2nd May 2018

ಚುನಾವಣೆ: ಯಾರ ಹೊಣೆ?

ಚುನಾವಣೆಯೂ ಒಂದು ಪರೀಕ್ಷೆಯೇ. ಆದರೆ ಈ ಪರೀಕ್ಷೆಯನ್ನು ಎದುರಿಸುತ್ತಿರುವುದು ಪಕ್ಷಗಳು ಮತ್ತು ಪಕ್ಷದ ಅಭ್ಯರ್ಥಿಗಳಲ್ಲ. ಹಾಲ್ ಟಿಕೆಟ್ ಹಿಡಿದು ಹೊರಟಿರುವವರು ಮತದಾರರು.

ಪರೀಕ್ಷೆ ಅಭ್ಯರ್ಥಿಗಳಿಗಲ್ಲ, ಮತದಾರರಿಗೆ !

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಕಾಲ. ವರ್ಷಪೂರ್ತಿ ಕಲಿತ ಪಾಠಗಳ ಪರೀಕ್ಷೆ ಕೇವಲ ಮೂರು ಘಂಟೆಗಳಲ್ಲಿ ಆಗಲಿದೆ. ಈ ಮೂರು ಘಂಟೆಗಳಲ್ಲಿ ಎಡವಿದರೆ ಅದರ ಫಲಿತಾಂಶವನ್ನು ಮುಂದಿನ ಹಲವಾರು ವರ್ಷ ಅನುಭವಿಸಬೇಕಾಗಬಹುದು. ಅದೇ ಮೂರು ಘಂಟೆಗಳಲ್ಲಿ ಜಾಣತನ ತೋರಿ ಮೌಲ್ಯಮಾಪಕರನ್ನು ಮೆಚ್ಚಿಸಿದರೆ ಗುರಿ ಮುಟ್ಟುವ ಹಾದಿ ಸಲೀಸಾಗಬಹುದು.

ಚುನಾವಣೆಯೂ ಒಂದು ಪರೀಕ್ಷೆಯೇ. ಆದರೆ ಈ ಪರೀಕ್ಷೆಯನ್ನು ಎದುರಿಸುತ್ತಿರುವುದು ಪಕ್ಷಗಳು ಮತ್ತು ಪಕ್ಷದ ಅಭ್ಯರ್ಥಿಗಳಲ್ಲ. ಹಾಲ್ ಟಿಕೆಟ್ ಹಿಡಿದು ಹೊರಟಿರುವವರು ನಾವು ಮತ್ತು ನೀವು, ರಾಜ್ಯದ ದೇಶದ ಮತದಾರರು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಬರುವ ಮಲ್ಟಿಪಲ್ ಚಾಯ್ಸ್‍ನ ಉತ್ತರಗಳಂತೆ. ಇರುವ ನಾಲ್ಕು ಆಯ್ಕೆಗಳಲ್ಲಿ ನಾವು ಒಂದನ್ನು ಸರಿಯಾಗಿ ಆಯ್ದುಕೊಳ್ಳಬೇಕು. ನಮ್ಮ ಆಯ್ಕೆ ತಪ್ಪಾದರೆ ನೆಗೆಟಿವ್ ಮಾರ್ಕಿಂಗ್ ಕೂಡಾ ಇದೆ. ನಮ್ಮೆಲ್ಲರ ಸರಿ—ತಪ್ಪುಗಳ ಆಯ್ಕೆಯ ಆಧಾರದ ಮೇಲೆ ರಾಜ್ಯದ ಶಾಸನಸಭೆ ರಚನೆಯಾಗುತ್ತದೆ. ನೆಗೆಟಿವ್ ಮಾರ್ಕಿಂಗ್‍ಗಳೇ ಹೆಚ್ಚಾದರೆ ಶಾಸನಸಭೆಯ ಒಟ್ಟು ಮೊತ್ತ ಶೂನ್ಯದ ಕೆಳಗೂ ಹೋಗಬಹುದು. ಒಂದಷ್ಟಾದರೂ ಉತ್ತರಗಳು ಸರಿಯಾದರೆ ಶಾಸನಸಭೆ, ಮಂತ್ರಿಮಂಡಲ ಗುಣಾತ್ಮಕವಾಗಬಹುದು; ರಾಜ್ಯ ಮುಂದುವರೆಯಬಹುದು ಹಾಗೂ ಜನರ ಬಾಳು ಹಸನಾಗಬಹುದು. ಇಲ್ಲದೇ ಹೋದರೆ ಮುಂದಿನ ಪರೀಕ್ಷೆಗೆ ಮತ್ತೆ ಐದು ವರ್ಷ ಕಾಯುವ ಶಿಕ್ಷೆ ಮತ್ತು ಅಪಮಾನ ನಮ್ಮ ಮುಂದಿದೆ.

ಈ ಸಂಚಿಕೆಯಲ್ಲಿ ಚುನಾವಣೆಯೆಂಬ ನಮ್ಮ ಹೊಣೆಯ ಬಗ್ಗೆ, ಚುನಾವಣಾ ಪ್ರಜಾಪ್ರಭುತ್ವದ ದೂರಗಾಮಿ ಪರಿಣಾಮ ಮತ್ತು ತತ್ಕಾಲೀನ ಇತ್ಯರ್ಥಗಳ ಬಗ್ಗೆ ನಾಡಿನ ಹಿರಿಯ ಚಿಂತಕರು ಬರೆದಿದ್ದಾರೆ. ನಮ್ಮ ಚುನಾವಣಾ ವಿಧಾನಗಳನ್ನೇ ಪ್ರಶ್ನೆ ಮಾಡಿದ್ದಾರೆ. ಸಂಚಿಕೆಯ ಚರ್ಚೆಯನ್ನು ಮುಂದುವರೆಸುವ ಹೊಣೆ ನಿಮ್ಮ ಮೇಲಿದೆ. ಈ ಚರ್ಚೆಯಿಂದ ಪ್ರಜಾಪ್ರಭುತ್ವ ಪದ್ಧತಿಯ ಒಳಿತು—ಕೆಡಕುಗಳ ಜರಡಿ ಹಿಡಿಯುವ ಮುಖ್ಯ ಉದ್ದೇಶ ಸ್ವಲ್ಪವಾದರೂ ಈಡೇರೀತೆಂಬುದು ನಮ್ಮ ಆಶಯ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018