2nd March 2018

ರಾಮಮಂದಿರದ ಕನಸು

—ರಾಜೇಂದ್ರ ಪ್ರಸಾದ್

ಮತ್ತೊಮ್ಮೆ ಗುದ್ದಲಿ ಪೂಜೆ ರಾಮಮಂದಿರಕೆ ಮತ್ತೊಮ್ಮೆ ಘೋಷಣೆ, ಜಯಕಾರ ರಾಮಭದ್ರನಿಗೆ

ಮತ್ತದೇ

ಕರಪತ್ರ, ಕರಸೇವಕರು ಸಿದ್ದರಾಗುತ್ತಿದ್ದಾರೆ. ಈ ಬಾರಿ ಹೊಸ ಬೆಳೆ, ಹೊಸ ಕುಯಿಲು, ಗೊಬ್ಬರ. ಮತ್ತಷ್ಟು ಮಂದಿ ಹೊಸಬಟ್ಟೆ ತೊಡುತ್ತಿದ್ದಾರೆ, ಅಡಿಗಡಿಗೆ ಊರುಗಳಲ್ಲಿ ಇಟ್ಟಿಗೆಯ ಹೊರಲು ಮೈತುಂಬಾ ಆಯುಧಗಳು ಬಾಯ್ತುಂಬ ಬೈಗುಳಗಳು ಮಗದಷ್ಟು ಸಂಗ್ರಹವ ಹೊತ್ತು ಸಾವಿರ ಮೈಲು.

ವಣಿಕರ ಮನೆಗಳಿಗೆ ದಾನಪಾತ್ರೆಯ ಪಾದಯಾತ್ರೆ ಹಳೆಯ ಲೆಕ್ಕಪತ್ರಗಳಿಗೆ ಈಗಿಲ್ಲ ಸಮಯಸಾವಧಾನ! ಇಟ್ಟಿಗೆ ಗೂಡುಗಳು, ಒಣ ಸೌದೆ ಸಿದ್ಧವಾಗಬೇಕಿದೆ ಬೆಂಕಿ ಇಡುವುದಕೆ ಮಹೂರ್ತವೇನಿಲ್ಲ ಕಾವುಗೊಂಡ ತಳ ಹೊತ್ತುವುದು ತಾನಾಗಿ ನಿರುಮ್ಮಳ

ಬಣ್ಣ ಬದಲಿಸದ ಬಾವುಟ, ಬರಿ ಭಾಷಣ ಉಳ್ಳವರ ಮನೆಯೊಳಗೇ ಆಳುವವರ ಸರಸಸಾಮಗಾನ ಉಳುವವನ ಮನೆಯಲಿ ಹೊತ್ತದ ಒಲೆಯ ಆರ್ತನಾದ ನಡುವೆ ಮತ್ತೊಮ್ಮೆ ಗುದ್ದಲಿ ಪೂಜೆ ರಾಮಮಂದಿರಕೆ.

ಒಡೆದ ಮಸೀದಿಯ ತಳದಲ್ಲಿ ಹುಡುಕಿ ರಾಮನನ್ನು ತಂದು ಇಟ್ಟಿಗೆಗಳಲಿ ಕೂರಿಸಿದ್ದಾಯಿತು ಜನರೆದೆಗಳನು ಕೊರೆದು ಕಲ್ಲುಕಂಬಗಳ ಕೆತ್ತಿಸಿಯಾಯಿತು. ಬೇಡಿ ಬೊಕ್ಕಸವನು ತುಂಬಿಸಿದ್ದಾಯಿತು.

ರೈಲುಗಳು ಹೊರಡಲು ಸಿದ್ಧವಾಗಿವೆ. ಇಟ್ಟಿಗೆ ಹೊರುವ ತಲೆಯ ಮೇಲೆ ಸಿಂಬಿ ಕುಳಿತಿವೆ ಖಡ್ಗ, ತ್ರಿಶೂಲಗಳ ದಿಬ್ಬಣ ಹೊರಟಿದೆ. ಎಲ್ಲೆಡೆಯಿಂದ ಅಯೋಧ್ಯೆಯೆಡೆಗೆ

ಅಲ್ಲಿ

ಎಂದೂ ಕಟ್ಟಿರದ, ಕಟ್ಟದ, ಕಟ್ಟಲಾಗದ ಅದಾಗಲೇ ಕಟ್ಟಂತ ಕೆಟ್ಟಕನಸಿನಲಿ ಸರಯೂ ತೀರದ ಅಯೋಧ್ಯೆ ಕನವರಿಸುತಿದೆ,

“ಮಾ ನಿಷಾದ ... ‘’

ಇಲ್ಲಿ

ನಮ್ಮ ರಾಮ ನಾಮದ ಚಿಲುಮೆಯಲಿ, ಬೆಟ್ಟದಲ್ಲಿ, ಗುಹೆಯಲ್ಲಿ ನದಿಗುಂಟದಲಿ ಗುಡಿಗುಂಡಾರಗಳಲಿ ಎಲ್ಲೆಲ್ಲೂ ತುಂಬಿಕೊಂಡಿದ್ದಾನೆ ನಮ್ಮೊಳಗೂ ಹುಟ್ಟಿನ ಹಂಗಿರದೆ ಹಾಯಾಗಿ. ಕಾಪಾಡಿಕೊಳ್ಳಬೇಕಿದೆ ಹಾಗೆ ಕರುಣದಿಂದವನ ಇಟ್ಟಿಗೆಗಳಿಗೆ ಮಾರಿಕೊಳ್ಳದೆ ಎದೆಯ ಗೂಡೊಳಗೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018