2nd ಮಾರ್ಚ್ ೨೦೧೮

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ವಿನಯ್ ಸೀತಾಪತಿ

ಬಹಳ ಪ್ರಶಂಸೆಗೆ ಒಳಗಾದ, ವಿನಯ್ ಸೀತಾಪತಿ ರಚಿಸಿದ ಈ ಕೃತಿಯು ಮಾಜಿ ಪ್ರಧಾನಿ ನರಸಿಂಹರಾವ್ ಅವರ ಸುದೀರ್ಘ ರಾಜಕೀಯ ಜೀವನವನ್ನು ಕಟ್ಟಿಕೊಡುತ್ತದೆ. ‘ಹಾಫ್ ಲಯನ್’ ಕೃತಿಯ ಏಳನೆಯ ಅಧ್ಯಾಯದ ಆಯ್ದ ಭಾಗಗಳು ನಿಮಗಾಗಿ.

ನರಸಿಂಹರಾವ್ ಅವರು ಪ್ರಧಾನಮಂತ್ರಿಗಳಾದ ಎರಡು ವಾರಗಳ ನಂತರ, ದಕ್ಷಿಣ ಬಾಂಬೆಯ ರಿಸರ್ವ್ ಬ್ಯಾಂಕಿನ ಕಛೇರಿಗಳಿಂದ ಬೆಂಗಾವಲಿದ್ದ ವಾಹನಗಳ ಸಮೂಹವೊಂದು ಹೊರಟಿತು. ಆ ಶಸ್ತ್ರಸಜ್ಜಿತ ವಾಹನಗಳಿಗಿದ್ದ ಭದ್ರತೆ ಯಾವುದೆ ಸರ್ಕಾರದ ಮುಖ್ಯಸ್ಥನಿಗೆ ದೊರಕುವುದಕ್ಕಿಂತ ಕಡಿಮೆಯದಾಗಿರಲಿಲ್ಲ. ಏಕೆಂದರೆ ಅವುಗಳೊಳಗೆ ಭಾರತದ ಗೌರವ, ಅಂದರೆ ಸುಮಾರು 21 ಟನ್ನುಗಳಷ್ಟು ಶುದ್ಧ ಚಿನ್ನವಿತ್ತು. ಈ ವಾಹನಗಳು ಉತ್ತರದಿಕ್ಕಿನಲ್ಲಿ 35 ಕಿಮೀ ಚಲಿಸಿ, ಸಹಾರ ವಿಮಾನ ನಿಲ್ದಾಣದಲ್ಲಿ ಕಾಯ್ದು ನಿಂತಿದ್ದ ಹೆವಿಲಿಫ್ಟ್ ಕಾರ್ಗೊ ಏರ್‍ಲೈನ್ಸಿನ ವಿಮಾನದ ಬಳಿ ಸಾಗಿತು. ಆ ಚಿನ್ನವು ವಿಮಾನದ ಮೂಲಕ ಲಂಡನ್ನಿಗೆ ತೆರಳಿ, ಬ್ಯಾಂಕ್ ಆಫ್ ಇಂಗ್ಲೆಂಡಿನ ಖಜಾನೆಯನ್ನು ಸೇರಿತು. ಇದಕ್ಕೆ ಪ್ರತಿಯಾಗಿ ನರಸಿಂಹರಾವ್ ಸರ್ಕಾರವು ಡಾಲರುಗಳನ್ನು ಪಡೆದು, ಆ ಮೂಲಕ ಭಾರತವು ತೀರಿಸಬೇಕಾಗಿದ್ದ ಸಾಲದ ಕಂತನ್ನು ಕಟ್ಟಲು ಸಾಧ್ಯವಾಯಿತು. ಚಿನ್ನಕ್ಕೆ ಭಾರತದಲ್ಲಿ ಭಾವನಾತ್ಮಕತೆ ಮೌಲ್ಯವಿದೆ. ಹಾಗಾಗಿ ಈ ಒಪ್ಪಂದದ ಸುದ್ದಿ ತಿಳಿದಾಗ ಕೇಳಿಬಂದ ಸಾರ್ವಜನಿಕ ಕೋಲಾಹಲದ ಜೊತೆಗೆ ಖಾಸಗಿ ಅವಮಾನದ ಭಾವನೆಯೂ ಸೇರಿತ್ತು. 1991ರಲ್ಲಿ ಅರ್ಥವ್ಯವಸ್ಥೆಯು ಎಷ್ಟು ಹದಗೆಟ್ಟಿತೆಂದರೆ ಭಾರತವು ತನ್ನಕುಟುಂಬದ ಆಭರಣಗಳನ್ನೂ ಒತ್ತೆಯಿಡಬೇಕಿತ್ತು.

1991ರ ಆರ್ಥಿಕ ಬಿಕ್ಕಟ್ಟು ಭಾರತವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿತ್ತು. ಆದರೆ ಆ ಸನ್ನಿಹಿತ ಅನಾಹುತಕ್ಕಿಂತ ಮುನ್ನವೆ ಪ್ರಧಾನಮಂತ್ರಿ ರಾವ್ ಅವರು ಮುನ್ನಡೆಸಬೇಕಾದ ಭಾರತವು ದುರಸ್ತಿಮಾಡಲಾಗದ ಸ್ಥಿತಿಯಲ್ಲಿತ್ತು. ಸರ್ಕಾರಿ ನಿಯಂತ್ರಣದ ಒಂದು ವಿಶಾಲ ವ್ಯವಸ್ಥೆಯು ಅರ್ಥವ್ಯವಸ್ಥೆಯ ದೊಡ್ಡ ಕ್ಷೇತ್ರಗಳನ್ನು ಕೇವಲ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮೀಸಲಿಟ್ಟಿತ್ತು, ಖಾಸಗಿ ಉದ್ಯಮಿಗಳಿಗೆ ಅಡಚಣೆಗಳನ್ನು ಒಡ್ಡುತ್ತಿತ್ತು ಮತ್ತು ಭಾರತವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಪ್ರತ್ಯೇಕಿಸುತ್ತಿತ್ತು. ಇದರ ಪರಿಣಾಮವೆಂದರೆ ಕಡಿಮೆ ಅಭಿವೃದ್ಧಿ, ಎಲ್ಲೆಡೆಯೂ ಬಡತನ, ಸಣ್ಣ ಮಧ್ಯಮವರ್ಗ, ಮುರಿದುಬಿದ್ದಿದ್ದ ಮೂಲಸೌಕರ್ಯಗಳು ಮತ್ತು ಬಳಕೆದಾರನಿಗಿದ್ದ ಕೆಲವೆ ಆಯ್ಕೆಗಳು. ಈ ವ್ಯವಸ್ಥೆಯು ಸ್ವಾಭಾವಿಕವಾಗಿಯೆ ಅಸ್ಥಿರವಾದುದಾಗಿತ್ತು ಮತ್ತು ಒಮ್ಮೊಮ್ಮೆ ವ್ಯವಸ್ಥೆಯೆ ಕುಸಿಯುತ್ತಿತ್ತು. ಈ ಹಿಂದೆ 1965—67, 1973—75 ಮತ್ತು 1979—81ರಲ್ಲಿ ಬಿಕ್ಕಟ್ಟುಗಳು ಸಂಭವಿಸಿದ್ದವು. ಆದರೆ ಇವುಗಳಾವುವೂ 1991ರಲ್ಲಿ ಭಾರತವು ಎದುರಿಸಿದ ಬಿಕ್ಕಟ್ಟಿನಷ್ಟು ಭಯಾನಕವಾಗಿರಲಿಲ್ಲ.

ಆ ಚಿನ್ನವು ವಿಮಾನದ ಮೂಲಕ ಲಂಡನ್ನಿಗೆ ತೆರಳಿ, ಬ್ಯಾಂಕ್ ಆಫ್ ಇಂಗ್ಲೆಂಡಿನ ಖಜಾನೆಯನ್ನು ಸೇರಿತು. ಇದಕ್ಕೆ ಪ್ರತಿಯಾಗಿ ನರಸಿಂಹರಾವ್ ಸರ್ಕಾರವು ಡಾಲರುಗಳನ್ನು ಪಡೆದು, ಆ ಮೂಲಕ ಭಾರತವು ತೀರಿಸಬೇಕಾಗಿದ್ದ ಸಾಲದ ಕಂತನ್ನು ಕಟ್ಟಲು ಸಾಧ್ಯವಾಯಿತು.

ಪ್ರಧಾನಮಂತ್ರಿ ನರಸಿಂಹರಾವ್ ಅವರು ಎದುರಿಸಿದ ಹಣಕಾಸಿನ ಅವ್ಯವಸ್ಥೆಯನ್ನು ಹೀಗೆ ಅತ್ಯಂತ ಸರಳವಾಗಿ ವಿವರಿಸಬಹುದು: ಜೂನ್ 1991ರ ವೇಳೆಗೆ ಭಾರತದ ಬಳಿ ಕೇವಲ ಎರಡು ವಾರಗಳ ಆಮದುಗಳಿಗೆ ಪಾವತಿಮಾಡುವಷ್ಟು ವಿದೇಶಿ ವಿನಿಮಯವಿತ್ತು. ಇದಕ್ಕೆ ಪ್ರತಿಯಾಗಿ ಆ ಮೊತ್ತದ ಆರು ಪಟ್ಟು —ಅಂದರೆ ಮೂರು ತಿಂಗಳುಗಳ ಆಮದಿಗೆ ಸಾಕಾಗುವಷ್ಟು —ವಿದೇಶಿ ವಿನಿಮಯವನ್ನು ಕನಿಷ್ಟ ಸುರಕ್ಷಿತ ಮಟ್ಟವೆಂದು ಪರಿಗಣಿಸಲಾಗುತ್ತಿತ್ತು. ಅಂತರರಾಷ್ಟ್ರೀಯ ವ್ಯಾಪಾರದ ಪ್ರಾಧ್ಯಾಪಕರಾಗಿದ್ದ (ನಿಯೋಜಿತ ಹಣಕಾಸು ಸಚಿವ) ಮನಮೋಹನ್ ಸಿಂಗರಿಗೆ ಭಾರತಕ್ಕೆ ಏನು ಕಾದಿದೆ ಎನ್ನುವುದು ಗೊತ್ತಿತ್ತು. 1982ರಲ್ಲಿ ಮೆಕ್ಸಿಕೊ ತನ್ನ ಬಾಹ್ಯ ಸಾಲದ ಪಾವತಿಯನ್ನು ಮಾಡಲಾಗಲಿಲ್ಲ. ಇದರಿಂದ ಮುಂದಿನ ಆರು ವರ್ಷಗಳ ಕಾಲ ಆ ದೇಶವು ಬಂಡವಾಳದ ನಷ್ಟ, ಹಣದುಬ್ಬರ ಮತ್ತು ನಿರುದ್ಯೋಗಗಳಿಂದ ದುರ್ಬಲಗೊಂಡಿತು. 1989ರಲ್ಲಿ ಈ ಬಿಕ್ಕಟ್ಟು ಕೊನೆಗೊಳ್ಳುವ ಹೊತ್ತಿಗೆ, ಅಲ್ಲಿನ ನಿಜ ವೇತನ (ಡಿeಚಿಟ ತಿಚಿges) ಅರ್ಧವಾಗಿತ್ತು ಎಂದು ಸಿಂಗ್ ಹೇಳುತ್ತಿದ್ದರು.

ಮೂರು ಪರಸ್ಪರ ಸಂಬಂಧಹೊಂದಿದ ಕಾರಣಗಳು ಭಾರತದ ಡಾಲರು ಮೀಸಲು ನಿಧಿ ಕಡಿಮೆಯಾಗಲು ಕಾರಣವಾಗಿದ್ದವು. 1990ರ ಗಲ್ಫ್ ಯುದ್ಧದಿಂದ ಭಾರತವು ಪ್ರಪಂಚದ ಮಾರುಕಟ್ಟೆಯಲ್ಲಿ ಕೊಳ್ಳುತ್ತಿದ್ದ ಪೆಟ್ರೋಲಿಯಮ್ ತೈಲದ ಬೆಲೆಯು ಮೂರು ಪಟ್ಟು ಹೆಚ್ಚಿತು. ಜೊತೆಗೆ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿದ್ದ ಹಣದ ಮೊತ್ತವನ್ನು ಕಡಿಮೆಯಾಗಿತ್ತು. ಎರಡನೆಯ ಕಾರಣವೆಂದರೆ ವಿದೇಶಗಳಲ್ಲಿ ವಾಸಿಸುತ್ತಿದ್ದ ಭಾರತೀಯರು, ದೆಹಲಿಯಲ್ಲಿನ ರಾಜಕೀಯ ಅಸ್ಥಿರತೆಯಿಂದ ಆತಂಕಿತರಾಗಿ, ಭಾರತೀಯ ಬ್ಯಾಂಕುಗಳಿಂದ ಸುಮಾರು 900 ಮಿಲಿಯನ್ ಡಾಲರುಗಳಷ್ಟು ಠೇವಣಿಗಳನ್ನು 1991ರ ಏಪ್ರಿಲ್ ಮತ್ತು ಜೂನ್ ತಿಂಗಳುಗಳ ನಡುವೆ ವಾಪಸು ಪಡೆದರು. ಭಾರತದ ವಿದೇಶಿ ವಿನಿಮಯದ ಮೇಲಿದ್ದ ಮೂರನೆಯ ಒತ್ತಡವೆಂದರೆ ರಾಜೀವರ ಆಡಳಿತದ ಸಮಯದಲ್ಲಿ ಪಡೆದಿದ್ದ ಅಜಾಗರೂಕ ಸಾಲಗಳು. ಅಲ್ಪಾವಧಿಯ ಈ ಸಾಲಗಳನ್ನು 1991ರ ವೇಳೆಗೆ ಮರುಪಾವತಿ ಮಾಡಬೇಕಿತ್ತು.

ಸಾಲದ ಕಂತನ್ನು ಉಪೇಕ್ಷಿಸದೆ ಮರುಪಾವತಿ ಮಾಡಲೆಂದು, ರಾವ್ ಅವರಿಗಿಂತ ಹಿಂದೆ ಪ್ರಧಾನಮಂತ್ರಿಗಳಾಗಿದ್ದ ಚಂದ್ರಶೇಖರ್ ಅವರು 1991ರ ಪ್ರಾರಂಭದಲ್ಲಿ ಐ.ಎಮ್.ಎಫ್.ನಿಂದ (ಅಂತರರಾಷ್ಟ್ರೀಯ ಹಣಕಾಸು ನಿಧಿ) ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿ ಮಾಡಲು ಭಾರತಕ್ಕಿದ್ದ ಶಕ್ತಿಯ ಬಗ್ಗೆ ನಂಬಿಕೆ ಎಷ್ಟು ಕಡಿಮೆಯಿತ್ತೆಂದರೆ, ಐ.ಎನ್.ಎಫ್. ಭಾರತಕ್ಕೆ ಅದರ ಚಿನ್ನವನ್ನು ಒತ್ತೆಯಿಡುವಂತೆ ಕೇಳಿತ್ತು. ಆ ಸಾಲವು ಭಾರತದ ಪಾವತಿಗಳ ಸಮತೋಲನ (Balance of Payments) ಬಿಕ್ಕಟ್ಟನ್ನು ಪರಿಹರಿಸಲು ಸಾಕಾಗಲಿಲ್ಲ. 1991ರ ಮಧ್ಯಭಾಗದ ವೇಳೆಗೆ ಭಾರತಕ್ಕೆ ಎರಡನೆಯ ಸಾಲದ ಅಗತ್ಯ ಬಿದ್ದಿತ್ತು. ಈಗ ಐ.ಎಮ್.ಎಫ್. ಸಾಲ ನೀಡಲು ನಿರಾಕರಿಸಿತು. ನರಸಿಂಹರಾವ್ ಅವರು ಹೇಳಿದಂತೆ: ‘1991ರ ಏಪ್ರಿಲ್‍ನಲ್ಲಿ ಐ.ಎಮ್.ಎಫ್. ಮತ್ತು ವಿಶ್ವಬ್ಯಾಂಕುಗಳೆರಡರ ಜೊತೆಗೂ ಚರ್ಚೆಗಳು ನಡೆದವು. ಆ ಚರ್ಚೆಗಳ ವರದಿಯೇನೆಂದರೆ ಮೂಲಭೂತ ಸುಧಾರಣೆಗಳನ್ನು ಕೈಗೊಳ್ಳುವ ತನಕ ಯಾವುದೆ ಹೊಸ ಅನುದಾನದ ಸಾಧ್ಯತೆಗಳಿಲ್ಲ.’ಐ.ಎಮ್.ಎಫ್.ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಗೋಪಿ ಅರೋರಾ ’ನಮ್ಮ ವಿಶ್ವಾಸಾರ್ಹತೆಯು ಅತ್ಯಂತ ಕೆಳಮಟ್ಟದಲ್ಲಿದೆ’ಎಂದು ಜೈರಾಮ್ ರಮೇಶ್ ಅವರಿಗೆ ಹೇಳಿದರು.

