2nd February 2018

ಅಶ್ವಿನ್ ಎಂಬ ಪ್ರಯೋಗಶೀಲ ಮನಸ್ಸು

ರವಿಚಂದ್ರನ್ ಅಶ್ವಿನ್ ಲೆಗ್‍ಸ್ಪಿನ್ನರ್ ಆಗಬೇಕು ಅಂತ ಗಂಭೀರವಾಗಿ ಅಭ್ಯಾಸ ಮಾಡುತ್ತಿದ್ದಾರಂತೆ. ಅವರ ಉದ್ದೇಶ ಕೇವಲ ಲೆಗ್‍ಬ್ರೇಕ್ ಬಾಲನ್ನು ಹಾಕಲು ಕಲಿಯುವುದಲ್ಲ. ಅಷ್ಟೆ ಆಗಿದ್ದರೆ ಅವರ ಆಫ಼್ ಸ್ಪಿನ್ ಬೌಲಿಂಗಿಗೆ ಒಂದು ವೈವಿಧ್ಯತೆವನ್ನು ತಂದಹಾಗೆ ಆಗುತ್ತಿತ್ತು. ಆದರೆ ಅಶ್ವಿನ್ ಮನಸ್ಸಿನಲ್ಲಿರುವುದು ಒಬ್ಬ ಒಳ್ಳೆಯ ಲೆಗ್‍ಸ್ಪಿನ್ನರನ ಎಲ್ಲ ಕೌಶಲ್ಯಗಳನ್ನೂ ಕಲಿಯುವುದು. ಕಳೆದ ಎರಡು ವರ್ಷಗಳಿಂದ ಅವರು ಅಭ್ಯಾಸ ನಡೆಸುತ್ತಿದ್ದರೂ 2017ರ ಕಡೆಯ ಭಾಗದಲ್ಲಿ ಕೆಲವು ಚೆನ್ನೈನ ಸ್ಥಳೀಯ ಪಂದ್ಯಗಳಲ್ಲಿ ತಮ್ಮ ಲೆಗ್‍ಸ್ಪಿನ್ ಪ್ರಯೋಗವನ್ನು ಸ್ಪರ್ಧಾತ್ಮಕ ಸಂದರ್ಭದಲ್ಲಿ ಬಳಸಿದ ಕುರಿತಾಗಿ ಕೆಲವು ವರದಿಗಳು ಪ್ರಕಟವಾದವು. ಆದರೆ ದಕ್ಷಿಣ ಆಫ್ರಿ಼ಕಾದ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ತಮ್ಮ ಹೊಸಕೌಶಲ್ಯಗಳನ್ನು ಬಳಸಿಲ್ಲ.

ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟಿಗನೊಬ್ಬ ಇಂತಹ ಪ್ರಯೋಗವನ್ನು ಮಾಡಿರುವ ಉದಾಹರಣೆಗಳು ಇಲ್ಲವೆ ಇಲ್ಲ. ಒಬ್ಬ ವೇಗದ ಬೌಲರ್ ಸ್ಪಿನ್ನರ್ ಆಗಲು ಪ್ರಯತ್ನಿಸಬಹುದು. ಅದರಲ್ಲಿ ಗಾರಫಿ಼ೕಲ್ಡ್ ಸೋಬರ್ಸರಂತೆ ಯಶಸ್ಸನ್ನೂ ಪಡೆಯಬಹುದು. ಹಾಗೆಯೆ ಬ್ಯಾಟುಗಾರ ಬೌಲಿಂಗನ್ನೂ, ಬೌಲರ್ ಬ್ಯಾಟಿಂಗನ್ನೂ ಗಂಭೀರವಾಗಿ ಅಭ್ಯಾಸ ಮಾಡಬಹುದು.

