2nd ಮಾರ್ಚ್ ೨೦೧೮

ನಾಗರಿಕ ಸಮಾಜ
ಸರ್ಕಾರಕ್ಕೆ ಬಿಸಿತುಪ್ಪ

ವಾಸುದೇವ ಶರ್ಮಾ ಎನ್. ವಿ.

ಹಲವು ವೈರುಧ್ಯಗಳ ಮಧ್ಯೆಯೂ ರಾಜ್ಯದಲ್ಲಿ ನಾಗರಿಕ ಸಮಾಜ, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಥಮಗಳನ್ನು ಸಾಧಿಸಿದೆ.

ಜನಸಮುದಾಯಗಳ ದನಿ, ಹಿತಾಸಕ್ತಿಗಳು, ಹಕ್ಕು, ನೆಮ್ಮದಿಗಳನ್ನು ಕಾಯ್ದುಕೊಳ್ಳುವ ಮತ್ತು ಅದರ ಪರವಾಗಿ ಪ್ರಯೋಗ, ಪ್ರತಿಭಟನೆ, ವಕೀಲಿಯೇ ಮೊದಲಾದವುಗಳನ್ನು ಕೈಗೊಳ್ಳುವ ಒಟ್ಟು ಶಕ್ತಿಯೇ ನಾಗರಿಕ ಸಮಾಜ ಅಥವಾ ಸರ್ಕಾರೇತರ ಮತ್ತು ಲಾಭ ರಹಿತ ಗುಂಪು, ಸಂಘಟನೆಗಳು. ಇಂದಿನ ಪರಿಭಾಷೆಯಲ್ಲಿ ಇದನ್ನು ಸ್ವಯಂಸೇವಾ ಸಂಘಟನೆಗಳು ಎಂದು ಗುರುತಿಸುವುದು ಸಾಮಾನ್ಯ. ಕರ್ನಾಟಕ ರಾಜ್ಯದುದ್ದಕ್ಕೂ ಸ್ವಯಂಸೇವಾ ಸಂಘಟನೆಗಳು, ಇಂತಹ ಸಂಘಟನೆಗಳ ಜಾಲಗಳು, ಚಳವಳಿಗಳು ಮಕ್ಕಳ ಹಕ್ಕು ಕೇಂದ್ರಿತವಾಗಿ ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಕಂಡುಕೊಂಡಿವೆ. ಬಹಳ ಮುಖ್ಯವಾಗಿ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳ ಸಾಗಣೆ ತಡೆಯುವುದು, ಶಿಕ್ಷಣದ ಸಾರ್ವತ್ರೀಕರಣ, ಹೆಣ್ಣುಮಕ್ಕಳು, ಹಿಂದುಳಿದ ಜಾತಿ ವರ್ಗಗಳು, ಅಂಗವಿಕಲರು, ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವ ಪ್ರಯತ್ನಗಳನ್ನು ಕೈಗೊಂಡಿರುವುದು ಗಮನಾರ್ಹ. ಇಂತಹ ಪ್ರಯತ್ನಗಳಲ್ಲೆಲ್ಲಾ ನಾಗರಿಕ ಸಮಾಜದ ಎದುರಾಳಿ ಇತ್ತೀಚಿನ ದಿನಗಳಲ್ಲಿ ಸರ್ಕಾರ ಅಥವಾ ಸರ್ಕಾರದ ಪ್ರತಿನಿಧಿಗಳೇ ಆಗಿದ್ದಾರೆ!

