2nd ಫೆಬ್ರವರಿ ೨೦೧೮

ಪ್ರಸ್ತುತ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ದ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗದ ರಚನೆಗೆ ಕರಡು ಮಸೂದೆ ಬಿಡುಗಡೆ.

ದೇಶದ ವೈದ್ಯರು, ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯಕೀಯ ಆಸ್ಪತ್ರೆಗಳನ್ನು ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಇದುವರೆಗೆ ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಂಡಿದೆ. ಅತೀವ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತಕ್ಕೆ ಹೆಸರು ಮಾಡಿರುವ ಈ ಸಂಸ್ಥೆಯ ಬದಲಿಗೆ ಕೇಂದ್ರ ಸರ್ಕಾರವು ‘ನ್ಯಾಶನಲ್ ಮೆಡಿಕಲ್ ಕಮಿಶನ್’ ಹೆಸರಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವುದಕ್ಕೆ ಕರಡು ಮಸೂದೆಯೊಂದನ್ನು ಜಾರಿಗೆ ತಂದಿದೆ. ದೇಶಾದ್ಯಂತ ಚರ್ಚೆಗೆ ಒಳಪಟ್ಟಿರುವ ಈ ಮಸೂದೆ ಇಡೀ ವೈದ್ಯಕೀಯ ಕ್ಷೇತ್ರದ ಆರೋಗ್ಯಕರ ನಿಯಂತ್ರಣಕ್ಕೆ ಸೂಕ್ತ ಕಾನೂನು ಪರಿಧಿ ತರಲಿದೆ.

ದೇಶಾದ್ಯಂತ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಈ ಆಯೋಗದ ರಚನೆ ಅತ್ಯಂತ ಅಗತ್ಯವಾಗಿದೆ. ಆದರೆ ಈ ಕರಡು ಮಸೂದೆಯಲ್ಲಿನ ಕೆಲವಾರು ನ್ಯೂನತೆಗಳನ್ನು ಪರಿಣತರು ಎತ್ತಿ ಹೇಳುತ್ತಿದ್ದಾರೆ:

  • ಹೋಮಿಯೋಪಥಿ, ಆಯುರ್ವೇದ ಮತ್ತು ಯುನಾನಿ ವೈದ್ಯರು ಅಲೋಪಥಿ ಔಷಧಿಗಳನ್ನು ರೋಗಿಗಳಿಗೆ ಸೂಚಿಸಬಹುದೇ? ಹಾಗಾದಲ್ಲಿ ಅಲೋಪಥಿಯಲ್ಲಿ ತರಬೇತಿ ಹೊಂದಿಲ್ಲದೆ ಇರುವವರು ತಪ್ಪು ಔಷ ಸೂಚಿಸಿದರೆ ಅದಕ್ಕೆ ಯಾರು ಹೊಣೆ? ಹಾಗೂ ಈ ‘ಆಯುಶ್’ ವೈದ್ಯರು ಅಲೋಪಥಿಯ ಮೊರೆ ಹೋದರೆ ಭಾರತೀಯ ವೈದ್ಯ ಪದ್ದತಿ ಮತ್ತು ಔಷದಿಗಳನ್ನು ನಾವು ಪ್ರಚಾರ ಮಾಡುವುದಾದರೂ ಹೇಗೆ?
  • ದೇಶಾದ್ಯಂತ ವೈದ್ಯರ ಕೊರತೆಯಿಂದ ನರಳುತ್ತಿರುವ ಸಮಯದಲ್ಲಿ ಪದವಿ ಪಡೆದ ವೈದ್ಯರ ಕೆಳಗಿನ ಹಂತದಲ್ಲಿ ‘ಸರ್ಟಿಫೈಡ್ ಪ್ಯಾರಾ ಮೆಡಿಕಲ್’ ಸಿಬ್ಬಂದಿಯೆಂಬ ಒಂದು ಶ್ರೇಣಿಯನ್ನು ಸ್ಥಾಪಿಸುವುದು ಅಗತ್ಯವಿದೆಯಲ್ಲವೇ?
  • ಮಧುಮೇಹ, ರಕ್ತದೊತ್ತಡ ಮತ್ತಿತರ ದೀರ್ಘಕಾಲದ ಖಾಯಿಲೆಗಳನ್ನು ಗುಣಪಡಿಸಲು ಕೇವಲ ಒಂದೇ ತರಹದ ಔಷಧಿ ಪದ್ಧತಿ ಇರಬೇಕೇ? ಅಥವಾ ಈ ಔಷಧಿಗಳಲ್ಲಿ ನುರಿತ ವೈದ್ಯರು ಅಲೋಪಥಿ ಔಷಧಿಯ ಜೊತೆಗೆ ಆಯುರ್ವೇದದ ಔಷಧಿಗಳನ್ನೂ ಸೂಚಿಸುವ ಸ್ವಾತಂತ್ರ್ಯ ಹೊಂದಿರಬೇಕಲ್ಲವೇ?
  • ಒಟ್ಟಾರೆಯಾಗಿ, ಹೊಸ ಆಯೋಗದ ಕಾನೂನಿನಲ್ಲಿ ವೈದ್ಯವೃತ್ತಿಯ ಲಾಬಿಗಳ ಹಿತಾಸಕ್ತಿಗಿಂತ ರೋಗಿಗಳ, ಅದರಲ್ಲಿಯೂ ಅಶಕ್ತ ಬಡ ರೋಗಿಗಳ, ಹಿತವನ್ನು ಕಾಪಾಡುವ ಅಗತ್ಯವಿದೆಯಲ್ಲವೇ? ಇದು ಹೌದಾದಲ್ಲಿ ಇಂತಹ ರೋಗಿಗಳ ಹಿತಕಾಯುವ ಕಾನೂನಿನ ಗುಣಲಕ್ಷಣಗಳೇನು?

