿಲ್ಲ. ಆದರೆ ಭ್ರಷ್ಟಾಚಾರಿಗಳ ಮೈ, ಮನಸ್ಸು ಎಲ್ಲವೂ ಕೆಟ್ಟಿರುತ್ತವೆ. ಅದರಿಂದಾಗಿ ಅವರು ಸಮಾಜವನ್ನೂ ಕೆಡಿಸುತ್ತಾರೆ.

ಕಾನೂನು ಉಲ್ಲಂಘಿಸಿದವರಿಗೆ ಇಂದು ಯಾವ ಶಿಕ್ಷೆಯಾಗುತ್ತಿಲ್ಲ. ಹಾಗಾಗಿ ನಿರ್ಭಯವಾಗಿ ಕಾನೂನನ್ನು ಉಲ್ಲಂಘಿಸುತ್ತಾರೆ. ಉದಾಹರಣೆಗೆ ಹೇಳುವುದಾದರೆ ಖೋಟಾ ನೋಟಿನ ಚಲಾವಣೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರೆ ಇದುವರೆಗೆ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ. ಇದೊಂದು ಗಂಭೀರ ವಿಚಾರ. ದೇಶದಲ್ಲಿ ಅನೇಕ ಕಡೆಗಳಲ್ಲಿ ಖೋಟಾನೋಟಿನ ಚಲಾವಣೆ ಮಾಡುವವರನ್ನು ಬಂಧಿಸಲಾಗಿದೆ. ಇಂಥ ಅಪರಾಧಿಗಳಿಗೆ ಹತ್ತು—ಹದಿನೈದು ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೈಬಿಡಲಾಗುತ್ತಿದೆಯೇ ವಿನಾ ಯಾರಿಗೂ ಶಿಕ್ಷೆ ಆಗಿಲ್ಲ. ಇದರಿಂದಾಗಿ ಖೋಟಾನೋಟುಗಳು ಚುನಾವಣೆಗಳಲ್ಲೂ ಬಳಕೆಯಾಗುತ್ತಿವೆ. ಇವು ಅತ್ಯಂತ ಗಂಭೀರ, ಕ್ರಿಮಿನಲ್ ಸ್ವರೂಪದ, ದೇಶದ್ರೋಹದ ಪ್ರಕರಣಗಳಾಗಿವೆ.

ಇಂಥ ಪ್ರಕರಣಗಳಲ್ಲಿ ಖೋಟಾನೋಟು ಮುದ್ರಿಸುವವರು ಮತ್ತು ಚಲಾವಣೆ ಮಾಡುವವರ ಬಗ್ಗೆ ತನಿಖಾಧಿಕಾರಿಗಳು ಸಮರ್ಥವಾಗಿ ತನಿಖೆ ನಡೆಸಿ, ಸಾಕ್ಷ್ಯ ಒದಗಿಸುತ್ತಿಲ್ಲ. ಆರೋಪ ಸಾಬೀತು ಮಾಡುವಲ್ಲಿ ಸಂಪೂರ್ಣ ವಿಫಲವಾಗುತ್ತಿದ್ದಾರೆ. ಅದರಿಂದಾಗಿಯೇ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಭ್ರಷ್ಟಾಚಾರ ಮತ್ತು ಖೋಟಾನೋಟು ಚಲಾವಣೆ ಚುನಾವಣಾ ಅಕ್ರಮದ ಮೂಲಗಳಾಗಿವೆ.