ಮಕ್ಕಳ ಶೋಷಕರು, ಅನ್ಯಾಯ ಮಾಡುವವರು, ಅತ್ಯಾಚಾರಿಗಳನ್ನು ವ್ಯಕ್ತಿಗತವಾಗಿ ಗುರಿ ಮಾಡಿ ದಾಳಿ ಮಾಡಿದಾಗ, ಮಕ್ಕಳನ್ನು ರಕ್ಷಿಸಿ ಅವರಿಗಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಚಿಕ್ಕ ಪುಟ್ಟ ಪ್ರಮಾಣದಿಂದ ದೊಡ್ಡ ಪ್ರಮಾಣದವರೆಗೂ ನಡೆಸುತ್ತಿದ್ದಾಗ ಕಳೆದ ಇಪ್ಪತ್ತು ಮುವತ್ತು ವರ್ಷಗಳಲ್ಲಿ ಸರ್ಕಾರವೂ ಪಕ್ಕದಲ್ಲಿ ನಿಂತು ಚಪ್ಪಾಳೆ ಹೊಡೆದಿತ್ತು. ಸ್ವಯಂಸೇವಾ ಸಂಘಟನೆಗಳು, ಅವುಗಳ ಸಿಬ್ಬಂದಿ ಒಂದು ರೀತಿಯಲ್ಲಿ ಒಂಟಿ ಹೋರಾಟಗಾರರು. ಅವರ ಬಳಿ ಪ್ರಬಲವಾದ ಕಾನೂನು, ನೀತಿ, ನಿಯಮ, ನಿರ್ದೇಶನಗಳು, ಹಿಂದಿನ ಅನುಭವ ಜನ್ಯ ಮಾರ್ಗಸೂಚಿಗಳು, ನ್ಯಾಯಾಲಯಗಳ ತೀರ್ಪು ಇರಲಿಲ್ಲ. ಎಲ್ಲವೂ ಹೊಸ ಪ್ರಯೋಗ ಪ್ರಯತ್ನಗಳು. ಸಾಕಷ್ಟು ಸೋಲು. ಎಲ್ಲೋ ಕೆಲವು ಗೆಲವುಗಳು. ಅವೇ ಮುಂದೆ ನುಗ್ಗಲು ಸ್ಫೂರ್ತಿ. ದೇಶೀ ವಿದೇಶೀ ಸಂಸ್ಥೆಗಳಿಂದ ಅಲ್ಪಸ್ವಲ್ಪ ಧನ ಸಹಾಯ ಇದ್ದುದರಿಂದ ಇಂತಹ ನೂರಾರು ಪ್ರಯೋಗಗಳು ಅಲ್ಲಲ್ಲಿ ನಡೆದಿದ್ದವು.

ಇಂತಹ ನಾಗರಿಕ ಸಮಾಜದ ಪ್ರಯೋಗ ಅನುಭವ, ಕಲ್ಪನೆಗಳನ್ನು ತೆಗೆದುಕೊಂಡು ಸರ್ಕಾರ ‘ಕಲ್ಯಾಣ ಕಾರ್ಯಕ್ರಮ’ಗಳಲ್ಲಿ ಸೇರಿಸುವ ದೊಡ್ಡ ಮನಸ್ಸು ತೋರಿತ್ತು. ಅದಕ್ಕೆ ಯೋಜನೆ, ಕಾರ್ಯಕ್ರಮ ಎಂದು ಹೆಸರಿಸಿತ್ತು. ಅವು ಆರೋಗ್ಯ, ಶಿಕ್ಷಣ, ರಕ್ಷಣೆ, ಸೌಲಭ್ಯಗಳು, ಸೇವೆಗಳು ಎಂದೆಲ್ಲಾ ರೂಪ ತಾಳಿ, ಅಂತಹವುಗಳಿಗೆ ಬೇಕಾದ ದೊಡ್ಡ ಪ್ರಮಾಣದ ಹಣ ಹೊಂದಿಸಲು ಹತ್ತು ಹದಿನೈದು ವರ್ಷಗಳ ಹಿಂದೆಯೂ ಹೆಣಗಾಡುತ್ತಿದ್ದುದು, ಕೇಂದ್ರದ ಸಹಾಯ, ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳಿಂದ ಹಣ, ತಾಂತ್ರಿಕ ಸಹಾಯಗಳೇ ಮೊದಲಾದವುಗಳಿಗಾಗಿ ರಾಜ್ಯ ಸರ್ಕಾರ ಕಾಯುತ್ತಿತ್ತು. ಅದೀಗ ಚರಿತ್ರೆ!