ಆದರೆ ಆಫ಼್ ಸ್ಪಿನ್ ಮತ್ತು ಲೆಗ್‍ಸ್ಪಿನ್‍ಗಳೆರಡನ್ನೂ ಒಬ್ಬನೆ ಕಲಿಯಲು ಪ್ರಯತ್ನಿಸುವುದರಲ್ಲಿ ಅಪಾಯವೂ ಇದೆ. ಬೌಲಿಂಗಿನಲ್ಲಿ ವೈವಿಧ್ಯತೆವಿರಲಿ ಎನ್ನುವ ಮಹತ್ವಾಕಾಂಕ್ಷೆಯು ಅಶ್ವಿನ್‍ರಂತಹ ಬೌಲರುಗಳ ಬೌಲಿಂಗ್ ಆಕ್ಷನ್ ಹಾಳಾಗಲು ಕಾರಣವಾಗಬಹುದು. ಯಾಕೆಂದರೆ ಈ ಎರಡೂ ರೀತಿಯ ಬೌಲಿಂಗ್ ಕೌಶಲ್ಯಗಳಿಗೆ ನಮ್ಮ ಕೈ, ತೋಳು ಮತ್ತು ಭುಜಗಳನ್ನು ಬೇರೆಯದೆ ಆದ ರೀತಿಯಲ್ಲಿ ಬಳಸಬೇಕಾಗುತ್ತದೆ. ಹೊಸದನ್ನು ಕಲಿಯುವುದಿರಲಿ, ಹಳೆಯದನ್ನು ಸಹ ಕಳೆದುಕೊಳ್ಳುವ ಅಪಾಯವೆ ಹೆಚ್ಚಿನದಾಗಿರುತ್ತದೆ. ಅದಕ್ಕಾಗಿಯೆ ಇಂತಹ ಪ್ರಯೋಗಗಳಿಗೆ ಅಂತರರಾಷ್ಟ್ರೀಯ ಕ್ರಿಕೆಟಿಗನೊಬ್ಬ ಕೈಹಾಕುವುದಿಲ್ಲ.

ಅಶ್ವಿನ್ ಅವರ ಇದುವರೆಗಿನ ಸಾಧನೆಗಳನ್ನೆ ಗಮನಿಸಿ. ಅವರು ಕೇವಲ ಒಬ್ಬ ವಿಶ್ವದರ್ಜೆಯ ಯಶಸ್ವಿ ಆಫ಼್ ಸ್ಪಿನ್ನರ್ ಮಾತ್ರವಲ್ಲ. ಅವರು 2016ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗಳಿಸಿದವರು. ಅಲ್ಲದೆ ಅತ್ಯಂತ ಶೀಘ್ರವಾಗಿ 300 ವಿಕೆಟುಗಳನ್ನು ಟೆಸ್ಟ್ ಪಂದ್ಯಗಳಲ್ಲಿ ಗಳಿಸಿದ ಭಾರತೀಯ ಆಟಗಾರರು ಅವರು. ಇದುವರೆಗೆ 56 ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅಶ್ವಿನ್ 306 ವಿಕೆಟ್ ಪಡೆದಿದ್ದಾರೆ ಮತ್ತು 2104 ರನ್ನುಗಳನ್ನು ಗಳಿಸಿದ್ದಾರೆ. ಒಂದು ದಿನದ ಮತ್ತು ಟಿ20 ಪಂದ್ಯಗಳಲ್ಲಿಯೂ ಅವರ ಸಾಧನೆ ಕಡೆಗಣಿಸುವಂತಹುದಲ್ಲ. ಭಾರತದ ಪರವಾಗಿ ಆಡಿರುವ ಅತ್ಯುತ್ತಮ ಆಲ್‍ರೌಂಡರುಗಳ ಪಟ್ಟಿಯಲ್ಲಿ ಅವರು ಈಗಾಗಲೆ ಪ್ರಮುಖ ಸ್ಥಾನ ಪಡೆದಿದ್ದಾರೆ.

ಇಷ್ಟೆಲ್ಲ ಸಾಧನೆ ಮಾಡಿರುವ ವಿಶ್ವದ ಅತ್ಯುತ್ತಮ ಆಫ಼್ ಸ್ಪಿನ್ನರ್ ಈಗ ಲೆಗ್‍ಸ್ಪಿನ್ ಬೌಲರ್ ಆಗಬೇಕು ಎಂದು ಯಾಕೆ ಪ್ರಯತ್ನಿಸುತ್ತಿದ್ದಾರೆ?