ಚುನಾವಣಾ ಅಕ್ರಮಗಳ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬಹಳ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಚುನಾವಣೆಯಲ್ಲಿ ಚಲಾಯಿಸುವ ಮತಗಳು ಮಾರಾಟದ ಸರಕುಗಳಾಗಬಾರದು. ಅದಕ್ಕಾಗಿ ಅವರು ಪ್ರತಿಯೊಬ್ಬರಿಗೂ ಸಮಾನ ಮತದಾನದ ಹಕ್ಕನ್ನು ಕಲ್ಪಿಸಿದರು. ಸಾಮಾನ್ಯ ಕೂಲಿಕಾರನಿಗೂ ಒಂದೇ ಮತ ಹಾಗೂ ರಾಷ್ಟ್ರಪತಿಗೂ ಒಂದೇ ಮತ ನಿಗದಿ ಮಾಡಿದರು. ಇದರಿಂದಲೇ ಸಮಾನತೆಯ ಸಮಾಜ ಕಟ್ಟುವ ಆಶಯವನ್ನು ಡಾ.ಅಂಬೇಡ್ಕರ್ ಹೊಂದಿದ್ದರು. ಲೂಟಿಕೋರರನ್ನೇ ಹೀರೋಗಳನ್ನಾಗಿ ಮಾಡುವ ಈಗಿನ ಪರಿಸ್ಥಿತಿಯನ್ನು ನೋಡಿ. ಸಮಾನತೆಯ ಸಮಾಜವಾದದ ಲಕ್ಷಣವೇ ಇದು?

ಡಾ.ಅಂಬೇಡ್ಕರ್ ಮತದಾನದ ಬಗ್ಗೆ ಇನ್ನೂ ಮುಂದುವರೆದು ಬಹಳ ಅರ್ಥಗರ್ಭಿತ ಮಾತುಗಳನ್ನು ಹೇಳಿದ್ದಾರೆ. ಒಂದೊಂದು ಮತ ಕೂಡಾ ನಮ್ಮ ತಾಯಿಯ, ಪತ್ನಿ ಹಾಗೂ ತಂಗಿಯ ಶೀಲದಷ್ಟು ಪವಿತ್ರವಾದದ್ದು ಎಂದು ಹೇಳಿದ್ದಾರೆ. ಯಾರಾದರೂ ನಮ್ಮ ತಾಯಿಯ ಮಾನವನ್ನು ಮಾರಾಟ ಮಾಡುತ್ತೇವೆಯೇ? ಹಾಗೆಯೇ ನಮ್ಮ ತಂಗಿ, ಅಕ್ಕನ ಹಾಗೂ ಪತ್ನಿಯ ಶೀಲವನ್ನು ದುಡ್ಡಿಗಾಗಿ ಮಾರಾಟ ಮಾಡಲು ಸಾಧ್ಯವೇ? ಪ್ರಾಣವನ್ನು ಪಣಕ್ಕಿಟ್ಟಾದರೂ ರಕ್ಷಣೆ ಮಾಡುವುದಿಲ್ಲವೇ? ಹಾಗೆ ನಮ್ಮ ಮತಗಳು ತಾಯಿ, ಅಕ್ಕ—ತಂಗಿಯರು ಹಾಗೂ ಪತ್ನಿಗೆ ಸಮಾನವಾದವು. ಎಂದರೆ, ಅವುಗಳನ್ನು ಹಣಕ್ಕಾಗಿ ಮಾರಿಕೊಂಡರೆ ನಮ್ಮ ತಾಯಿ, ಅಕ್ಕ—ತಂಗಿ ಮತ್ತು ಪತ್ನಿಯನ್ನು ಮಾರಾಟ ಮಾಡಿಕೊಂಡಂತಲ್ಲವೇ? ಇಂಥ ವಿಚಾರಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಬೇಕಿದೆ. ಜಾಗೃತಿ ಮೂಡಿಸದಿದ್ದರೆ ಪ್ರಜಾಪ್ರಭುತ್ವ ಲೂಟಿಕೋರರ ಮತ್ತು ಜಾತಿವಾದಿಗಳ ಪಾಲಾಗುತ್ತದೆ.

ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲ ಸೇರಿ ಮಾಡಲೇಬೇಕಿದೆ. ವಿಚಾರವಂತರು, ಸಾಹಿತಿಗಳು ಹಾಗೂ ಮಾಧ್ಯಮಗಳು ಈ ಕೆಲಸವನ್ನು ಮಾಡಬೇಕು. ಆದರೆ ದುರ್ದೈವ ಎಂದರೆ ಪ್ರಜಾಪ್ರಭುತ್ವದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಈ ನಾಲ್ಕೂ ಶಿಥಿಲವಾಗಿವೆ. ಈ ಅಂಗಗಳು ಶಿಥಿಲವಾಗಿವೆ ಎಂದು ಸುಮ್ಮನೆ ಬಿಡಲಾಗದು. ಸರಿಯಾದ ಶಸ್ತ್ರಚಿಕಿತ್ಸೆ ಮಾಡಬೇಕು. ಇವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವೇ ಇಲ್ಲ.

2006—2007ರಲ್ಲಿ ಜಂಟಿ ಸದನ ಸಮಿತಿ ಅಧ್ಯಕ್ಷನಾಗಿದ್ದಾಗ ಸರಕಾರಿ ಭೂಮಿ ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದು ವರದಿ ನೀಡಿದೆ. ಆ ವರದಿಯ ಅಧ್ಯಾಯ 2ರಲ್ಲಿ ನ್ಯಾಯಾಂಗ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಆಗಲೇ ನಾನು ಹೇಳಿದ್ದೆ. ಎರಡು ತಿಂಗಳ ಹಿಂದೆ ಸುಪ್ರೀಂಕೋರ್ಟನ ನಾಲ್ವರು ನ್ಯಾಯಮೂರ್ತಿಗಳು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿದರು. ಈ ಮಾತನ್ನು ನಾನು 12 ವರ್ಷಗಳ ಹಿಂದೆಯೇ ಹೇಳಿದ್ದೆ. ಇಂಥ ಸಾಂವಿಧಾನಿಕ ಸಂಸ್ಥೆಗಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಜಾಗೃತಿ ಮೂಡಿಸಬೇಕಿದೆ.

ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಆಯೋಗ ಸಂಪೂರ್ಣ ವಿಫಲವಾಗಿದೆ. ಏಕೆಂದರೆ ಚುನಾವಣೆಗಳಲ್ಲಿ ಹಣ, ಹೆಂಡ ಹಂಚಿದ ಯಾರಿಗೆ ಈವರೆಗೆ ಶಿಕ್ಷೆಯಾಗಿದೆ? ವಿಧಾನ ಪರಿಷತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳ ವೆಚ್ಚಕ್ಕೆ ಮಿತಿಯಿಲ್ಲ ಎಂದು ಈ ಹಿಂದೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯೇ ಹೇಳಿಕೆ ನೀಡಿದ್ದರು. ಇದನ್ನು ವಿರೋಧಿಸಿ ನಾನು ಕೇಂದ್ರ ಚುನಾವಣಾ ಆಯೋಗಕ್ಕೆ 2016ರಲ್ಲಿ ಪತ್ರ ಬರೆದಿದ್ದೆ. ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೆ. ಅದಾಗ್ಯೂ ಚುನಾವಣಾ ಅಕ್ರಮಗಳು ಮುಂದುವರೆದಿವೆ. ಇದನ್ನು ನೋಡಿದರೆ ಚುನಾವಣಾ ಆಯೋಗದ ನೇತೃತ್ವ ವಹಿಸಿದವರಿಗೆ ಬದ್ಧತೆಯಿಲ್ಲವೆಂಬುದು ತಿಳಿಯುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಜನಜಾಗೃತಿ ಅಭಿಯಾನಗಳನ್ನು ಮಾಡಬೇಕಾಗುತ್ತದೆ.

* ಲೇಖಕರು ಮಾಜಿ ಜೆಡಿಎಸ್ ಶಾಸಕರು, ಸರ್ಕಾರಿ ಭೂಒತ್ತುವರಿ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿ ವರದಿ ನೀಡಿದ್ದಾರೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