2nd February 2018

ಸಕ್ಕರೆ ನಿಷೇಧಿಸಿ!

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ದೇಶದ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅತ್ಯಗತ್ಯವಾಗಿ ಮಾಡಬೇಕಾಗಿರುವ ಕೆಲಸಗಳನ್ನು ಬರೆದಿದ್ದೇನೆ. ಅವು ವಿನೂತನ ಎನ್ನುವುದಕ್ಕಿಂತ ಬಹು ಹಿಂದೆಯೇ ಮಾಡಬೇಕಾಗಿದ್ದ, ಆದರೆ ಮಾಡದೇ ಮರೆತ ಕೆಲಸಗಳು ಎಂದರೆ ಹೆಚ್ಚು ಸಮಂಜಸವಾದೀತು.

ದೇಶಕ್ಕೆ ಸ್ವಾತಂತ್ರ್ಯ ದೊರೆಯಲಿದೆ ಎಂದಾಗಲೇ ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ನೆಹರೂ ನೇತೃತ್ವದಲ್ಲಿ ಅತ್ಯಂತ ವಿಷದವಾದ ಕಾರ್ಯಯೋಜನೆಯನ್ನು ರೂಪಿಸಲಾಗಿತ್ತು. ಕಾಂಗ್ರೆಸ್ ಪಕ್ಷವು 1940ರಲ್ಲಿ ಹಿರಿಯ ವೈದ್ಯ ವಿಜ್ಞಾನಿ ಕರ್ನಲ್ ಸಾಹಿಬ್ ಸಿಂಗ್ ಸೋಖಿ ಅಧ್ಯಕ್ಷತೆಯಲ್ಲಿ ಉಪಸಮಿತಿಯನ್ನು ರಚಿಸಿತ್ತು, ಬಳಿಕ, 1943ರಲ್ಲಿ ಬ್ರಿಟಿಷ್ ಸರಕಾರವು ಸರ್ ಜೋಸೆಫ್ ಭೋರ್ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಸಮೀಕ್ಷೆ ಹಾಗೂ ಅಭಿವೃದ್ಧಿ ಸಮಿತಿಯನ್ನು ನೇಮಿಸಿತ್ತು. ಸಮಗ್ರ ಆರೋಗ್ಯ ಸೇವೆಗಳನ್ನು ಸರಕಾರವೇ ಉಚಿತವಾಗಿ ಒದಗಿಸಬೇಕು, ಆರೋಗ್ಯ ಸೇವೆಗಳಲ್ಲಿ ಆಧುನಿಕ ವೈದ್ಯವಿಜ್ಞಾನಕ್ಕಷ್ಟೇ ಮಹತ್ವ ನೀಡಬೇಕು, ಸಾವಿರ ಜನಸಂಖ್ಯೆಗೊಬ್ಬ ವೈದ್ಯ ಹಾಗೂ 600 ಜನಸಂಖ್ಯೆಗೊಂದರಂತೆ ಆಸ್ಪತ್ರೆ ಹಾಸಿಗೆಗಳ ಸಂಖ್ಯೆಯಿರಬೇಕು, ಪ್ರತಿ 10—20 ಸಾವಿರ ಜನತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, 30 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 650 ಹಾಸಿಗೆಗಳ, 140 ವೈದ್ಯರ ದ್ವಿತೀಯ ಸ್ತರದ ಆಸ್ಪತ್ರೆ ಹಾಗೂ ಪ್ರತಿ ಜಿಲ್ಲೆಗೊಂದು 2500 ಹಾಸಿಗೆಗಳ, 269 ವೈದ್ಯರ ತೃತೀಯ ಸ್ತರದ ಆಸ್ಪತ್ರೆಗಳಿರಬೇಕು ಇತ್ಯಾದಿ ಸಲಹೆಗಳನ್ನು ಈ ಸಮಿತಿಗಳು ನೀಡಿದ್ದವು. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ 1668 ಜನರಿಗೊಬ್ಬ ವೈದ್ಯ, 1500 ಜನಸಂಖ್ಯೆಗೊಂದು ಹಾಸಿಗೆ ಅಷ್ಟೇ ಆಗಿದೆ, ಎಲ್ಲರಿಗೂ ಉಚಿತ ಸಮಗ್ರ ಆರೋಗ್ಯ ಸೇವೆ ಎನ್ನುವುದು ಮರೀಚಿಕೆಯಾಗಿದೆ.

ಸ್ವಾತಂತ್ರ್ಯಪೂರ್ವದ ಕನಸು ನನಸಾಗಬೇಕಿದ್ದರೆ ಆರೋಗ್ಯ ಕ್ಷೇತ್ರಕ್ಕೆ ಸರಕಾರಿ ವೆಚ್ಚವು ರಾಷ್ಟ್ರೀಯ ಉತ್ಪನ್ನದ ಶೇ. 6ರಷ್ಟಾದರೂ ಇರಬೇಕು, ಅಂದರೆ ಈಗಿನ ವೆಚ್ಚಕ್ಕಿಂತ 6 ಪಟ್ಟು ಹೆಚ್ಚಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳವರೆಗೆ, ಅವಕ್ಕೂ ಮೇಲಿನ ಅತಿ ಸುಸಜ್ಜಿತ ಆಸ್ಪತ್ರೆಗಳವರೆಗೆ ಎಲ್ಲವನ್ನೂ ಸರಕಾರವೇ ಉತ್ತಮಪಡಿಸಿ, ಅಗತ್ಯ ಸಿಬಂದಿ ಮತ್ತು ಸಲಕರಣೆಗಳನ್ನು ಒದಗಿಸಬೇಕು. ಇದನ್ನು ಸಾಧಿಸಲು ಈ ಆರೋಗ್ಯ ಸಂಸ್ಥೆಗಳನ್ನು ವಿಕೇಂದ್ರೀಕರಣಗೊಳಿಸಿ, ಸ್ಥಳೀಯಾಡಳಿತಗಳು, ಸ್ಥಳೀಯ ಸೇವಾ ಸಂಸ್ಥೆಗಳು ಹಾಗೂ ಸಹಕಾರಿ ಸಂಸ್ಥೆಗಳಿಗೆ ಭಾಗೀದಾರಿಕೆ ನೀಡಬೇಕು, ಮತ್ತು ಆರೇಳು ಜಿಲ್ಲೆಗೊಂದರಂತೆ ಪ್ರಾದೇಶಿಕ ಮಟ್ಟದಲ್ಲೂ ಅತಿ ವಿಶೇಷ ಆಸ್ಪತ್ರೆಗಳನ್ನು ತೆರೆಯಬೇಕು. ಇಂತಹ ಆಸ್ಪತ್ರೆಗಳನ್ನು ಅಂತರರಾಜ್ಯ ಹೂಡಿಕೆಯಿಂದಲೂ ಆರಂಭಿಸಬಹುದು.