ಗಲ್ಫ್ ಯುದ್ಧ, ವಿದೇಶಿ ವಿನಿಮಯ ಠೇವಣಿಗಳನ್ನು ವಾಪಸು ಪಡೆದದ್ದು ಮತ್ತು ಅಲ್ಪಾವಧಿಯ ಸಾಲಗಳು ಈ ಬಿಕ್ಕಟ್ಟಿನ ತಕ್ಷಣದ ಕಾರಣಗಳಾಗಿದ್ದವು. ಭಾರತೀಯ ಅರ್ಥವ್ಯವಸ್ಥೆಯ ಆಳವಾದ ಸಮಸ್ಯೆಯೆಂದರೆ ಅದಕ್ಕಿದ್ದ ದುರ್ಬಲ ತಳಪಾಯ. ಹಾಗಾಗಿ ಆಗಾಗ ಘಾಸಿಯುಂಟು ಮಾಡಬಹುದಾದ ನಡುಕಗಳಿಗೆ ಅದು ಬಲಿಯಾಗುತ್ತಿತ್ತು. ಪ್ರಭುತ್ವವೆ ನಿಯಂತ್ರಿಸುತ್ತಿದ್ದ ಅರ್ಥವ್ಯವಸ್ಥೆಯು ನಿರಂತರವಾಗಿ ಅದಕ್ಷವಾಗಿತ್ತು. ಹೂಡಿದ ಬಂಡವಾಳಕ್ಕೆ ದೊರಕುತ್ತಿದ್ದ ಪ್ರತಿಫಲ ಅತ್ಯಂತ ಕಡಿಮೆಯದಾಗಿತ್ತು. ದುರ್ಬಲವಾದ ಕೈಗಾರಿಕಾ ಅಭಿವೃದ್ಧಿ, ಕಡಿಮೆ ರಫ್ತು ಮತ್ತು ಹೆಚ್ಚಾಗಿದ್ದ ಹಣದುಬ್ಬರಗಳೆಲ್ಲವು ಈ ದೀರ್ಘಕಾಲೀನ ಅಸ್ವಸ್ಥತೆಯ ಲಕ್ಷಣಗಳಾಗಿದ್ದವು. ವಿಪರ್ಯಾಸವೆಂದರೆ ಭಾರತೀಯ ಶೈಲಿಯ ಸಮಾಜವಾದವು ಶಿಕ್ಷಣ, ಆರೋಗ್ಯ ಮತ್ತು ಬಡವರ್ಗಗಳಿಗೆ ಆಹಾರವನ್ನು ಒದಗಿಸಲು ಸಹ ಹೆಚ್ಚಿನ ಹಣವನ್ನು ವ್ಯಯಿಸಲಿಲ್ಲ.

ಅರ್ಥವ್ಯವಸ್ಥೆಯ ಮೇಲಿನ ಪ್ರಭುತ್ವದ ನಿಯಂತ್ರಣವನ್ನು ಸಡಿಲಿಸಬೇಕೆನ್ನುವ ವಾದವು ಜೂನ್ 1991ರ ಒಂದೇ ದಿನದಲ್ಲಿ ಈ ಮೊದಲು ದೇಶದೊಳಗಿನ ಉದ್ದಿಮೆಗಳ ಹಿತಾಸಕ್ತಿಗಳನ್ನು ಕಾಯಬೇಕೆಂದು ವಾದಿಸುತ್ತಿದ್ದ ನರಸಿಂಹರಾವ್ ಅವರ ಮನವೊಲಿಸಿತು. ಆದರೆ ಉದಾರೀಕರಣದ ಪರವಾದ ವಾದವು ಕನಿಷ್ಠ ಹತ್ತು ವರ್ಷಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೂ ಸಹ, ಲೈಸನ್ಸರಾಜ್‍ನ ಮೂಲಕ ಲಾಭ ಪಡೆಯುತ್ತಿದ್ದ ಪ್ರಬಲ ಹಿತಾಸಕ್ತಿ ಗುಂಪುಗಳು ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು ಅವರ ಮೂವರು ಉತ್ತರಾಧಿಕಾರಿಗಳು ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸುವುದನ್ನು ತಡೆದಿದ್ದರು. ಈಗ ನರಸಿಂಹರಾವ್ ಅವರು ತಮ್ಮ ದೇಶಕ್ಕೆ ಅಗತ್ಯವಾದ ಆರ್ಥಿಕ ಬದಲಾವಣೆಗಳನ್ನು ಕಲ್ಪಿಸಿಕೊಳ್ಳುತ್ತಿದ್ದಂತೆ, ತಾನು ಹತ್ತಿಳಿಯಬೇಕಿರುವ ಅಡ್ಡಗಟ್ಟು (ಬ್ಯಾರಿಕೇಡ್)ಗಳ ಬಗ್ಗೆ ಕೂಡ ಚಿಂತಿಸಲಾರಂಭಿಸಿದರು.

ರಾವ್ ಅವರ ಪಕ್ಷವು ಪಾರ್ಲಿಮೆಂಟಿನಲ್ಲಿ ಬಹುಮತವನ್ನು ಹೊಂದಿರಲಿಲ್ಲ ಎನ್ನುವುದು ಅವರಿಗಿದ್ದ ಮೊದಲ ಅಡಚಣೆಯಾಗಿತ್ತು. 1980ರಲ್ಲಿ ಇಂದಿರಾರಿಗೆ ಹಾಗೂ 1984ರಲ್ಲಿ ರಾಜೀವರಿಗೆ ಇದ್ದಂತೆ, ರಾವ್ ಅವರಿಗೆ ತಮ್ಮ ನೀತಿಆದ್ಯತೆಗಳನ್ನು ಹೇರಲು ಸಂಖ್ಯೆಗಳ ಬೆಂಬಲವಿರಲಿಲ್ಲ. ಈ ಶಾಸಕಾಂಗದ ಪ್ರತಿಬಂಧಕವು ಸುಧಾರಣೆಗಳನ್ನು ಮಾಡಲು ಬಯಸಿದ್ದ ಆ ಕಾಲದ ಇತರ ಯಾವುದೆ ಜಾಗತಿಕ ನಾಯಕನಿಗಿಂತ ನರಸಿಂಹರಾವ್ ಅವರನ್ನು ರಾಜಕೀಯವಾಗಿ ಅಶಕ್ತರನ್ನಾಗಿಸಿತ್ತು. ಒಮ್ಮೆ ಚೈನಾದ ಕಮ್ಯುನಿಸ್ಟ್ ಪಕ್ಷದ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ಡೆಂಗ್ ಕ್ಸಾಪಿಂಗರ ಅಧಿಕಾರದ ಮೇಲೆ ಹೆಚ್ಚಿನ ತಡೆಗಳಿರಲಿಲ್ಲ. ಈ ಮಾತು ಪೂರ್ವಏಷ್ಯಾದ ಬಲಿಷ್ಠ ನಾಯಕರುಗಳಾದ ಸಿಂಗಾಪುರದ ಲೇ ಕುವಾನ್ ಯುವ್ ಮತ್ತು ದಕ್ಷಿಣ ಕೊರಿಯಾದ ಪಾರ್ಕ್ ಚುಂಗ್—ಹೀ ಅವರುಗಳ ವಿಷಯದಲ್ಲಿಯೂ ಸತ್ಯ. ಮಾರ್ಗರೆಟ್ ಥ್ಯಾಚರ್ ಮತ್ತು ರೊನಾಲ್ಡ್ ರೇಗನ್ ಅವರುಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ತಪಾಸಣೆ ಮತ್ತು ಸಮತೋಲನಗಳ ನಡುವೆಯೇ ಕಾರ್ಯ ನಿರ್ವಹಿಸುತ್ತಿದ್ದರೂ ಸಹ, ಅವರಿಬ್ಬರೂ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದ್ದರು.

ವಿಟೊ ಅಧಿಕಾರವನ್ನು ಪಡೆದ ಆಟಗಾರರೆ ಇದ್ದ, ಹತೋಟಿ ಮೀರಿದ ಪ್ರಜಾಪ್ರಭುತ್ವವೊಂದರಲ್ಲಿ ಅಲ್ಪಸಂಖ್ಯಾತ ಸರ್ಕಾರವನ್ನು ನಡೆಸುತ್ತಿದ್ದ ನರಸಿಂಹರಾವ್ ಅವರಿಗೆ ಈ ಯಾವ ಸೌಕರ್ಯಗಳೂ ಇರಲಿಲ್ಲ.

ಆರ್ಥಿಕ ಸುಧಾರಣೆಗಳಿಗಿದ್ದ ಎರಡನೆಯ ಅಡಚಣೆಯು ‘ಬಾಂಬೆ ಕ್ಲಬ್’ ಎಂದೆ ಪ್ರಖ್ಯಾತವಾಗಿದ್ದ ಮತ್ತು ಹಲವಾರು ಲಾಬಿ ಗುಂಪುಗಳ ಮೂಲಕ ಪ್ರತಿನಿಧಿಸಲ್ಪಡುತ್ತಿದ್ದ ಸ್ಥಾಪಿತ ಉದ್ದಿಮೆದಾರರುಗಳು. ಲೈಸನ್ಸ್‍ನ್ಸ್‍ನ್ಸ್‍ರಾಜ್ ವ್ಯವಸ್ಥೆಯಲ್ಲಿ ಈ ಗುಂಪುಗಳು ಲಾಭ ಗಳಿಸಿದ್ದವು. ಮತ್ತೆ ಕೆಲವರು ನಿಯಂತ್ರಣಗಳು ಹೋಗಬೇಕು ಎಂದರೂ ಸಹ, ಅಂತರರಾಷ್ಟ್ರೀಯ ಸ್ಪರ್ಧೆಯ ಬಗ್ಗೆ ಆತಂಕ ಹೊಂದಿದ್ದರು. ಮನಮೋಹನ್ ಸಿಂಗ್ ಹೇಳುವಂತೆ, ‘ಸ್ಪರ್ಧೆಯು ಅದಕ್ಷರನ್ನು ಘಾಸಿಗೊಳಿಸುತ್ತದೆ. ಆದುದರಿಂದ ಆರ್ಥಿಕ ವ್ಯವಸ್ಥೆಯನ್ನು ತೆರೆಯುವುದರಿಂದ, ದೇಶದೊಳಿಗಿನಿಂದ ಮತ್ತು ಹೊರಗಿನಿಂದ ಸ್ಪರ್ದೆಯನ್ನು ತರುವುದರಿಂದ ಕೆಲವರಿಗೆ ನಷ್ಟವಾಗುತ್ತದೆ.’ ಉದ್ಯಮದಿಂದ ಬಂದ ಸ್ಪಷ್ಟ ಸಂದೇಶವನ್ನು ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ನೆನಪಿಸಿಕೊಳ್ಳುತ್ತಾರೆ. ‘ಆಂತರಿಕ ಉದಾರೀಕರಣ ಇಂದು ಮತ್ತು ಹೊರಗಿನ ಉದಾರೀಕರಣ ನಂತರ.’

ಮಾಧ್ಯಮಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಭಾವಶಾಲಿಗಳಾಗಿದ್ದ ಎಡಪಂಥೀಯ ಬುದ್ಧಿಜೀವಿಗಳು ಮಾರುಕಟ್ಟೆಪರ ನೀತಿಗಳಿಗೆ ಇದ್ದ ಮತ್ತೊಂದು ಅಡಚಣೆಯಾಗಿದ್ದರು. 1966ರಲ್ಲಿ ಇವರು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ರೂಪಾಯಿಯ ಅಪಮೌಲ್ಯೀಕರಣದ ವಿಚಾರದಲ್ಲಿ ಕಟುವಾಗಿ ಟೀಕಿಸಿದ್ದರು. ಪಾರ್ಲಿಮೆಂಟಿನೊಳಗೆ ಮತ್ತು ಕಾಂಗ್ರೆಸ್ ಪಾರ್ಟಿಯಲ್ಲಿ ಸಹ ಅವರು ಪ್ರಭಾವ ಹೊಂದಿದ್ದರು. ನರಸಿಂಹರಾವ್ ಸಹ ಅವರನ್ನು ಗಂಭೀರವಾಗಿ ಪರಿಗಣಿಸಿದ್ದರು.

ಆದರೆ ಅರ್ಥವ್ಯವಸ್ಥೆಯನ್ನು ಮುಚ್ಚಿಬಿಟ್ಟಿದ್ದ ಎತ್ತರದ ಬೇಲಿಯೆಂದರೆ ಬಹುಶಃ ಜವಾಹರಲಾಲ್ ನೆಹ್ರೂ ಮತ್ತು ಇಂದಿರಾ ಗಾಂಧಿಯವರ ಪಕ್ಷವಾಗಿತ್ತು. ಸಮಾಜವಾದಕ್ಕೆ ತನ್ನ ಬದ್ಧತೆಯನ್ನು ಸುಲಭವಾಗಿ ಬಿಟ್ಟುಕೊಡುವಂತೆ ಕಾಂಗ್ರೆಸ್ ಕಾಣಿಸಿಕೊಳ್ಳುವಂತಿರಲಿಲ್ಲ. 1991ರ ಕಾಂಗ್ರೆಸ್ ಪ್ರಣಾಳಿಕೆಯೂ ಸಹ ರಾಜೀವ್ ಗಾಂಧಿಯವರು ಬದುಕುಳಿದು ಮತ್ತೆ ಪ್ರಧಾನಮಂತ್ರಿಯಾಗಿದ್ದರೆ ಮೂಲಭೂತ ಸುಧಾರಣೆಗಳನ್ನು ಮಾಡುತ್ತಿದ್ದರು ಎನ್ನುವುದನ್ನು ಸೂಚಿಸುತ್ತಿರಲಿಲ್ಲ. ‘ಕ್ರಿಯಾತ್ಮಕ ಮತ್ತು ಲಾಭಸಾಧನೆಗೆ ಬದ್ಧವಾಗಿದ್ದ ಸಾರ್ವಜನಿಕ ವಲಯ’ದಿಂದಲೇ ಅರ್ಥವ್ಯವಸ್ಥೆಯನ್ನು ಸರಿಪಡಿಸುವುದಾಗಿ ಪ್ರಣಾಳಿಕೆಯು ಹೇಳಿತ್ತು. ತೆರಿಗೆಗಳನ್ನು ಕಡಿಮೆ ಮಾಡುವುದಾಗಿಯೂ, ರಫ್ತಿಗೆ ಉತ್ತೇಜನ ನೀಡುವುದಾಗಿಯೂ, ಪಡೆದ ಸಾಲವನ್ನು ದಕ್ಷತೆಯಿಂದ ಬಳಸುವುದಾಗಿಯೂ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳನ್ನು ಸುಧಾರಿಸುವುದಾಗಿ ಭರವಸೆ ನೀಡಿತ್ತು. ಇವುಗಳು ಲೈಸೆನ್ಸ್‌‍ರಾಜ್ ವ್ಯವಸ್ಥೆಯನ್ನು ಸುಧಾರಿಸುವ ಮಂತ್ರಗಳೆ ಹೊರತು, ಅದನ್ನು ಕಿತ್ತೊಗೆಯುವ ಸಂಕಲ್ಪವಾಗಿರಲಿಲ್ಲ. ಕಾಂಗ್ರೆಸ್ ನಾಯಕತ್ವಕ್ಕೆ ಮಾರುಕಟ್ಟೆಪರ ಸುಧಾರಣೆಗಳನ್ನು ಮಾಡುವ ಕುರಿತಾಗಿ ಎಷ್ಟು ಎಚ್ಚರಿಕೆಯಿತ್ತೆನ್ನುವುದನ್ನು ಅರಿಯಲು ಪ್ರಧಾನಿ ಪದವಿಗಿದ್ದ ಇತರ ಪರ್ಯಾಯಗಳನ್ನು ಪರಿಗಣಿಸಿ. ಅರ್ಜುನ್ ಸಿಂಗ್ ಮತ್ತು ಎನ್.ಡಿ.ತಿವಾರಿ ಇಬ್ಬರೂ ಪಶ್ಚಿಮದ ಜೊತೆಗೆ ಯಾವುದೆ ಸಂಬಂಧವಿರಬಾರದು ಎನ್ನುತ್ತಿದ್ದ ಹಳೆಯಶೈಲಿಯ ಸಮಾಜವಾದಿ ನಾಯಕರುಗಳು. ಕೈಗಾರಿಕೀಕರಣಗೊಂಡಿದ್ದ ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದ ಶರದ್ ಪವಾರ್ ಮಾತ್ರ ಈ ಮಾತಿಗೆ ಅಪವಾದವಾಗಿದ್ದರು. ಆದರೆ ಅವರೂ ಸಹ ಬಾಂಬೆ ಉದ್ಯಮಿಗಳಿಗೆ ಹತ್ತಿರವಾಗಿದ್ದವರು ಮತ್ತು ಶುದ್ಧ ಉದಾರೀಕರಣಕ್ಕಿಂತ ಆಲಿಗಾರ್ಕಿಕ್ (ಕೆಲವರಿಗೆ ಮಾತ್ರ ಅನುಕೂಲಕರವಾಗುತ್ತಿದ್ದ) ಬಂಡವಾಳಶಾಹಿಯನ್ನೆ ಆಯ್ಕೆ ಮಾಡುತ್ತಿದ್ದವರು.