ದೇಶದ ವೈದ್ಯವೃತ್ತಿಯನ್ನೇ ನಿರ್ಧರಿಸುವ ಈ ಕರಡು ಮಸೂದೆಯ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ. ಈ ಚರ್ಚೆಯು ಸಂಸದೀಯ ಸ್ಥಾಯೀ ಸಮಿತಿಯ ಮುಂದೆ ಹೋಗುವ ಮೊದಲು ಬಡರೋಗಿಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಮತ್ತು ಸ್ವಯಂಸೇವಾಸಂಸ್ಥೆಗಳು ಕಾನೂನಿನಲ್ಲಿ ಸೂಕ್ತ ಮಾರ್ಪಾಡುಗಳನ್ನು ಗಟ್ಟಿದನಿಯಲ್ಲಿ ಹೇಳಬೇಕಾಗಿದೆ.

ಸಂಜೋತಾ ಪುರೋಹಿತ್

ಮಕ್ಕಳ ಶಿಕ್ಷಣದ ಹೊರೆ

ಜುಲೈ ೨೦೧೮

ಇಮಾಮ್ ಗೋಡೆಕಾರ

ಒಂದು ಆನ್‍ಲೈನ್ ಕ್ರಾಂತಿ ಫ್ಲಿಪ್‍ಕಾರ್ಟ್

ಜೂನ್ ೨೦೧೮

ಭಾರತೀ ಮೈಸೂರು

ಜಪಾನ್ ಗಾತ್ರದಲ್ಲಿ ಮಾತ್ರ ಕರ್ನಾಟಕ!

ಜೂನ್ ೨೦೧೮

ಪ್ರೊ. ಕ್ರಿಸ್ಟೋಫರ್ ಚೆಕೂರಿ

ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕಾದ ವರ್ಣೀಯ ರಾಜಕಾರಣ

ಎಪ್ರಿಲ್ ೨೦೧೮

ತಾಳಗುಂದ ಶಾಸನ

ಎಪ್ರಿಲ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಯಂತ್ರ ನೋಡಿರಣ್ಣ, ದೇಹದ ತಂತ್ರ ಕಾಣಿರಣ್ಣ!

ಎಪ್ರಿಲ್ ೨೦೧೮

ಡಿ. ರೂಪ

‘ಧೈರ್ಯ, ತಾಳ್ಮೆ ಜತೆಗಿರಲಿ’

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಬ್ಯಾಕ್ಟೀರಿಯಗಳ ಬಗ್ಗೆ ನಿಮಗೇನು ಗೊತ್ತು?

ಮಾರ್ಚ್ ೨೦೧೮

ಸುಧೀಂದ್ರ ಹಾಲ್ದೊಡ್ಡೇರಿ

ಎಂಗೈತೆ ಮಗಾ, ಸಾಫ್ಟ್‍ವೇರ್ ಬ್ಯಾಂಗ್‍ಲೂರು?

ಫೆಬ್ರವರಿ ೨೦೧೮

ಪ್ರಸಾದ್ ನಾಯ್ಕ್

ಮಾರಕ ಮಾಧ್ಯಮಗಳು!

ಫೆಬ್ರವರಿ ೨೦೧೮