ಭಾರತವೀಗ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿ

2019ನೇ ಕ್ಯಾಲೆಂಡರ್ ವರ್ಷದಲ್ಲಿ ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ.

ಕಳೆದ ವರ್ಷ ಫ್ರಾನ್ಸ್ ಅನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಏರಿದ್ದ ಭಾರತ ಇದೀಗ 2019ರಲ್ಲಿ ಯುನೈಟೆಡ್ ಕಿಂಗ್‍ಡಮ್ ಅನ್ನೂ ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಬೀಳಲಿದೆ. ಕಳೆದ 2017ನೆಯ ವರ್ಷದಲ್ಲಿ ಫ್ರಾನ್ಸ್‍ನ $2.582 ಟ್ರಿಲಿಯನ್ ಜಿಡಿಪಿಯನ್ನು (ಒಟ್ಟು ದೇಶೀ ಉತ್ಪನ್ನ) ದಾಟಿ ಭಾರತದ ಉತ್ಪನ್ನ $2.597 ಟ್ರಿಲಿಯನ್‍ಗಳಷ್ಟಾಗಿತ್ತು. ಇದೀಗ ಯುನೈಟೆಡ್ ಕಿಂಗ್‍ಡಮ್‍ನ $2.62 ಟ್ರಿಲಿಯನ್ ಉತ್ಪನ್ನಕ್ಕೆ ಕೇವಲ $25 ಬಿಲಿಯನ್‍ಗಳಷ್ಟು ಹಿಂದಿರುವ ಭಾರತ 2019ರಲ್ಲಿ ತನ್ನ ಶೇಕಡಾ 7.44 ಆರ್ಥಿಕ ಬೆಳವಣಿಗೆಯೊಂದಿಗೆ ಸ್ಪಷ್ಟವಾಗಿ ಐದನೇ ಆರ್ಥಿಕಶಕ್ತಿಯಾಗಿ ಹೊರಹೊಮ್ಮಲಿದೆ. ಮೇಲಾಗಿ ಬ್ರೆಕ್ಸಿಟ್‍ನ ಹೊಡೆತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವ ದೇಶದ ಎದುರು ಭಾರತದ ನಾಗಾಲೋಟಕ್ಕೆ ಸಾಟಿಯಿಲ್ಲದಂತಾಗಿದೆ.

 

 

  ಸ್ಥಾನ   ವಿಶ್ವದ ಆರ್ಥಿಕ ಶಕ್ತಿಗಳು                 (2018) ಒಟ್ಟು ಜಿಡಿಪಿ (ಟ್ರಿಲಿಯನ್ ಡಾಲರ್‍ಗಳಲ್ಲಿ)
    1         ಅಮೆರಿಕ                              19.39
   2           ಚೀನಾ                             12.23
   3         ಜಪಾನ್                             4.87
   4         ಆರ್ಮನಿ                              3.67
   5   ಯುನೈಟೆಡ್ ಕಿಂಗ್‍ಡಮ್                             2.62
   6           ಭಾರತ                            2.62

RANKING TABLE

China is set to overtake the US economy by 2030

     2017       2018      2022       2027        2032
US     1     1     1     1     2
China     2     2     2     2     1
Japan     3     3     3     4     4
Germany     4     4     4     5     5
India     7     5     5     3     3
France     5     6     7     8     9
UK     6     7     6     6     7
Brazil     8     8     8     7     6
Italy     9     9     9    12    13
Canada    10    10    11    10    12
South Korea    12    12    10     9     8
Indonesia    16    16    16    13                    10

ಇನ್ನು ಐದು ವರ್ಷಗಳಲ್ಲಿ ಜರ್ಮನಿ ಮತ್ತು ಎಂಟು ವರ್ಷಗಳಲ್ಲಿ ಜಪಾನ್‍ನ ಆರ್ಥಿಕ ಸಾಮಥ್ರ್ಯವನ್ನು ಮೀರಲಿರುವ ಭಾರತದ ಆರ್ಥಿಕತೆ ನಿರೀಕ್ಷಿತ ಪ್ರಗತಿಯ ಮಟ್ಟವನ್ನು ಮೀರಿದರೆ 2025ರ ಹೊತ್ತಿಗೆ ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ. ಬೇರೆ ದೇಶಗಳಿಗೆ ಹೋಲಿಕೆಯಲ್ಲಿ ಕೂಡಾ ಭಾರತ ಹಲವಾರು ಕ್ಷೇತ್ರಗಳಲ್ಲಿ ಸಮತೋಲಿತ ಆರ್ಥಿಕ ಪ್ರಗತಿ ಕಾಣುತ್ತಿದೆ. ಕೃಷಿ-ತೋಟಗಾರಿಕೆಯಲ್ಲಿ ದಾಖಲೆಯ ಉತ್ಪನ್ನ ಕಾಣುತ್ತಿದ್ದರೆ, ಕೈಗಾರಿಕೆ, ಡಿಜಿಟಲ್ ಉದ್ಯಮ, ಸೇವಾಕ್ಷೇತ್ರ, ಬ್ಯಾಂಕಿಂಗ್-ವಿಮಾ ಕ್ಷೇತ್ರಗಳು ಹಾಗೂ ಮನರಂಜನಾ ಕ್ಷೇತ್ರಗಳು ವರ್ಷದಿಂದ ವರ್ಷಕ್ಕೆ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುತ್ತಿವೆ. ದೇಶದ ಅಧಿಕಾರಶಾಹಿಯ ಕೆಂಪುಪಟ್ಟಿಯನ್ನೇನಾದರೂ ಕಡಿಮೆ ಮಾಡಲು ಸಾಧ್ಯವಾದರೆ ಮುಂದಿನ ಎರಡು-ಮೂರು ದಶಕಗಳ ಕಾಲ ಎರಡಂಕಿಯ ಆರ್ಥಿಕ ಪ್ರಗತಿ (ಶೇಕಡಾ 10ಕ್ಕೂ ಮೀರಿದ) ಕಾಣಲು ಸಾಧ್ಯವಾಗಲಿದೆ.

Leave a Reply

Your email address will not be published.