ಭಾರತೀಯ ಅರ್ಥವ್ಯವಸ್ಥೆಯ ಆಳವಾದ ಸಮಸ್ಯೆಯೆಂದರೆ ಅದಕ್ಕಿದ್ದ ದುರ್ಬಲ ತಳಪಾಯ. ಹಾಗಾಗಿ ಆಗಾಗ ಘಾಸಿಯುಂಟು ಮಾಡಬಹುದಾದ ನಡುಕಗಳಿಗೆ ಅದು ಬಲಿಯಾಗುತ್ತಿತ್ತು. ಪ್ರಭುತ್ವವೆ ನಿಯಂತ್ರಿಸುತ್ತಿದ್ದ ಅರ್ಥವ್ಯವಸ್ಥೆಯು ನಿರಂತರವಾಗಿ ಅದಕ್ಷವಾಗಿತ್ತು.

ಆರ್ಥಿಕ ಕ್ಷೇತ್ರವನ್ನು ತೆರೆಯುವ ಯಾವುದೆ ಪ್ರಯತ್ನವೂ ಸಹ ಜಡ ಕಾಂಗ್ರೆಸ್ ಪಕ್ಷವನ್ನು, ವಿಭಜಿತವಾಗಿದ್ದ ಪಾರ್ಲಿಮೆಂಟನ್ನು, ಹೆದರಿದ್ದ ಉದ್ಯಮಿಗಳನ್ನು ಮತ್ತು ಕೂಗುಮಾರಿ ಬುದ್ಧಿಜೀವಿಗಳನ್ನು ಸೋಲಿಸಬೇಕಿತ್ತು. ಅಲ್ಲದೆ ಕೇಂದ್ರೀಕೃತ, ಯೋಜಿತ ಅರ್ಥವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದ ಶ್ರೀಮಂತ ರೈತರು, ಕಾರ್ಮಿಕ ಸಂಘಟನೆಗಳು, ಉದ್ದಿಮೆದಾರರು, ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸಹ ಬಲಶಾಲಿಗಳಾಗಿದ್ದರು.

ಬಹುಸಂಖ್ಯಾತರ ಒಳಿತನ್ನು ಸಾಧಿಸಬಲ್ಲ ನೀತಿಯೊಂದನ್ನು ಕೆಲವರ ಹಿತಾಸಕ್ತಿಗಳನ್ನು ಕಾಯುವ ಸಲುವಾಗಿ ಏಕೆ ನಿರ್ಲಕ್ಷಿಸಲಾಗುತ್ತದೆ? ಈ ವಿದ್ಯಮಾನವನ್ನು ಮೊದಲು ವಿವರಿಸದವರು ಸಮಾಜವಿಜ್ಞಾನಿ ಮಾನ್ಕುರ್ ಓಲ್ಸನ್. ಉದಾರೀಕರಣವು ಭವಿಷ್ಯದಲ್ಲಿ ಲಾಭವಾಗುವ ಭರವಸೆಗಳನ್ನು ನೀಡಿದ್ದರಿಂದ ಅದಕ್ಕೆ ಇಂದು ಯಾವುದೆ ರಾಜಕೀಯ ಬೆಂಬಲ ಇರಲಿಲ್ಲ. ಅಂದರೆ ಅದರ ಫಲಾನುಭವಿಗಳು ಇನ್ನೂ ಹುಟ್ಟಿರಲಿಲ್ಲ. ಆದರೆ ಮತ್ತೊಂದೆಡೆ, ಪ್ರಸ್ತುತ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದವರು ಸಂಘಟಿತರಾಗಿದ್ದರು ಮತ್ತು ಶಕ್ತಿಶಾಲಿಗಳಾಗಿದ್ದರು. ತಮ್ಮ ಹಿಂದಿನ ನಾಲ್ವರು ಪ್ರಧಾನಿಗಳಂತೆ ನರಸಿಂಹರಾವ್ ಅವರೂ ಸಹ ಸುಧಾರಣೆಗಳನ್ನು ಅನುಷ್ಠಾನಗೊಳಿಸುವಾಗ ಅಡಚಣೆಗಳಿಂದ ವಿಚಲಿತರಾದರೆ? ಅವರ ಅಧಿಕಾರದ ಮೊದಲ ಕೆಲವು ತಿಂಗಳುಗಳು ಈ ಪ್ರಶ್ನೆಗೆ ಉತ್ತರ ಉದಗಿಸುತ್ತವೆ.

ಆರ್ಥಿಕ ಬಿಕ್ಕಟ್ಟಿನ ತೀವ್ರತೆಯನ್ನು ಮೊದಲ ಬಾರಿಗೆ ನರಸಿಂಹರಾವ್ ಅವರು ಅರಿತದ್ದು ಜೂನ್ 19, 1991ರಂದು, ಪ್ರಧಾನಿಯಾಗುವ ಎರಡು ದಿನಗಳ ಹಿಂದೆ. ಕ್ಯಾಬಿನೆಟ್ ಕಾರ್ಯದರ್ಶಿ ನರೇಶ್ ಚಂದ್ರ ಅವರು ನೀಡಿದ್ದ ಭಾರತದ ಹಣಕಾಸು ಸಂಕಟಗಳ ಬಗೆಗಿನ ಎಂಟು ಪುಟಗಳ ಟಿಪ್ಪಣಿಯನ್ನು ಅವರು ಅಂದು ಸಂಜೆ ಓದಿದರು. ತಾವು ಇದ್ದ ವೆಲ್ಲಿಂಗ್ಡನ್ ಕ್ರೆಸೆಂಟಿನ ಅಡಗುತಾಣದಿಂದ ಮೋತಿಲಾಲ್ ನೆಹ್ರೂ ರಸ್ತೆಯಲ್ಲಿನ ತಮ್ಮ ಮನೆಗೆ ಆ ಟಿಪ್ಪಣಿಯನ್ನು ಆ ರಾತ್ರಿ ಅವರು ಕೊಂಡೊಯ್ದರು.

1980ರಲ್ಲಿ ಇಂದಿರಾರಿಗೆ ಹಾಗೂ 1984ರಲ್ಲಿ ರಾಜೀವರಿಗೆ ಇದ್ದಂತೆ, ರಾವ್ ಅವರಿಗೆ ತಮ್ಮ ನೀತಿಆದ್ಯತೆಗಳನ್ನು ಹೇರಲು ಸಂಖ್ಯೆಗಳ ಬೆಂಬಲವಿರಲಿಲ್ಲ. ಈ ಶಾಸಕಾಂಗದ ಪ್ರತಿಬಂಧಕವು ಸುಧಾರಣೆಗಳನ್ನು ಮಾಡಲು ಬಯಸಿದ್ದ ಆ ಕಾಲದ ಇತರ ಯಾವುದೆ ಜಾಗತಿಕ ನಾಯಕನಿಗಿಂತ ನರಸಿಂಹರಾವ್ ಅವರನ್ನು ರಾಜಕೀಯವಾಗಿ ಅಶಕ್ತರನ್ನಾಗಿಸಿತ್ತು.

ಮರುದಿನ ಬೆಳಿಗ್ಗೆ ನರಸಿಂಹರಾವ್ ಅವರನ್ನು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು. ಇದು ಪ್ರಧಾನಿಯಾಗುವ ಮೊದಲಿನ ಪೂರ್ವಭಾವಿ ಹೆಜ್ಜೆ. ಅಷ್ಟು ಹೊತ್ತಿಗೆ ಹಣಕಾಸು ಸಚಿವರಾಗಿ ತಾನು ಯಾರನ್ನು ಆಯ್ಕೆ ಮಾಡುತ್ತೇನೆ ಎನ್ನುವುದು ಪಶ್ಚಿಮಕ್ಕೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ ಎನ್ನುವುದರ ಅರಿವು ಅವರಿಗಾಗಿತ್ತು.

ಸಮಸ್ಯೆಯನ್ನು ತಿಳಿದ ಒಂದು ದಿನದೊಳಗೆ ತಾನೇನು ಮಾಡಬೇಕು ಎನ್ನುವುದು ಅವರಿಗೆ ಅರ್ಥವಾಗಿತ್ತು ಎನ್ನುವುದನ್ನು ಅವರ ಅರ್ಥಶಾಸ್ತ್ರದ ಜ್ಞಾನಕ್ಕೆ ಸಾಕ್ಷಿ ಎಂದು ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಆ ಕ್ಷೇತ್ರದ ಜ್ಞಾನವಿರಲಿಲ್ಲ. ಅದನ್ನು ವಿವರಿಸಲು ಸಾಧ್ಯವಿರುವುದು ಕೇವಲ ಕಚ್ಚಾ ರಾಜಕೀಯ ಪ್ರವೃತ್ತಿಯ (raw political instinct) ಮೂಲಕ ಮಾತ್ರ. ಈ ಗುಣವನ್ನು ದಶಕಗಳ ಕಾಲ ಸರ್ಕಾರದಲ್ಲಿ ಕೆಲಸ ಮಾಡಿ ರಾವ್ ರೂಡಿಸಿಕೊಂಡಿದ್ದರು. ಹೀಗೆ ಕ್ಷಿಪ್ರವಾಗಿ ನಿರ್ಧಾರ ಮಾಡಿದ್ದು ಏನನ್ನು ತೋರಿಸುತ್ತದೆ ಎಂದರೆ ನರಸಿಂಹರಾವ್ ಅವರು ವಿಳಂಬ ಮಾಡಿದರೆ ಅದಕ್ಕೆ ಕಾರಣ ಉತ್ತಮ ಸಾರ್ವಜನಿಕ ನೀತಿಯನ್ನು ಕೆಟ್ಟದ್ದರಿಂದ ಬೇರ್ಪಡಿಸಲು ಅವರಿಗೆ ತಿಳಿದಿರಲಿಲ್ಲ ಎನ್ನುವುದಲ್ಲ. ಸರಿಯಾದ ನೀತಿಯೆನ್ನುವುದು ಉತ್ತಮ ರಾಜಕಾರಣವೂ ಆಗಿಲ್ಲದಿದ್ದಾಗ ಅವರು ತಡಮಾಡುತ್ತಿದ್ದರು. ಯಾವಾಗ ಸರಿಯಾದ ನಿರ್ಧಾರವನ್ನು ರಾಜಕೀಯವಾಗಿಯೂ ಸಮರ್ಥಿಸಿಕೊಳ್ಳಬಹುದೋ ಆಗ ರಾವ್ ಅವರು ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೆ ಅವರ ಸರ್ಕಾರದ ಪ್ರಾರಂಭದ ದಿನಗಳಲ್ಲಿನ ಉದಾರೀಕರಣ ನೀತಿಯು ಒಳ್ಳೆಯ ಉದಾಹರಣೆ.

ಅವರ ಮೊದಲ ಕೆಲಸವೆಂದರೆ ಹಣಕಾಸು ಸಚಿವರಾಗಲು ಹಾತೊರೆಯುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಉತ್ತೇಜನ ನೀಡದಿರುವುದು. ಪ್ರಣಬ್ ಮುಖರ್ಜಿಯವರು 1982ರಿಂದ 84ರವರಗೆ ಹಣಕಾಸು ಸಚಿವರಾಗಿದ್ದರು. ಆ ಅವಧಿಯನ್ನು ಕ್ರೋನಿ ಬಂಡವಾಳಶಾಹಿಯ ಪ್ರಾರಂಭದ ಕಾಲವೆಂದೆ ಗುರುತಿಸಲಾಗುತ್ತದೆ. ಪ್ರಧಾನಿ ಸ್ಪರ್ಧೆಯಲ್ಲಿ ಅವರು ನರಸಿಂಹರಾವ್ ಅವರನ್ನು ಬೆಂಬಲಿಸಿದ ಕಾರಣದಿಂದ ತಾನು ಮತ್ತೆ ಹಣಕಾಸು ಸಚಿವನಾಗುತ್ತೇನೆ ಎನ್ನುವ ವಿಶ್ವಾಸ ಪ್ರಣಬರಲ್ಲಿತ್ತು. ಆದರೆ ಪ್ರಧಾನಿಯವರ ಯೋಜನೆಗಳು ಬೇರೆಯವೆ ಆಗಿದ್ದವು. ಹಿರಿಯ ಐಬಿ ಅಧಿಕಾರಿಯೊಬ್ಬರು ಹೇಳಿದ ಮಾತುಗಳ ಆಧಾರದ ಮೇಲೆ ಪತ್ರಕರ್ತ ಸಂಜಯ ಬಾರು ಈ ಕೆಳಗಿನ ಕಥೆಯನ್ನು ಹೇಳುತ್ತಾರೆ. ಜೂನ್ 20ರ ಮಧ್ಯಾಹ್ನ, ರಾವ್ ಐಬಿಗೆ ಕರೆ ಮಾಡಿದರು. ಕೆಲವು ಗಂಟೆಗಳ ನಂತರ ಐಬಿ ಅಧಿಕಾರಿಯು ಪ್ರಣಬ್ ಮುಖರ್ಜಿಯವರ ಮೇಲಿನ ರಹಸ್ಯಕಡತವೊಂದನ್ನು ವೆಲ್ಲಿಂಗ್ಡನ್ ಕ್ರೆಸೆಂಟಿನ ಅಡಗುತಾಣಕ್ಕೆ ತಂದರು. ಆ ಕಡತದಲ್ಲಿ ಪ್ರಣಬರ ಮೇಲೆ ದೋಷಾರೋಪಣೆಗಳು ಇದ್ದವು ಎಂದಾಗಲಿ, ಅಥವಾ ಆ ಕಡತವನ್ನು ರಾವ್ ಪ್ರಣಬರ ವಿರುದ್ಧ ಬಳಸಿದರು ಎನ್ನಲು ಸಹ ಆಧಾರಗಳಿಲ್ಲ. ಆದರೆ ಆ ಸಂಜೆಯೊಳಗೆ ಪ್ರಣಬ್ ಮುಖರ್ಜಿ ಹಣಕಾಸು ಸಚಿವ ಸ್ಥಾನದ ಸ್ಪರ್ಧೆಯಲ್ಲಿ ಇರಲಿಲ್ಲ.

ಐ. ಜಿ. ಪಟೇಲ ಅವರು ಹಣಕಾಸು ಸಚಿವರಾಗಲು ನಿರಾಕರಿಸಿದಾಗ, ಪಿ.ಸಿ. ಅಲೆಗ್ಸಾಂಡರ್ ಅವರು ಮನಮೋಹನ್ ಸಿಂಗ್ ಅವರೊಡನೆ ಅಂದು ರಾತ್ರಿಯೇ ಮಾತನಾಡಿದರು. ಮರುದಿನ ಬೆಳಿಗ್ಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ನರಸಿಂಹರಾವ್ ಮನಮೋಹನ್ ಸಿಂಗರಿಗೆ ದೂರವಾಣಿ ಕರೆ ಮಾಡಿ, ಯಾರಲ್ಲಿಯೂ ಅಸೂಯೆ ಮೂಡಿಸದ ಭಾರತದ ಹಣಕಾಸು ಸಚಿವ ಸ್ಥಾನಕ್ಕೆ ಆಹ್ವಾನ ನೀಡಿದರು. 25 ವರ್ಷಗಳ ನಂತರ ರಾವ್ ಅವರೊಡನೆಯ ತಮ್ಮ ಸಂಭಾಷಣೆಯನ್ನು ನೆನಪಿಸಿಕೊಳ್ಳುತ್ತಾರೆ: ‘ನನಗೆ ಅವರ ಸಂಪೂರ್ಣ ಬೆಂಬಲ ದೊರಕುವುದಾದರೆ ನಾನು ಒಪ್ಪುವುದಾಗಿ ಅವರಿಗೆ ಹೇಳಿದೆ. ಅವರು ಅರ್ಧ ತಮಾಷೆಯ ದನಿಯಲ್ಲಿ ಉತ್ತರಿಸಿದರು, “ನಿಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ. ಈ ನೀತಿಗಳು ಯಶಸ್ವಿಯಾದರೆ ನಾವಿಬ್ಬರೂ ಶ್ರೇಯಸ್ಸನ್ನು ಪಡೆಯೋಣ. ವಿಫಲವಾದರೆ ನೀವು ಸ್ಥಾನ ಕಳೆದುಕೊಳ್ಳುತ್ತೀರಿ.”’

ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ್ದ ಮತ್ತು ಆದೇ ತಾನೆ ಜಿನೀವಾದ ಸೌತ್ ಕಮೀಷನ್ನಿನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಈ ಅರ್ಥಶಾಸ್ತ್ರಜ್ಞ ರಾವ್ ಅವರು ಹುಡುಕುತ್ತಿದ್ದ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದರು. ಭಾರತ ಸರ್ಕಾರದಲ್ಲಿನ ಅರ್ಥಿಕ ಕ್ಷೇತ್ರದ ಎಲ್ಲ ಪ್ರಮುಖ ಅಧಿಕಾರಗಳನ್ನೂ ಮನಮೋಹನ್ ನಿರ್ವಹಿಸಿದ್ದರು. ಪಂಜಾಬ್ ವಿಶ್ವವಿದ್ಯಾನಿಲಯದ ಈ ಮಾಜಿ ಅಧ್ಯಾಪಕ ಹಣಕಾಸು ಕಾರ್ಯದರ್ಶಿ ಮತ್ತು ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. 1987ರಲ್ಲಿ ಅವರಿಗೆ ಭಾರತದ ಎರಡನೆಯ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಲಾಗಿತ್ತು. ನರಸಿಂಹರಾವ್ ಅವರಂತೆ ಮನಮೋಹನ್ ಸಹ ಒಬ್ಬ ಸುಧಾರಣಾವಾದಿ ಮತ್ತು ಜವಾಬ್ದಾರಿಯುತ ಡೆಪ್ಯೂಟಿ (ಕೆಳಗಿನ ಅಧಿಕಾರಿ)ಯಾಗಿದ್ದರು. ಲೈಸನ್ಸ್‍ರಾಜ್ ವ್ಯವಸ್ಥೆಯನ್ನು ಅವರು ಟೀಕಿಸಿದ್ದರೂ ಸಹ ತಮ್ಮ ವಿಮರ್ಶೆಯನ್ನು ರಾಜಕೀಯ ಯಜಮಾನರುಗಳಿಗೆ ಬೇಸರವಾಗದ ದನಿಯಲ್ಲಿ ಮಾಡಿದ್ದರು.

