2nd ಎಪ್ರಿಲ್ ೨೦೧೮

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಡಾ.ಬಿ.ಎಲ್.ಶಂಕರ್

ಇಲ್ಲಿ ಹಣ ಪಡಕೊಂಡವನು ನೀಡಿದವನನ್ನೂ, ನೀಡಿದವನು ಪಡಕೊಂಡವನನ್ನೂ ಬಾಧ್ಯಸ್ಥನನ್ನಾಗಿಸಿ ತಮ್ಮನ್ನು ಸಮರ್ಥಿಸುವುದರಲ್ಲೇ ನಿಷ್ಣಾತರು.

ಯುವಸಮುದಾಯದ ಮನಸ್ಸು ಮತ್ತು ಕ್ರಿಯೆ ಯಾವಾಗಲೂ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತಿರು ತ್ತದೆ. ಅವರು ತಕ್ಷಣದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಮಾತ್ರ ಉತ್ತರ ಕಂಡುಕೊಳ್ಳುವ ಮತ್ತು ಸಾಧ್ಯವಾಗದಿದ್ದರೆ ಪ್ರತಿಭಟಿಸುವ ಮನಸ್ಥಿತಿಯಲ್ಲಿರುತ್ತಾರೆ. ಇಂತಹ ಮನಸ್ಥಿತಿ ಈಗ ಕೇವಲ ಯುವಜನತೆಗೆ ಮಾತ್ರ ಸೀಮಿತವಾಗಿಲ್ಲ. ಅದೀಗ ಸರ್ವಜನಪ್ರಿಯವಾಗಿರುವುದೇ ಚುನಾವಣೆಯೆಂಬ ದುಡ್ಡಿನ ಜಾತ್ರೆಗೆ ವೇದಿಕೆಯಾಗಿದೆ.

ಕೆಲವರು ತುಂಬ ಚಂದವಾಗಿ ಹಾಡುತ್ತಾರೆ; ಆದರೆ ಅದು ಕೇಳುಗರಿಗೆ ತಟ್ಟುವುದಿಲ್ಲ. ಯಾಕೆಂದರೆ, ಆ ಹಾಡಿನಲ್ಲಿ ‘ಜೀವಸ್ವರ’ ಇರುವುದಿಲ್ಲ! ಒಂದು ರಾಗದಲ್ಲಿ ಎಲ್ಲ ಸ್ವರಗಳೂ ಇದ್ದೂ ಜೀವಸ್ವರವೇ ಇಲ್ಲದಿದ್ದರೆ ಹೇಗೆ? ಜೀವಸ್ವರಗಳೆಂದರೆ ಸಂಗೀತದೊಳಗಿರುವ ಅಮೂರ್ತಧಾರೆಗಳು. ಅವು ಯಾವುದೋ ಕ್ಷಣದಲ್ಲಿ ಹಾಡುವವನಿಗೆ ದಕ್ಕಿಬಿಡುತ್ತವೆ. ಹೇಗೆ, ಯಾಕೆ ಎಂಬುದು ನಿಗೂಢ.

ದೇಹದಲ್ಲಿ ಎಲ್ಲ ಕೋಶಗಳಿದ್ದೂ ಜೀವಕೋಶವೇ ಇಲ್ಲದಿದ್ದರೆ? ಕೈ ಇದೆ, ಕಾಲಿದೆ, ಕಣ್ಣಿದೆ; ಎಲ್ಲವೂ ಇವೆ. ಆದರೆ ‘ಜೀವ’ವೇ ಇಲ್ಲದಿದ್ದರೆ, ಜೀವ ಇರಬೇಕಾದ ಕೋಶವೇ ಇಲ್ಲದಿದ್ದರೆ? ಮತಹಾಕುವ ‘ಮತದಾರ’ನಿಗಾಗಲಿ; ಮತ ಬೇಕಾದ ಮತಯಾಚಕನಿಗಾಗಲಿ ಇರಬೇಕಾದ ಪ್ರಜಾಪ್ರಭುತ್ವವೆಂಬ ‘ಜೀವ’ವೇ ಇಲ್ಲದಮೇಲೆ ಪ್ರಜಾಪ್ರಭುತ್ವದ ಮಹತ್ವವಾದರೂ ಯಾರಿಗೆ ಅರಿವಾಗಬೇಕು?

