2nd February 2018

ಕಟ್ಟ ಕಡೆಯ ಗೆರೆಯ ಮೇಲೆ

ಅಜ್ಜ ಸತ್ತ ದಿನ ಅಜ್ಜಿಯ ಕಣ್ಣಲ್ಲಿ ಕಂಡ ನೀರಸದಂತೆ ಅನಂತದ

ಭ್ರಮೆಯನ್ನೊ ಸತ್ಯವನ್ನೊ ನಿಲುಕಿಸುತ್ತ ಉದ್ದಾನುದ್ದ ಚೆಲ್ಲಿಕೊಂಡ ಈ ಬಯಲು

ವಿಲಕ್ಷಣ ಬಣ್ಣ ಮೆತ್ತಿರುವ ಈ ಸಂಜೆ...

ಈ ಕಡೆಯ ಗೆರೆಯ ಮೇಲೆ ನಿಂತು ಹಿಂದಕ್ಕೊಮ್ಮೆ ತಿರುಗಿ ದಿಟ್ಟಿಸಿದರೆ.

ನಾನು ಎಷ್ಟನೇ ಸಲ ಈ ಭೂಗೋಳವನ್ನು ಸುತ್ತಿ ಸುತ್ತಿ ಮತ್ತೆ

ಬಂದು ನಿಂತಿದ್ದೇನೆ ಇಲ್ಲಿಗೇ; ಈ ಜಗದ ಕೊನೆಯ ಗೆರೆಗೇ

ತುಂಬ ಜನ ಹೋಗು ಎಂದವರು; ಬೇಡ ಬೇಡವೆಂದವರೂ ಇದ್ದರು

ಅಪ್ಪ ಅಮ್ಮನ ಕಣ್ಣಲ್ಲಿ ನೀರಲೆದಿತ್ತು; ಕಷ್ಟದಲಿ ಕಾಣಿಸಿದ ಸಣ್ಣ ನಗು ತುಟಿ ಸವರಿದಂತಿತ್ತು

ಅವರು ನನಗಿಟ್ಟ ಕಣ್ಣೀರನು ಅವರ ಸಾವಿನಲ್ಲೂ ಮರಳಿಸಲಾರದಾದೆ ನಾನು

ಋಣಭಾರದ ಮಣ್ಣು ಹೊರಲಾರದೆ ಹೊತ್ತು ನಡೆದಿರುವವನು

ಹುಟ್ಟಿದವರೆದ್ದು ಇದ್ದಕ್ಕಿದ್ದಂತೆ ಒಂದಿನ

ಹೊರಟು ಹೋಗುವುದು ಸಹಜ ಎಂಬ ತತ್ವಜ್ಞಾನ

ಮಿಡಿವ ಹೃದಯ ಕಲ್ಲಾಗುವುದು; ಕಲ್ಲೂ ಮಿಡಿಯಬಲ್ಲುದೆಂಬುದು ಮರೆತುಹೋಗುವುದು

ತಿಳಿದವನೆಂಬ ಅಹಂಕಾರದಲ್ಲೇ ಕಟುವಾಗುತ್ತ ಕಟುಕತನವನ್ನೇ ಧರಿಸಿ ಪೋಷಾಕಿನಂತೆ

ಗಾಂಭೀರ್ಯದಲಿ ಕಡೆಗೂ ಕಳೆದುಕೊಂಡದ್ದು ಸಹಜ ನಡಿಗೆಯನ್ನೇ

ಈ ಕಟ್ಟ ಕಡೆಯ ಗೆರೆಯ ಮೇಲೆ ನಿಂತು ನೆನೆದರೆ.

ಉತ್ತರಾಭಿಮುಖವಾಗಿ ಹೊರಟುಬಂದೆನಲ್ಲ ಎಲ್ಲ ಬಿಟ್ಟು

ಉತ್ತರದ ಜರೂರಾದರೂ ಏನು ಇತ್ತು?