ಮನಮೋಹನ್ ಅವರನ್ನು ಹಲವಾರು ಬಾರಿ ರಾವ್ ಭೇಟಿ ಮಾಡಿದ್ದರು. 1984ರ ಕಡೆಯ ಭಾಗದಲ್ಲಿ, ರಾವ್ ಅವರ ಶಿಫಾರಸ್ಸಿನ ಮೇರೆಗೆ ರಾಜೀವ್ ಗಾಂಧಿ ಮನಮೋಹನ್ ಅವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಿಸಿದ್ದರು. ಆರು ವರ್ಷಗಳ ನಂತರ ಮತ್ತೊಮ್ಮೆ ರಾವ್ ಮನಮೋಹನ್ ಅವರನ್ನು ಮತ್ತೊಂದು ತಾಂತ್ರಿಕ ಕೆಲಸಕ್ಕೆ ಆಯ್ಕೆಮಾಡಿದರು. ಅವರಿಗೆ ಹಣಕಾಸು ಸಚಿವನಾಗಿ ಒಬ್ಬ ತಂತ್ರಜ್ಞ ಅಧಿಕಾರಿ (ಟೆಕ್ನೊಕ್ರಾಟ್) ಬೇಕಿತ್ತು. ಅಲ್ಲದೆ ರಾವ್ ವ್ಯಕ್ತಿತ್ವದಲ್ಲಿಯೇ ಇದ್ದ ವಿರೋಧಾಭಾಸಗಳನ್ನು ಅವರೂ ಹೊಂದಿದ್ದರು ಎಂದೇ ಮನಮೋಹನ್ ನರಸಿಂಹರಾವ್ ಅವರನ್ನು ಮೆಚ್ಚಿಸಿರಬೇಕು. ರಾವ್ ಅವರಿಗೆ ಪಶ್ಚಿಮವೂ ನಂಬಬಲ್ಲ ಒಬ್ಬ ಮೇಲ್ನೋಟಕ್ಕೆ ಗೋಚರವಾಗುವಂತೆ ಪ್ರಾಮಾಣಿಕನಾಗಿರುವ ವ್ಯಕ್ತಿ ಬೇಕಿತ್ತು. ಜೊತೆಗೆ ಅವರಿಗೆ ಬೇಕಾಗಿದ್ದುದುದು ಪ್ರಧಾನಮಂತ್ರಿಯಿಂದ ದೇಶದೊಳಗಣ ಟೀಕೆಗಳನ್ನು ದೂರವಿಡಬಲ್ಲ ನಂಬಿಕಸ್ಥನೊಬ್ಬ.

ಮಾಧ್ಯಮಗಳಲ್ಲಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಪ್ರಭಾವಶಾಲಿಗಳಾಗಿದ್ದ ಎಡಪಂಥೀಯ ಬುದ್ಧಿಜೀವಿಗಳು ಮಾರುಕಟ್ಟೆಪರ ನೀತಿಗಳಿಗೆ ಇದ್ದ ಮತ್ತೊಂದು ಅಡಚಣೆಯಾಗಿದ್ದರು. 1966ರಲ್ಲಿ ಇವರು ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ರೂಪಾಯಿಯ ಅಪಮೌಲ್ಯೀಕರಣದ ವಿಚಾರದಲ್ಲಿ ಕಟುವಾಗಿ ಟೀಕಿಸಿದ್ದರು.

ಮನಮೋಹನ್ ತಾನೊಬ್ಬ ಪರಿಪೂರ್ಣ ಜೊತೆಗಾರನೆಂದು ಸಾಬೀತು ಮಾಡಿದರು.

ನರಸಿಂಹರಾವ್ ತಮ್ಮ ಸುತ್ತ ಇರಿಸಿಕೊಂಡ ಹಲವಾರು ಸುಧಾರಣಾವಾದಿಗಳಲ್ಲಿ ಮನಮೋಹನ್ ಒಬ್ಬರು ಮಾತ್ರ. ಅವರಿಗೆ ಪ್ರಧಾನಮಂತ್ರಿಗಳ ಕಛೇರಿಯೊಳಗಿನಿಂದ ಸುಧಾರಣೆಗಳನ್ನು

ನಿರ್ದೇಶಿಸಬಲ್ಲ ವ್ಯಕ್ತಿಯೊಬ್ಬರು ಬೇಕಿತ್ತು. ಈ ಜವಾಬ್ದಾರಿಗೆ ಕಡೆಗೆ ರಾವ್ ಅಮರನಾಥ ವರ್ಮಾರನ್ನು ಆರಿಸಿದರು. ಉತ್ತರಪ್ರದೇಶದ ಕಾಯಸ್ಥ ಜಾತಿಗೆ ಸೇರಿದ ವರ್ಮಾ ನರಸಿಂಹರಾವ್ ಅವರ ಉದಾರೀಕರಣ ಸುಧಾರಣೆಗಳ ಅನುಷ್ಠಾನದಲ್ಲಿ ಮನಮೋಹನ್ ಅವರಷ್ಟೆ ಮುಖ್ಯವಾದ ಪಾತ್ರವನ್ನು ವಹಿಸಿದರು. ಹಿಂದೆ ಕೈಗಾರಿಕಾ ಖಾತೆ ಕಾರ್ಯದರ್ಶಿಯಾಗಿದ್ದ ಅವರು ಈಗ ಯೋಜನಾ ಆಯೋಗದಲ್ಲಿದ್ದರು. ಕೆಲಸಗಳನ್ನು ಮಾಡಿಸಬಲ್ಲ ಒಬ್ಬ ನಿರ್ದಯಿ ಆಯೋಜಕ ಎನ್ನುವ ಖ್ಯಾತಿಯನ್ನು ವರ್ಮಾ ಸಂಪಾದಿಸಿದ್ದರು. ಹೀಗೆ ಮಾಡುವಾಗ ಯಾರ ಅಹಂಕಾರಕ್ಕೆ ಧಕ್ಕೆಯಾದರೂ ಅವರು ಚಿಂತಿಸುತ್ತಿರಲಿಲ್ಲ.

ಆ ಕಡತದಲ್ಲಿ ಪ್ರಣಬರ ಮೇಲೆ ದೋಷಾರೋಪಣೆಗಳು ಇದ್ದವು ಎಂದಾಗಲಿ, ಅಥವಾ ಆ ಕಡತವನ್ನು ರಾವ್ ಪ್ರಣಬರ ವಿರುದ್ಧ ಬಳಸಿದರು ಎನ್ನಲು ಸಹ ಆಧಾರಗಳಿಲ್ಲ. ಆದರೆ ಆ ಸಂಜೆಯೊಳಗೆ ಪ್ರಣಬ್ ಮುಖರ್ಜಿ ಹಣಕಾಸು ಸಚಿವ ಸ್ಥಾನದ ಸ್ಪರ್ಧೆಯಲ್ಲಿ ಇರಲಿಲ್ಲ.

ರಾವ್ ಅವರಿಗೆ ಸಹಾಯಕರಾಗಿದ್ದ ಮತ್ತೋರ್ವರೆಂದರೆ ಕ್ಯಾಬಿನೆಟ್ ಕಾರ್ಯದರ್ಶಿ ನರೇಶ್ ಚಂದ್ರ. ಹಿಂದಿನ ಸರ್ಕಾರದ ಆಯ್ಕೆಯಾಗಿದ್ದ ಚಂದ್ರ ಯಾರಿಗೂ ನೋಯಿಸದಂತೆ ತನ್ನ ಮನಸ್ಸಿನಲ್ಲಿರುವುದನ್ನು ಹೇಳುವುದನ್ನು ಅರಿತಿದ್ದವರು. ಚಂದ್ರಶೇಖರ್ ಸರ್ಕಾರದ ಕಾಲದ ಆರಂಭಿಕ ಆರ್ಥಿಕ ಸುಧಾರಣೆಗಳನ್ನು ಅವರು ನಿರ್ವಹಿಸಿದ್ದರು. ನರೇಶ್ ಚಂದ್ರ ಬ್ರಹ್ಮಚಾರಿ. ಬ್ಯೂರಾಕ್ರಸಿಯೇ ಅವರ ಸಂಸಾರವಾಗಿತ್ತು. ಸರ್ಕಾರಿ ಕಾರ್ಯವಿಧಾನಗಳ ಅಗಾಧ ಜ್ಞಾನವನ್ನು ಹೊಂದಿದ್ದ ನರೇಶ್ ಚಂದ್ರ ಲೈಸೆನ್ಸ್‍ರಾಜ್ ವ್ಯವಸ್ಥೆಯನ್ನು ಮುಚ್ಚುವುದರಲ್ಲಿ ಮುಖ್ಯಪಾತ್ರ ವಹಿಸಿದರು.

ರಾವ್ ತಮ್ಮ ಆಪ್ತವಲಯಕ್ಕೆ ಸೆಳೆದುಕೊಂಡ ಮತ್ತೊಬ್ಬ ಅಧಿಕಾರಿಯೆಂದರೆ ಮೊಂಟೆಕ್ ಸಿಂಗ್ ಅಹ್ಲೂವಾಲಿಯ. ರೋಡ್ಸ್ ಸ್ಕಾಲರಷಿಪ್ ಗಳಿಸಿದ್ದ, ಅಹ್ಲೂವಾಲಿಯ ವಿಶ್ವಸಂಸ್ಥೆಯಲ್ಲಿ ಒಂದು ದಶಕಕಾಲ ಕೆಲಸ ಮಾಡಿದ್ದರು. ನಂತರ ಹಣಕಾಸು ಸಚಿವಾಲಯದಲ್ಲಿ ಸಲಹೆಗಾರನಾಗಿ 1979ರಲ್ಲಿ ಸೇರಿದರು. ಹೀಗೆ ಅಧಿಕಾರಿವರ್ಗವನ್ನು ಸೇರುವುದನ್ನು ಅಹ್ಲೂವಾಲಿಯರ ಕುಟುಂಬದ ಸ್ನೇಹಿತರು ಮತ್ತು ಆಗಿನ ಹಣಕಾಸು ಕಾರ್ಯದರ್ಶಿಗಳಾಗಿದ್ದ ಮನಮೋಹನ್ ಸಿಂಗ್ ಅವರು ಬೆಂಬಲಿಸಿದ್ದರು. ಅಹ್ಲುವಾಲಿಯ ಸರ್ಕಾರದೊಳಗೆ ಸುಧಾರಣೆಗಳ ಪರವಾಗಿ ತೀವ್ರವಾಗಿ ವಾದಿಸುತ್ತಿದ್ದವರು. ಜೊತೆಗೆ ಜೈರಾಮ್ ರಮೇಶ್ ಅವರನ್ನು ರಾವ್ ವಿಶೇಷ ಅಧಿಕಾರಿಯಾಗಿ ತಮ್ಮ ಕಛೇರಿಯಲ್ಲಿ ನೇಮಿಸಿಕೊಂಡರು.

ತಮಿಳುನಾಡಿನ ಯುವವಕೀಲ ಪಿ. ಚಿದಂಬರಮ್ ಅವರನ್ನು ವಾಣಿಜ್ಯ ಸಚಿವರಾಗಿ ಪ್ರಧಾನಮಂತ್ರಿಗಳು ಆಯ್ಕೆ ಮಾಡಿದರು. ದಕ್ಷತೆ ಮತ್ತು ಸೊಕ್ಕು ಎರಡನ್ನೂ ಹೊಂದಿದ್ದ ಖ್ಯಾತಿ ಗಳಿಸಿದ್ದ ಚಿದಂಬರಮ್ ಯಾವುದೆ ಭಿಡೆಯಿಲ್ಲದ ಸುಧಾರಣಾವಾದಿಯಾಗಿದ್ದರು. ವ್ಯಾಪಾರಕ್ಕೆ ಸಂಬಂಧಿಸಿದ ಸುಧಾರಣೆಗಳನ್ನು ಮಾಡಲು ಮನಮೋಹನರೊಡನೆ ಅವರು ಕೆಲಸ ಮಾಡಿದರು.

ಹೀಗೆ ಸುಧಾರಣಾವಾದಿಗಳೆಂದು ಹೆಸರು ಮಾಡಿದ್ದವರನ್ನೆ ನರಸಿಂಹರಾವ್ ಹಣಕಾಸು ಮತ್ತು ವಾಣಿಜ್ಯ ಖಾತೆಗೆ ಆರಿಸಿದರು. ಜೊತೆಗೆ ತಮ್ಮ ಪ್ರಧಾನ ಕಾರ್ಯದರ್ಶಿಯಾಗಿ ಮಾರುಕಟ್ಟೆಪರ ನಿಲುವುಗಳನ್ನು ಹೊಂದಿದ್ದವರನ್ನು ನೇಮಿಸಿದರು. ತಮ್ಮ ಉದ್ದೇಶಗಳನ್ನು ಮತ್ತಷ್ಟು ಸ್ಪಷ್ಟಪಡಿಸಲು, ಸ್ವತಃ ತಾವೆ ಉದ್ದಿಮೆ ಖಾತೆಯನ್ನು ಉಳಿಸಿಕೊಂಡರು. ಅವರ ಕ್ಯಾಬಿನೆಟ್ ಕಾರ್ಯದರ್ಶಿಗಳು ಈ ನಿರ್ಧಾರಕ್ಕೆ ಕಾರಣವನ್ನು ನೆನಪಿಸಿಕೊಳ್ಳುತ್ತಾರೆ: ’ಸ್ವತಃ ತಾವೆ ಉದ್ದಿಮೆ ಸಚಿವರಾಗಿಲ್ಲದಿದ್ದರೆ ಉದ್ದಿಮೆ ನೀತಿ ಸುಧಾರಣೆಗಳನ್ನು ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ ಎಂದು ಅವರಿಗೆ ಅರಿವಾಗಿತ್ತು.’

ನರಸಿಂಹರಾವ್ ಅವರಿಂದಲೇ ನೇರವಾಗಿ ಮಾಡಲ್ಪಟ್ಟಿದ್ದ ಈ ರಾಜಕೀಯ ತಂಡ ಸಿದ್ಧವಾಗಿತ್ತು. ಅದು ಈಗ ಕೆಲಸ ಮಾಡಬೇಕಿತ್ತು.

ಜೂನ್ 24, 1991. ಹಣಕಾಸು ಸಚಿವರಾಗಿ ನಾಲ್ಕು ದಿನಗಳಾದ ನಂತರ ಮನಮೋಹನ್ ಸಿಂಗ್ ತಮ್ಮ ಸಚಿವಾಲಯದ ಸಣ್ಣ ಕೊಠಡಿಯೊಂದರಲ್ಲಿ ಹನ್ನೆರಡು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆದರು. ಅವರಲ್ಲಿ ಹಲವರು ಉದಾರೀಕರಣವನ್ನು ವಿರೋಧಿಸುವವರೂ ಇದ್ದರು. ಆದರೆ ಅವರ ಹೊಸ ಪಾತ್ರವೇನು ಎನ್ನುವುದರ ಕುರಿತಾಗಿ ಸಿಂಗ್ ಯಾವ ಅನುಮಾನಗಳನ್ನೂ ಉಳಿಸಲಿಲ್ಲ. ಸಭೆಯನ್ನು ಮುಕ್ತಾಯಗೊಳಿಸುತ್ತ ಅವರು ಹೇಳಿದರು: ‘ಇದು ಈಗ ಆಗಬೇಕಿರುವುದು ಮತ್ತು ಇದನ್ನು ಮಾಡಲು ಪ್ರಧಾನಿಗಳು ನನಗೆ ಸಂಪೂರ್ಣ ಅಧಿಕಾರವನ್ನು ನೀಡಿದ್ದಾರೆ. ನಿಮ್ಮಲ್ಲಿ ಯಾರಿಗಾದರೂ ಇದರ ಬಗ್ಗೆ ಸಮಸ್ಯೆಗಳಿದ್ದರೆ, ಈಗಲೆ ಮುಕ್ತವಾಗಿ ಮಾತನಾಡಿ ಮತ್ತು ನಾವು ನಿಮಗೆ ಬೇರೆ ಕೆಲಸಗಳನ್ನು ಹುಡುಕಬಹುದು.’

