ಮತ್ತೆ ಬಾಂಗ್ಲಾ ಬಾದಶಹಾ ಆದ ಶೇಖ್ ಹಸೀನಾ

ಕಳೆದ ಕೆಲವು ವರ್ಷಗಳಲ್ಲಿ ಶೇಖ್ ಹಸೀನಾ ನೇತೃತ್ವದಲ್ಲಿ ಬಾಂಗ್ಲಾ ಅಭೂತಪೂರ್ವ ಆರ್ಥಿಕ ಪ್ರಗತಿ ಕಂಡಿದೆ. ಬಾಂಗ್ಲಾದ ತಲಾ ಆದಾಯ $1516 ಇದ್ದು 2020ರವರೆಗೆ ಇದು ಭಾರತದ ತಲಾ ಆದಾಯ ($1940) ಮೀರಿಸುವ ಸಾಧ್ಯತೆಯಿದೆ.

2018ರ ಡಿಸೆಂಬರ್  30ರಂದು ನಡೆದ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಮುಖಂಡತ್ವದ ಅವಾಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ. ಗ್ರ್ಯಾಂಡ್ ಅಲೆಯನ್ಸ್ ಹೆಸರಿನಲ್ಲಿ ಅವಾಮಿ ಲೀಗ್ ತನ್ನ ಮಿತ್ರ ಪಕ್ಷಳೊಂದಿಗೆ ಒಕ್ಕೂಟ ರಚಿಸಿಕೊಂಡು ಸ್ಪರ್ಧೆಯ 300 ಕ್ಷೇತ್ರಗಳಲ್ಲಿ 257 ಸ್ಥಾನ ಗಳಿಸಿಕೊಂಡು ಅಧಿಕಾರ ಗದ್ದುಗೆ ಏರಿದೆ. ಭಾರತದೊಂದಿಗೆ ಮಿತ್ರತ್ವ ಹೊಂದಿರುವ ಈ ಅವಾಮಿ ಪಕ್ಷ ಇಸ್ಲಾಮಿಕ್ ಉಗ್ರರನ್ನು ಮಟ್ಟಹಾಕಲು ಅತ್ಯುಗ್ರ ಕ್ರಮ ಕೈಗೊಂಡಿದೆ.

1971ರಲ್ಲಿ ಬಾಂಗ್ಲಾ ವಿಮೋಚನೆಯ ಸೇನಾನಿ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಪುತ್ರಿಯಾದ ಶೇಖ್ ಹಸೀನಾ ಅವಾಮಿ ಪಕ್ಷವನ್ನು 1981ರಿಂದ ಮುನ್ನಡೆಸಿದ್ದರು. 1996 ರಿಂದ 2001ರವರೆಗೆ ಮತ್ತು ನಂತರ 2008 ರಿಂದ ಇಲ್ಲಿಯವರೆಗೆ ದೇಶದ ಪ್ರಧಾನಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ. ಈ ಮೂಲಕ ಅತ್ಯಂತ ಹೆಚ್ಚು ಅವಧಿಯ ಪ್ರಧಾನಿಯೂ ಆಗಿದ್ದಾರೆ. 2018ರ ಈ ಚುನಾವಣೆಯನ್ನು ಮುಖ್ಯ ವಿರೋಧಿ ಪಕ್ಷವಾದ ಬಾಂಗ್ಲಾ ನ್ಯಾಶನಲ್ ಪಕ್ಷ ಬಹಿಷ್ಕರಿಸಿತ್ತು. ಅದರ ನಾಯಕಿ ಖಲೀದಾ ಜಿಯಾರವರನ್ನು ಬಾಂಗ್ಲಾ ನ್ಯಾಯಾಲಯಗಳು ಭ್ರಷ್ಟಾಚಾರ ಆರೋಪದಲ್ಲಿ ಫೆಬ್ರವರಿ 2018ರಲ್ಲಿ ಐದು ವರ್ಷಗಳ ಕಾಲದ ಜೈಲು ಶಿಕ್ಷೆ ವಿಧಿಸಿದ್ದವು. ಹಾಗಾಗಿ ಖಲೀದಾರವರ ಬಿಎನ್‍ಪಿ ನಾಯಕತ್ವವಿಲ್ಲದೆ ಹಾಗೂ ತನ್ನ ನಾಯಕಿಯ ಸೆರೆವಾಸವನ್ನು ವಿರೋಧಿಸಿ ಸಾರ್ವತ್ರಿಕ ಚುನಾವಣೆಯನ್ನೇ ಬಹಿಷ್ಕರಿಸಿತ್ತು.

ಕಳೆದ ಕೆಲವು ವರ್ಷಗಳಲ್ಲಿ ಶೇಖ್ ಹಸೀನಾ ನೇತೃತ್ವದಲ್ಲಿ ಬಾಂಗ್ಲಾ ಅಭೂತಪೂರ್ವ ಆರ್ಥಿಕ ಪ್ರಗತಿ ಕಂಡಿದೆ. ಬಾಂಗ್ಲಾದ ತಲಾ ಆದಾಯ $1516 ಇದ್ದು 2020ರವರೆಗೆ ಇದು ಭಾರತದ ತಲಾ ಆದಾಯ ($1940) ಮೀರಿಸುವ ಸಾಧ್ಯತೆಯಿದೆ. ಗಾರ್ಮೆಂಟ್ ರಫ್ತು ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಮೆರೆದಿರುವ ಬಾಂಗ್ಲಾ ಇನ್ನೂ ಹಲವಾರು ಉದ್ಯೋಗ ಕೇಂದ್ರಿತ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದೆ. ನೀರಾವರಿ ಮತ್ತು ನ್ಯಾಚುರಲ್ ಗ್ಯಾಸ್ ಹೇರಳವಾಗಿರುವ ಬಾಂಗ್ಲಾದಲ್ಲಿ ಕೃಷಿ ಮತ್ತು ಕೈಗಾರಿಕೆಗಳೆರಡರ ಬೆಳವಣಿಗೆ ಸಾಧ್ಯವಾಗಿದೆ. ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯಾದಷ್ಟು ಇಸ್ಲಾಂ ಉಗ್ರಗಾಮಿಗಳ ಪ್ರಭಾವ ಕಡಿಮೆಯಾಗುವ ಸಾಧ್ಯತೆಯೂ ಇದೆ.

Leave a Reply

Your email address will not be published.