ನನ್ನನ್ನೊಬ್ಬ ಘನ ಸಾಧಕನೆಂಬಂತೆ ಕಂಡು ಉಪಚರಿಸಲು ತೊಡಗಿದ್ದ ಅಮ್ಮ

ನನ್ನೆದೆಯೊಳಗಿನ್ನೂ ಬಿಸಿ ನೆತ್ತರಂತೆ ಕುದಿಯುತ್ತಿರುವುದನು ಮರೆಮಾಚಲಾರೆ

ಎಲ್ಲವೂ ಮುಗಿದಿತ್ತು ಸುಳಿವುಗೊಡದಂತೆ

ಹಾಸಿಗೆಯಲಿ ಏಳಲಾರದೆ ಹೇಳಲಾರದೆ

ಆ ತೀವ್ರ ಯಾತನೆಯಲಿ ತೊಟ್ಟಿಕ್ಕುವ ಸಂಕಟದಲಿ ಕಟ್ಟಿಹಾಕಿದ ನಿಸ್ಸಹಾಯಕತೆಯಲಿ

ನಗು ಕನಸು ಕಮನೀಯತೆಗಳೆಲ್ಲ ನಿರ್ಜೀವಗೊಂಡಿದ್ದ ಆ ತಲ್ಲಣದ ಘಳಿಗೆಯಲಿ

ನಾನಿದ್ದೆನೆ ನಾನಿದ್ದೆನೆ ನಾನಿದ್ದೆನೆ? ಇದ್ದೂ ಇಲ್ಲದಂತಾದೆನೆ?

ಎಲ್ಲ ಅಮಲಿಳಿದ ಹೊತ್ತಲ್ಲಿ ನಾನಿಲ್ಲಿ ಕಟ್ಟಕಡೆಯ ಗೆರೆಯ ಮೇಲೆ.

ಅದೆಷ್ಟು ರಾಕ್ಷಸರು ನನ್ನ ಮನಸನ್ನೇ ರಣರಂಗ ಮಾಡಿಕೊಂಡು ಕದನವಾಡಿದ ಕಥೆಗಳೊಳಗೆ

ಆ ದೈತ್ಯ ತೋಳುಗಳಲ್ಲಿ ಝಳಪಿಸುತ್ತಿದ್ದ ಕತ್ತಿಯಲಗು ಅದರ ನೆತ್ತರ ದಾಹ

ಎಲ್ಲೋ ನನ್ನನ್ನರಸುತ್ತಿದ್ದ ನಾನು ಅಲ್ಲಿ ನನ್ನನ್ನು ಕಂಡದ್ದು ಚೋದ್ಯವೆಂದುಕೊಂಡೆ

ಮತ್ತೆ ನಡೆದಿದೆ ಯುದ್ಧ; ಮುಗಿಯುವಂತೆ ಕಾಣುತ್ತಿಲ್ಲ ಇದು

ಮುಗಿದರೂ ಕಾಣಲು ನಾನಿರುತ್ತೇನೋ ಇಲ್ಲವೊ ಎಂಬ ದಿಗಿಲು

ಈ ದಿಗಿಲ ದಿಕ್ಪಾತದಲ್ಲಿ ನನ್ನನ್ನುಳಿಸಲು ಧಾವಿಸುತ್ತಿರುವವರ ಹಾಗೆ ನೆನಪಾಗುತ್ತಿರುವ ಹೆತ್ತವರು

ಎದುರಾಳಿಗಳಂತೆಯೇ ಫೂತ್ಕರಿಸುತ್ತಿದ್ದಾರೆನ್ನಿಸಿ ತತ್ತರಿಸುತ್ತ ಚೀರಿಕೊಂಡರೆ

ಎಲ್ಲ ನಿರಭ್ರ ಮತ್ತು ಸುತ್ತಲೂ ಯಾವ ರಕ್ಕಸರೂ ಇಲ್ಲ ಒಬ್ಬನೇ ಒಬ್ಬನ ಹೊರತು

ನಿಂತಿದ್ದೇನೆ ಒಬ್ಬಂಟಿ ನಾನಿಲ್ಲಿ

ಈ ಜಗತ್ತಿನ ಅತ್ಯಂತ ಹೀನ ಪಾಪಿಯಂತೆ ಕಟ್ಟ ಕಡೆಯ ಗೆರೆಯ ಮೇಲೆ.

—ವೆಂಕಟ್ರಮಣ ಗೌಡ

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018