ಅದೇ ದಿನ ನರಸಿಂಹರಾವ್ ಅವರು ವಿರೋಧಪಕ್ಷದ ನಾಯಕರನ್ನು ಒಬ್ಬೊಬ್ಬರನ್ನಾಗಿ ಭೇಟಿಮಾಡಿದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮನೆಗೆ ರಾವ್ ಸ್ವತಃ ತಾವೆ ಹೋದರು. ಮರುದಿನ ವಿ.ಪಿ. ಸಿಂಗ್ ಮತ್ತು ಜಸ್ವಂತ್ ಸಿಂಗ್ ಸೇರಿದಂತೆ ಪ್ರತಿಪಕ್ಷಗಳ ನಾಯಕರುಗಳಿಗೆ ಮನಮೋಹನ್ ಸಿಂಗ್ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ರಾವ್ ಅವರು ಈ ಸಭೆಯಲ್ಲಿ ಹಾಜರಿದ್ದರೂ ಸಹ, ಹೆಚ್ಚಿನದೇನನ್ನೂ ಹೇಳಲಿಲ್ಲ. ಮನಮೋಹನ್ ಸಿಂಗ್ ಬಿಕ್ಕಟ್ಟಿನ ವಿವರಗಳನ್ನು ಒದಗಿಸಿದರು: ’ವಿತ್ತೀಯ ಕೊರತೆಯನ್ನು ನಿಯಂತ್ರಿಸಲು, ಕೈಗಾರಿಕಾ ನೀತಿಯನ್ನು ಬದಲಿಸಲು ಮತ್ತು ಅರ್ಥವ್ಯವಸ್ಥೆಯ ಉದಾರೀಕರಣಕ್ಕೆ ಏನು ಮಾಡಬೇಕು ಎನ್ನುವುದನ್ನೆಲ್ಲ ನಾನು ಅವರಿಗೆ ತಿಳಿಸಿದೆ’ ಎನ್ನುತ್ತಾರೆ. ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತಿರದ ವಿರೋಧಿನಾಯಕರಿಗೆ ಈಗ ಭಯ ಹುಟ್ಟಿತು ಎಂದು ಸಿಂಗ್ ನೆನಪಿಸಿಕೊಳ್ಳುತ್ತಾರೆ. ಅವರು ಪರಿಸ್ಥಿತಿಯ ಗಾಂಭೀರ್ಯವನ್ನು ಅರಿತಿರಲಿಲ್ಲ.

ಪಾರ್ಲಿಮೆಂಟಿನಲ್ಲಿ ಬಹುಮತ ಹೊಂದಿಲ್ಲದೆ ಇದ್ದ ಪ್ರಧಾನಿಯೊಬ್ಬರು ಹೀಗೆ ರಾಜಕೀಯ ವಿರೋಧಿಗಳಲ್ಲಿ ವಿಶ್ವಾಸ ತೋರಿಸುವುದು ಉದಾತ್ತತೆ ಮತ್ತು ಸೂಕ್ಷ್ಮ ವಿವೇಚನೆಯ ವಿಷಯವಾಗಿತ್ತು. ಆದರೆ ರಾವ್ ಎರಡು ವಿಚಾರಗಳನ್ನು ವಿರೋಧಿನಾಯಕರಿಗೆ ತಿಳಿಸಲಿಲ್ಲ. ಅವುಗಳೆಂದರೆ ತಾನು ರೂಪಾಯಿಯ ಅಪಮೌಲ್ಯೀಕರಣ ಮಾಡುತ್ತಿದ್ದೇನೆ ಮತ್ತು ಭಾರತದ ಚಿನ್ನವನ್ನು ಒತ್ತೆಯಿಟ್ಟು ವಿದೇಶಿ ಸಾಲವನ್ನು ಪಡೆಯುತ್ತಿದ್ದೇವೆ ಎನ್ನುವುದು. ವಿರೋಧಿನಾಯಕರಿಗೆ ಈ ವಿಚಾರಗಳು ತಿಳಿದಿದ್ದರೆ, ಬಿಕ್ಕಟ್ಟು ಎಷ್ಟೆ ತೀವ್ರವಾಗಿದ್ದರೂ ಸರಿಯೆ, ಅವರು ಈ ಎರಡು ಕ್ರಮಗಳನ್ನು ತೆಗೆದುಕೊಳ್ಳಲು ಬಿಡುತ್ತಿರಲಿಲ್ಲ.

ಸ್ವಲ್ಪ ರಾಜಕೀಯ ಬಂಡವಾಳವನ್ನು ಗಳಿಸಿದ್ದ ಹೊಸ ಪ್ರಧಾನಮಂತ್ರಿಗಳು ಅದನ್ನು ಅಪಮೌಲ್ಯೀಕರಣದಂತಹ ಕೇವಲ ಸಾಂಕೇತಿಕವಾದ ಮೊದಲ ಕ್ರಮದ ಮೇಲೆ ವ್ಯಯಮಾಡಬೇಕೆ ಎಂದು ಯೋಚಿಸಿದರು. ಭಾರತದ ರೂಪಾಯಿ ಡಾಲರಿನ ವಿರುದ್ಧ ಕೃತಕವಾದ ಮೌಲ್ಯವನ್ನು ಹೊಂದಿತ್ತು. ಇದು ವಿದೇಶಿ ಬಂಡವಾಳ ಹೂಡುವವರನ್ನು ನಿರುತ್ತೇಜನಗೊಳಿಸುತ್ತಿತ್ತು ಮತ್ತು ರಫ್ತನ್ನು ಕಡಿಮೆಯಾಗಿಸುತ್ತಿತ್ತು. ಮಿಗಿಲಾಗಿ ಮತ್ತಷ್ಟು ಸಾಲವನ್ನು ಕೊಡುವ ಮೊದಲು, ಹೊಸ ಭಾರತ ಸರ್ಕಾರವು ಗಂಭೀರವಾಗಿದೆ ಎನ್ನುವುದರ ಪುರಾವೆಯಾಗಿ ರೂಪಾಯಿಯ ಅಪಮೌಲ್ಯೀಕರಣವನ್ನು ಐ.ಎಮ್. ಎಫ್ . ನಿರೀಕ್ಷಿಸಿತು. ಆದರೆ ರೂಪಾಯಿಯ ಮೌಲ್ಯ ದೇಶದ ಹಮ್ಮಿಗೆ ತಳುಕುಹಾಕಿಕೊಂಡಿದ್ದ ಕಾರಣದಿಂದ ದೇಶದೊಳಗೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎನ್ನುವುದು ರಾವ್ ಅವರಿಗೆ ಗೊತ್ತಿತ್ತು. ಅಪಮೌಲ್ಯೀಕರಣವು ಆಮದುಗಳು ಮತ್ತು ವಿದೇಶಿ ಸಾಲದ ಮೇಲೆ ಸಹ ಪರಿಣಾಮ ಬೀರುತ್ತಿತ್ತು. ರಾವ್ 1966ರಲ್ಲಿ ಇಂದಿರಾ ಗಾಂಧಿಯವರು ರೂಪಾಯಿಯ ಅಪಮೌಲ್ಯೀಕರಣ ಮಾಡಿದ್ದನ್ನು ನೆನಪಿಸಿಕೊಂಡರು. ಆ ನಿರ್ಧಾರವನ್ನು ಪಾರ್ಲಿಮೆಂಟಿನಲ್ಲಿ ಮತ್ತು ಮಾಧ್ಯಮಗಳಲ್ಲಿ ವಾಷಿಂಗ್ಟನ್‍ಗೆ ದೇಶದ ಮಾರಾಟವೆಂದು ಟೀಕಿಸಲಾಗಿತ್ತು. ಮಿಗಿಲಾಗಿ ವಿಶ್ವಬ್ಯಾಂಕ್ ಸಹ ತಾನು ಆಶ್ವಾಸನೆ ನೀಡಿದ್ದಷ್ಟು ಸಹಾಯನಿಧಿಯನ್ನು ಆಗ ಒದಗಿಸಲಿಲ್ಲ.

ಅದೇ ದಿನ ನರಸಿಂಹರಾವ್ ಅವರು ವಿರೋಧಪಕ್ಷದ ನಾಯಕರನ್ನು ಒಬ್ಬೊಬ್ಬರನ್ನಾಗಿ ಭೇಟಿಮಾಡಿದರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮನೆಗೆ ರಾವ್ ಸ್ವತಃ ತಾವೆ ಹೋದರು. ಮರುದಿನ ವಿ.ಪಿ. ಸಿಂಗ್ ಮತ್ತು ಜಸ್ವಂತ್ ಸಿಂಗ್ ಸೇರಿದಂತೆ ಪ್ರತಿಪಕ್ಷಗಳ ನಾಯಕರುಗಳಿಗೆ ಮನಮೋಹನ್ ಸಿಂಗ್ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ರೂಪಾಯಿಯ ಮೌಲ್ಯವನ್ನು ಕಡಿಮೆ ಮಾಡಬೇಡಿ ಎಂದು ರಾವ್ ಅವರ ಮೇಲೆ ಎಡಪಂಥೀಯ ಬುದ್ಧಿಜೀವಿಗಳು ಒತ್ತಡ ಹಾಕಿದರು. ಆದರೆ ಅಪಮೌಲ್ಯೀಕರಣವು ಅಗತ್ಯವೆಂದು ಮನಮೋಹನ್ ಸಿಂಗ್ ಹಠಮಾಡಿದರು ಮತ್ತು ಪ್ರಧಾನಿಗಳು ಅವರನ್ನು ಬೆಂಬಲಿಸಲು ನಿರ್ಧರಿಸಿದರು. ತಮ್ಮ ಎದುರಾಳಿಗಳನ್ನು ಚಕಿತಗೊಳಿಸುವ ಸಲುವಾಗಿ ಮೊದಲು ರೂಪಾಯಿಯ ಮೌಲ್ಯವನ್ನು ಕಡಿಮೆ ಮಾಡಿ, ನಂತರ ಆ ಕ್ರಮದ ಘೋಷಣೆ ಮಾಡಲು ನಿರ್ಧರಿಸಿದರು. ಮನಮೋಹನ್ ಕ್ಯಾಬಿನೆಟ್ ಸದಸ್ಯರಿಗೂ ತಿಳಿಸಲು ಬಯಸಲಿಲ್ಲ ಮತ್ತು ಎರಡು ಹಂತಗಳನ್ನು ಅಪಮೌಲ್ಯೀಕರಣವನ್ನು ಘೋಷಿಸಲು ಯೋಜಿಸಿದರು. ರಾವ್ ಅದಕ್ಕೆ ಒಪ್ಪಿದರು.

ಜುಲೈ 1,1991ರಂದು ಭಾರತವು ರೂಪಾಯಿಯ ಮೌಲ್ಯವನ್ನು ಕಡಿಮೆ ಮಾಡಿತು. ಮಾಡಲಾದ ಬದಲಾವಣೆ ಹೆಚ್ಚಿನದಾಗಿರಲಿಲ್ಲ. ಎಲ್ಲ ಮುಖ್ಯ ಕರೆನ್ಸಿಗಳ ವಿರುದ್ಧ ಶೇ 7ರಿಂದ 9 ಪ್ರತಿಶತ ಕಡಿಮೆಯಾಗಿತ್ತು. ಇದಕ್ಕೆ ಹೋಲಿಸಿದರೆ, ಇಂದಿರಾ ಅವರು 1966ರಲ್ಲಿ ಶೇ 57.4 ಪ್ರತಿಶತ ಕಡಿಮೆಮಾಡಿದ್ದರು.

ರಾವ್ ಸರ್ಕಾರವು ವಿವರಣೆ ನೀಡಿದರೂ ಸಹ, ಪ್ರತಿಪಕ್ಷಗಳು ಕುಪಿತಗೊಂಡವು. ಈ ನಡುವೆ ಎರಡನೆಯ ಸುತ್ತಿನ ಅಪಮೌಲ್ಯೀಕರಣದ ವದಂತಿಗಳು ಹರಡುತ್ತಿದ್ದವು. ಮನಮೋಹನ್ ಸಿಂಗ್ ಇದನ್ನು ತಮ್ಮ ಪರೀಕ್ಷೆಯ ದಿನವೆಂದು ನೆನಪಿಸಿಕೊಳ್ಳುತ್ತಾರೆ. ರಾವ್ ಅವರ ಮೇಲೆ ಅತ್ಯಂತ ತೀವ್ರವಾದ ರಾಜಕೀಯ ಒತ್ತಡವಿತ್ತು. ಜುಲೈ 1ರ ಅಪಮೌಲ್ಯೀಕರಣದ ಪ್ರಮಾಣ ಕನಿಷ್ಟ ಪ್ರಮಾಣದ್ದು ಆದುದರಿಂದ ಮನಮೋಹನ್ ಎರಡನೆಯ ಸುತ್ತು ನಡೆಯಲಿ ಎಂದು ಬಿಡದ ಹಠ ಹಿಡಿದರು. ಎರಡನೆಯ ಸುತ್ತನ್ನು ಜುಲೈ 3ಕ್ಕೆ ನಿಗದಿಪಡಿಸಲಾಗಿತ್ತು. ಎರಡೂ ಸುತ್ತುಗಳು ಸೇರಿದರು ಸಹ ರೂಪಾಯಿಯು ಅದರ ಮೌಲ್ಯದಲ್ಲಿ ಶೇ 20ರಷ್ಟನ್ನು ಕಳೆದುಕೊಳ್ಳುತ್ತಿತ್ತು.

ಮರುದಿನ ಮುಂಜಾವಿನಲ್ಲಿ ಪ್ರಧಾನಮಂತ್ರಿಗಳು ಹಿಂಜರಿದರು. ಮನಮೋಹನ್ ಸಿಂಗರಿಗೆ ದೂರವಾಣಿ ಕರೆ ಮಾಡಿ, ಅಪಮೌಲ್ಯೀಕರಣ ಮಾಡದಂತೆ ಆಜ್ಞೆಮಾಡಿದರು. ಅದರೆ ಅಷ್ಟು ಹೊತ್ತಿಗಾಗಲೆ ತಡವಾಗಿತ್ತು. ಅಪಮೌಲ್ಯೀಕರಣದ ಘೋಷಣೆ ಮಾಡದಂತೆ ತಿಳಿಸುವ ಸಲುವಾಗಿ ಸಿಂಗ್ ಅವರು ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಸಿ. ರಂಗರಾಜನ್ ಅವರಿಗೆ ಕರೆ ಮಾಡಿದರು. ರಂಗರಾಜನ್ ತಾವು ಆಗಲೆ ಘೋಷಣೆ ಮಾಡಿಯಾಗಿದೆ ಎಂದು ತಿಳಿಸಿದರು. ಮುಜುಗರಕ್ಕೊಳಗಾದ ಮನಮೋಹನ್ ಸಿಂಗ್ ’ಈ ಕ್ರಮದ ಜವಾಬ್ದಾರಿ ನನ್ನ ಮೇಲೆಯೆ ಇರಲಿ’ ಎನ್ನುತ್ತ ರಾಜೀನಾಮೆ ನೀಡಲು ಮುಂದಾದರು. ರಾವ್ ತಮ್ಮ ಹಣಕಾಸು ಸಚಿವರನ್ನು ಬಲಿಪಶುವೆಂದೆ ಮೊದಲಿನಿಂದಲೂ ಪರಿಗಣಿಸಿದ್ದರು. ಆದರೂ ಅವರನ್ನು ಈಗಲೆ ತ್ಯಾಗ ಮಾಡಲು ಸಿದ್ಧರಿರಲಿಲ್ಲ. ’ಅವರು ನನ್ನನ್ನು ಬೆಂಬಲಿಸಿದರು’ ಎನ್ನುತ್ತಾರೆ ಮನಮೋಹನ್.

ಈ ನಡುವೆ ಜುಲೈ 3ರ ಮಧ್ಯಾಹ್ನ, ಮನಮೋಹನ್ ಸಿಂಗ್ ತಮ್ಮ ವಿಶ್ವಾಸಿ ಮೊಂಟೆಕ್ ಸಿಂಗ್ ಅಹ್ಲುವಾಲಿಯರಿಗೆ ವಾಣಿಜ್ಯ ಸಚಿವ ಪಿ. ಚಿದಂಬರಮ್ ಅವರೊಡನೆ ರಫ್ತು ಸಬ್ಸಿಡಿಗಳನ್ನು ತೆಗೆದುಹಾಕುವುದರ ಬಗ್ಗೆ ಚರ್ಚಿಸಲು ಸೂಚಿಸಿದರು. ಭಾರತೀಯ ಉತ್ಪಾದಕರು ವಿದೇಶಿ ಮಾರುಕಟ್ಟೆಗಳಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡಲು ದುಬಾರಿ ರೂಪಾಯಿಯ ಕಾರಣದಿಂದ ಕಷ್ಟವಾಗುತ್ತಿದ್ದ ಕಾರಣವಾಗಿ ಸರ್ಕಾರವು ಅವರಿಗೆ ನಗದು ಪರಿಹಾರ ಯೋಜನೆಯೊಂದನ್ನು ರೂಪಿಸಿತ್ತು. ಅಪಮೌಲ್ಯೀಕರಣದ ನಂತರ ರೂಪಾಯಿಯು ತನ್ನ ನಿಜಮೌಲ್ಯದ ಹತ್ತಿರವಿದ್ದುದರಿಂದ ರಫ್ತ್ತು ಸಬ್ಸಿಡಿ ಅನಗತ್ಯವಾಗಿತ್ತು. ಹಾಗಾಗಿ ಮನಮೋಹನ್ ಅದನ್ನು ತೆಗೆದುಹಾಕಲು ನಿರ್ಧರಿಸಿದರು.