ನೋಟಿನ ಜಾತ್ರೆಯಲ್ಲಿ ಕೊಂಡವರಾರು? ಉಂಡವರಾರು? ಓಟಿಗಾಗಿ ನೋಟು; ನೋಟಿಗಾಗಿ ಓಟು! ಹೇಳಿಕೇಳಿ ಇದು ಕೊಡು—ಕೊಳ್ಳುವ ಕಾಲ. ಗೆಳೆತನ, ಉಪಕಾರ, ಕೃತಜ್ಞತೆ, ಸೇವೆ, ಮಾನ, ಮರ್ಯಾದೆ, ಸನ್ಮಾನ, ಸಂಬಂಧ ಎಲ್ಲವನ್ನೂ ಹಣದ ಮೌಲ್ಯದಲ್ಲಿಯೇ ಅಳೆಯುವ ಕಾಲ. ಧನಾಯೈ ತಸ್ಮಾಯ ನಮಃ! ಇಲ್ಲಿ ಹಣ ಪಡಕೊಂಡವನಿಗಾಗಲಿ, ಹಣ ಚೆಲ್ಲಿದವನಿಗಾಗಲಿ ಮುಜುಗರದ ಅನುಭವವೇ ಆಗುವುದಿಲ್ಲ. ಪಡಕೊಂಡವನು ನೀಡಿದವನನ್ನೂ, ನೀಡಿದವನು ಪಡಕೊಂಡವನನ್ನೂ ಬಾಧ್ಯಸ್ಥನನ್ನಾಗಿಸಿ ತಮ್ಮನ್ನು ಸಮರ್ಥಿಸುವುದರಲ್ಲೇ ನಿಷ್ಣಾತರು. ಹಾಗಾದರೆ ಈ ಸ್ಥಿತಿಗೆ ಯಾರು ಕಾರಣ? ನಮ್ಮ ಸುತ್ತ ಇಂದು ರಾಜಕಾರಣಿಗಳೇ ತುಂಬಿತುಳುಕುತ್ತಿದ್ದು, ದಾರ್ಶನಿಕರ ಮುತ್ಸದ್ದಿಗಳ ಕೊರತೆ ನಮ್ಮನ್ನು ಬಾಧಿಸುತ್ತಿದೆ.

ರಾಜಕೀಯ ಬೇಡುವುದು ಶ್ರೇಷ್ಠ ಮೌಲ್ಯಗಳನ್ನು; ತತ್ವಗಳಿಗೆ ಬದ್ಧನಾದ ನಾಯಕನ ವ್ಯಕ್ತಿತ್ವವನ್ನು, ಮಾತಿನಂತೆಯೇ ಇರುವ ಕೃತಿಯನ್ನು. ಇಂತಹ ವ್ಯಕ್ತಿ ಬಹಳ ಮಾತನಾಡುವ ಅವಶ್ಯಕತೆಯೇ ಇಲ್ಲ; ಮೆಲುದನಿಯಲ್ಲಿ ಮಾತನಾಡಿದರೂ ಜನರಿಗೆ ಕೇಳಿಸುತ್ತದೆ, ಅರ್ಥವಾಗುತ್ತದೆ. ನಮ್ಮ ದೇಹಕ್ಕೊಂದು ಆತ್ಮ ಇದೆ, ದೇಹ ನಡೆಸುವ ವ್ಯವಹಾರಗಳಿಗೂ ಆತ್ಮವಿದೆ. ಅವೆರಡೂ ‘ಒಂದುಗೂಡುವ’ ಕ್ಷಣ ದಕ್ಕುವುದು ಮಾತ್ರ ಸೌಭಾಗ್ಯ! ಆತ್ಮಸಾಕ್ಷಿಯ ಪ್ರತೀಕವಾದ ಮತದಾನವಾಗಲಿ, ಮತಯಾಚನೆಯಾಗಲಿ ಒಂದುಗೂಡುವುದು ಹಣದ ಸಾಂಗತ್ಯದಲ್ಲೆಂಬುದು ಪ್ರಜಾಪ್ರಭುತ್ವದ ವಿಪರ್ಯಾಸ.

