2nd ಫೆಬ್ರವರಿ ೨೦೧೮

ಶಾಲಾ ಕಾಲೇಜುಗಳಿಗೆ ಹೊಸ ಗಾಳಿಬೆಳಕು

ಸವಾಲು: ಎಲ್ಲ ಹಂತಗಳ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಜೀವ ತುಂಬುವುದು

ಅಮೆರಿಕಾದ ನಿಕಟಪೂರ್ವ ಅಧ್ಯಕ್ಷ ಬರಾಕ್ ಒಬಾಮಾ ಆಗಾಗ್ಗೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕನ್ನರಿಗಿಂತ ಹೆಚ್ಚು ಸ್ಪರ್ಧಾತ್ಮಕವಾಗಿ ಕಲಿಯುತ್ತಿದ್ದಾರೆ ಎಂದು ಹೇಳುತ್ತಿದ್ದರು. ಅಮೆರಿಕದ ವಿದ್ಯಾರ್ಥಿಗಳು ಹಿಂದುಳಿದಿದ್ದಾರೆ ಎನ್ನುವುದನ್ನು ವರ್ಣಿಸಲು ಒಬಾಮಾ ’ಬ್ಯಾಂಗಲೋರ್ಡ್’ ಎಂಬ ಬೆಂಗಳೂರಿನ ಹೆಸರಿರುವ ಪದವನ್ನು ಬಳಸುತ್ತಿದ್ದರು. ಹೀಗೆ ಮಾತನಾಡುವಾಗ ಅವರು ಬೆಂಗಳೂರೂ ಸೇರಿದಂತೆ ಕರ್ನಾಟಕದಲ್ಲಿರುವ ಸರ್ಕಾರಿ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ಬಗ್ಗೆ ಹೇಳುತ್ತಿರಲಿಲ್ಲ ಎನ್ನುವುದಂತೂ ಸತ್ಯ.

ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟುಗಳೇನು ಎನ್ನುವುದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ಹಂತಗಳಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಕೊರತೆಯಿದೆ. ಕೊಠಡಿ, ಶೌಚಾಲಯ, ಪ್ರಯೋಗಾಲಯ ಮತ್ತು ಗ್ರಂಥಾಲಯಗಳಿರುವ ಸುಸಜ್ಜಿತ ಶಾಲೆ— ಕಾಲೇಜುಗಳ ಸಂಖ್ಯೆ ಬಹಳ ಕಡಿಮೆ. ಶಿಕ್ಷಕರ ನೇಮಕಾತಿ ನಿಯಮಿತವಾಗಿ ನಡೆಯುವುದಿಲ್ಲ. ನೇಮಕವಾದ ಶಿಕ್ಷಕರಿಗೆ ಬಿಸಿಯೂಟದಿಂದ ಸೆನ್ಸಸ್ ತನಕ ಹಲವಾರು ಇತರೆ ಜವಾಬ್ದಾರಿಗಳಿರುತ್ತವೆ. ಪಠ್ಯಕ್ರಮ ಮತ್ತು ಪೂರಕಪಠ್ಯಗಳ ಗುಣಮಟ್ಟ ಸಾಲದು. ಎಲ್ಲ ಹಂತದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜ್ಞಾನವನ್ನು ಒದಗಿಸುವ ಪುಸ್ತಕಗಳು ಕನ್ನಡದಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಗಳಲ್ಲಿ ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರದ ಆರೋಪಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟದ ಬಗ್ಗೆ ಯಾರಿಗೂ ಸಮಾಧಾನವಿಲ್ಲ. ಹಾಗಾಗಿ ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳು ಗ್ರಾಮೀಣಭಾಗಗಳಲ್ಲಿಯೂ ಬೇರು ಬಿಡುತ್ತಿವೆ.

ಇಂತಹ ಈ ಮೇಲಿನ ಹಾಗೂ ಇಲ್ಲಿ ಪಟ್ಟಿಯಾಗದಿರುವ ಸಮಸ್ಯೆಗಳು ಮತ್ತು ಸವಾಲುಗಳು ಯಾರಿಗೂ ತಿಳಿಯದವುಗಳೇನಲ್ಲ. ಸರ್ಕಾರಗಳು ಸಹ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿವೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯನ್ನು ಸ್ಥಾಪಿಸಿದೆ. ಉನ್ನತ ಶಿಕ್ಷಣದ ಸುಧಾರಣೆಗಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮತ್ತು ಕರ್ನಾಟಕ ಜ್ಞಾನ ಆಯೋಗಗಳಿವೆ. ಕರ್ನಾಟಕ ಜ್ಞಾನ ಆಯೋಗವು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ಸಹ ಸಿದ್ಧಪಡಿಸಿದೆ. ಇಷ್ಟಾದರೂ ನಮ್ಮ ಸಮಸ್ಯೆಗಳೇನು ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರಗಳಿಲ್ಲ. ಸ್ವಾಭಾವಿಕವಾಗಿಯೆ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ಪುನರುಜ್ಜೀವನಕ್ಕೆ ಅಗತ್ಯವಿರುವ ಪರಿಹಾರಗಳೇನು ಎನ್ನುವುದೂ ಅಸ್ಪಷ್ಟವಾಗಿಯೆ ಉಳಿದಿದೆ.