ರೂಪಾಯಿಯ ಮೌಲ್ಯವನ್ನು ಕಡಿಮೆ ಮಾಡಬೇಡಿ ಎಂದು ರಾವ್ ಅವರ ಮೇಲೆ ಎಡಪಂಥೀಯ ಬುದ್ಧಿಜೀವಿಗಳು ಒತ್ತಡ ಹಾಕಿದರು. ಆದರೆ ಅಪಮೌಲ್ಯೀಕರಣವು ಅಗತ್ಯವೆಂದು ಮನಮೋಹನ್ ಸಿಂಗ್ ಹಠಮಾಡಿದರು ಮತ್ತು ಪ್ರಧಾನಿಗಳು ಅವರನ್ನು ಬೆಂಬಲಿಸಲು ನಿರ್ಧರಿಸಿದರು.

ಚಿದಂಬರಂ ಸಬ್ಸಿಡಿಯನ್ನು ತೆಗೆಯಲು ಒಪ್ಪಿದರು. ಆದರೆ ಇದರಿಂದ ರಫ್ತ್ತುದಾರರು ಆತಂಕಿತರಾಗುತ್ತಿದ್ದರು. ಅವರನ್ನು ಸಮಾಧಾನಗೊಳಿಸಲು ವಾಣಿಜ್ಯ ಇಲಾಖೆಯು ಉತ್ತೇಜನಾಕ್ರಮವೊಂದನ್ನು ತೆಗೆದುಕೊಳ್ಳಲು ತೀರ್ಮಾನಿಸಿತು. ಈ ಹೊಸಕ್ರಮವು ರಫ್ತ್ತುದಾರರಿಗೆ ಕೆಲವು ನಿರ್ಬಂಧಿತ ವಸ್ತುಗಳನ್ನು ಆಮದುಮಾಡಿಕೊಳ್ಳಲು ಅವಕಾಶ ಒದಗಿಸುತ್ತಿತ್ತು. ಚಿದಂಬರಂ ಮತ್ತು ಅಹ್ಲುವಾಲಿಯ ಇಬ್ಬರೂ ಎರಡೂ ಹೊಸನೀತಿಗಳನ್ನು ಒಟ್ಟಿಗೆ ಘೋಷಿಸಲು ಬಯಸಿದರು.

ಇದಕ್ಕೆ ಹಣಕಾಸು ಸಚಿವರ ಒಪ್ಪಿಗೆ ಬೇಕಾಗಿದ್ದುದರಿಂದ, ಅವರು ಮನಮೋಹನ್ ಸಿಂಗರನ್ನು ಭೇಟಿಯಾಗಿ ಚರ್ಚಿಸಿದರು. ತಮ್ಮ ಅಧಿಕಾರಿಗಳಿಗೆ ಈ ಕ್ರಮವು ಒಪ್ಪಿಗೆಯಾಗಿರದಿದ್ದರೂ, ಸಿಂಗ್ ಒಮ್ಮೆಲೆ ಒಪ್ಪಿದರು. ಮೂವರೂ ಕೂಡಲೆ ನರಸಿಂಹರಾವರ ಮನೆಗೆ ಆ ರಾತ್ರಿಯೇ ತೆರಳಿ ಅವರ ಅನುಮತಿಯನ್ನೂ ಪಡೆದರು. ಹೀಗೆ 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಹೊಸನೀತಿಯು ಅಂಗೀಕಾರ ಪಡೆದಿತ್ತು.

ಅಪಮೌಲ್ಯೀಕರಣದ ನಂತರ, ಪ್ರಧಾನಮಂತ್ರಿಗಳು ಮತ್ತು ಅವರ ತಂಡವು ಮುಂದಿನ ಸುತ್ತಿನ ಸುಧಾರಣೆಗಳತ್ತ ಗಮನ ಹರಿಸಿತು. ಖಾಸಗಿ ಉತ್ಪಾದಕರನ್ನು ಗಟ್ಟಿಯಾಗಿ ತಡೆಹಿಡಿದಿದ್ದ ಕೆಂಪು ಟೇಪಾದ ಕೈಗಾರಿಕಾ ನೀತಿಯನ್ನು ಬದಲಾಯಿಸಲೇಬೇಕಾದ ಅಗತ್ಯವನ್ನು ಒಂದು ದಶಕದ ಹಿಂದೆಯೇ ಗುರುತಿಸಲಾಗಿತ್ತು. ಇಂದಿರಾ ಗಾಂಧಿಯವರ ಎರಡನೆಯ ಅವಧಿಯಲ್ಲಿ ನಿಗದಿಪಡಿಸದ ವಿದೇಶಿವಿನಿಮಯ ದರ, ಲೈಸನ್ಸುಗಳನ್ನು ರದ್ದುಪಡಿಸುವುದು ಮತ್ತು ಏಕಸ್ವಾಮ್ಯವಿರೋಧಿ ಕಾನೂನುಗಳನ್ನು ತೆಗೆಯುವ ಮಾತುಗಳು ಕೇಳಿಬಂದಿದ್ದವು. ರಾಜೀವ್ ಗಾಂಧಿಯವರು ತಮ್ಮ ಅಧಿಕಾರಾವಧಿಯ ಪ್ರಾರಂಭದಲ್ಲಿ ದೇಶದೊಳಗಿನ ಉದ್ದಿಮೆಗಳಿಗೆ ಸುಲಭವಾಗಿ ವ್ಯವಹಾರ ನಡೆಸುವಂತೆ ಮಾಡಲು ನಿರ್ಧರಿಸಿದ್ದರು. ಆದರೆ ಬದಲಾವಣೆಗಳು ಆಗೊಮ್ಮೆ ಈಗೊಮ್ಮೆ ನಡೆದವು. 1987ರ ಹೊತ್ತಿಗೆ ಹಗರಣಗಳಲ್ಲಿ ಸಿಲುಕಿದ ರಾಜೀವ್ ಯಾವುದೆ ಅಪಾಯವನ್ನು ಎದುರಿಸಲು ಸಿದ್ಧರಿರಲಿಲ್ಲ.

ಈ ನಡುವೆ 1988ರಲ್ಲಿ ರಾಕೇಶ್ ಮೋಹನ್ ಎಂಬ ಪ್ರಿನ್ಸ್‍ಟನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದ ಅರ್ಥಶಾಸ್ತ್ರಜ್ಞ ಕೈಗಾರಿಕಾ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಕೆಲಸಕ್ಕೆ ಸೇರಿದರು. ಅವರು ಹೊಸ ಕೈಗಾರಿಕಾ ನೀತಿಯ ಚೌಕಟ್ಟನ್ನು ರೂಪಿಸಲು ಆರಂಭಿಸಿದರು. ಸರ್ಕಾರವು ಬದಲಾಯಿತು ಮತ್ತು ಮೋಹನರ ಗಮನ ಬೇರೆಡೆಗೆ ಹರಿಯಿತು. ಆದರೆ 1990ರಲ್ಲಿ ಹೊಸ ಕೈಗಾರಿಕಾ ಸಚಿವ ಅಜಿತ್ ಸಿಂಗ್ ಲೈಸನ್ಸ್‍ರಾಜ್ ಅನ್ನು ಕೊನೆಗೊಳಿಸುವ ಹೊಸನೀತಿಯ ಕರಡನ್ನು ಸಿದ್ಧಪಡಿಸುವಂತೆ ಮೋಹನ್ ಮತ್ತು ಅಂದಿನ ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿದ್ದ ಅಮರ್ ನಾಥ ವರ್ಮಾರಿಗೆ ಆದೇಶ ನೀಡಿದರು. ಕ್ರಾಂತಿಕಾರಕವಾದ ಹೊಸನೀತಿಯ ಕರಡು ಕೆಲವು ತಿಂಗಳುಗಳಲ್ಲಿ ಸಿದ್ಧವಾಗಿತ್ತು. ಅದುವರೆಗೆ ಜಾರಿಯಲ್ಲಿದ್ದ ನೀತಿಗಳಿಗೆ ಪ್ರತಿಯಾಗಿ, ಹೊಸನೀತಿಯಲ್ಲಿ ಖಾಸಗಿ ವಲಯವು ಸರ್ಕಾರದ ಪೂರ್ವಾನುಮತಿಯಿಲ್ಲದೆ ಹೆಚ್ಚುಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಮುಕ್ತವಾಗಿ ಬಂಡವಾಳ ಹೂಡಬಹುದಿತ್ತು. ಆದರೆ ಈ ಶಿಫ಼ಾರಸುಗಳು ರಾಜಕೀಯ ಒಳಜಗಳಗಳ ಹಿನ್ನೆಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದವು.

1991ರಲ್ಲಿ ಪ್ರಧಾನಿ ರಾವ್ ಆ ಹಳೆಯ ಕರಡನ್ನು ಸಾರ್ವಜನಿಕ ನೀತಿಯಾಗಿ ಪರಿವರ್ತಿಸುವಂತೆ ತಮ್ಮ ಪ್ರಧಾನಕಾರ್ಯದರ್ಶಿ ಅಮರ್ ನಾಥ ವರ್ಮಾರಿಗೆ ಅಧಿಕಾರ ನೀಡಿದರು. ವರ್ಮಾ ಆಗ ಕೈಗಾರಿಕಾ ಕಾರ್ಯದರ್ಶಿಯಾಗಿದ್ದ ತಮ್ಮ ಮಿತ್ರ ಸುರೇಶ್ ಮಾಥುರ್ ಹಾಗೂ ರಾಕೇಶ್ ಮೋಹನ್ ಮತ್ತು ಜೈರಾಮ್ ರಮೇಶ್ ಅವರುಗಳನ್ನು ಚರ್ಚೆಗೆ ಆಹ್ವಾನಿಸಿದರು. ಅವರೆಲ್ಲರೂ ಕಾಯುತ್ತಿದ್ದ ಅವಕಾಶ ಇದು ಎಂದರು ವರ್ಮಾ. ಜುಲೈ 7ರ ಹೊತ್ತಿಗೆ ರಾಕೇಶ್ ಮೋಹನರ ಮೂಲಕರಡನ್ನು ತಿದ್ದಿ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಲಾಯಿತು.

ಪಕ್ಷದೊಳಗಣ ತೀವ್ರ ವಿರೋಧದ ನಡುವೆಯೂ ಹೊಸ ಕೈಗಾರಿಕಾ ನೀತಿಗೆ ಒಪ್ಪಿಗೆ ಪಡೆಯಲಾಯಿತು. ರಾಕೇಶ್ ಮೋಹನ್ ಹೇಳುವಂತೆ, ‘ನಾವು ಈ ನೀತಿಯನ್ನು ರೂಪಿಸಿದ್ದೆವು. ನಾವು ಬರೆಯುತ್ತಲೆ ಇದ್ದೆವು. ಆದರೆ ಸ್ಪಷ್ಟವಾದ ರಾಜಕೀಯ ಆದೇಶವಿಲ್ಲದೆ ಏನೂ ಆಗುತ್ತಿರಲಿಲ್ಲ. ನಾನು ಅವರ ಗಟ್ಟಿಯಾದ ರಾಜಕೀಯ ಬೆಂಬಲಕ್ಕಾಗಿ ರಾವ್ ಅವರಿಗೆ ಶ್ರೇಯಸ್ಸು ನೀಡುತ್ತೇನೆ.’

ಕೈಗಾರಿಕಾ ನೀತಿಯನ್ನು ಸಿದ್ಧಪಡಿಸುವ ಜೊತೆಗೆ ಜುಲೈ 24ರಂದು ಪಾರ್ಲಿಮೆಂಟಿನಲ್ಲಿ ಮಂಡಿಸಬೇಕಿದ್ದ ಬಜೆಟ್ ಸಿದ್ಧತೆ ಸಹ ನಡೆದಿತ್ತು. ಸರ್ಕಾರದ ಖರ್ಚುವೆಚ್ಚಗಳ ವರದಿ, ಹೊಸ ಯೋಜನೆಗಳು, ತೆರಿಗೆಗಳು ಮತ್ತು ಬಜೆಟ್ ಭಾಷಣ ಇವುಗಳು ಸಾಮಾನ್ಯವಾಗಿ ಬಜೆಟ್‍ನಲ್ಲಿ ಇರುತ್ತವೆ. ಅದು ಸರ್ಕಾರದ ಹಣಕಾಸಿನ ಹೇಳಿಕೆ, ಒಂದು ಸರಳವಾದ ಲೆಕ್ಕಪತ್ರದ ಕೆಲಸ. ಬಹಳಷ್ಟು ದೇಶಗಳಲ್ಲಿ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದಿಲ್ಲ. ಆದರೆ ಭಾರತದಲ್ಲಿ ಹಲವಾರು ವರ್ಷಗಳಿಂದ ಬಜೆಟ್ ಪಾರ್ಲಿಮೆಂಟ್ ಸಾರ್ವಜನಿಕ ನೀತಿಯನ್ನು ನಿಜವಾಗಿಯೂ ಚರ್ಚಿಸುವ ಕೆಲವೆ ಸಂದರ್ಭಗಳಲ್ಲಿ ಒಂದಾಗಿತ್ತು. 1991ರಲ್ಲಿ, ಸರ್ಕಾರಕ್ಕೆ ತನ್ನ ದೃಷ್ಟಿಕೋನ ಮತ್ತು ಮುನ್ನೋಟಗಳನ್ನು ಒದಗಿಸಲು ಅದೊಂದು ಪರಿಪೂರ್ಣ ವೇದಿಕೆಯಾಗಿತ್ತು.

1991ರ ಬಜೆಟ್ ಸಿದ್ಧತೆಗಳನ್ನು ಮನಮೋಹನ್ ಸಿಂಗ್ ನಿರ್ವಹಿಸಿದರು. ಅವರು ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯಗಳು ಹಾಗೂ ಪ್ರಧಾನಮಂತ್ರಿಗಳ ಕಾರ್ಯಾಲಯಗಳಿಂದ ಸಲಹೆಗಳನ್ನು ಪಡೆದರು. ಬಜೆಟ್ ಸೂಕ್ಷ್ಮವಾದ ದಾಖಲೆಯಾದುದರಿಂದ ಮತ್ತು ಉದ್ಯಮಿಗಳು ಅದರ ಕರಡನ್ನು ಪಡೆಯಲು ಹಣ ನೀಡಲು ಸಿದ್ದವಿರುವುದರಿಂದ ಅದರ ತಯಾರಿಯು ಗೋಪ್ಯವಾಗಿ ನಡೆಯುತ್ತದೆ. ಜುಲೈ 24ಕ್ಕೆ ಮೊದಲು ಹಲವು ವಾರಗಳ ಕಾಲ, ಬಜೆಟಿನ ಸಿದ್ಧತೆಯಲ್ಲಿ ಮಗ್ನರಾಗಿದ್ದ ಎಲ್ಲರೂ (ಹಣಕಾಸು ಸಚಿವಾಲಯವಿರುವ) ನಾರ್ತ್ ಬ್ಲಾಕ್‍ನ ನೆಲಮಾಳಿಗೆಯ ಕಛೇರಿಯಲ್ಲಿಯೇ ಇರಬೇಕಾಗಿತ್ತು. ಹೊರಗಿನ ಪ್ರಪಂಚದ ಸಂಪರ್ಕಕ್ಕೆ ದೂರವಾಣಿ ಸಹ ಇಲ್ಲದ ಅಲ್ಲಿಯೆ ಅವರ ಊಟ ಮತ್ತು ನಿದ್ರೆಗಳು ಸಹ ನಡೆಯುತ್ತಿದ್ದವು. ಹಣಕಾಸು ಸಚಿವರು ಸೇರಿದಂತೆ ಕೆಲವರಿಗೆ ಮಾತ್ರ ಹೊರಬರಲು ಅವಕಾಶವಿತ್ತು.

ಚಿದಂಬರಂ ಸಬ್ಸಿಡಿಯನ್ನು ತೆಗೆಯಲು ಒಪ್ಪಿದರು. ಆದರೆ ಇದರಿಂದ ರಫ್ತ್ತುದಾರರು ಆತಂಕಿತರಾಗುತ್ತಿದ್ದರು. ಅವರನ್ನು ಸಮಾಧಾನಗೊಳಿಸಲು ವಾಣಿಜ್ಯ ಇಲಾಖೆಯು ಉತ್ತೇಜನಾಕ್ರಮವೊಂದನ್ನು ತೆಗೆದುಕೊಳ್ಳಲು ತೀರ್ಮಾನಿಸಿತು. ಈ ಹೊಸಕ್ರಮವು ರಫ್ತ್ತುದಾರರಿಗೆ ಕೆಲವು ನಿರ್ಬಂಧಿತ ವಸ್ತುಗಳನ್ನು ಆಮದುಮಾಡಿಕೊಳ್ಳಲು ಅವಕಾಶ ಒದಗಿಸುತ್ತಿತ್ತು. ಚಿದಂಬರಂ ಮತ್ತು ಅಹ್ಲುವಾಲಿಯ ಇಬ್ಬರೂ ಎರಡೂ ಹೊಸನೀತಿಗಳನ್ನು ಒಟ್ಟಿಗೆ ಘೋಷಿಸಲು ಬಯಸಿದರು.