ನಾಗರಿಕ ಸಮಾಜವನ್ನು ಹಲವು ರೂಪಗಳಲ್ಲಿ ಸರ್ಕಾರ ತನ್ನ ಜೊತೆ ಈಗ ಸೇರಿಸಿಕೊಂಡಿದೆ. ಸಮಿತಿಗಳು, ಆಯೋಗಗಳು, ಅಧ್ಯಯನಗಳು, ಸಮ್ಮೇಳನ, ಸಮಾಲೋಚನೆ, ವರದಿ, ನೀತಿ ನಿರೂಪಣೆ, ವಿಧಿವಿಧಾನಗಳ ರಚನೆ, ತರಬೇತಿ, ಇಲ್ಲೆಲ್ಲಾ ನಾಗರಿಕ ಸಮಾಜದ ಪ್ರತಿನಿಧಿಗಳು ನಿತ್ಯ ಕಾಣಿಸಿಕೊಳ್ಳಲೇಬೇಕು. ಸರ್ಕಾರಕ್ಕಿದು ಬಹಳ ಅವಶ್ಯಕ. ಹೀಗೆ ಮಾಡಿ ಎಂದು ನ್ಯಾಯಾಲಯಗಳ, ವಿಶ್ವಸಂಸ್ಥೆಯ ಅಂಗಸಂಸ್ಥೆಗಳು, ಒಡಂಬಡಿಕೆಗಳು, ಒಪ್ಪಂದಗಳ ನಿರ್ದೇಶನವಿದೆ. ಒಂದಷ್ಟು ಸ್ವಯಂಸೇವಾ ಸಂಘಟನೆಗಳಿಗೆ ಇದು ಬಹಳ ಆಪ್ಯಾಯಮಾನ. ಸರ್ಕಾರ ನೀಡುವ ಕಾರ್ಯಕ್ರಮಗಳನ್ನು ಚಾಚೂ ತಪ್ಪದೆ ನಿರ್ದಿಷ್ಟ ಚೌಕಟ್ಟಿನಲ್ಲಿ ಮಾಡುವವರು ಅಥವಾ ಮಾಡಿದಂತೆ ತೋರುವವರು ಉತ್ತಮರು. ಆದರೆ, ವಾಸ್ತವ ಹಾಗಿಲ್ಲ, ಈ ತೋರಿಕೆಯ ‘ಕಲ್ಯಾಣ ಕಾರ್ಯಕ್ರಮ’ಗಳಿಂದ ಮಕ್ಕಳ ಉದ್ಧಾರವಾಗಿಲ್ಲ, ಎಂದು ‘ಮಕ್ಕಳ ಹಕ್ಕಿನ ದೃಷ್ಟಿಕೋನ’ದಲ್ಲಿ ಪ್ರತಿಭಟಿಸುವ, ವಕೀಲಿ ನಡೆಸುವ, ಸಂಸ್ಥೆಗಳ ಜಾಲವೇರ್ಪಡಿಸಿ ಸರ್ಕಾರದ ಓರೆಕೋರೆಗಳನ್ನು ಪ್ರಶ್ನಿಸುವ ನಾಗರಿಕ ಸಮಾಜದ ಇನ್ನೊಂದು ಮುಖ ಸರ್ಕಾರಕ್ಕೆ ಬಿಸಿತುಪ್ಪವಾಗಿದೆ.