ವೈದ್ಯವಿಜ್ಞಾನದಲ್ಲಾಗುತ್ತಿರುವ ಅತ್ಯುನ್ನತ ಸಂಶೋಧನೆಗಳಿಗೆ ಅಪಾರ ಹಣದ ಅಗತ್ಯವಿದ್ದು, ನಮ್ಮಲ್ಲಿ ಅದು ತೀರಾ ನಗಣ್ಯವೇ ಆಗಿದೆ. ನೆಹರೂ ಮುತುವರ್ಜಿಯಿಂದ ತೆರೆಯಲಾಗಿದ್ದ ಔಷಧ ಹಾಗೂ ಲಸಿಕೆ ತಯಾರಿ ಘಟಕಗಳು ಈಗ ಮುಚ್ಚಲ್ಪಟ್ಟಿದ್ದು, ಔಷಧ ಹಾಗೂ ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಸ್ವಾವಲಂಬಿಗಳಾಗುವ ಕನಸು ನುಚ್ಚುನೂರಾಗಿದೆ. ವೈದ್ಯಕೀಯ ಚಿಕಿತ್ಸೆ ಅಗ್ಗವಾಗಬೇಕಾದರೆ ಔಷಧ ಸಂಶೋಧನೆ ಮತ್ತು ಉತ್ಪಾದನೆ ಹಾಗೂ ವೈದ್ಯಕೀಯ ತಂತ್ರಜ್ಞಾನಗಳ ಒಡೆತನವು ಸರಕಾರದ್ದಾಗಿರಬೇಕು, ಜನರದ್ದಾಗಿರಬೇಕು.

ನಮ್ಮ ದೇಶದಲ್ಲಿ ವೈದ್ಯರಿಗೆ ನೀಡುತ್ತಿರುವ ಭತ್ಯೆ ತೀರಾ ಕಡಿಮೆ. ವೈದ್ಯವೃತ್ತಿಯು ಸೇವೆಯಾಗಿರುವುದ್ರಿಂದ ವೈದ್ಯರು ಯಾವುದೇ ಅಪೇಕ್ಷೆಯಿಲ್ಲದೆ ಅತ್ಯಲ್ಪ ಹಣಕ್ಕೆ ದುಡಿಯಬೇಕೆನ್ನುವ ವಾದವನ್ನು ಎಲ್ಲೆಡೆ ಎತ್ತಿ ತೋರಲಾಗುತ್ತಿದೆ. ಇದು ಅಸಮಂಜಸ, ಅನ್ಯಾಯ. ಆದ್ದರಿಂದ ವೈದ್ಯರಿಗೆ ಅತ್ಯುತ್ತಮವಾದ ಕನಿಷ್ಠ ವೇತನವನ್ನು ನಿಗದಿ ಪಡಿಸುವುದು ಅತ್ಯಗತ್ಯ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆಯನ್ನು ಖಾತರಿ ಪಡಿಸುವುದಕ್ಕೂ ಇದು ಮುಖ್ಯವಾಗಿದೆ.

ರೋಗಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಅವನ್ನು ತಡೆಯುವುದೂ ಅತಿ ಮುಖ್ಯ. ಈಗ ಬೊಜ್ಜು, ಮಧುಮೇಹ, ಕ್ಯಾನ್ಸರ್, ಮುಂತಾದ ಸೋಂಕಲ್ಲದ ರೋಗಗಳು ವಿಪರೀತವಾಗುತ್ತಿದ್ದು, ಇವನ್ನು ತಡೆಯುವುದೂ, ಚಿಕಿತ್ಸೆ ನೀಡುವುದೂ ಬಲು ದೊಡ್ಡ ಸವಾಲಾಗುತ್ತಲಿದೆ. ಈ ಎಲ್ಲ ರೋಗಗಳಿಗೆ ಸಕ್ಕರೆಭರಿತ ತಿನಿಸುಗಳ ಅತಿಸೇವನೆಯೇ ಕಾರಣವೆನ್ನುವುದಕ್ಕೆ ಪ್ರಬಲ ಆಧಾರಗಳಿರುವುದರಿಂದ ಸಕ್ಕರೆಯ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವ ಅಗತ್ಯವಿದೆ. ಆದರೆ ಭೂಲೋಕದ ಯಾವ ಸರಕಾರಕ್ಕೂ ಆ ಧೈರ್ಯ ಇದ್ದಂತಿಲ್ಲ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018