2nd February 2018

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕೀಯ ಶಿಕ್ಷಣದ ರಾಷ್ಟ್ರೀಕರಣ: 1950 ರಿಂದ 1980ರ ತನಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾರತೀಯ ವೈದ್ಯ ಕೌನ್ಸಿಲ್ ಮಾರ್ಗದರ್ಶನದಲ್ಲಿ ವೈದ್ಯಕೀಯ ಶಿಕ್ಷಣದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದವು. ಈ ಅವಧಿಯಲ್ಲಿ ಗುಣಮಟ್ಟದ ಜೊತೆಗೆ ಎಲ್ಲಾ ವರ್ಗದವರಿಗೂ ವೈದ್ಯಶಿಕ್ಷಣ ಕೈಗೆಟುಕುವಂತಿತ್ತು. ಆದರೆ 1980ರ ನಂತರ ವೈದ್ಯಕೀಯ ಶಿಕ್ಷಣ ಕ್ಷೇತ್ರ ತೀವ್ರಗತಿಯಲ್ಲಿ ಖಾಸಗೀಕರಣಗೊಂಡು ಉಳ್ಳವರ ಪಾಲಾಯಿತು. ಪರಿಣಾಮವಾಗಿ ಈ ಕ್ಷೇತ್ರ ಕಲುಷಿತವೂ ದುಬಾರಿಯೂ ಆಯಿತು. ಈಗಿರುವ ಅವ್ಯವಸ್ಥೆಗೆ ಸಮಗ್ರ ಚಿಕಿತ್ಸೆಯ ಅವಶ್ಯಕತೆ ಇದೆ. ವೈದ್ಯಕೀಯ ಶಿಕ್ಷಣ ರಾಷ್ಟ್ರೀಕರಣಗೊಂಡು ಎಲ್ಲಾ ವರ್ಗದವರಿಗೂ ಸಿಕ್ಕಾಗ, ತಾನಾಗಿಯೇ ಗ್ರಾಮಾಂತರ ಸ್ಧಳಗಳ ವೈದ್ಯಕೀಯ ಸೌಲಭ್ಯದ ಅಭಾವ ತಪ್ಪಲಿದೆ. ಇದರಿಂದ ನಮ್ಮ ನಾಡಿನ ಆರೋಗ್ಯ ವ್ಯವಸ್ಥೆಯ ಸ್ವರೂಪವನ್ನೇ ಬದಲಿಸಲು ಸಾಧ್ಯ.

ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ: ಇನ್ನು, ಆರೋಗ್ಯಕ್ಷೇತ್ರ ತೀವ್ರ ಅನಾರೋಗ್ಯದಿಂದ ಬಳಲುತ್ತಿದೆ. ನಿರ್ಲಕ್ಷಿತ ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟಕ್ಕೆ ಎರವಾಗಿರುವುದರಿಂದ ಜನರು ಖಾಸಗಿ ದವಾಖಾನೆಗಳತ್ತ ಅನಿವಾರ್ಯವಾಗಿ ವಾಲುತ್ತಿದ್ದಾರೆ. ಶೇಕಡ 80ರಷ್ಟು ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳ ಮಿತಿಮೀರಿದ ಶುಲ್ಕಗಳಿಂದ ಸಾಮಾನ್ಯ ಕುಟುಂಬಗಳ ಆರ್ಥಿಕಸ್ಥಿತಿ ಮುಗ್ಗರಿಸುವ ಕಟುವಾಸ್ತವ ನಮ್ಮೆದುರಿಗಿದೆ. ಈ ದಿಕ್ಕಿನಲ್ಲಿ ಆಳುವ ಸರ್ಕಾರಗಳು ಗಮನ ಹರಿಸಿ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಮಾಡಬೇಕು. ಮೂಲಭೂತ ಸೌಕರ್ಯಗಳ ಜೊತೆಗೆ ವೈದ್ಯರು ಶುಶ್ರೂಷಕರ ಸಂಖ್ಯೆಯನ್ನು ವೈಜ್ಞಾನಿಕ ದೃಷ್ಟಿಯಿಂದ ಸರಿಪಡಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಥಮಿಕ ಆರೊಗ್ಯ ಕೇಂದ್ರಗಳನ್ನು ಸರ್ವ ರೀತಿಯಿಂದ ಬಲಪಡಿಸಬೇಕು. ಈ ಬಾಬತ್ತಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಧಾರದಿಂದ ಬಹುಸಂಖ್ಯಾತ ಗ್ರಾಮೀಣ ಜನರ ಆರೋಗ್ಯ ಕಾಪಾಡಬಹುದೇ ಹೊರತು ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ‘ವಿಮೆ’ ಮೊತ್ತದಿಂದಲ್ಲ. ಹಾಗೆಯೇ ಪೂರಕ ವಾತಾವರಣ ಕಲ್ಪಿಸಿದಲ್ಲಿ ಗ್ರಾಮಾಂತರ ಪ್ರದೇಶದ ವೈದ್ಯರ ಕೊರತೆಯನ್ನು ನೀಗಿಸಬಹುದು.

ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವ: ಮೂರನೆಯದು, ರೋಗಗಳನ್ನು ತಡೆಗಟ್ಟುವ ಮಾರ್ಗ. ಈ ಕಾರ್ಯಕ್ಕೆ ಇತರೆ ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ. ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ವಿಲೇವಾರಿ, ನೈರ್ಮಲ್ಯೀಕರಣ, ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಹಲವಾರು ಆರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇಂದು ರೋಗರುಜಿನಗಳ ಚಿಕಿತ್ಸೆಯೊಂದೇ ಚರ್ಚೆಯ ವಿಷಯವಾಗಿದೆ; ರೋಗಗಳ ಮೂಲ, ತಡೆಗಟ್ಟುವ ವಿಧಾನಗಳು, ಕೈಗೊಳ್ಳಬೇಕಾದ ಕ್ರಮಗಳು ಗೌಣವಾಗಿವೆ. ಆಸ್ಪತ್ರೆ, ಔಷಧಿಗಳು ವಾಣಿಜ್ಯೀಕರಣಗೊಂಡು ಲಾಭಾಂಶವೊಂದೇ ಮುಖ್ಯವಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಮಸ್ಯೆ ಜಟಿಲವಾಗಿದೆ. ಹಾಗಾಗಿ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಚರ್ಚಿಸಿ ಸಮಗ್ರ ಆರೋಗ್ಯ ನೀತಿ ರೂಪಿಸುವುದು ಇಂದಿನ ತುರ್ತು ಅಗತ್ಯ. ಆರೋಗ್ಯವಂತ ನಾಗರಿಕರು ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018