2nd ಎಪ್ರಿಲ್ ೨೦೧೮

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಬಿ.ಎನ್.ವಿಜಯಕುಮಾರ್

ಸುಶಿಕ್ಷಿತ ಮತದಾರರು ಮೊದಲು ಮನೆಯಿಂದ ಹೊರಬಂದು ಮತ ಚಲಾಯಿಸುವುದನ್ನು ಕಲಿಯಬೇಕು. ವಿದ್ಯೆ ಬಲ್ಲವರು ಜಾಗೃತರಾಗಿ ಮತದಾನದಲ್ಲಿ ತೊಡಗಿಕೊಂಡರೆ ಜನಪ್ರತಿನಿಧಿಗಳಿಗೆ ಮೋಸ ಮಾಡುವುದು ಕಷ್ಟವಾಗಲಿದೆ.

ಒ ಬ್ಬ ರಾಜಕೀಯ ನಾಯಕ ಚುನಾವಣೆಗಳಲ್ಲಿ ಸ್ಪರ್ಧಿಸುವಾಗ ಚುನಾವಣೆಯಿಂದ ಚುನಾವಣೆಗೆ ಆತನ ಅಭಿಮಾನಿಗಳು, ಮತದಾರರು ಹಾಗೂ ಜನಪ್ರೀಯತೆ ಹೆಚ್ಚುತ್ತ ಹೋಗಬೇಕು. ಇನ್ನೊಂದೆಡೆ ಅವನ ಚುನಾವಣಾ ವೆಚ್ಚ ಕಡಿಮೆಯಾಗುತ್ತ ಬರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹಾಗಾಗುತ್ತಿಲ್ಲ. ಚುನಾವಣೆಯಿಂದ ಚುನಾವಣೆಗೆ ವೆಚ್ಚ ಏರಿಕೆಯಾಗುತ್ತಿದೆ. ‘ರಾಜಕೀಯ ಪಕ್ಷಗಳೆಂದರೆ ವೃತ್ತಿ ಸಂಸ್ಥೆಗಳಲ್ಲ ಅವು ಸಾಮಾಜಿಕ ಸೇವೆ ಮಾಡಲು ಇರುವ ವೇದಿಕೆಗಳು’ ಎಂದು ಲಾಲ್‍ಕೃಷ್ಣ ಅಡ್ವಾಣಿ ಯಾವಾಗಲೂ ಹೇಳುತ್ತಿದ್ದರು. ಈಗ ಪರಿಸ್ಥಿತಿ ಹಾಗೆ ಉಳಿದಿಲ್ಲ. ರಾಜಕೀಯಕ್ಕೆ ಬರುವ ವ್ಯಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಹಾಗಿಲ್ಲ. ಚುನಾವಣೆಯಲ್ಲಿ ಗೆಲುವೇ ಮುಖ್ಯ ಎನ್ನುವ ವಿಚಾರ ಬಂದಾಗ ಅಭ್ಯರ್ಥಿಯ ಜಾತಿ, ಧರ್ಮ ಹಾಗೂ ಯಾವ ವ್ಯಕ್ತಿ ಹೆಚ್ಚು ಹಣ ವೆಚ್ಚ ಮಾಡುವ ಸಾಮಥ್ರ್ಯ ಹೊಂದಿದ್ದಾನೆ ಎಂಬುದನ್ನೆಲ್ಲ ನೋಡಲಾಗುತ್ತಿದೆ.

ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತು ಪಕ್ಷ ಅಧಿಕಾರಕ್ಕೆ ಬಂದರೆ ಗೆದ್ದ ಅಭ್ಯರ್ಥಿ ಮತ್ತು ಪಕ್ಷಕ್ಕೆ ಜನ ದೇಣಿಗೆ ಕೊಡುವುದನ್ನು ನಿಲ್ಲಿಸುತ್ತಾರೆ. ಗೆದ್ದವರು ಹೇಗೋ ದುಡ್ಡು ಮಾಡಿರುತ್ತಾರೆ ಎಂಬ ಭಾವನೆ ಅವರದು. ಪ್ರಾಮಾಣಿಕವಾಗಿದ್ದವರನ್ನು ಇದು ಕಷ್ಟಕ್ಕೆ ಸಿಲುಕಿಸುತ್ತದೆ. ಈ ಬಗ್ಗೆ ಸರಕಾರ ಕಾಳಜಿವಹಿಸಿದರೆ ಪ್ರಾಮಾಣಿಕರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಸುಧಾರಣೆಯ ಅಗತ್ಯವಿದೆ. ಟಿ.ಎನ್.ಶೇಷನ್ ಅವರು ಬಂದುಹೋದ ಮೇಲೆ ಒಂದಿಷ್ಟು ಸುಧಾರಣೆಗಳು ಆಗಿವೆ. ಸಾಕಷ್ಟು ಕಾನೂನುಗಳೂ ಬಂದಿವೆ. ಆದಾಗ್ಯೂ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಡುವುದೇ ಒಂದು, ವೆಚ್ಚ ಮಾಡುವುದೇ ಇನ್ನೊಂದು. ಇದನ್ನು ಗಮನಿಸಿದರೆ ಪ್ರಜಾತಂತ್ರ ಬುನಾದಿಯಾಗಿರುವ ಚುನಾವಣಾ ವ್ಯವಸ್ಥೆ ಸರಿಯಾಗಿಲ್ಲ ಎಂಬುದು ಸ್ಪಷ್ಟ.