ಬಡವರೂ ಅಲ್ಲದ, ಶ್ರೀಮಂತರೂ ಅಲ್ಲದ, ನೆಮ್ಮದಿಯನ್ನೇ ಕಾಣದ, ಸದಾ ಆತಂಕದಲ್ಲೇ ಕಾಲಕಳೆಯುವ ವರ್ಗವೆಂದರೆ ಅದು ‘ಮಧ್ಯಮವರ್ಗ.’ ಈ ವರ್ಗ ಸಮಾಜದಲ್ಲಿ ಸದಾ ಗೌರವಕ್ಕೆ ಪಾತ್ರರಾಗಬೇಕೆಂದು ಹಂಬಲಿಸುತ್ತಾ, ತನಗಿರುವ ಕಷ್ಟಗಳನ್ನು ಸಮಾಜದಿಂದ ಬಚ್ಚಿಡುತ್ತಾ ತೋರಿಕೆಯ ಸಂತೃಪ್ತಜೀವನದ ಮುಖವಾಡ ಧರಿಸಿ, ಮಕ್ಕಳ ವಿದ್ಯಾಭ್ಯಾಸ—ಮದುವೆ—ಮುಂಜಿ, ಹಬ್ಬಹರಿದಿನ, ಜಾತ್ರೆ, ರಥೋತ್ಸವ, ತೀರ್ಥಯಾತ್ರೆಗಳ ಖರ್ಚುವೆಚ್ಚಗಳನ್ನು ಸರಿದೂಗಿ ಸುವಲ್ಲಿಯೇ ಬದುಕಿನ ಮುಸ್ಸಂಜೆಯನ್ನು ತಲುಪುವ ಹೋರಾಟದ ಬದುಕು ಇವರದು. ಕೃಷಿಕರಾಗಿರಲಿ, ಸಣ್ಣಪುಟ್ಟ ವ್ಯಾಪಾರಿಗಳಾಗಿರಲಿ, ಸಾಮಾನ್ಯ ಉದ್ಯೋಗಸ್ಥರಾಗಿರಲಿ ಸರ್ಕಾರದ ನೀತಿನಿರ್ಧಾರಗಳಿಂದ ಹೆಚ್ಚು ತೊಂದರೆಯನ್ನು ಅನುಭವಿಸುವವರು ಇವರೇ.

ಕಳೆದ 20 ವರ್ಷಗಳಲ್ಲಿ ದೇಶದಲ್ಲಿ ಒಂದೇ ಒಂದು ಗಮನಾರ್ಹ ವಿದ್ಯಾರ್ಥಿ ಆಂದೋಲನ ಮೂಡಿಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ತಿಳಿವಳಿಕೆ ಬೆಳೆಯುವ ವ್ಯವಸ್ಥೆಯೇ ಇಲ್ಲ. ಯಾವುದಾದರೂ ನಾಯಕನೊಬ್ಬನ ಬೆಂಬಲಿಗರಾಗಿ ಮುಖವಾಡ ಅಥವಾ ಟೋಪಿಧರಿಸಿ ಬೀದಿಗಿಳಿಯುವುದಕ್ಕಷ್ಟೇ ವಿದ್ಯಾರ್ಥಿಗಳು ಸೀಮಿತರಾಗಿದ್ದಾರೆ. ಗಹನವಾದ ಅಧ್ಯಯನ, ವಿಚಾರವಿಮರ್ಶೆಯ ಪ್ರಕ್ರಿಯೆ ನಮ್ಮ ಸಂಸ್ಥೆಗಳಿಂದ; ನಮ್ಮ ವೈಯಕ್ತಿಕ ಜೀವನದಿಂದ ಮಾಯವಾಗಿಬಿಟ್ಟಿದೆ! ಗುರುವಿನ ಸಂಬಂಧವಿರುವುದು ಜ್ಞಾನದೊಂದಿಗೆ ಎಂಬುದನ್ನೇ ಮರೆತಿದ್ದೇವೆ!