ಇಂತಹ ಜಟಿಲ ಸಂಕೀರ್ಣತೆಯೊಳಗಿರುವ ಒಂದು ನಿರ್ದಿಷ್ಟ ಸಮಸ್ಯೆಯ ಬಗ್ಗೆ ಓದುಗರ ಗಮನವನ್ನು ಸೆಳೆಯಲು ಬಯಸುತ್ತೇವೆ. ಅದೇನೆಂದರೆ ಕರ್ನಾಟಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಎಲ್ಲ ಹಂತಗಳಲ್ಲಿಯೂ ತನ್ನನ್ನು ತಾನು ಒಂದು ದ್ವೀಪವಾಗಿಸಿಕೊಂಡು, ಹೊರಗಿನ ಜಗತ್ತಿನ ಜೊತೆಗೆ ಅನುಸಂಧಾನ ಮಾಡುವುದನ್ನು ನಿಲ್ಲಿಸಿದೆ ಎನ್ನುವುದು. ನಮ್ಮ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಹೇಗಿರಬೇಕು ಎನ್ನುವುದಕ್ಕೆ ನಮ್ಮ ನೆರೆಹೊರೆಯಲ್ಲಿಯೇ ಇರುವ ಇತರೆ ಉದಾಹರಣೆಗಳನ್ನು ನೋಡುವುದನ್ನಾಗಲಿ, ಬೇರೆ ಭಾಷೆ—ದೇಶಗಳ ಅನುಭವದಿಂದ ಕಲಿಯುವುದನ್ನಾಗಲಿ ಮಾಡುತ್ತಿಲ್ಲ. ಇಂತಹ ದ್ವೀಪಸ್ಥಿತಿಯೊಳಗಿನಿಂದ ಸಮಸ್ಯೆಗಳ ಅರಿವಾಗಲಿ, ಪರಿಹಾರಗಳ ಸಾಧ್ಯತೆಗಳಾಗಲಿ ಹುಟ್ಟಲು ಸಾಧ್ಯವಿಲ್ಲ.

ಈ ನಿರ್ದಿಷ್ಟ ಸಮಸ್ಯೆಗೆ ಉತ್ತರವಾಗಿ ಎರಡು ಸಲಹೆಗಳನ್ನು ಮುಂದಿಡುತ್ತಿದ್ದೇವೆ.

ಮೊದಲನೆಯದು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದುದು. ಪ್ರತಿಯೊಬ್ಬ ವಿಶ್ವವಿದ್ಯಾನಿಲಯದ ಅಧ್ಯಾಪಕ ತನ್ನ ನೆರೆಹೊರೆಯ ಒಂದು ಶಾಲೆಯನ್ನು ದತ್ತು ಪಡೆದುಕೊಂಡು, ಮುಂದಿನ ಐದು ವರ್ಷಗಳ ಕಾಲ ಅಲ್ಲಿ ಮಾರ್ಗದರ್ಶಿಯಾಗಿ ತಿಂಗಳಿನಲ್ಲಿ ಎರಡು ದಿನಗಳನ್ನಾದರೂ ಕಳೆಯಬೇಕು. ಇದರ ಮೂಲಕ ಕನ್ನಡದಲ್ಲಿ ಶಾಲಾಮಕ್ಕಳಿಗೆ ಅಗತ್ಯವಿರುವ ಜ್ಞಾನವನ್ನು ಪುಸ್ತಕಗಳು ಮತ್ತು ಇತರೆ ಕಲಿಕಾಸಾಮಗ್ರಿಗಳ ಮೂಲಕ ತಯಾರಿಸಲು ಸಾಧ್ಯವಾಗಬಹುದು. ಶಾಲೆಗಳ ಅಧ್ಯಾಪಕರಿಗೆ ಸಹ ಹೊರಗಿನ ತಜ್ಞರೊಡನೆ ನಿಯಮಿತವಾಗಿ ಒಡನಾಡುವ ಅವಕಾಶ ಸಹ ಇದರ ಮೂಲಕ ಸಾಧ್ಯವಾಗುತ್ತದೆ.