ಕಾರಣವಿಷ್ಟೆ. ಟಿ—20 ಕ್ರಿಕೆಟಿನ ಈ ದಿನಗಳಲ್ಲಿ ಬೆರಳನ್ನು ಬಳಸಿ ಮಾಡುವ ಸ್ಪಿನ್‍ಬೌಲಿಂಗ್ ಹೆಚ್ಚು ಪರಿಣಾಮಕಾರಿಯಾಗಿಲ್ಲ. ಕಳೆದ ಒಂದು ವರ್ಷದಲ್ಲಿ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಇಬ್ಬರೂ ಭಾರತದ ಒಂದು ದಿನದ ಮತ್ತು ಟಿ—20 ತಂಡಗಳಲ್ಲಿ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಪ್ರದರ್ಶನ ಕಳಪೆಯದಾಗಿಲ್ಲ. ಆದರೆ ಮಣಿಕಟ್ಟನ್ನು ಬಳಸಿ ಬೌಲ್ ಮಾಡುವ ಬಲಗೈ ಲೆಗ್‍ಸ್ಪಿನ್ ಮತ್ತು ಎಡಗೈ ಲೆಗ್‍ಸ್ಪಿನ್ ಬೌಲರುಗಳು ಕ್ರಿಕೆಟಿನಲ್ಲಿ ಹೆಚ್ಚು ಪ್ರಭಾವ ಬೀರಲಾರಂಭಿಸಿದ್ದಾರೆ.

ಅಶ್ವಿನ್ ಒಬ್ಬ ಚಿಂತನಶೀಲ ಬೌಲರ್. ಪ್ರಯೋಗಶೀಲ ಮನಸ್ಸನ್ನು ಹೊಂದಿರುವ ಕ್ರಿಕೆಟಿಗ. ಈ ಬೆಳವಣಿಗೆಯನ್ನು ನಿರೀಕ್ಷಿಸಿದ ಅಶ್ವಿನ್ ಕ್ರಿಕೆಟಿನ ಹೊಸ ಸ್ಪರ್ಧಾತ್ಮಕ ವಾಸ್ತವಕ್ಕೆ ಹೊಂದಿಕೊಳ್ಳಲು ಈ ಪ್ರಯೋಗವನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಿದರು. ತನ್ನ ಬಾಲ್ಯದ ದಿನಗಳಿಂದಲೂ ಪ್ರಯೋಗಶೀಲತೆ, ನಿರಂತರ ಅಭ್ಯಾಸ ಮತ್ತು ಸ್ವಂತಿಕೆಗಳನ್ನೇ ಮೂಲಗುಣಗಳಾಗಿ ಹೊಂದಿರುವ ಅಶ್ವಿನ್ ಎಂದೂ ಕೇವಲ ತರಬೇತುದಾರರ ಸಾಂಪ್ರದಾಯಿಕ ಪದ್ಧತಿಗಳನ್ನೆ ಅನುಸರಿಸದವರಲ್ಲ. ಅವರ ಕ್ರಿಕೆಟ್ ಜೀವನದಲ್ಲಿಯೂ ಹಲವಾರು ಮೂಲಭೂತ ಬದಲಾವಣೆಗಳನ್ನು ಅವರು ಇದುವರೆಗೆ ಮಾಡಿಕೊಳ್ಳುವ ಮೂಲಕವೆ ಯಶಸ್ಸನ್ನು ಗಳಿಸಿದ್ದಾರೆ. ಆರಂಭದಲ್ಲಿ ಮಧ್ಯಮವೇಗದ ಬೌಲಿಂಗ್ ಮತ್ತು ಮೇಲ್ವರ್ಗದ ಬ್ಯಾಟ್ಸಮನ್ ಆಗಿದ್ದ ಅಶ್ವಿನ್ ತಮಿಳುನಾಡಿನ ಪರವಾಗಿ ಜೂನಿಯರ್ ಹಂತದಲ್ಲಿ ಬ್ಯಾಟ್ಸಮನ್ ಆಗಿಯೆ ಆಡಿದರು. 17 ವರ್ಷದೊಳಗಿನವರ ಭಾರತ ತಂಡಕ್ಕೂ ಬ್ಯಾಟ್ಸಮನ್ ಆಗಿಯೆ ಅವರ ಆಯ್ಕೆಯಾಗಿತ್ತು. ಆಫ಼್ ಸ್ಪಿನ್ ಪ್ರಾರಂಭಿಸುವ ಹೊತ್ತಿಗೆ ಅವರ ಹದಿಹರೆಯ ಮುಗಿಯುತ್ತ ಬಂದಿತ್ತು. 2010ರಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಅಶ್ವಿನ್ ಏಷ್ಯಾದ ಹೊರಗೆ ಅಂತಹ ಒಳ್ಳೆಯ ಸಾಧನೆಯನ್ನು ಮಾಡಿಲ್ಲ ಎನ್ನುವ ಆಕ್ಷೇಪಣೆಯನ್ನೂ ಎದುರಿಸಿದ್ದಾರೆ. ಅವರ ಹೊಸ ಪ್ರಯೋಗಗಳು ಇಂತಹ ಆಕ್ಷೇಪಣೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳೂ ಹೌದು.