ಇಂತಹ ವೈರುಧ್ಯಗಳ ಮಧ್ಯೆಯೂ, ಕರ್ನಾಟಕ ರಾಜ್ಯದಲ್ಲಿ ನಾಗರಿಕ ಸಮಾಜ ಮಕ್ಕಳು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಥಮಗಳನ್ನು ಸಾಧಿಸಿದೆ. ಕೆಲವು ಸಂಸ್ಥೆಗಳು ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟವನ್ನು ಖಾತರಿಪಡಿಸಲು ಸ್ವಯಂಆಗಿ ಮತ್ತು ಸರ್ಕಾರದೊಡನೆ ಸೇರಿಯೂ ಯತ್ನಿಸುತ್ತಿವೆ. ಮಕ್ಕಳ ಅಪೌಷ್ಟಿಕತೆ, ಆರೋಗ್ಯ, ಮಕ್ಕಳು ಮತ್ತು ತಾಯಂದಿರ ಸಾವಿನ ವಿಚಾರವನ್ನು ಗುಟ್ಟು ಮಾಡಬೇಡಿ, ಅದರಲ್ಲೂ ಇವುಗಳಿಗೆ ಬಲಿಯಾಗುತ್ತಿರುವವರು ಹಿಂದುಳಿದ ಜಾತಿ ವರ್ಗಗಳ ಪ್ರದೇಶಗಳ ಬಡವರು ಎಂಬುದನ್ನು ಪ್ರಮುಖವಾಗಿ ಸರ್ಕಾರದ್ದೇ ಕರ್ತವ್ಯಲೋಪ, ಭ್ರಷ್ಟಾಚಾರ ಎನ್ನುವುದನ್ನು ನ್ಯಾಯಾಲಯದ ತನಕ ಒಯ್ಯಲಾಗಿದೆ. ಮಕ್ಕಳ ಮೇಲಿನ ಅಪರಾಧಗಳು ಬಾಲಕಾರ್ಮಿಕ ಮತ್ತು ಜೀತ ಪದ್ಧತಿ, ಬಾಲ್ಯವಿವಾಹ, ದೇವದಾಸಿ ಪದ್ಧತಿ, ಮಕ್ಕಳ ಮಾರಾಟ ಸೂಳೆಗಾರಿಕೆ, ಮಕ್ಕಳ ಮೇಲಿನ ಅತ್ಯಾಚಾರ, ಇವೇ ಮೊದಲಾದವುಗಳಿಗೆ ಬಲಿಯಾದವರು ಒಬ್ಬರೇ ಕುಳಿತು ಸಹಾಯವಿಲ್ಲ ಎಂದು ಪರಿತಪಿಸುವುದಿಲ್ಲ. ಹತ್ತಾರು ಸ್ವಯಂಸೇವಾ ಸಂಘಟನೆಗಳು, ಇಂತಹ ಸಂಘಟನೆಗಳ ಜಾಲಗಳು ಕ್ಷಿಪ್ರವಾಗಿ ‘ಹಕ್ಕು ಆಧಾರಿತ’ ಪ್ರತಿಕ್ರಿಯೆ ತೋರುತ್ತಿವೆ. ಕೆಲವೊಮ್ಮೆ ಸಂಬಂಧಿಸಿದ ಶಾಸನಬದ್ಧ ಸಂಸ್ಥೆಗಳ ಪ್ರತಿರೋಧದ ನಡುವೆಯೂ ಮಕ್ಕಳಿಗೆ ನ್ಯಾಯ ದೊರಕಿಸಲು ಮುಂದಾಗುತ್ತಿವೆ. ಜನಪ್ರತಿನಿಧಿಗಳೊಂದಿಗೆ ಶಾಸನಸಭೆಗಳಿಗೂ ವಕೀಲಿಯ ಕೈಚಾಚುವುದುಸಾಧ್ಯವಿದೆ ಎಂದು ನಾಗರಿಕ ಸಮಾಜ ಕಂಡುಕೊಂಡಿದೆ ಮತ್ತು ಅದನ್ನು ಸಮರ್ಥವಾಗಿ ನಿರ್ವಹಿಸುತ್ತಲೂ ಇದೆ.

ಮಕ್ಕಳ ವಿಚಾರ, ಮಕ್ಕಳ ಹಕ್ಕುಗಳು ಎನ್ನುತ್ತಿದ್ದಂತೆಯೇ, ಗೊತ್ತು ಬಿಡಿ, ಅದೇ ಬಾಲಕಾರ್ಮಿಕರು, ಬೀದಿಯ ಮೇಲೆ ಬದುಕುವ ಮಕ್ಕಳು ಎನ್ನುತ್ತಿದ್ದ ಸಮಾಜ ಈಗ ದಿಢೀರ್ ಎಂದು ಎದ್ದು ಕುಳಿತಿದೆ. ಗಾಬರಿಗೊಂಡಿದೆ. ಯಾರದೋ ಬಡವರ ಮಕ್ಕಳು ದುಡಿಯುತ್ತಾರೆ ಅಯ್ಯೋ ಪಾಪ ಎನ್ನುತ್ತಿದ್ದ ಸ್ಥಿತಿವಂತರ ಮನಸುಗಳು ಈಗ ನಮ್ಮದೇ ಕುಟುಂಬಗಳ ಮಕ್ಕಳ ಹಕ್ಕುಗಳು ಹರಣವಾಗುತ್ತಿರುವುದನ್ನು ಕಂಡು ಕೇಳಿ ಜಾಗತಿಕ ಮಟ್ಟದಲ್ಲಿನ ಉನ್ನತ ವಿಚಾರಗಳನ್ನು ಸ್ಥಳೀಕರಿಸುವ ಧಾವಂತಕ್ಕೊಳಪಟ್ಟಿವೆ.

