2nd February 2018

ನನ್ನ ಕ್ಲಿಕ್

ಹಾವೇ ಆಹಾರ!

ಕಿರು ಕಾಲ್ಬೆರಳಿನ ಈ ಹದ್ದಿಗೆ ಹಾವು ಮಾತ್ರ ಆಹಾರ. ಅಂತೆಯೇ ಇದಕ್ಕೆ ಷಾರ್ಟ್ ಟೋಯಿಡ್ ಸ್ನೇಕ್ ಈಗಲ್ ಎಂದು ಹೆಸರು. ಸಾಮಾನ್ಯವಾಗಿ ಐವತ್ತು ಅಡಿ ಎತ್ತರದಲ್ಲಿ ಗೂಡು ಕಟ್ಟುವ ಈ ಪಕ್ಷಿ ತನ್ನ ಮರಿಗಳಿಗೆ ಹಾವೂಟ ಉಣಿಸುವುದರಲ್ಲಿ ಪ್ರವೀಣ. ಈ ಕ್ಷಣ ಸೆರೆಹಿಡಿಯುವ ನನ್ನ ಬಹುಕಾಲದ ಆಸೆ ಈಡೇರಿದ್ದು ಮಂಡ್ಯದಲ್ಲಿ. ಜಾಗತಿಕ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಮನ್ನಣೆ ಗಳಿಸಿದ ಈ ಚಿತ್ರ ಅಮೆರಿಕಾ ಫೋಟೋಗ್ರಾಫಿಕ್ ಸೊಸೈಟಿಯ ವಿಶೇಷ ಸಂಗ್ರಹದಲ್ಲಿ ಸ್ಥಾನ ಪಡೆದಿದೆ. ಬಳಸಿದ ಕ್ಯಾಮೆರಾ ನಿಕಾನ್ ಡಿ200, ಮಸೂರ 82—400 ಎಂ.ಎಂ., ಷಟರ್ ವೇಗ 1/250 ಸೆಕೆಂಡ್.

—ಎಸ್.ತಿಪ್ಪೇಸ್ವಾಮಿ, ಮೈಸೂರು

ಬುದ್ಧನ ಬಿಂಬ

ಬಂಡೀಪುರದ ಈ ಸೋಲಿಗರ ವೃದ್ಧೆಯ ಭಾವಚಿತ್ರ ಇಪ್ಪತ್ತು ವರ್ಷಗಳ ಹಿಂದೆ ತೆಗೆದದ್ದು. ನನ್ನನ್ನು ಸದಾ ಕಾಡುವ ಈ ಚಿತ್ರದಲ್ಲಿ ವ್ಯಕ್ತವಾಗಿರುವ ಭಾವನೆಗಳು ನಾನು ಈತನಕ ಕ್ಲಿಕ್ಕಿಸಿದ ಮತ್ಯಾವ ವ್ಯಕ್ತಿಚಿತ್ರದಲ್ಲೂ ಕಂಡಿಲ್ಲ. ವಯೋವೃದ್ಧೆಯ ಜೀವನಾನುಭವ ತೆರೆದಿಡುವ ಮುಖದ ಸುಕ್ಕುಗಳು, ಕೆದರಿದ ಕೂದಲು, ಉಡುಪು, ತದೇಕಚಿತ್ತ ನೋಟ, ಆಶಾಭಾವಗಳು ವ್ಯಕ್ತಿಚಿತ್ರದ ಸಮರ್ಥ ನಿರೂಪಣೆಯಾಗಿವೆ; ನನ್ನನ್ನು ಈ ಕ್ಷಣವೂ ಬೆರಗುಗೊಳಿಸುತ್ತವೆ. ಕಪ್ಪು ಬಿಳುಪಿನ ಈ ಚಿತ್ರದಲ್ಲಿ ಧ್ಯಾನಸ್ಥ ಬುದ್ಧನ ಇನ್ನೊಂದು ಭಾವ ಹೊಳೆಯುತ್ತದೆ.

—ಟಿ.ಕೆಂಪಣ್ಣ , ಬೆಂಗಳೂರು

ಮುಗ್ಧ ಮೌಲ್ಯ

ಬೇಲೂರಿನ ಪ್ರಸಿದ್ಧ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ‘ಮೌಲ್ಯ’ ಎಂಬ ಒಂದೂವರೆ ವರ್ಷದ ಹೆಣ್ಣುಮಗು ತನ್ನ ತಾಯಿಯೊಂದಿಗೆ ದೀಪವೊಂದನ್ನು ಕುತೂಹಲದಿಂದ ನೋಡುತ್ತಿರುವ ದೃಶ್ಯವೊಂದರ ಪಟವಿದು. ದೀಪದ ಸಹಜ ಬೆಳಕಿನಲ್ಲಿ ಮಗುವಿನ ಮುಗ್ಧತೆಯನ್ನು ಹಿಡಿದಿಡುವ ಹಾಗೂ ಕುತೂಹಲ ಭರಿತ ಕ್ಷಣದ ಸಂಯೋಜನೆ ಇಲ್ಲಿದೆ.

