2nd February 2018

ಕುಡಿಯುವ ನೀರಿಗೆ 125 ಟಿ.ಎಮ್.ಸಿ. ನೀರು ಮೀಸಲಿಡುವುದು

ಸವಾಲು: ರಾಜ್ಯದ ಪ್ರತಿ ವ್ಯಕ್ತಿಗೆ ದಿನಕ್ಕೆ ತಲಾ 150 ಲೀಟರುಗಳ ಲೆಕ್ಕದಲ್ಲಿ ಕುಡಿಯುವ ನೀರು ಒದಗಿಸುವುದು.

21ನೆಯ ಶತಮಾನದ ಎರಡನೆಯ ದಶಕದ ಕೊನೆಯಲ್ಲಿ ಮತ್ತು ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವೂ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಗೊಳಿಸದಿರುವುದು ಅತ್ಯಂತ ಕಳವಳ ವಿಷಯ ಮಾತ್ರವಲ್ಲ, ಅವಮಾನಕರ ವಿಚಾರ ಕೂಡ. ಬರುವ ವರ್ಷಗಳಲ್ಲಿ ರಾಷ್ಟ್ರ—ರಾಷ್ಟ್ರಗಳ ನಡುವೆ, ರಾಜ್ಯ—ರಾಜ್ಯಗಳ ನಡುವೆ ಮತ್ತು ಜಿಲ್ಲೆ—ಜಿಲ್ಲೆಗಳ ನಡುವೆ ನೀರಿನ ಲಭ್ಯತೆಯ ವಿಷಯದಲ್ಲಿ ಸಂಘರ್ಷಗಳು ಪ್ರಾರಂಭವಾಗಲಿವೆ ಎನ್ನುವುದು ಯಾರಿಗೂ ಅಚ್ಚರಿಯ ಸಂಗತಿಯಲ್ಲ. ಇದರ ಪೂರ್ವಭಾವಿ ಚಿತ್ರಗಳನ್ನು ನಾವು ಕರ್ನಾಟಕದಲ್ಲಿಯೂ ಈಗಾಗಲೆ ನೋಡಿದ್ದೇವೆ. ಕರ್ನಾಟಕದ ಎಲ್ಲ ಪ್ರಜ್ಞಾವಂತ ನಾಗರಿಕರೂ ಒಪ್ಪುವ ಸರಳ, ಅತ್ಯವಶ್ಯಕ ಯೋಜನೆಯಿದು. ಹಾಗಾಗಿ ತಡಮಾಡದೆ, ಯಾವುದೆ ಸಬೂಬನ್ನು ಹೇಳದೆ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕಿದೆ. 1980ರ ದಶಕದಲ್ಲಿ ಅಬ್ದುಲ್ ನಜೀರ್ ಸಾಬ್ ಅವರು ಬೋರವೆಲ್ಲುಗಳ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಶುದ್ಧ ನೀರನ್ನು ಒದಗಿಸುವ ಕಾರ್ಯಕ್ರಮವನ್ನು ರೂಪಿಸಿದ್ದರು. ’ನೀರ್’ ಸಾಬರ ಕಳಕಳಿಯಿಂದ ಈ ಯೋಜನೆಯು ಸಾಕಷ್ಟು ವ್ಯಾಪಕವಾಗಿಯೆ ಅನುಷ್ಠಾನವಾಯಿತು. ಆದರೆ ಹೀಗೆ ಅಂತರ್ಜಲದ ಮೇಲೆ ನಿರ್ಭರವಾಗಿದ್ದ ಯೋಜನೆಯು ತಾತ್ಕಾಲಿಕ ಪರಿಹಾರವಾಗಲು ಮಾತ್ರ ಸಾಧ್ಯ.