ಈ ಮೊದಲು ಜನರೇ ದುಡ್ಡು ಕೊಟ್ಟು ತಮಗೆ ಬೇಕಾದ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದರು. ಉದಾಹರಣೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೆಸರು ಪ್ರಕಟಿಸಿದರೆ ಜನರೇ ದುಡ್ಡು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಹೇಳುತ್ತಿದ್ದುದನ್ನು ನಾನೇ ಕೇಳಿದ್ದೇನೆ. ಶೃಂಗೇರಿ ಕ್ಷೇತ್ರದಲ್ಲಿ ಎಚ್.ಜಿ.ಗೋವಿಂದೇಗೌಡ ಜನರಿಗೆ ಹಣ ಕೊಡುತ್ತಿರಲಿಲ್ಲ, ಜನರೇ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸುತ್ತಿದ್ದರು. ಈ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಪಕ್ಷದ ಶಾಸಕ ಅಂಗಾರ ಒಂದು ಮಾದರಿ. ಅಂಗಾರ ಜನರಿಗೆ ದುಡ್ಡು ಕೊಡುವುದಿಲ್ಲ. ಹಣ ಕೊಡದೇ ಅವರು ಆರೇಳು ಬಾರಿ ಶಾಸಕರಾಗಿದ್ದಾರೆ. ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಲ್ಲಿ ಎಸ್.ಸುರೇಶಕುಮಾರ್ ಕೂಡ ಹಣ ಕೊಡುವುದಿಲ್ಲ. ಇದೊಂದು ಒಳ್ಳೆಯ ಬೆಳವಣಿಗೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಕಾಸರಗೋಡಿನಿಂದ ಹಿಡಿದು ಕಾರವಾರದವರೆಗೆ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆ.

ಚುನಾವಣೆಯಲ್ಲಿ ಹಣದ ಪ್ರಭಾವ ಎನ್ನುವಾಗ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ಮತದಾರರಿಗೆ ಆಮಿಷ ಒಡ್ಡಲು ಹಣ ನೀಡುವುದು ಹಾಗೂ ಮತದಾರರೇ ರಾಜಕಾರಣಿಗಳಿಂದ ಹಣ ಕೇಳಿ ಪಡೆಯುವುದು ಎರಡೂ ಪದ್ಧತಿಗಳು ಜಾರಿಯಲ್ಲಿವೆ. ಉದಾಹರಣೆಗೆ ನನ್ನ ಕ್ಷೇತ್ರದಲ್ಲೇ ಎರಡೂ ಅಭಿಪ್ರಾಯಗಳು ಕೇಳಿಬರುತ್ತಿವೆ. ಅಪಾರ್ಟಮೆಂಟ್‍ಗಳಲ್ಲಿನ ಕೆಲವು ಜನ ಈ ಬಾರಿ ನಾವಾಗಿಯೇ ಹೋಗಿ ಮತ ಹಾಕಬೇಕು ಎಂದು ಮಾತಾಡಿಕೊಳ್ಳುತ್ತಿದ್ದಾರೆ. ಇನ್ನೊಂದು ಭಾಗದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಹಣ ಕೊಡುತ್ತಾರೆ ಅವರು ಕೊಡಲಿ ಬಿಡಿ ಎನ್ನುವವರೂ ಇದ್ದಾರೆ. ಎರಡೂ ತರದ ಜನ ಇದ್ದಾರೆ. ಇದರಲ್ಲಿ ಜನರ ತಪ್ಪಿಲ್ಲ. ರಾಜಕೀಯ ವ್ಯವಸ್ಥೆಯೇ ಹಾಗಾಗಿದೆ. ಇಂದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಜನಪ್ರತಿನಿಧಿ ನಾಳೆ ಬೆಳಿಗ್ಗೆ ಬೆಂಜ್ ಕಾರಿನಲ್ಲಿ ಓಡಾಡುವುದು, ಕೆಲವೇ ದಿನಗಳಲ್ಲಿ ಭವ್ಯ ಬಂಗಲೆ ಕಟ್ಟಿಸಿದರೆ ಜನರಿಗೆ ಸಂದೇಹ ಬರುತ್ತದೆ. ಅದರಿಂದಾಗಿ ಚುನಾವಣೆಯಲ್ಲಿ ದುಡ್ಡು ಕೇಳುವುದು ಸಹಜವಾಗಿದೆ.