ಇದು ನಮ್ಮ ಯುವಜನರಲ್ಲಿ ಉಂಟುಮಾಡಿದ ತಿರುಳಿಲ್ಲದ ಟೊಳ್ಳಾದ ಶೂನ್ಯತೆ ಈಗಿನ ರಾಜಕೀಯ ನಾಯಕರಲ್ಲೂ ಕಾಣಲು ಶುರುವಾಗಿದೆ. ಜನರಿಂದ ಸವಾಲು ಎದುರಾದಾಗ ನಾಯಕರೆನಿಸಿಕೊಂಡವರ ಚಿಂತನೆಯಲ್ಲಿ ಪ್ರಖರತೆ ಕಾಣಬೇಕು. ಆದರೆ ಈ ಹಿಂದಿನವರಿಗೆ ಹೋಲಿಸಿದರೆ ಹೆಚ್ಚು ಮೂರ್ಖತನದ ಮಾತುಗಳೇ ಕೇಳಿಬರುತ್ತಿವೆ. ವಿದ್ಯಾರ್ಥಿಗಳಿಂದ ರಾಜಕೀಯಪಕ್ಷಗಳ ಹೊರೆಹೊರುವ ಕೆಲಸಮಾಡಿಸುತ್ತಿದ್ದಾರೆ. ಹೀಗಿರುವಾಗ ಕಾಲೇಜುಗಳಿಂದ ಹೊರಬರುವ ವಿದ್ಯಾರ್ಥಿಗಳ ಪ್ರತಿಭೆ ಬೆಳಗುವುದಾದರೂ ಹೇಗೆ?

ಭಾರತ ತನ್ನ ಅಗಾಧ ಮಾನವಸಂಪನ್ಮೂಲವನ್ನು ಬಳಸಲೇ ಇಲ್ಲ. ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ನಮ್ಮ ಯುವಜನರೇ ಒಪ್ಪಿಕೊಳ್ಳ್ಳುವಂಥ ಪರಿಸ್ಥಿತಿಯನ್ನು ನಾವು ನಿರ್ಮಿಸಿದ್ದೇವೆ. ಈಗಲಾದರೂ ನಮ್ಮ ನೀತಿನಿರೂಪಣೆಗಳ ಬಗ್ಗೆ ಸಾರ್ವಜನಿಕವಾಗಿ ಹಾಗೂ ಮಾಹಿತಿಪೂರ್ಣವಾಗಿ ಚರ್ಚೆ ಆಗಬೇಕಿದೆ. ರಾಜಕಾರಣಿಗಳ ಹೇಳಿಕೆಗಳ ಮೇಲೆ ಭರವಸೆ ಇಡಬಾರದು; ಇದರಿಂದ ತಮ್ಮ ನಾಗರಿಕಪ್ರಜ್ಞೆಯೂ ನಾಶವಾಗುವ ಸಂಭವವಿದೆ ಎಂಬ ಸತ್ಯವನ್ನು ಮನನಮಾಡಿಕೊಳ್ಳುವ ಕಾಲ ನಮ್ಮ ಮುಂದಿದೆ! ತನ್ನ ನಾಲಿಗೆಯಲ್ಲಿ ಆಡಿದ ಮಾತಿಗೂ ಆತ್ಮದ ಮಾತಿಗೂ ಅಂತರವಿಲ್ಲದಂತೆ ಬದುಕಿದ ಗಾಂಧಿಯಂಥವರ ನಡತೆಯನ್ನು ರೂಢಿಸಿಕೊಳ್ಳಲು ಹೊರಟಾಗ ಮಾತ್ರ ಹಣವೇ ಚುನಾವಣೆಯ ಮೂಲಬಂಡವಾಳವಾಗದೆ ಪ್ರಜಾಪ್ರಭುತ್ವ ಉಳಿದೀತು.

* ಲೇಖಕರು ಮಾಜಿ ಮಂತ್ರಿಗಳು, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