ಇಂದು ನಾವು ಮುಂದಿಡುತ್ತಿರುವ ಪ್ರಸ್ತಾವನೆಯೆಂದರೆ ಕರ್ನಾಟಕದ ಎಲ್ಲ ನಗರ, ಪಟ್ಟಣ, ಹಳ್ಳಿ ಮತ್ತು ತಾಂಡಾದಲ್ಲಿರುವ ಪ್ರತಿಯೊಂದು ಮನೆಗೂ ಪ್ರತಿ ವ್ಯಕ್ತಿಗೆ ದಿನಕ್ಕೆ 150 ಲೀಟರಿನ ಲೆಕ್ಕದಲ್ಲಿ ಶುದ್ಧ ನೀರನ್ನು ಒದಗಿಸುವುದು. ಇದು ಕರ್ನಾಟಕ ಸರ್ಕಾರದ ಪ್ರಾಥಮಿಕ ಆದ್ಯತೆಯಾಗಬೇಕಿದೆ. ಕರ್ನಾಟಕದಲ್ಲಿ 1800ರಿಂದ 2000 ಟಿ.ಎಮ್.ಸಿ.ಗಳಷ್ಟು ಮಳೆನೀರು ಲಭ್ಯವಿದ್ದು, ಅದರಲ್ಲಿ 700 ರಿಂದ 800 ಟಿ.ಎಮ್.ಸಿ.ಗಳಷ್ಟನ್ನು ಜಲಾಶಯಗಳಲ್ಲಿ ಹಿಡಿದಿಡಬೇಕಾಗಿದೆ. ಇದರಲ್ಲಿ ಕನಿಷ್ಠ 125 ಟಿ.ಎಮ್.ಸಿ.ಯನ್ನು ಕುಡಿಯುವ ನೀರಿಗೆ ಮೀಸಲಿಟ್ಟರೆ, ನಾವು ಕೇಳುತ್ತಿರುವ ಪ್ರತಿವ್ಯಕ್ತಿಗೆ ತಲಾ 150 ಲೀಟರುಗಳನ್ನು ಒದಗಿಸಬಹುದು. ಹೀಗೆ ವಿತರಣೆಯಾಗುವ ನೀರು ಮತ್ತೆ ಭೂಮಿಯನ್ನೆ ಸೇರುವುದರಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೃಷಿ—ತೋಟಗಾರಿಕೆಗಳಿಗೆ ಬಳಕೆಗೆ ಬರುತ್ತದೆ. ಆ ರೀತಿಯಲ್ಲಿ ಈಗ ಕರ್ನಾಟಕ ಸರ್ಕಾರವು ವ್ಯಾಪಕವಾಗಿ ಕೈಗೆತ್ತಿಕೊಂಡಿರುವ ಕೆರೆ ತುಂಬಿಸುವ ಯೋಜನೆಗಳಿಗಿಂತ ಕುಡಿಯುವ ನೀರನ್ನು ಪೂರೈಸುವ ಯೋಜನೆಯು ನೀರು ಹೆಚ್ಚು ಪೋಲಾಗದಂತೆ ಮತ್ತು ಬಹುಮುಖ್ಯ ಆದ್ಯತೆಯೊಂದಕ್ಕೆ ಬಳಕೆಯಾಗುವಂತೆ ಮಾಡುತ್ತದೆ. ಮಿಕ್ಕ ನೀರನ್ನು ಕೃಷಿ ಮತ್ತು ಕೈಗಾರಿಕೆಗಳಿಗೆ ಬಳಸಬಹುದು.

ಕುಡಿಯುವ ನೀರಿನ ಸಮರ್ಪಕ ವಿತರಣೆಯನ್ನು ಆದ್ಯತೆಯನ್ನಾಗಿ ಮಾಡಬೇಕು ಎನ್ನಲು ಇನ್ನಷ್ಟು ಕಾರಣಗಳಿವೆ. ಇಂದು ಸರ್ಕಾರದ ಹಣವನ್ನು ಯಾವುದಾದರೂ ಸಾರ್ವಜನಿಕ ಸೌಲಭ್ಯವನ್ನು ಒದಗಿಸಲು ವೆಚ್ಚಮಾಡುವಂತಿದ್ದರೆ ಅದು ಕುಡಿಯುವ ನೀರಿನ ಪೂರೈಕೆಗೆ ಮೊದಲು ಆಗಬೇಕು. ನೀರು ಸಂಗ್ರಹಣೆ ಮತ್ತು ವಿತರಣೆಯ ವ್ಯವಸ್ಥೆಯನ್ನು ವ್ಯಾಪಕವಾಗಿ ಮಾಡಬೇಕೆಂದರೆ ಅದು ಮೂಲಭೂತ (ತಾಂತ್ರಿಕ) ಎಂಜಿನಿಯರಿಂಗ್ ಪರಿಣತಿಯನ್ನು ನಿರೀಕ್ಷಿಸುತ್ತದೆ. ಇಂತಹ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸರ್ಕಾರದ ದಕ್ಷತೆಯನ್ನು ಹೆಚ್ಚಿಸಲು ಒಂದು ಮಾರ್ಗ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಇತಿಹಾಸದಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಒಂದು ಪುಣ್ಯದ ಕೆಲಸವೆಂದು ಯಾವಾಗಲೂ ಭಾವಿಸಿದ್ದೆವು. ಆ ಭಾವನೆಯನ್ನು ಮತ್ತೊಮ್ಮೆ ಇಂತಹ ಸಾರ್ವಜನಿಕ ಯೋಜನೆಯ ನೈತಿಕತೆಯ ಜೊತೆಗೆ ಜೋಡಿಸುವುದು ಅಗತ್ಯವಾಗಿ ಆಗಬೇಕಿರುವ ಕೆಲಸ.