ಇಷ್ಟಾದರೂ ನನ್ನಂತಹ ಲಕ್ಷಾಂತರ ಕ್ರಿಕೆಟ ವೀಕ್ಷಕರಿಗೆ ಹಿಡಿಸುವ ಗುಣವೊಂದು ಅಶ್ವಿನ್‍ರಲ್ಲಿದೆ. ಅಶ್ವಿನ್ ನಮ್ಮನಿಮ್ಮೆಲ್ಲರಂತೆ ಕಾಣುವ ಕ್ರಿಕೆಟಿಗ. ಅವರ ದೈಹಿಕ ಕ್ಷಮತೆ ಸಾಮಾನ್ಯ ಮನುಷ್ಯರ ಕ್ಷಮತೆಯಂತೆ ತೋರುತ್ತದೆ. ಅಂದರೆ ಅವರು ಮೈದಾನದಲ್ಲಿ ಓಡುವಾಗ, ಫಿ಼ೕಲ್ಡಿಂಗ್ ಮಾಡುವಾಗ ರವೀಂದ್ರ ಜಡೇಜಾರಂತೆ ಚುರುಕಾಗಿ ಓಡಾಡುತ್ತಿದ್ದಾರೆ ಎನಿಸುವುದಿಲ್ಲ. ಅವರ ಬಳಿ ಚೆಂಡು ಬಂದಾಗ ಅವರ ಚಲನೆ ತುಂಬ ನಾಜೂಕಿನದು ಎನಿಸುವುದಿಲ್ಲ. ಬ್ಯಾಟ್ ಮಾಡುವಾಗ, ಅವರು ರನ್ ಗಳಿಸಿದರೂ ಸಹ ಅವರ ಬ್ಯಾಟಿಂಗ್ ಶೈಲಿಯನ್ನು ತುಂಬ ಸೊಗಸಾದುದು ಎಂದು ಯಾರೂ ಹೊಗಳುವುದಿಲ್ಲ.

ನಾಜೂಕು, ಸೊಗಸು ಅವರ ಆಟವನ್ನು ಬಣ್ಣಿಸಲು ಬಳಸುವ ಪದಗಳಲ್ಲ. ಆದರೆ ಅಶ್ವಿನ್‍ರಿಗೆ ದೊರಕಿರುವ ಯಶಸ್ಸು ಪ್ರಯೋಗಶೀಲತೆ ಮತ್ತು ನಿರಂತರ ಅಭ್ಯಾಸದಿಂದ ದೊರಕಿರುವುದು. ಆಡುವಾಗ ಅವರು ತೋರಿಸುವ ಅಪೂರ್ವ ಆತ್ಮವಿಶ್ವಾಸದ ಫಲವದು. ಅರೆ, ಇಷ್ಟನ್ನು ನಾವೂ ಪ್ರಯತ್ನಿಸಬಹುದಲ್ಲ ಎನ್ನುವಂತೆ ಅಶ್ವಿನ್ ಕಾಣುತ್ತಾರೆ.

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018