ನಿಕಾನ್ ಡಿ500 ಕ್ಯಾಮರಾ ಹಾಗೂ 200— 500 ಎಂ.ಎಂ. ಮಸೂರ ಬಳಸಲಾಗಿದ್ದು, ಫೋಕಲ್ ಲೆಂಗ್ತ್ 500 ಎಂ.ಎಂ., ಷಟರ್ ವೇಗ 1/80 ಸೆಕೆಂಡು, ಐ.ಎಸ್.ಓ.10000. ಇಳಿಸಂಜೆಯ ಮಸುಕಾದ ಹಿನ್ನೆಲೆಯಲ್ಲಿನ ದೀಪಗಳನ್ನು ಔಟ್ ಆಫ್ ಫೋಕಸ್ ಮಾಡಲಾಗಿದ್ದು, ಮುನ್ನೆಲೆಯಲ್ಲಿನ ಮಗುವಿನ ಮುಖದ ಮೇಲೆ ಬೀಳುವ ದೀಪದ ಸಹಜ ಬೆಳಕು ಹಾಗೂ ದೀಪವನ್ನು ಸೆರೆ ಹಿಡಿಯಲಾಗಿದೆ.

—ಚಿದಂಬರ ನಾನಾವಟೆ, ಸಂಡೂರು

ರೇಣುಕಾ ನಿಡಗುಂದಿ

ಹಾಲುಂಡ ತವರೀಗಿ ಏನೆಂದು ಹಾಡಲೆ

July 2018

ಡಾ.ಧರಣಿದೇವಿ ಮಾಲಗತ್ತಿ

ಡುಂಡುಭ ವಿಲಾಪ

July 2018

ಡಾ.ಧರಣಿದೇವಿ ಮಾಲಗತ್ತಿ

‘ಪಾದುಕಾ ಕಿರೀಟಿ’

July 2018

ಎಚ್.ಗೋಪಾಲಕೃಷ್ಣ

ನಮ್ಮಟ್ಟೀಲಿ ಏನಾಯ್ತಂದ್ರ...

July 2018

ಪ್ರೊ.ಜಿ.ಎಚ್.ಹನ್ನೆರಡುಮಠ

ಓಡಿ ಹೋದ ದ್ವೆವಗಳು

June 2018

ಮೂಡ್ನಾಕೂಡು ಚಿನ್ನಸ್ವಾಮಿ

ಸಂಕಟದ ಪ್ರೇಮಿ

June 2018

ಹೇಮಲತಾ ಮೂರ್ತಿ

ವಿಷ ಕುಡಿದ ಮಕ್ಕಳು

June 2018

ಬಾಲಚಂದ್ರ ಬಿ.ಎನ್.

ಕರುನಾಡ ಕದನ

June 2018

ಡಾ.ಮ್ಯಾಥ್ಯೂ ಕೆ.ಎಮ್.

ನಾಗಚಂದ್ರನ ರಾಮಚಂದ್ರ ಚರಿತ ಪುರಾಣಂ

May 2018

ರಾಜು ಹೆಗಡೆ

ತೇಲುವ ಊರಿನ ಕಣ್ಮರೆ!

May 2018

ಎಸ್.ಬಿ.ಜೋಗುರ

ಗರ್ದಿ ಗಮ್ಮತ್ತು

May 2018

ಪ್ರೀತಿ ನಾಗರಾಜ್

ಮನಿಗ್ಯಷ್ಟು ಕ್ವಟ್ಟರಂತೆ?

May 2018

ಪ್ರೊ. ಜಿ. ಎಚ್. ಹನ್ನೆರಡುಮಠ

ಹೂವುಗಳ ನರಕ ಬೆಂಗಳೂರು !

April 2018

ಕೆ. ಸತ್ಯನಾರಾಯಣ

ನಮ್ಮೂರಲ್ಲೇ ಕಳ್ಳರಿದ್ದರು

April 2018

ವೈಲೆಟ್ ಪಿಂಟೊ

ಸ್ವಗತ (ಕವಿತೆ)

April 2018

ಅಮರಜಾ ಹೆಗಡೆ

ಬುದ್ಧನ ನಾಡಿನಲ್ಲಿ...

April 2018

ಹಜರತಅಲಿ ದೇಗಿನಾಳ

ನಮ್ಮೂರು ಲಂಡನ್‍ಹಳ್ಳ!

March 2018

ಡಾ. ಜಾಜಿ ದೇವೇಂದ್ರಪ್ಪ

ಜನ್ನನ ಯಶೋಧರ ಚರಿತೆ

March 2018

ಚಿದಂಬರ ಪಿ. ನಿಂಬರಗಿ

ಶಿರೋಳದ ರೊಟ್ಟಿ ಜಾತ್ರೆ

March 2018

ರಾಜೇಂದ್ರ ಪ್ರಸಾದ್

ರಾಮಮಂದಿರದ ಕನಸು

March 2018

ಗುರುಪ್ರಸಾದ್ ಡಿ. ಎನ್.

ದಿ ಪೋಸ್ಟ್: ಮಾಧ್ಯಮದ ಹೊಸ ಭರವಸೆ

March 2018

ಬಿದರಹಳ್ಳಿ ನರಸಿಂಹಮೂರ್ತಿ

ಗಂಗೆಗನ್ನಡಿಯಲ್ಲಿ ಗಾಲಿಬ್ ಬಿಂಬ

February 2018

ಸಂತೋಷ್ ನಾಯಕ್ ಆರ್.

ಬೂದಿ ಒಳಗಣ ಕೆಂಡ ಚಿಕ್ಕಲ್ಲೂರು ಜಾತ್ರೆ

February 2018

ಕೆ.ಎಲ್.ಚಂದ್ರಶೇಖರ್ ಐಜೂರ್

ಸ್ವರ್ಗದ ಮಕ್ಕಳು

February 2018