ಡಾ.ಟಿ.ಆರ್.ಚಂದ್ರಶೇಖರ

ಕರ್ನಾಟಕ ಸರ್ಕಾರದ ಹಣಕಾಸಿನ ನಿರ್ವಹಣೆ

July 2018

ರಂಗಸ್ವಾಮಿ ಮೂಕನಹಳ್ಳಿ

ಕೃಷಿ ಸಾಲ ಮನ್ನಾ: ಸಾಧ್ಯವೇನಣ್ಣಾ?

July 2018

ಚಂಸು ಪಾಟೀಲ

ರೈತರೇಕೆ ಸಾಲಗಾರರಾದರು?

July 2018

ಟಿ.ಎಂ.ಥಾಮಸ್ ಐಸಾಕ್ ಕೇರಳದ ಹಣಕಾಸು ಸಚಿವರು

ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿಗೆ ಕೇರಳ ಹಣಕಾಸು ಸಚಿವರ ಬಹಿರಂಗ ಪತ್ರ

July 2018

ಅರ್ಜುನ್ ರಾಮೇಗೌಡ ನಾರಾಯಣಸ್ವಾಮಿ

ಆ ಬೆಂಕಿಯ ಕಿಡಿ ಹೊತ್ತಿಸುವವರು ಯಾರು?

June 2018

ಡಾ.ಎಸ್.ಬಿ.ಜೋಗುರ

ಪೂರಕ ವಾತಾವರಣದ ಕೊರತೆ

June 2018

ಬಿ.ಎನ್.ವಿಜಯಕುಮಾರ್

ಭ್ರಷ್ಟತೆಗೆ ರಾಜಕೀಯ ಪಕ್ಷಗಳೇ ಕಾರಣ

April 2018

ಬಿ. ಕೆ. ಚಂದ್ರಶೇಖರ್

ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ

April 2018

ಅಲೋಕ್ ಪ್ರಸನ್ನ, ಎಸ್. ಆರ್. ಹಿರೇಮಠ, ಬಿ. ಟಿ. ವೆಂಕಟೇಶ

ನ್ಯಾಯಾಂಗ

March 2018

ಎ. ನಾರಾಯಣ, ಬಸವರಾಜ ಬೊಮ್ಮಾಯಿ, ಮೋಟಮ್ಮ

ಶಾಸಕಾಂಗ

March 2018

ಬಿ. ಆರ್. ಜಯರಾಮರಾಜೇ ಅರಸ್, ಎನ್. ಹನುಮೇಗೌಡ,

ಕಾರ್ಯಂಗ

March 2018

ವಾಸುದೇವ ಶರ್ಮಾ ಎನ್. ವಿ.

ನಾಗರಿಕ ಸಮಾಜ

March 2018

ಈಶ್ವರ ದೈತೋಟ, ಡಾ. ಎ. ಎಸ್. ಬಾಲಸುಬ್ರಹ್ಮಣ್ಯ

ಮಾಧ್ಯಮ

March 2018

ಡಾ.ಅರವಿಂದ ಪಟೇಲ್ ಬಳ್ಳಾರಿ

ವೈದ್ಯಕ್ಷೇತ್ರದ ಉದ್ಧಾರಕ್ಕೆ ಮೂರು ಮದ್ದು!

February 2018

ಮಾಲತಿ ಪಟ್ಟಣಶೆಟ್ಟಿ ಧಾರವಾಡ

ಗುಣಮಟ್ಟಕ್ಕೆ ಮನ್ನಣೆ

February 2018

ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಂಗಳೂರು

ಸಕ್ಕರೆ ನಿಷೇಧಿಸಿ!

February 2018