ಎರಡನೆಯದು, ಉನ್ನತಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದುದು. ವಿಶ್ವವಿದ್ಯಾನಿಲಯಗಳಲ್ಲಿ ಬೋಧಕರ ನೇಮಕಾತಿ ಮಾಡುವಾಗ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು. ಇದಕ್ಕೊಂದು ಸರಳ ಕಾರಣವಿದೆ. ಕನ್ನಡದ ಬೌದ್ಧಿಕ ಸಂಸ್ಕೃತಿ ಹೊರಗಿನ ಜ್ಞಾನಧಾರೆಗಳನ್ನು ಅನುಸಂಧಾನ ಮಾಡುವುದನ್ನು ನಿಲ್ಲಿಸಿ, ತನ್ನನ್ನು ತಾನೆ ಪ್ರತ್ಯೇಕಿಸಿಕೊಂಡಿದೆ. ಇಂತಹ ಸನ್ನಿವೇಶದಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಪುನರುಜ್ಜೀವನವನ್ನು ಪ್ರಾರಂಭಿಸಲು ತಮ್ಮ ಜ್ಞಾನಶಿಸ್ತಿನ ಪರಿಚಯ ಸರಿಯಾಗಿ ಇರುವ ಅಧ್ಯಾಪಕರಿಂದ ಮಾತ್ರ ಸಾಧ್ಯ.

ಶಿಕ್ಷಣಕ್ಷೇತ್ರದ ಪುನರುಜ್ಜೀವನಕ್ಕೆ ಪರಿಹಾರಗಳ ಗೊಂಚಲಿನ ಅವಶ್ಯಕತೆಯಿದೆ. ಆದರೆ ತಕ್ಷಣದಲ್ಲಿ ಜಾರಿಗೊಳಿಸಲು ಈ ಎರಡು ಕ್ರಮಗಳನ್ನು ಸೂಚಿಸುತ್ತಿದ್ದೇವೆ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

ಜುಲೈ ೨೦೧೮

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

ಜುಲೈ ೨೦೧೮

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

ಜುಲೈ ೨೦೧೮

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

ಜುಲೈ ೨೦೧೮

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

ಜೂನ್ ೨೦೧೮

ಡಾ.ಎಸ್.ಬಿ.ಜೋಗುರ

ಹಾರ್ವರ್ಡ್ ಗುಣಮಟ್ಟ: ಕೈಗೂಡದ ಕನಸೇ?

ಜೂನ್ ೨೦೧೮

ಚುನಾವಣೆ: ಯಾರ ಹೊಣೆ?

ಎಪ್ರಿಲ್ ೨೦೧೮

ಡಾ.ಬಿ.ಎಲ್.ಶಂಕರ್

ಆಡಿದ ಮಾತಿಗೂ ಆತ್ಮದ ಮಾತಿಗೂ ಅಜಗಜಾಂತರ!

ಎಪ್ರಿಲ್ ೨೦೧೮

ಹರೀಶ್ ನರಸಪ್ಪ

ಚುನಾವಣಾ ಆಯೋಗದ ಮಿತಿ ಮತ್ತು ವೈಫಲ್ಯ

ಎಪ್ರಿಲ್ ೨೦೧೮

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

ಎಪ್ರಿಲ್ ೨೦೧೮

ಎ.ಟಿ.ರಾಮಸ್ವಾಮಿ

ಭ್ರಷ್ಟಾಚಾರಿಗಳು ವೇಶ್ಯೆಯರಿಗಿಂತಲೂ ಕೀಳು

ಎಪ್ರಿಲ್ ೨೦೧೮

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

ಎಪ್ರಿಲ್ ೨೦೧೮

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

ಮಾರ್ಚ್ ೨೦೧೮

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

ಮಾರ್ಚ್ ೨೦೧೮

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

ಮಾರ್ಚ್ ೨೦೧೮

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

ಮಾರ್ಚ್ ೨೦೧೮

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

ಮಾರ್ಚ್ ೨೦೧೮

ಮುಖ್ಯಚರ್ಚೆಗೆ ಪ್ರವೇಶ

ಫೆಬ್ರವರಿ ೨೦೧೮

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

ಫೆಬ್ರವರಿ ೨೦೧೮

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

ಫೆಬ್ರವರಿ ೨೦೧೮

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

ಫೆಬ್ರವರಿ ೨೦೧೮