ಇಂಥ ಭ್ರಷ್ಟ ಚುನಾವಣಾ ವ್ಯವಸ್ಥೆ ನಿರ್ಮಾಣವಾಗಲು ನಮ್ಮ ರಾಜಕೀಯ ಪಕ್ಷಗಳೇ ಮುಖ್ಯ ಕಾರಣ. ಜನರೂ ಸ್ವಲ್ಪಮಟ್ಟಿಗೆ ಹೊಣೆಗಾರರು. ಅದಕ್ಕೆ ಅಧಿಕಾರಶಾಹಿ ಒಂದಿಷ್ಟು ತುಪ್ಪ ಸುರಿಯುತ್ತದೆ. ಈ ಪರಿಸ್ಥಿತಿ ಸುಧಾರಣೆಯಾಗಬೇಕಾದರೆ ನಮ್ಮ ರಾಜಕೀಯ ಪಕ್ಷಗಳು ಮೊದಲು ಸರಿ ಹೋಗಬೇಕು. ಈ ಕುರಿತಂತೆ ನಮ್ಮ ಬಿಜೆಪಿ ಪಕ್ಷ ಒಂದಿಷ್ಟು ಪ್ರಯೋಗ ನಡೆಸುತ್ತಿದೆ. ಜನರೊಂದಿಗೆ ಹೊಂದಿರುವ ಸಂಪರ್ಕ, ನಡವಳಿಕೆ, ವ್ಯಕ್ತಿತ್ವ ಇತ್ಯಾದಿಗಳನ್ನು ಪರಿಗಣಿಸುವ ಪ್ರಯತ್ನ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಮೇಲೆ ಈ ಪ್ರಯೋಗ ಮಾಡಲಿದ್ದಾರೆ. ಇದು ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಟಿ.ಎನ್.ಶೇಷನ್ ಮಾಡಿದ ಹಾಗೆ ಕ್ಷಿಪ್ರ ಬದಲಾವಣೆ ತರಬೇಕೆನಿಸುತ್ತದೆ. ಇಲ್ಲವೇ ಕಡ್ಡಾಯ ಮತದಾನ ಕಾನೂನು ಜಾರಿಗೊಳಿಸಿದರೆ ಒಳಿತು. ಸುಧಾರಣೆ ವಿಚಾರದಲ್ಲಿ ಹೇಳುವುದಾದರೆ ಸುಶಿಕ್ಷಿತ ಮತದಾರರು ಮೊದಲು ಮನೆಯಿಂದ ಹೊರಬಂದು ಮತ ಚಲಾಯಿಸುವುದನ್ನು ಕಲಿಯಬೇಕು. ವಿದ್ಯೆ ಬಲ್ಲವರು ಜಾಗೃತರಾಗಿ ಮತದಾನದಲ್ಲಿ ತೊಡಗಿಕೊಂಡರೆ ಜನಪ್ರತಿನಿಧಿಗಳಿಗೆ ಮೋಸ ಮಾಡುವುದು ಕಷ್ಟವಾಗಲಿದೆ. ಅದರಿಂದ ಸುಧಾರಣೆ ತ್ವರಿತವಾಗಲಿದೆ.

ಈ ಬಾರಿಯಾದರೂ ಮುಂಬರುವ ವಿಧಾನಸಭಾ ಚುನಾವಣೆ ಕಠಿಣವಾಗಿ ನಡೆಯಬೇಕು. ರಾಜ್ಯದ ಪೊಲೀಸ್ ಅಧಿಕಾರಿಗಳ ಜೊತೆಗೆ ಹೊರ ರಾಜ್ಯದ ಅಧಿಕಾರಿಗಳನ್ನು ನಿಯೋಜಿಸಿ ಎಲ್ಲೂ ಹಣದ ಹೊಳೆ ಹರಿಯದಂತೆ ಮಾಡಬೇಕು. ಪ್ರಾಮಾಣಿಕ ಹಾಗೂ ಸಜ್ಜನ ಅಭ್ಯರ್ಥಿಗಳು ಆಯ್ಕೆಯಾಗಬೇಕೆಂಬುದು ನನ್ನ ಆಶಯ.

* ಲೇಖಕರು ಇಂಜಿನಿಯರಿಂಗ್ ಪದವೀಧರರು, ಹಾಲಿ ಬೆಂಗಳೂರಿನ ಜಯನಗರ ಕ್ಷೇತ್ರದ ಬಿಜೆಪಿ ಶಾಸಕರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