ಜುಲೈ 9ರಂದು ದೇಶವನ್ನು ಉದ್ದೇಶಿಸಿ ಮಾತನಾಡುತ್ತ, ನರಸಿಂಹರಾವ್ ಬಜೆಟಿನಲ್ಲಿ ಸುಧಾರಣೆಯ ಕಾರ್ಯಸೂಚಿಯಿರುತ್ತದೆ ಎಂಬ ಸುಳಿವು ನೀಡಿದ್ದರು. ಆದರೆ ಪಶ್ಚಿಮ ದೇಶಗಳಿಗೆ ಯಾವುದೆ ರಿಯಾಯಿತಿ ನೀಡಲು ಸಿದ್ಧರಿರದ ಹಣಕಾಸು ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳಿಗೆ ಪ್ರಧಾನಮಂತ್ರಿಗಳ ನಿರೀಕ್ಷೆ ಏನಿತ್ತು ಎನ್ನುವುದರ ಅರಿವಿರಲಿಲ್ಲ ಎನ್ನುವುದೂ ಸಾಧ್ಯ.

ಜುಲೈನ ಮಧ್ಯಭಾಗದಲ್ಲಿ ಮನಮೋಹನ್ ಸಿಂಗ್ ಬಜೆಟಿನ ಕರಡುಪ್ರತಿಯೊಂದಿಗೆ ಪ್ರಧಾನಿಗಳ ಕಛೇರಿಗೆ ಹೋದರು. ಅಂದು ಅವರು ನರಸಿಂಹರಾವ್ ಅವರನ್ನು ಭೇಟಿ ಮಾಡಿದಾಗ ಒಬ್ಬ ಹಿರಿಯ ಅಧಿಕಾರಿ ಮತ್ತು ಇನ್ನೊಬ್ಬರು ಭಾರತೀಯ ರಾಜತಾಂತ್ರಿಕರು ಅವರ ಕಛೇರಿಯಲ್ಲಿದ್ದರು. ಮನಮೋಹನ್ ಸಿಂಗ್ ಅವರು ನೀಡಿದ ಒಂದು ಪುಟದ ಸಾರಾಂಶವನ್ನು ನೀಡಿದರು. ಮನಮೋಹನರ ಜೊತೆಗೆ ನಿಂತಿದ್ದ ಆ ಇಬ್ಬರು ಅಧಿಕಾರಿಗಳು ಕುರ್ಚಿಯಲ್ಲಿ ಕುಳಿತಿದ್ದ ರಾವ್ ಆ ದಾಖಲೆಯನ್ನು ಓದಿದ್ದನ್ನು ನೆನಪಿಸಿಕೊಳ್ಳುತ್ತಾರೆ. ನಂತರ, ರಾವ್ ತಲೆಯೆತ್ತಿ ಮನಮೋಹನ್‍ರನ್ನು ನೋಡುತ್ತ ಹೇಳಿದರು, ‘ನನಗೆ ಇದು ಬೇಕಿದ್ದರೆ, ನಿಮ್ಮನ್ನೇಕೆ ಆಯ್ಕೆ ಮಾಡುತ್ತಿದ್ದೆ?’

ಈ ಸ್ಫೋಟಕ ಹೇಳಿಕೆಯನ್ನು ಇಬ್ಬರೂ ಅಧಿಕಾರಗಳು ಪ್ರತ್ಯೇಕವಾಗಿ ದೃಢೀಕರಿಸಿದರು. ಅವರಿಬ್ಬರೂ ಆ ಸಾರಾಂಶದ ಪುಟವನ್ನು ನೋಡಿರಲಿಲ್ಲ. ಮನಮೋಹನ್ ಸಿದ್ಧಪಡಿಸಿದ್ದ ಮೊದಲ ಕರಡು ಅಂತಿಮ ದಾಖಲೆಗಿಂತ ಕಡಿಮೆ ಸುಧಾರಣೆಗಳನ್ನು ಒಳಗೊಂಡಿತ್ತೆ ಎನ್ನುವುದನ್ನು ಪರೀಕ್ಷಿಸುವುದು ಸಾಧ್ಯವಾಗಲಿಲ್ಲ. ಬಜೆಟ್ ಸಿದ್ಧತೆಯಲ್ಲಿ ತೊಡಗಿದ್ದ ಇಬ್ಬರು ಹಣಕಾಸು ಸಚಿವಾಲಯದ ಅಧಿಕಾರಿಗಳು ಮನಮೋಹನ್‍ರ ವಿಚಾರಗಳ ಜೊತೆಗೆ ಸಹಮತವನ್ನು ಹೊಂದಿರಲಿಲ್ಲ ಎನ್ನುವ ಸಂಶಯವಿದೆ. ಆದರೆ ಈ ಕಥೆಯಿಂದ ನರಸಿಂಹರಾವ್ ಅವರಿಗೆ ಬಜೆಟ್ ಮೂಲಕ ಜುಲೈ 24ರಂದು ಯಾವ ಬಗೆಯ ಸಂದೇಶವನ್ನು ಕಳುಹಿಸಬೇಕು ಎನ್ನುವ ಬಗ್ಗೆ ಸ್ಪಷ್ಟ ಅರಿವಿತ್ತು ಎನ್ನುವುದು ತಿಳಿಯುತ್ತದೆ.

ರಾವ್ ಅವರ ಪತ್ರಸಂಗ್ರಹದಲ್ಲಿ ತಿಳಿಕಂದು ಬಣ್ಣದ ಕಾಗದದಲ್ಲಿ ಮುದ್ರಿತವಾಗಿರುವ ಪತ್ರವೊಂದಿದೆ. ಪತ್ರದಲ್ಲಿ ಸಹಿಯಿಲ್ಲದಿದ್ದರೂ ಪುಟದ ಮೇಲ್ಭಾಗದ ಬಲಮೂಲೆಯಲ್ಲಿ, ರಾವ್ ಅವರ ಕೈಬರವಣಿಗೆಯಲ್ಲಿ ‘ಧೀರೂಭಾಯಿ’ ಎಂಬ ಪದವಿದೆ. ಪತ್ರವು ಭಾರತ ಅಂದು ಎದುರಿಸುತ್ತಿದ್ದ ವಿತ್ತೀಯ ಕೊರತೆ ಮತ್ತು ಮರುಪಾವತಿ ಬಿಕ್ಕಟ್ಟನ್ನು ಪ್ರಾರಂಭದಲ್ಲಿಯೆ ಉಲ್ಲೇಖಿಸುತ್ತದೆ. ಇದಕ್ಕೆ ಪರಿಹಾರವಾಗಿ ಪತ್ರದಲ್ಲಿ ಲೈಸನ್ಸ್ ವ್ಯವಸ್ಥೆಯನ್ನು ತೆಗೆದುಹಾಕುವಂತೆ ಅಥವಾ ಬಾಹ್ಯ ಉದಾರೀಕರಣವನ್ನು ಸೂಚಿಸಲಾಗಿಲ್ಲ. ಬದಲಿಗೆ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಸರ್ಕಾರವು ಹೊಂದಿದ್ದ ಪಾಲನ್ನು ಮಾರಾಟ ಮಾಡಿ 16,000 ಕೋಟಿಗಳನ್ನು ಕ್ರೋಡೀಕರಿಸುವಂತೆ ಸಲಹೆ ಮಾಡಲಾಗಿತ್ತು.

ಬಜೆಟ್ ಮಂಡನೆಯ ಹಿಂದಿನ ದಿನಗಳಲ್ಲಿ ಪ್ರಧಾನಮಂತ್ರಿಗಳು ಕೈಗಾರಿಕೋದ್ಯಮಿಗಳನ್ನು ಭೇಟಿಮಾಡಿದರು. ಇವರಲ್ಲಿ ಹಲವರು ದೇಶದೊಳಗಿನ ಆಂತರಿಕ ಉದಾರೀಕರಣವನ್ನು ಬೆಂಬಲಿಸಿದರು. ಆದರೆ ವಿದೇಶಿ ಸ್ಪರ್ಧೆಗೆ ಅರ್ಥವ್ಯವಸ್ಥೆಯನ್ನು ಮುಕ್ತಗೊಳಿಸಿದರೆ ತಮ್ಮ ಉದ್ದಿಮೆಗಳಿಗೆ ತೊಂದರೆಯಾಗುತ್ತದೆ ಎನ್ನುವ ಆತಂಕ ಅವರಿಗಿತ್ತು. ಹೀಗೆ ಅವರನ್ನು ಭೇಟಿ ಮಾಡಿದವರಲ್ಲಿ ಕೆ.ಕೆ. ಬಿರ್ಲಾ ಮತ್ತು ಧೀರೂಭಾಯಿ ಅಂಬಾನಿ ಸೇರಿದ್ದರು.

ರಾವ್ ಅವರ ಪತ್ರಸಂಗ್ರಹದಲ್ಲಿ ತಿಳಿಕಂದು ಬಣ್ಣದ ಕಾಗದದಲ್ಲಿ ಮುದ್ರಿತವಾಗಿರುವ ಪತ್ರವೊಂದಿದೆ. ಪತ್ರದಲ್ಲಿ ಸಹಿಯಿಲ್ಲದಿದ್ದರೂ ಪುಟದ ಮೇಲ್ಭಾಗದ ಬಲಮೂಲೆಯಲ್ಲಿ, ರಾವ್ ಅವರ ಕೈಬರವಣಿಗೆಯಲ್ಲಿ ‘ಧೀರೂಭಾಯಿ’ ಎಂಬ ಪದವಿದೆ. ಪತ್ರವು ಭಾರತ ಅಂದು ಎದುರಿಸುತ್ತಿದ್ದ ವಿತ್ತೀಯ ಕೊರತೆ ಮತ್ತು ಮರುಪಾವತಿ ಬಿಕ್ಕಟ್ಟನ್ನು ಪ್ರಾರಂಭದಲ್ಲಿಯೆ ಉಲ್ಲೇಖಿಸುತ್ತದೆ. ಇದಕ್ಕೆ ಪರಿಹಾರವಾಗಿ ಪತ್ರದಲ್ಲಿ ಲೈಸನ್ಸ್ ವ್ಯವಸ್ಥೆಯನ್ನು ತೆಗೆದುಹಾಕುವಂತೆ ಅಥವಾ ಬಾಹ್ಯ ಉದಾರೀಕರಣವನ್ನು ಸೂಚಿಸಲಾಗಿಲ್ಲ. ಬದಲಿಗೆ, ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಸರ್ಕಾರವು ಹೊಂದಿದ್ದ ಪಾಲನ್ನು ಮಾರಾಟ ಮಾಡಿ 16,000 ಕೋಟಿಗಳನ್ನು ಕ್ರೋಡೀಕರಿಸುವಂತೆ ಸಲಹೆ ಮಾಡಲಾಗಿತ್ತು.

ಆ ಬಗೆಯ ಸಲಹೆಗಳು ಬೇರೆಡೆ ಅನುಷ್ಠಾನಗೊಂಡವು. ಉದಾಹರಣೆಗೆ 1991ರಲ್ಲಿ ಸೋವಿಯತ್ ಯೂನಿಯನ್ ಕುಸಿದ ನಂತರ, ಹೊಸದಾಗಿ ರೂಪುಗೊಂಡ ರಷ್ಯನ್ ಗಣರಾಜ್ಯವು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಕೈಗೊಂಡಿತು. ಹಲವಾರು ಉದ್ದಿಮೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಹೊಸ ಸರ್ಕಾರದ ಜೊತೆಗೆ ಸಂಬಂಧ ಹೊಂದಿದ್ದ ಉದ್ಯಮಿಗಳು ಕೊಂಡುಕೊಂಡರು. ರಷ್ಯನ್ ಶೈಲಿಯ ಈ ಖಾಸಗೀಕರಣವು ಕ್ರೋನಿ ಬಂಡವಾಳಶಾಹಿಯಾಗಿತ್ತೆ ಹೊರತು ನಿಜವಾದ ಉದಾರೀಕರಣವಾಗಿರಲಿಲ್ಲ. ನರಸಿಂಹರಾವ್ ಅವರ ಮೇಲೆ ಸಹ ಅಂತಹ ನೀತಿಯನ್ನು ಅಳವಡಿಸಿಕೊಳ್ಳುವಂತೆ ಒತ್ತಡವಿತ್ತು.

ಜುಲೈ 21ರ ವೇಳೆಗೆ ಸಿದ್ಧವಾದ ಬಜೆಟಿನ ಅಂತಿಮ ಕರಡು ನಿಜವಾಗಿಯೂ ಹೊಸಪಥವನ್ನು ಅನ್ವೇಷಿಸುತ್ತಿತ್ತು. ಆಮದು—ರಫ್ತು ನೀತಿಯನ್ನು ಪುನಾರಚಿಸಿ, ಭಾರತವನ್ನು ವಿಶ್ವಮಾರುಕಟ್ಟೆಗೆ ಉತ್ತಮ ಸಂಪರ್ಕವನ್ನು ಕಲ್ಪಿಸಿತು. ಸಬ್ಸಿಡಿಗಳನ್ನು ಕಡಿಮೆಮಾಡಿತು ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ಸುಲಭಗೊಳಿಸಿತು. ಲೈಸೆನ್ಸ್‍ಪರ್ಮಿಟ್—ಕೋಟಾ ರಾಜ್‍ನ ಮೂರನೆಯ ಕಂಬವಾಗಿದ್ದ ಜಾಗತಿಕ ಅರ್ಥವ್ಯವಸ್ಥೆಯಿಂದ ಭಾರತದ ಪ್ರತ್ಯೇಕತೆಯನ್ನು ಈ ಬಜೆಟ್ ಒಡೆದುಹಾಕಿತು.

ಬಜೆಟ್ ಮಂಡನೆಯ ಹಿಂದಿನ ದಿನ ಮತ್ತೊಂದು ವಿವಾದ ಕೈಗಾರಿಕೆ ಮತ್ತು ಹಣಕಾಸು ಸಚಿವಾಲಯಗಳ ನಡುವೆ ಹುಟ್ಟಿಕೊಂಡಿತು. ಮನಮೋಹನ್ ಸಿಂಗ್ ತಮ್ಮ ಬಜೆಟಿನಲ್ಲಿಯೇ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಲು ಬಯಸಿದರು. ಇದರಿಂದ ಸರ್ಕಾರವು ಆಂತರಿಕ ಮತ್ತು ಬಾಹ್ಯ ಉದಾರೀಕರಣಗಳೆರಡಕ್ಕೂ ಬದ್ಧವಾಗಿದೆ ಎನ್ನುವ ಸಂದೇಶವನ್ನು ಕಳುಹಿಸಿದಂತೆ ಆಗುತ್ತಿತ್ತು. ಆದರೆ ಕೈಗಾರಿಕಾ ಸಚಿವಾಲಯದ ಅಧಿಕಾರಿಗಳು, ತಮಗೂ ಶ್ರೇಯಸ್ಸು ದೊರಕಲೆಂದು, ಕೈಗಾರಿಕಾ ಸಚಿವರಿಂದಲೇ ಪ್ರತ್ಯೇಕವಾಗಿ ಹೊಸನೀತಿಯ ಘೋಷಣೆಯಾಗಬೇಕೆಂದು ಒತ್ತಾಯಿಸಿದರು. ಸಾಮಾನ್ಯವಾಗಿ ಉದಾರೀಕರಣದ ವಿರೋಧಿಗಳಾಗಿದ್ದ ಅಧಿಕಾರಿಗಳು ಈಗ ಹೊಸನೀತಿಗಳ ಶ್ರೇಯಸ್ಸನ್ನು ಪಡೆಯಲು ಹೊಡೆದಾಡಲು ಆರಂಭಿಸಿದ್ದು ನರಸಿಂಹರಾವ್ ಸರ್ಕಾರವು ಎಷ್ಟು ಬೇಗ ಅಧಿಕಾರಿಗಳ ಮನೋಭಾವವನ್ನು ಬದಲಿಸಿತು ಎನ್ನುವುದಕ್ಕೆ ಸಾಕ್ಷಿಯಾಗುತ್ತದೆ. ಕಡೆಗೆ ಪ್ರಧಾನಮಂತ್ರಿಗಳು ಕೈಗಾರಿಕಾ ಇಲಾಖೆಯ ಪರವಾಗಿ ನಿಂತರು ಮತ್ತು ಲೈಸೆನ್ಸ್—ರಾಜ್‍ನ ರದ್ದತಿಯನ್ನು ಪ್ರತ್ಯೇಕವಾಗಿಯೆ ಘೋಷಿಸಲು ಅನುಮತಿ ನೀಡಿದರು.

24 ಜುಲೈ, 1991, ಕಡು ಬೇಸಿಗೆಯ ದಿನ. ಪಾರ್ಲಿಮೆಂಟಿನ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಸದಸ್ಯರು ಅಂದು ಸಂಜೆ ದೀಪಾವಳಿಯ ಪಟಾಕಿಪ್ರದರ್ಶನದ ನಿರೀಕ್ಷೆಯಲ್ಲಿ ಒಳಹೊಕ್ಕರು.