ಮಕ್ಕಳ ಮೇಲೆ ನೇರವಾದ ಆಘಾತ, ಹಿಂಸೆ, ತೊಂದರೆ, ದೌರ್ಜನ್ಯ, ಅನ್ಯಾಯ ಇತ್ಯಾದಿ ಗೋಚರವಾಗುವಂತೆ ಆಗುತ್ತಿರುವ ಆಪರಾಧಿಕ ಕೃತ್ಯಗಳು. ಸಮಾಜ ನೇರಾನೇರ ಇಂತಹವನ್ನು ಈಗ ಖಂಡಿಸುವ ಪ್ರಶ್ನಿಸುವ ಅವಕಾಶ ಬಂದರೆ ಎದ್ದು ನಿಂತು ಪ್ರಶ್ನಿಸುವ, ಹೋರಾಟಕ್ಕೆ ತೊಡಗುವ ಅಥವಾ ಹಲ್ಲೆಗೂ ಮುಂದಾಗುವ ಮನೋಭಾವ, ದಿಢೀರ್ ಸಂಘಟಿತರಾಗುವುದು ಕಂಡುಬರುತ್ತಿದೆ. ಇದು ತೀರಾ ವೈಯಕ್ತಿಕವಾದ ಅಥವಾ ಇಂದು ಅವರಿಗೆ ನಾಳೆ ನನಗೆ, ನನ್ನ ಮಕ್ಕಳಿಗೆ ಬಾಧಿಸಬಹುದಾದ ವಿಚಾರಗಳು ಎಂದಾದಲ್ಲಿ, ಪ್ರಾಯಶಃ ಯಾವುದೇ ರಾಜಿ ಇಲ್ಲದೆ ಸೇರುವುದು ಆಗುತ್ತಿದೆ. ಮಾಹಿತಿ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮ ಇದರಲ್ಲಿ ಹಿರಿದಾದ ಪಾತ್ರ ವಹಿಸಿದೆ. ಇಂತಹವನ್ನು ಹೀಗಳೆಯದೆಯೇ, ಇಡೀ ಸಮಾಜದ ಎಲ್ಲ ಮಕ್ಕಳನ್ನು, ಅದರಲ್ಲೂ ಸೌಲಭ್ಯ ವಂಚಿತರು, ಬಡವರು, ಅಂಚಿಗೆ ತಳ್ಳಲ್ಪಟ್ಟವರು, ದಿನೇ ದಿನೇ ಅಗೋಚರವಾದ ಅನ್ಯಾಯಗಳಿಗೆ ಬಲಿಯಾಗುತ್ತಿರುವುದನ್ನು ಅಥವಾ ಕರ್ತವ್ಯಲೋಪಿಗಳ ದೆಸೆಯಿಂದಾಗಿ ಇನ್ನೂ ಅಧಃಪಾತಕ್ಕೆ ಬೀಳುತ್ತಿರುವುದು ಸಮಾಜದ ಸ್ಥಿತಿವಂತ, ಅರಿವಿರುವ, ಶಕ್ತಿ ಸಾಮಥ್ರ್ಯವಿರುವ ಬಹುಪಾಲು ಜನರಿಗೆ ತಟ್ಟುತ್ತಿಲ್ಲ. ಇದು ಅವರರಿವಿಗೆ ಬರುವುದಿಲ್ಲ ಎಂದೇನಲ್ಲ. ಇಂದಿನ ಬೃಹತ್ ಮಾಹಿತಿ ಜಾಲ ಎಲ್ಲವನ್ನೂ ಎಲ್ಲರಿಗೂ ಬೇಡಬೇಕುಗಳನ್ನು ಗಮನಿಸದೆ ತಲುಪಿಸುತ್ತಿದೆ.

ಮಕ್ಕಳ ಅಪೌಷ್ಟಿಕತೆ, ಆರೋಗ್ಯ, ಮಕ್ಕಳು ಮತ್ತು ತಾಯಂದಿರ ಸಾವಿನ ವಿಚಾರವನ್ನು ಗುಟ್ಟು ಮಾಡಬೇಡಿ, ಅದರಲ್ಲೂ ಇವುಗಳಿಗೆ ಬಲಿಯಾಗುತ್ತಿರುವವರು ಹಿಂದುಳಿದ ಜಾತಿ ವರ್ಗಗಳ ಪ್ರದೇಶಗಳ ಬಡವರು ಎಂಬುದನ್ನು ಪ್ರಮುಖವಾಗಿ ಸರ್ಕಾರದ್ದೇ ಕರ್ತವ್ಯಲೋಪ, ಭ್ರಷ್ಟಾಚಾರ ಎನ್ನುವುದನ್ನು ನ್ಯಾಯಾಲಯದ ತನಕ ಒಯ್ಯಲಾಗಿದೆ.

*ಲೇಖಕರು ಚೈಲ್ಡ್ ರೈಟ್ಸ್ ಟ್ರಸ್ಟ್ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