ಆದರೆ ಪ್ರದರ್ಶನ ಮದ್ಯಾಹ್ನವೆ ಪ್ರಾರಂಭವಾಯಿತು. 12:50ಕ್ಕೆ ಕೈಗಾರಿಕಾ ಖಾತೆಯ ರಾಜ್ಯಸಚಿವ ಪಿ.ಜೆ. ಕುರಿಯನ್ ಲೋಕಸಭೆಯಲ್ಲಿ ಒಂದು ಸಪ್ಪೆ ಘೋಷಣೆಯನ್ನು ಮಾಡಲು ಎದ್ದುನಿಂತರು. ಹೊಸನೀತಿಯ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಕೈಗಾರಿಕಾ ಖಾತೆಯನ್ನು ನಿರ್ವಹಿಸುತ್ತಿದ್ದ ಪ್ರಧಾನಿಗಳೆ ಅದನ್ನು ಮಂಡಿಸಬೇಕಿತ್ತು. ಆದರೆ ರಾವ್ ಅವರಿಗೆ ಅದು ಬೇಕಿರಲಿಲ್ಲ. ಹಾಗಾಗಿ, ಅವರ ಡೆಪ್ಯುಟಿ ಎದ್ದುನಿಂತು ಹೇಳಿದರು, ‘ಸರ್, ನಾನು ಸಭೆಯ ಮುಂದೆ ಕೈಗಾರಿಕಾ ನೀತಿಯ ಬಗ್ಗೆ (ಹಿಂದಿ ಮತ್ತು ಇಂಗ್ಲೀಷ್ ಆವೃತ್ತಿಗಳಲ್ಲಿ) ಒಂದು ಹೇಳಿಕೆಯನ್ನು ಮಂಡಿಸಲು ಕೋರುತ್ತೇನೆ.’

ಈ ನಿರುಪದ್ರವಿ ಹೇಳಿಕೆ ಅವರು ಮಂಡಿಸಿದ್ದ ಮೂಲಭೂತ ಬದಲಾವಣೆಗಳನ್ನು ಒಳಗೊಂಡಿದ್ದ ನೀತಿಯನ್ನು ಸಂಪೂರ್ಣವಾಗಿ ಬಚ್ಚಿಟ್ಟಿತ್ತು. ಅದರ ಅತ್ಯಂತ ಪ್ರಖ್ಯಾತ ವಾಕ್ಯವೆಂದರೆ ‘ಕೈಗಾರಿಕಾ ಪರವಾನಗಿಯನ್ನು ಇನ್ನು ಮುಂದೆ ಎಲ್ಲ ಕೈಗಾರಿಕೆಗಳಿಗೂ, ಅವುಗಳ ಬಂಡವಾಳದ ಮೊತ್ತವನ್ನು ಅಲಕ್ಷಿಸುತ್ತ, ನಿರ್ದಿಷ್ಟವಾಗಿ ಗುರುತಿಸಿರುವುಗಳನ್ನು ಹೊರತುಪಡಿಸಿ, ರದ್ದುಪಡಿಸಲಾಗಿದೆ.’ ರದ್ದುಪಡಿಸಿದ ಕೈಗಾರಿಕೆಗಳು ಕೇವಲ 18 ಮಾತ್ರವಿದ್ದವು. ಹೊಸನೀತಿಯು ಸಾರ್ವಜನಿಕ ವಲಯದ ಏಕಸ್ವಾಮ್ಯವನ್ನು ಕೇವಲ ಎಂಟು ಕ್ಷೇತ್ರಗಳಿಗೆ ಸೀಮಿತಗೊಳಿಸಿತು. ಎರಡನೆಯ ಬದಲಾವಣೆಯೆಂದರೆ ಏಕಸ್ವಾಮ್ಯವಿರೋಧಿ ಮಿತಿಗಳನ್ನು ಕಡಿಮೆಮಾಡಿ ದೊಡ್ಡ ಉದ್ದಿಮೆಗಳ ಬಗ್ಗೆ ಇದ್ದ ಭೀತಿಯನ್ನು ಕೊನೆಗೊಳಿಸಲಾಯಿತು. ಮೂರನೆಯ ಬದಲಾವಣೆಯೆಂದರೆ 34 ಕೈಗಾರಿಕೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಸರ್ಕಾರದ ಒಪ್ಪಿಗೆಯೊಂದಿಗೆ ಶೇ 40ರಿಂದ ಶೇ 51ರವರಗೆ ಏರಿಸಲಾಯಿತು. ಹೀಗೆ ಬಂಡವಾಳದ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರದ ನೇರ ಒಪ್ಪಿಗೆಯಿತ್ತು. ಸ್ವತಂತ್ರಭಾರತದ ಇತಿಹಾಸದಲ್ಲಿ ಇದೊಂದು ಅತ್ಯಂತ ರ್ಯಾಡಿಕಲ್ ಆದ ಆರ್ಥಿಕ ನೀತಿಯ ದಾಖಲೆಯಾಗಿತ್ತು ಮತ್ತು ಇದನ್ನು ಯಾವುದೆ ಸಂಭ್ರಮವಿಲ್ಲದೆ ಮಂಡಿಸಲಾಯಿತು.

ಕೆಲವು ಗಂಟೆಗಳ ನಂತರ, ತಿಳಿ ನೆಹ್ರು ಜಾಕೆಟ್ ಧರಿಸಿ ಪಕ್ಕದಲ್ಲಿ ಕೆಂಪು ಬಜೆಟ್ ಬ್ರೀಫ್ ಕೇಸ್ ಇಟ್ಟುಕೊಂಡಿದ್ದ ಮನಮೋಹನ್ ಸಿಂಗ್ ತಮ್ಮ ಖುರ್ಚಿಯಿಂದೆದ್ದು ತಮ್ಮ ಜೀವನದ ಅತ್ಯಂತ ಮುಖ್ಯ ಭಾಷಣ ಮಾಡಲು ಪ್ರಾರಂಭಿಸಿದರು. ಮುಂದಿನ ಹಲವು ಗಂಟೆಗಳಲ್ಲಿ, ಸಿಂಗ್ ಆಮದು—ರಫ್ತ್ತು ನೀತಿಯನ್ನು ಸಮಗ್ರವಾಗಿ ಬದಲಿಸಿದರು, ರಫ್ತ್ತುಗಳನ್ನು ಹೆಚ್ಚಿಸಲು ಕ್ರಮಗಳನ್ನು ಘೋಷಿಸಿದರು, ಆಮದು ಲೈಸೆನ್ಸಿಂಗನ್ನು ಕತ್ತರಿಸಿದರು ಮತ್ತು ತೆರಿಗೆಗಳನ್ನು ಕಡಿಮೆ ಮಾಡಿದರು. ಬಜೆಟ್ ಬಂಡವಾಳದ ಮಾರುಕಟ್ಟೆಗೆ ತಳಹದಿ ಹಾಕುವುದರ ಮೂಲಕ ಅದಕ್ಕೆ ಜೀವ ತುಂಬಿತು. ಸಿಂಗ್ ಅವರು ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಶೇ40ರಷ್ಟು ಕಡಿಮೆ ಮಾಡಿದರು. ಸಬ್ಸಿಡಿ ಪಡೆಯುತ್ತಿದ್ದ ಸಕ್ಕರೆ ಮತ್ತು ಎಲ್.ಪಿ.ಜಿ. ಸಿಲಿಂಡರುಗಳ ಬೆಲೆಯನ್ನು ಏರಿಸಲಾಯಿತು. ಕೆಲವು ಗಂಟೆಗಳ ಹಿಂದೆ ಕೈಗಾರಿಕಾ ನೀತಿಯಲ್ಲಿ ಮಾಡಲಾಗಿದ್ದ ಬದಲಾವಣೆಗಳನ್ನು ಅವರು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಎದುರಿಸಬೇಕಾಗಿದ್ದ ಕಷ್ಟಗಳ ಬಗ್ಗೆ ಎಚ್ಚರಿಕೆ ನೀಡಿದರೂ ಸಹ, ಕಡೆಯಲ್ಲಿ ಆಶಾವಾದದ ದನಿಯಲ್ಲಿ ಸಿಂಗ್ ತಮ್ಮ ಭಾಷಣವನ್ನು ಅಂತ್ಯಗೊಳಿಸಿದರು: ‘ವಿಕ್ಟರ್ ಹ್ಯುಗೊ ಒಮ್ಮೆ ಹೇಳಿದಂತೆ, “ಒಂದು ವಿಚಾರದ ಕಾಲ ಬಂದ ನಂತರ ಭೂಮಿಯ ಮೇಲಿನ ಯಾವ ಶಕ್ತಿಯೂ ಅದನ್ನು ತಡೆಯಲು ಸಾಧ್ಯವಿಲ್ಲ.”’

ಮನಮೋಹನ್ ಸಿಂಗ್ ತಮ್ಮ ಬಜೆಟಿನಲ್ಲಿಯೇ ಹೊಸ ಕೈಗಾರಿಕಾ ನೀತಿಯನ್ನು ಘೋಷಿಸಲು ಬಯಸಿದರು. ಇದರಿಂದ ಸರ್ಕಾರವು ಆಂತರಿಕ ಮತ್ತು ಬಾಹ್ಯ ಉದಾರೀಕರಣಗಳೆರಡಕ್ಕೂ ಬದ್ಧವಾಗಿದೆ ಎನ್ನುವ ಸಂದೇಶವನ್ನು ಕಳುಹಿಸಿದಂತೆ ಆಗುತ್ತಿತ್ತು. ಆದರೆ ಕೈಗಾರಿಕಾ ಸಚಿವಾಲಯದ ಅಧಿಕಾರಿಗಳು, ತಮಗೂ ಶ್ರೇಯಸ್ಸು ದೊರಕಲೆಂದು, ಕೈಗಾರಿಕಾ ಸಚಿವರಿಂದಲೇ ಪ್ರತ್ಯೇಕವಾಗಿ ಹೊಸನೀತಿಯ ಘೋಷಣೆಯಾಗಬೇಕೆಂದು ಒತ್ತಾಯಿಸಿದರು.

ಒಂದೇ ದಿನದಲ್ಲಿ, ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಲೈಸೆನ್ಸ್‍ರಾಜ್‍ನ ಮೂರು ಕಂಬಗಳಾದ ಸಾರ್ವಜನಿಕ ವಲಯದ ಏಕಸ್ವಾಮ್ಯ, ಖಾಸಗಿ ಉದ್ಯಮಗಳ ಮೇಲಿನ ಮಿತಿ ಮತ್ತು ಜಾಗತಿಕ ಮಾರುಕಟ್ಟೆಗಳಿಂದ ಪ್ರತ್ಯೇಕತೆ ಕಿತ್ತೊಗೆಯಲು ಬೇರೆ ಯಾರೂ ಮಾಡದಷ್ಟು ಮಾಡಿದರು.

ಆದರೆ ರಾವ್ ತಮ್ಮ ಮುಖ್ಯಮಂತ್ರಿ ಸಮಯದ ಅನುಭವದಿಂದ ಸಂತಸವನ್ನೂ ತೋರಬಾರದು, ಶ್ರೇಯಸ್ಸನ್ನು ಕೇಳಬಾರದು ಎನ್ನುವ ಪಾಠ ಕಲಿತಿದ್ದರು. ಯಾವಾಗ ಸಿಂಹದಂತೆ ಯಾವಾಗ ಇಲಿಯಂತೆ ಇರಬೇಕು ಎನ್ನುವುದನ್ನು ಅರಿತಿದ್ದರು. ತಮ್ಮದೇ ಆದ ಕೈಗಾರಿಕಾ ನೀತಿಯನ್ನು ಅವರು ಮಂಡಿಸಲು ನಿರಾಕರಿಸಿದರು. ಮನಮೋಹನ್‍ರ ಬಜೆಟ್ ಭಾಷಣದುದ್ದಕ್ಕೂ ಅವರ ಪಕ್ಕದಲ್ಲಿಯೇ ಒಂದು ಮಾತೂ ಆಡದೆ ಕುಳಿತಿದ್ದರು. ಹೀಗೆ ಇಡೀ ದಿನವನ್ನು ಭಾರತದ ಆರ್ಥವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಿಸಲು ಕಳೆದ ನಂತರ, ಅಂದು ರಾತ್ರಿ ಎಂಟು ಗಂಟೆಗೆ ನರಸಿಂಹರಾವ್ ಮಾರಿಷಸ್ಸಿನ ಪ್ರಧಾನಿಗಳಿಗೆ ಭೋಜನಕೂಟ ಏರ್ಪಡಿಸಿದ್ದರು.

ಎಂದಿನಂತೆ ದೈನಂದಿನ ವ್ಯವಹಾರಗಳು ಮುಂದುವರೆದವು.

* ಲೇಖಕರು ಕಾನೂನು ಮತ್ತು ರಾಜಕೀಯಶಾಸ್ತ್ರಗಳನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ಪ್ರಿನ್ಸ್‍ಟನ್ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದಾರೆ. ಈಗ ಅವರು ದೆಹಲಿ ಸಮೀಪದ ಅಶೋಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು.

ಫ್ರ್ಯಾಂಕ್ ಓ’ಕಾನರ್ ಕನ್ನಡಕ್ಕೆ: ಡಾ.ಬಸು ಬೇವಿನಗಿಡದ

ಪಾಪ ನಿವೇದನೆ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ದಾಂಪತ್ಯ ಮೀರಿದ ಬೌದ್ಧಿಕ ಸಾಂಗತ್ಯ

ಜುಲೈ ೨೦೧೮

ಪರಮೇಶ್ವರ ಗುರುಸ್ವಾಮಿ

ಟೆಕ್ ಡ್ರೀಮರ್ಸ್ ಓದಲೇಬೇಕಾದ ‘ಹಿಟ್ ರಿಫ್ರೆಶ್’

ಜುಲೈ ೨೦೧೮

ಡಾ.ರಾಕೇಶ್ ಬಟಬ್ಯಾಲ್

ಜೆ.ಎನ್.ಯು ದ ಮೇಕಿಂಗ್ ಆಫ್ ಎ ಯೂನಿವರ್ಸಿಟಿ

ಜೂನ್ ೨೦೧೮

ಎಸ್.ಆರ್.ವಿಜಯಶಂಕರ

ಮೊಗಳ್ಳಿ ಗಣೇಶ್ ಹೊಸ ಕಥಾ ಸಂಕಲನ ದೇವರ ದಾರಿ

ಜೂನ್ ೨೦೧೮

ಮಂಜುನಾಥ ಡಿ.ಎಸ್.

ಅಹಿಂಸಾತ್ಮಕ ಸಂವಹನ

ಜೂನ್ ೨೦೧೮

ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕದ ರಾಜಕಾರಣ ಹೇಗೆ ಬದಲಾಗಿದೆ?

ಮೇ ೨೦೧೮

ಪುರುಷೋತ್ತಮ ಬಿಳಿಮಲೆ

ಅವಲೋಕನ ಸಮಕಾಲೀನ ಚರ್ಚೆಗೆ ಹೆಚ್ಚು ಪ್ರಸ್ತುತ

ಮೇ ೨೦೧೮

ಪ್ರೊ.ಶಿವರಾಮಯ್ಯ

ದೇಸಿ ಕನ್ನಡ ಪರಂಪರೆ

ಮೇ ೨೦೧೮

ರಾಜದೀಪ್ ಸರ್ದೇಸಾಯಿ

ಗುಜರಾತಿನ ನರೇಂದ್ರಭಾಯಿ

ಎಪ್ರಿಲ್ ೨೦೧೮

ಸ್ನೇಹಲತಾ ಎಸ್. ಗೌನಳ್ಳಿ

ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ ಜೀವನ ಮತ್ತು ಕಾವ್ಯ

ಎಪ್ರಿಲ್ ೨೦೧೮

ವಿನಯ್ ಸೀತಾಪತಿ

ಪಿ. ವಿ. ನರಸಿಂಹರಾವ್ ಜೀವನಚರಿತ್ರೆ ಹಾಫ್ ಲಯನ್

ಮಾರ್ಚ್ ೨೦೧೮

ಅರುಣ್ ಜೋಳದಕೂಡ್ಲಿಗಿ

ಪೆರಿಯಾರ್ ವಿವಾಹ ಪದ್ಧತಿ

ಮಾರ್ಚ್ ೨೦೧೮

ಮೂಲ: ಇ.ರಾಘವನ್; ಜೇಮ್ಸ್ ಮೇನರ್ ಅನುವಾದ: ಪೃಥ್ವಿ ದತ್ತ ಚಂದ್ರ ಶೋಭಿ

ಭೂಸುಧಾರಣೆ ಜಾತಿ ಮೀಸಲಾತಿ ತುರ್ತುಪರಿಸ್ಥಿತಿ

ಫೆಬ್ರವರಿ ೨೦೧೮

- ಕಲ್ಲೇಶ್ ಕುಂಬಾರ್, ಹಾರೂಗೇರಿ

ಬಿಚ್ಚಿಟ್ಟ ಬಾಲ್ಯದ ನೆನಪುಗಳ ಬುತ್ತಿ

ಫೆಬ್ರವರಿ ೨೦೧೮

ಡಾ.ಪಿ.ಮಣಿ

ಮಂಟೇಸ್ವಾಮಿ ಕಾವ್ಯದಲ್ಲಿ ಸಿದ್ಧಪ್ಪಾಜಿ

ಫೆಬ್ರವರಿ ೨೦೧೮